ಮುಂಬಡ್ತಿ ಇಂಗ್ಲಿಷ್ ಶಿಕ್ಷಕರಿಗೆ ಹಿಂಬಡ್ತಿ ಭೀತಿ:*


BY ವಿಜಯವಾಣಿ ನ್ಯೂಸ್
· DEC 5, 2015
State_8
ರಾಜು ಖಾರ್ವಿ
ಬೆಂಗಳೂರು: ಸರ್ಕಾರದ ವೃಂದ ಮತ್ತು
ನೇಮಕಾತಿ ನಿಯಮದ ಅನುಸಾರ ಮುಂಬಡ್ತಿ
ಪಡೆದಿರುವ ಸಾವಿರಾರು ಇಂಗ್ಲಿಷ್ ಪ್ರೌಢಶಾಲಾ
ಶಿಕ್ಷಕರಿಗೆ ಈಗ ಹಿಂಬಡ್ತಿಯ ಭೀತಿ
ಎದುರಾಗಿದೆ.
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ
ಇಂಗ್ಲಿಷ್ ಶಿಕ್ಷಕರಾಗಿ ಮುಂಬಡ್ತಿ
ಪಡೆದಿರುವ ಅಭ್ಯರ್ಥಿಗಳ ಪಟ್ಟಿಯನ್ನು
ಹಿಂಪಡೆಯುವಂತೆ ಇತ್ತೀಚೆಗೆ
ಹೈಕೋರ್ಟ್ ಧಾರವಾಡದ
ವಿಭಾಗೀಯ ಪೀಠ ಆದೇಶಿಸಿದೆ.
ಆದೇಶಕ್ಕೆ ಸರ್ಕಾರ ಮೇಲ್ಮನವಿ
ಸಲ್ಲಿಸದಿರುವುದರಿಂದ ಮುಂಬಡ್ತಿ
ಪಡೆದಿರುವ ಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ
ಹಿಂಬಡ್ತಿ ಭಯ ಕಾಡಲಾರಂಭಿಸಿದೆ.
ಆದೇಶ ಪಾಲನೆಗೆ ಚಿಂತನೆ: ನ್ಯಾಯಾಲಯದ
ಆದೇಶದನ್ವಯ ಮುಂಬಡ್ತಿ
ಹೊಂದಿರುವ ಹಾಗೂ ನೇರ
ನೇಮಕಾತಿಯಾಗಿರುವ ಅಭ್ಯರ್ಥಿಗಳ ವಿರುದ್ಧ ಕ್ರಮ
ತೆಗೆದುಕೊಳ್ಳಲು ಸರ್ಕಾರ ಹಾಗೂ ಇಲಾಖೆ
ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ನ್ಯಾಯಾಲಯದ ಆದೇಶವನ್ನು 6
ತಿಂಗಳೊಳಗೆ ಜಾರಿ ಮಾಡದಿದ್ದರೆ
ನ್ಯಾಯಾಂಗ ನಿಂದನೆ ಆಗಬಹುದು
ಎಂಬ ಭಯದಿಂದ ಕ್ಷೇತ್ರ
ಶಿಕ್ಷಣಾಧಿಕಾರಿಗಳು ಆತುರಾತುರವಾಗಿ ಅಭ್ಯರ್ಥಿಗಳ
ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.
ಪದವಿಯಲ್ಲಿ ಐಚ್ಛಿಕ ವಿಷಯವಾಗಿ
ಇಂಗ್ಲಿಷ್ ಮತ್ತು ಬಿ.ಇಡಿ
ಕೋರ್ಸ್​ನಲ್ಲಿ ಇಂಗ್ಲಿಷ್
ಬೋಧನಾ ವಿಷಯವಾಗಿ
ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು
ಪ್ರೌಢಶಾಲಾ ಇಂಗ್ಲಿಷ್ ಶಿಕ್ಷಕರಾಗಲು ಅರ್ಹತೆ
ಪಡೆದಿರುತ್ತಾರೆ. ಈ ಅರ್ಹತೆಯ ಜತೆಗೆ
ಇಂಗ್ಲಿಷ್​ನಲ್ಲಿ
ಸ್ನಾತಕೋತ್ತರ ಪದವಿ ಪಡೆದಿರುವ
ಅಭ್ಯರ್ಥಿಗಳನ್ನು ಪ್ರೌಢಶಾಲಾ ಇಂಗ್ಲಿಷ್
ಶಿಕ್ಷಕರಾಗಿ ನೇಮಿಸಿಕೊಳ್ಳಲು ರಾಜ್ಯ
ಸರ್ಕಾರ ವೃಂದ ಮತ್ತು ನೇಮಕಾತಿ ನಿಯಮದಲ್ಲಿ
ಅವಕಾಶ ಕಲ್ಪಿಸಿದೆ.
