ಜ್ಞಾನ ಭಂಡಾರದ ವೆಬ್ಸೈಟ್ indiacode.nic.in *+


ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ
ಉಪಯುಕ್ತವಾದ ಸರಕಾರಿ
ವೆಬ್ಸೈಟ್ಗಳು
ಬಹುತೇಕರು ಕಂಪ್ಯೂಟರ್ ಆನ್
ಮಾಡಿದ ತಕ್ಷಣ ಮೊದಲು ಭೇಟಿ
ನೀಡುವುದು ಫೇಸ್ಬುಕ್ಗೆ.
ಅಲ್ಲೊಂದಿಷ್ಟು ಹೊತ್ತು
ಕಾಲಹರಣ ಮಾಡಿ ನಂತರ ಸಮಯವಿದ್ದರೆ
ಇಮೇಲ್, ಯೂಟ್ಯೂಬ್, ಆನ್ಲೈನ್
ನ್ಯೂಸ್ ಪೋರ್ಟಲ್ಗಳ ಮೇಲೆ
ಕಣ್ಣಾಡಿಸುತ್ತಾರೆ. ಇಂತಹ
ಅಭ್ಯಾಸವನ್ನು ಸ್ಪರ್ಧಾತ್ಮಕ
ಪರೀಕ್ಷಾರ್ಥಿಗಳು ಬಿಡುವುದು
ಒಳಿತು. ಅದರ ಬದಲು ಕೆಲವೊಂದು
ಉಪಯುಕ್ತ ವೆಬ್ಸೈಟ್ಗಳಿಗೆ ಭೇಟಿ
ನೀಡಿ ತಮ್ಮ ಜ್ಞಾನ
ಭಂಡಾರವನ್ನು
ಹೆಚ್ಚಿಸಿಕೊಳ್ಳಬಹುದು.
ಇಂಡಿಯಾ ಕೋಡ್ ಎಂಬ ಕಣಜ
ನೀವು ಇಂಡಿಯಾ ಕೋಡ್ (http://
indiacode.nic.in) ಎಂಬ ಭಾರತ
ಸರಕಾರದ ವೆಬ್ಸೈಟ್ಗೆ ಭೇಟಿ ನೀಡಿದರೆ
ನಿಮಗೆ ಹಲವು ಮಾಹಿತಿಗಳ ಕಣಜವೇ
ದೊರಕುತ್ತದೆ. ಅಲ್ಲಿ ಸೆಂಟ್ರಲ್
ಆ್ಯಕ್ಟ್ಸ್ ಎಂಬ ವಿಭಾಗವನ್ನು ಕ್ಲಿಕ್
ಮಾಡಿದರೆ ಎಂಎಸ್ ವರ್ಡ್
ಫೈಲೊಂದು
ಆಟೋಮ್ಯಾಟಿಕ್ ಆಗಿ ಡೌನ್ಲೋಡ್
ಆಗುತ್ತದೆ. ಅದರಲ್ಲಿ ಎ-ಝಡ್ ಎಲ್ಲಾ
ಕಾಯಿದೆಗಳ ಪೂರ್ಣ ಮಾಹಿತಿ
ದೊರಕುತ್ತದೆ. ಅಂದರೆ, ಕಾಯಿದೆಯ
ಸಂಖ್ಯೆ, ಜಾರಿಗೊಂಡ ಇಸವಿ,
ಕಾಯಿದೆಯ ವಿಶೇಷತೆ ಸೇರಿದಂತೆ
ಸಂಪೂರ್ಣ ಮಾಹಿತಿ ದೊರಕುತ್ತದೆ.
ಇದೇ ವೆಬ್ಸೈಟ್ನಲ್ಲಿ
'ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ'
ಎಂಬ ವಿಭಾಗ ಕ್ಲಿಕ್ ಮಾಡಿದರೆ ಹೊಸ
ಪುಟವೊಂದು
ತೆರೆದುಕೊಳ್ಳುತ್ತದೆ. ಆ ಹೊಸ
ಪುಟದಲ್ಲಿ ಅಮೆಂಡ್ಮೆಂಟ್ಗಳು
ಸೇರಿದಂತೆ ಭಾರತದ ಸಂವಿಧಾನದ
ಸಂಪೂರ್ಣ ವಿವರ
ತೆರೆದುಕೊಳ್ಳುತ್ತದೆ.
ಇಂಡಿಯಾ ಕೋಡ್ ತಾಣದಲ್ಲಿ
ಹಲವು ಪ್ರಮುಖ ವೆಬ್ಸೈಟ್ಗಳ ಲಿಂಕ್
ದೊರಕುತ್ತದೆ. ಉದಾಹರಣೆಗೆ
ಸುಪ್ರೀಂ ಕೋರ್ಟ್ ಆಫ್
ಇಂಡಿಯಾ ಲಿಂಕ್ ಕ್ಲಿಕ್ ಮಾಡಿದರೆ ಆ
ವೆಬ್ಸೈಟ್ಗೆ ಹೋಗಬಹುದು. ಅಲ್ಲಿ
ಮುಖ್ಯ ನ್ಯಾಯಮೂರ್ತಿಗಳು,
ಜಡ್ಜ್ಗಳ ಹೆಸರು ಸೇರಿದಂತೆ ಭಾರತದ
ಉಚ್ಛ ನ್ಯಾಯಾಲಯದ ಮಾಹಿತಿ
ಪಡೆದುಕೊಳ್ಳಬಹುದು.
