ಟೈಮ್’ ವರ್ಷದ ವ್ಯಕ್ತಿಯಾಗಿ ಏಂಜೆಲಾ ಮರ್ಕೆಲ್ ಆಯ್ಕೆ*-:


10 Dec, 2015
ನ್ಯೂಯಾರ್ಕ್ (ಪಿಟಿಐ): 'ಟೈಮ್' ಪತ್ರಿಕೆಯ
ವರ್ಷದ (2015) ವ್ಯಕ್ತಿಯಾಗಿ
ಜರ್ಮನಿಯ ಚಾನ್ಸಲರ್ ಏಂಜೆಲಾ
ಮರ್ಕೆಲ್ ಆಯ್ಕೆಯಾಗಿದ್ದಾರೆ.
ಮರ್ಕೆಲ್ ಅವರ ಆಯ್ಕೆಯನ್ನು ಘೋಷಿಸಿರುವ
'ಟೈಮ್', 'ಏಂಜೆಲಾ ಅವರ ಚತುರ
ನಾಯಕತ್ವ ಆರ್ಥಿಕ ಸಂದಿಗ್ಧ
ಸ್ಥಿತಿಯಲ್ಲಿತ್ತ ಯುರೋಪ್ ಅನ್ನು ರಕ್ಷಿಸಲು
ಹಾಗೂ ಉಕ್ರೇನ್ನ ಸಂಘರ್ಷಮಯ
ವಾತಾವರಣದಲ್ಲಿ ನಿರಾಶ್ರಿತರ ಬಿಕ್ಕಟ್ಟನ್ನು
ಶಮನಗೊಳಿಸಲು ನೆರವಾಗಿದೆ'
ಎಂದು ಹೇಳಿದೆ. 61 ವರ್ಷದ ಮರ್ಕೆಲ್,
ಜಗತ್ತಿನ ಅತ್ಯಂತ ಪ್ರಭಾವಿ ಮಹಿಳೆ
ಎನಿಸಿದ್ದಾರೆ.
ಟೈಮ್ ವರ್ಷದ ವ್ಯಕ್ತಿ ಪಟ್ಟಿಯಲ್ಲಿ
ಮರ್ಕೆಲ್, ಜಗತ್ತಿನ ಪ್ರಭಾವಿ ವ್ಯಕ್ತಿಗಳಾದ
ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ, ರಷ್ಯಾ
ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಸ್ಲಾಮಿಕ್
ಸ್ಟೇಟ್ (ಐಎಸ್) ನಾಯಕ ಅಬು ಬಕ್ರ್ ಅಲ್–
ಬಾಗ್ದಾದಿ ಹಾಗೂ ಅಮೆರಿಕ
ಅಧ್ಯಕ್ಷೀಯ ಚುನಾವಣೆಗೆ
ರಿಪಬ್ಲಿಕನ್ ಪಕ್ಷದ ಉಮೇದುವಾರ
ಡೊನಾಲ್ಡ್ ಟ್ರಂಪ್
ಮತ್ತಿತರ ಪ್ರಮುಖರನ್ನು
ಹಿಂದಿಕ್ಕಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023