ದೇಶದಲ್ಲೇ ಮೊದಲ ಹೊಗೆ ರಹಿತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾದ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಚಕುರಹಳ್ಳಿ:-


ಬೆಂಗಳೂರು, ಡಿ.4- ಚಿಕ್ಕಬಳ್ಳಾಪುರ ಜಿಲ್ಲೆಯ
ಗೌರಿಬಿದನೂರು ತಾಲೂಕಿನ ವ್ಯಾಚಕುರಹಳ್ಳಿ ಗ್ರಾಮವು
ದೇಶದಲ್ಲೇ ಮೊಟ್ಟ
ಮೊದಲ ಹೊಗೆ ರಹಿತ
ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು
ನೈಸರ್ಗಿಕ ಇಲಾಖೆ ಘೋಷಣೆ ಮಾಡಿರುವಂತೆ
ವ್ಯಾಚಕುರಹಳ್ಳಿ ದೇಶದ ಮೊಟ್ಟ
ಮೊದಲ ಹೊಗೆ ರಹಿತ
ಗ್ರಾಮ ಎಂದು ದಾಖಲೆ ಬರೆದಿದೆ. ಕಾರಣ, ಈ
ಗ್ರಾಮದಲ್ಲಿರುವ 275 ನಿವಾಸಿಗಳು ಸೌದೆಯನ್ನು
ಬಳಸದೆ ಪ್ರತಿಯೊಬ್ಬರೂ ಅಡುಗೆ
ಅನಿಲ (ಎಲ್ಪಿಜಿ) ಬಳಸುತ್ತಾರೆ. ದೇಶದ ಯಾವುದೇ
ಗ್ರಾಮದಲ್ಲಿ ಪ್ರತಿಯೊಬ್ಬರೂ
ಅಡುಗೆ ಅನಿಲ ಬಳಸುವ ಪದ್ಧತಿ ಇಲ್ಲ. ಈಗಲೂ
ಅನೇಕ ಕಡೆ ಸೀಮೆಎಣ್ಣೆ ಹಾಗೂ
ಸೌದೆಯಿಂದ ಊಟ, ತಿಂಡಿ ತಯಾರಿಸುವ
ಪ್ರವೃತ್ತಿಯಿದೆ.
ವ್ಯಾಚಕುರಹಳ್ಳಿಯ 275 ಮನೆಗಳಲ್ಲೂ
ಪ್ರತಿಯೊಬ್ಬರೂ ಅಡುಗೆ ಅನಿಲ
ಬಳಸಿ ಊಟ, ತಿಂಡಿ
ಸಿದ್ಧಪಡಿಸಿಕೊಳ್ಳುತ್ತಾರೆ. ಇಲ್ಲಿ
ಸೀಮೆಎಣ್ಣೆ ಮತ್ತು ಸೌದೆ ಬಳಸುವುದನ್ನು
ಕಳೆದ ಹಲವು ದಿನಗಳಿಂದ ನಿಲ್ಲಿಸಲಾಗಿದೆ.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು (ವಿಎ)
ಮನೆ ಮನೆಗೆ ತೆರಳಿ ಸಮೀಕ್ಷೆ
ನಡೆಸಿದ್ದರು. ಈ ಸಮೀಕ್ಷೆಯನ್ನು
ಕೇಂದ್ರ ಪೆಟ್ರೋಲಿಯಂ ಸಚಿವ
ಧರ್ಮೇಂದ್ರ ಪ್ರಧಾನ್ ಪಡೆದು ಗ್ರಾಮವನ್ನು
ಹೊಗೆ ರಹಿತ ಎಂದು ಅಧಿಕೃತವಾಗಿ
ಘೋಷಣೆ ಮಾಡಿದ್ದಾರೆ.
ಇದರಿಂದ ಈ ಕುಗ್ರಾಮಕ್ಕೆ ಅನೇಕ ಸವಲತ್ತುಗಳು
ಇನ್ನು ಮುಂದೆ ಸಿಗಲಿವೆ. ಈಗಾಗಲೇ
ಭಾರತೀಯ ತೈಲ ಕಂಪೆನಿಗಳು ಈ
ಗ್ರಾಮವನ್ನು ದತ್ತು ಪಡೆಯಲು ಮುಂದೆ
ಬಂದಿವೆ. ಇದರಿಂದ ಆಸ್ಪತ್ರೆ, ಶಾಲೆಗಳು,
ಸಮುದಾಯ ಭವನ, ಚರಂಡಿ, ಸಿಮೆಂಟ್
ರಸ್ತೆ, ಕುಡಿಯುವ ನೀರು ಸೇರಿದಂತೆ
ಅನೇಕ ಸೌಲಭ್ಯಗಳು ದೊರಕಲಿವೆ.
ಕಳೆದ ಐದು ದಶಕಗಳಿಂದ ಗ್ರಾಮದಲ್ಲಿ
ಸೀಮೆಎಣ್ಣೆ ಮತ್ತು ಸೌದೆಯೇ ಎಲ್ಲದಕ್ಕೂ
ಆಧಾರವಾಗಿತ್ತು. ಆದರೆ, ಇವು ಆರೋಗ್ಯದ ಮೇಲೆ
ದುಷ್ಪರಿಣಾಮ ಬೀರುವುದರಿಂದ ಅಡುಗೆ
ಅನಿಲ ಬಳಸುವಂತೆ ಮನವಿ ಮಾಡಲಾಯಿತು.
ಇದಕ್ಕೆ ಸಾರ್ವಜನಿಕರು ಸ್ಪಂದಿಸಿ ತಮ್ಮ
ಮನೆಗಳಿಗೆ ಅಡುಗೆ ಅನಿಲ
ಹಾಕಿಸಿಕೊಂಡಿದ್ದಾರೆ.
ಶೀಘ್ರದಲ್ಲೇ ಗ್ರಾಮಕ್ಕೆ
ಧರ್ಮೇಂದ್ರ ಪ್ರಧಾನ್ ಆಗಮಿಸುವ
ನಿರೀಕ್ಷೆಯಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023