ಆಸ್ಕರ್ಗೆ ರಂಗಿ ತರಂಗ ನಾಮನಿರ್ದೇಶನ:-


ಅನೂಪ್ ಭಂಡಾರಿ ನಿರ್ದೇಶನದ ಚಿತ್ರ
ರಂಗಿತರಂಗಕ್ಕೆ ಇನ್ನೊಂದು ಹೆಗ್ಗಳಿಕೆ. ಪ್ರತಿಷ್ಠಿತ
ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾದ ಅಂತಿಮ
ಪಟ್ಟಿಯಲ್ಲಿ ಕನ್ನಡದ ರಂಗಿತರಂಗ
ನಾಮನಿರ್ದೇಶನಗೊಂಡಿದೆ. ಭಾರತದಿಂದ
ಆಯ್ಕೆಯಾಗಿರುವ ನಾಲ್ಕು ಚಿತ್ರಗಳಲ್ಲಿ ಇದೂ
ಒಂದು.
* ಪದ್ಮಾ ಶಿವಮೊಗ್ಗ
ರಂಗಿತರಂಗ ಚಿತ್ರ ಈಗಾಗಲೇ ವಿದೇಶಿಗರ
ಮನಗೆದ್ದಿದೆ. ವಿಭಿನ್ನ ಕಥಾವಸ್ತುವಿರುವ ಸಸ್ಪೆನ್ಸ್
ಆ್ಯಂಡ್ ಥ್ರಿಲ್ಲರ್ ಚಿತ್ರ ಈಗ ಆಸ್ಕರ್ ಹೊಸ್ತಿಲಲ್ಲಿದೆ.
ವಿಶ್ವಾದ್ಯಂತ ಸ್ಪರ್ಧೆಗೆ ಬಂದಿದ್ದ ಸಾವಿರಾರು
ಚಿತ್ರಗಳಲ್ಲಿ 305 ಚಿತ್ರಗಳನ್ನು ಆಯ್ಕೆ ಮಾಡಿ ಅಂತಿಮ
ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ
ನಾಲ್ಕು ಭಾಷೆಯ ಚಿತ್ರಗಳು ಆಯ್ಕೆಯಾಗಿದ್ದು,
ಅವುಗಳಲ್ಲಿ ಈ ಕನ್ನಡ ಚಿತ್ರವೂ ಒಂದು. ಇಷ್ಟೇ
ಅಲ್ಲದೇ, ನಟರಾದ ನಿರೂಪ್ ಭಂಡಾರಿ, ಸಾಯಿ
ಕುಮಾರ್, ಅರವಿಂದ್ ರಾವ್, ನಟಿಯರಾದ
ಅವಂತಿಕಾ ಶೆಟ್ಟಿ, ರಾಧಿಕಾ ಚೇತನ್ ಮತ್ತು
ತಂತ್ರಜ್ಞರೂ ಕೂಡಾ ನಾಮಿನೇಟ್
ಆಗಿದ್ದಾರೆ. ಇದು ಅನಿರೀಕ್ಷಿತ ಎನ್ನುತ್ತಾರೆ
ನಿರ್ದೇಶಕ ಅನೂಪ್.
'ನಮ್ಮ ಅರ್ಜಿಯನ್ನು ಸ್ವೀಕೃತಿ ಮಾಡಿರುವ ಬಗ್ಗೆ
ಸೆಪ್ಟೆಂಬರ್ನಲ್ಲೇ ಆಸ್ಕರ್ ಸಂಸ್ಥೆಯಿಂದ ಲೆಟರ್
ಬಂದಿತ್ತು. ಆದರೆ, ನಾಮಿನೇಟ್ ಮಾಡಿದರೆ
ಮಾತ್ರ ಪ್ರಕಟಿಸೋಣ ಎಂದು ಸುಮ್ಮನಿದ್ದೆವು.
ಈಗ ಅಂತಿಮ ಪಟ್ಟಿಯಲ್ಲಿ ಚಿತ್ರ ಇರೋದು ಬಹಳ
ಖುಷಿಯಾಗ್ತಿದೆ. ಮುಂದೆ ಏನಾಗುತ್ತೆ ಅಂತ
ಗೊತ್ತಿಲ್ಲ. ಆದರೆ, ನಾಮಾಂಕಿತಗೊಂಡಿದೆ
ಎನ್ನುವುದೇ ಸಂತಸದ ಸಂಗತಿ' ಎಂದು
ಅನೂಪ್ ಹೇಳುತ್ತಾರೆ.
ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ಉಳಿದ ಭಾರತದ
ಚಿತ್ರಗಳೆಂದರೆ, ಕೊಂಕಣಿಯ 'ನಾಚುಮ್ - ಇಯಾ
ಕುಂಪಸಾರ', ಮಲಯಾಳಂನ 'ಜಲಂ', ಹಿಂದಿಯ
'ಹೇಮಲ್ಕಾಸಾ'. ಇನ್ನು ರಂಗಿತರಂಗ
ಇಲ್ಲಿಯೂ ರಂಗೇರಿಸುತ್ತದೆಯಾ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023