ಅಂಬೇಡ್ಕರ್ ಸ್ಮರಣಾರ್ಥ ಎರಡು ನಾಣ್ಯಗಳ ಬಿಡುಗಡೆ:-


BY ವಿಜಯವಾಣಿ ನ್ಯೂಸ್
· DEC 6, 2015
ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್
ಅವರ 125ನೇ ಜನ್ಮ ದಿನಾಚರಣೆ
ಅಂಗವಾಗಿ 'ಬಾಬಾ ಸಾಹೇಬ್
ಅಂಬೇಡ್ಕರ್ ಪರಿನಿರ್ವಾಣ
ದಿನಾಚರಣೆ'ಯ ದಿನವಾದ ಇಂದು
ಪ್ರಧಾನಿ ನರೇಂದ್ರ ಮೋದಿ
ಎರಡು ಸ್ಮರಣಾರ್ಥ ನಾಣ್ಯಗಳನ್ನು
ಬಿಡುಗಡೆ ಮಾಡಿದರು.
ಅಂಬೇಡ್ಕರ್ ಅವರ ಭಾವಚಿತ್ರವಿರುವ
125 ರೂ. ಮತ್ತು 10 ರೂ.
ನಾಣ್ಯಗಳನ್ನು ಬಿಡುಗಡೆಗೊಳಿಸಿದ
ಮೋದಿ, ಅಂಬೇಡ್ಕರ್ ನಿಧನರಾಗಿ
60 ವರ್ಷಗಳೇ ಕಳೆದಿದ್ದರೂ ಈಗಲೂ
ಬದುಕಿದ್ದಾರೆ ಎಂದೆನಿಸುತ್ತದೆ.
ಅಂಬೇಡ್ಕರ್ ಅವರ ಮುನ್ನೋಟ
ಈಗಲೂ ಪ್ರಸ್ತುತ. ಅವರ ವಿಸõತ ಆರ್ಥಿಕ
ಆಲೋಚನೆಗಳು,
ದೃಷ್ಟಿಕೋನಗಳನ್ನು
ಪೂರ್ತಿಯಾಗಿ ಅರ್ಥೈಸಲು
ಸಾಧ್ಯವಾಗಿಲ್ಲ. ಮಹಿಳಾ
ಸಬಲೀಕರಣ, ಶಿಕ್ಷಣ, ಸಮಾನತೆಗೆ
ಅಂಬೇಡ್ಕರರ ಕೊಡುಗೆ ಅಪಾರ
ಎಂದರು.
ಹಣಕಾಸು ಸಚಿವ ಅರುಣ್ ಜೇಟ್ಲಿ
ಮತ್ತು ಸಮಾಜ ಕಲ್ಯಾಣ ಸಚಿವ
ಥಾವರ್ ಚಾಂದ್ ಗೆಹ್ಲೋಟ್
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸತ್ ಭವನದಲ್ಲಿ ಸ್ಥಾಪಿಸಲಾಗಿರುವ
ದಲಿತ ಮುಖಂಡ ಬಾಬಾ ಸಾಹೇಬ್
ಅಂಬೇಡ್ಕರ್ ಅವರ ಮೂರ್ತಿಗೆ
ಶನಿವಾರ ಮೋದಿ ಗೌರವ
ಸಲ್ಲಿಸಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023