ಹೀಗಾಗಿ ದಕ್ಷಿಣ ಭಾರತ ಪ್ರಾದೇಶಿಕ
ಇಂಗ್ಲಿಷ್ ಕಲಿಕಾ ಕೇಂದ್ರದ(ಆರ್​ಐಇಎಸ್​
ಐ) ಮೂಲಕ ಇಂಗ್ಲಿಷ್ ಭಾಷಾ
ಬೋಧನೆಯಲ್ಲಿ
ಸ್ನಾತಕೋತ್ತರ
ಡಿಪ್ಲೊಮಾ(ಪಿಜಿಡಿಇಎಲ್​ಟಿ)
ಕೋರ್ಸ್ ಪೂರೈಸಿದ್ದರೂ ಪ್ರೌಢಶಾಲಾ
ಇಂಗ್ಲಿಷ್ ಶಿಕ್ಷಕರಾಗಬಹುದು ಎಂದು
2003 ಜೂ.24ರಂದು ರಾಜ್ಯ ಸರ್ಕಾರ
ಹೊರಡಿಸಿದ್ದ ಶಿಕ್ಷಕರ ನೇಮಕಾತಿಗೆ
ಸಂಬಂಧಿಸಿದ ವೃಂದ ಮತ್ತು
ನೇಮಕಾತಿ ನಿಯಮದಲ್ಲಿ ಉಲ್ಲೇಖಿಸಿದೆ.
2003ರಿಂದ ಈಚೆಗೆ ಇದೇ ನಿಯಮದಡಿ 8 ಬಾರಿ
ನೇರ ನೇಮಕಾತಿಯಾಗಿದೆ. 2015ರಲ್ಲಿ 153
ಮಂದಿಗೆ ತಾತ್ಕಾಲಿಕ ಪಟ್ಟಿಯಲ್ಲಿ ಅವಕಾಶ
ದೊರೆತಿದೆ. ಇದರ ಜತೆಗೆ 3 ಸಾವಿರಕ್ಕೂ
ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರು ಇದೇ ನಿಯಮದಡಿ
ಪ್ರೌಢಶಾಲಾ ಸಹ ಶಿಕ್ಷಕರಾಗಿ
ಬಡ್ತಿಹೊಂದಿ, 10
ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸುಪ್ರೀಂಕೋರ್ಟ್​ಗೆ ಅರ್ಜಿ
ಹೈಕೋರ್ಟ್​ನ ಧಾರವಾಡ
ವಿಭಾಗೀಯ ಪೀಠ
ನೀಡಿರುವ ಆದೇಶ ಪ್ರಶ್ನಿಸಿ
ಸುಪ್ರೀಂಕೋರ್ಟ್​ಗೆ ಅರ್ಜಿ
ಸಲ್ಲಿಸಿದ್ದೇವೆ ಎಂದು ರಾಜ್ಯ ಬಡ್ತಿ
ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ
ಅಧ್ಯಕ್ಷ ಕೆ.ಬಿ.ಯಲ್ಲಪ್ಪಗೌಡ ಅವರು
'ವಿಜಯವಾಣಿ'ಗೆ ತಿಳಿಸಿದ್ದಾರೆ. 300 ಶಿಕ್ಷಕರು ಅರ್ಜಿ
ಸಲ್ಲಿಸಿದ್ದಾರೆ. ಸರ್ಕಾರದ ವತಿಯಿಂದ
ಮೇಲ್ಮನವಿ ಸಲ್ಲಿಸಲು ಸಚಿವ ಕಿಮ್ಮನೆ
ರತ್ನಾಕರ ಅವರಿಗೂ ಮನವಿ ಮಾಡಿದ್ದೇವೆ. ಯಾರೂ
ನಮ್ಮ ನೋವಿಗೆ
ಸ್ಪಂದಿಸುತ್ತಿಲ್ಲ ಎಂದು ಅಳಲು
ತೋಡಿಕೊಂಡ
ರು.

ನ್ಯಾಯಾಲಯ ನೀಡಿರುವ
ಆದೇಶವನ್ನು ಪಾಲನೆ ಮಾಡುತ್ತೇವೆ.
ಹಿಂಬಡ್ತಿ ಸಂಬಂಧ
ನ್ಯಾಯಾಲಯದ ಆದೇಶ ಇರುವಾಗ ಸರ್ಕಾರದ
ಅಧಿಕೃತ ಆದೇಶದ ಅವಶ್ಯಕತೆ ಇರುವುದಿಲ್ಲ.
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ
ಬಡ್ತಿ ಪಡೆದಿರುವ ಶಿಕ್ಷಕರ ಪಟ್ಟಿ
ಸಿದ್ಧಪಡಿಸುತ್ತಿದ್ದೇವೆ.
| ಕೆ.ಎಸ್.ಸತ್ಯಮೂರ್ತಿ, ಆಯುಕ್ತ,
ಸಾರ್ವಜನಿಕ ಶಿಕ್ಷಣ ಇಲಾಖ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023