ಮಿನಿಸ್ಟರಿ ಆಫ್ ಲಾ ಆ್ಯಂಡ್ ಜಸ್ಟೀಸ್
ಕ್ಲಿಕ್ ಮಾಡಿದರಂತೂ ಪಾರ್ಲಿಮೆಂಟ್,
ಕ್ಯಾಬಿನೆಟ್, ಚುನಾವಣಾ
ಆಯೋಗ, ಲೋಕ ಸಭೆ, ರಾಜ್ಯ ಸಭೆ
ವಿವರಗಳು, ಪಾರ್ಲಿಮೆಂಟ್ ಬಿಲ್ಗಳು,
ಕೇಂದ್ರ ಬಜೆಟ್, ರೈಲ್ವೆ ಬಜೆಟ್
ಸೇರಿದಂತೆ ಹತ್ತು ಹಲವು ಮಾಹಿತಿಗಳ
ಕೊಂಡಿ ಕಾಣಿಸಿಕೊಳ್ಳುತ್ತದೆ.
ಒಟ್ಟಾರೆ ಇಂಡಿಯಾಕೋಡ್
ವೆಬ್ಸೈಟ್ ಎನ್ನುವುದು
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ
ನಡೆಸುವವರಿಗೆ
ವಿಶ್ವವಿದ್ಯಾಲಯವಿದ್ದಂತೆ.
ಕರ್ನಾಟಕ ಗ್ಯಾಜೆಟಿಯರ್
ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲು
ರಾಜ್ಯ ಸರಕಾರದ ಜೆಟಿಯರ್ (http://
gazetteer.kar.nic.in/) ವೆಬ್ಸೈಟ್ಗೆ
ಭೇಟಿ ನೀಡಬಹುದು. ಇಲ್ಲಿ ನಿಮಗೆ
ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ
ಮಾಡಲು ಪೂರಕವಾದ ಸಾಕಷ್ಟು
ಮಾಹಿತಿಗಳು ದೊರಕುತ್ತವೆ.
ರಾಜ್ಯ, ಜಿಲ್ಲೆ ಮತ್ತು ತಾಲೂಕು
ಮಟ್ಟದ ಗ್ಯಾಜೆಟಿಯರ್ಗಳಿಗೆ ಭೇಟಿ
ನೀಡಬಹುದಾಗಿದೆ. ವಿಶೇಷವೆಂದರೆ,
ಇಲ್ಲಿ ಇಂಗ್ಲಿಷ್ ಮಾತ್ರವಲ್ಲದೆ
ಕನ್ನಡದಲ್ಲೂ ಮಾಹಿತಿ ಇದೆ. ಇಲ್ಲಿ
ರಾಜ್ಯದ ವಿವಿಧ ವರ್ಷಗಳ ಕ್ರಿಯಾ
ಯೋಜನೆ(ಆ್ಯಕ್ಷನ್ ಪ್ಲಾನ್)ಗಳ ವಿವರ
ದೊರಕುತ್ತದೆ. ಮಾಹಿತಿ ಹಕ್ಕು
ಕಾಯಿದೆಯ ಬಗ್ಗೆಯೂ
ತಿಳಿದುಕೊಳ್ಳಬಹುದಾಗಿದೆ.
ಕರ್ನಾಟಕ ಗ್ಯಾಜೆಟಿಯರ್ನ ಹೋಮ್
ಪೇಜ್ಗೆ ಮರಳಿ 'ಸ್ಪೆಷಲ್ ಪಬ್ಲಿಕೇಷನ್'
ಎಂಬ ವಿಭಾಗವನ್ನು ಕ್ಲಿಕ್ ಮಾಡಿ.
ಅಲ್ಲಿ 2010 ಮತ್ತು 2015ರ ಹ್ಯಾಂಡ್
ಬುಕ್ ಆಫ್ ಕರ್ನಾಟಕ ದೊರಕುತ್ತವೆ.
ರಾಜ್ಯದ ಕೃಷಿ, ಪ್ರವಾಸೋದ್ಯಮ,
ಶಿಕ್ಷಣ, ಕ್ರೀಡೆ, ಆರ್ಥಿಕ
ಯೋಜನೆಗಳು, ಸಮಾಜ ಕಲ್ಯಾಣ
ಸೇರಿದಂತೆ ಹಲವು ಮಾಹಿತಿಗಳನ್ನು
ಈ ಹ್ಯಾಂಡ್ ಬುಕ್ಗಳಿಂದ
ಪಡೆದುಕೊಳ್ಳಬಹುದಾಗಿದೆ.
ಇದೇ ಗ್ಯಾಜೆಟಿಯರ್ನಲ್ಲಿ ಗ್ಲಿಂಪಸ್
ಆಫ್ ಕರ್ನಾಟಕ ಎಂಬ 264 ಪುಟಗಳ
ಮಾಹಿತಿ ಇದೆ. ಇದರಲ್ಲಿ ಕರ್ನಾಟಕದ
ವೈಭವವನ್ನು ಬಣ್ಣಿಸಲಾಗಿದೆ. ಇದು
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ
ನಡೆಸುವವರಿಗೆ ಅತ್ಯುತ್ತಮ ಜ್ಞಾನ
ಭಂಡಾರವೆಂದೇ ಹೇಳಬಹುದು.
ಇದೇ ತಾಣದಲ್ಲಿ ಕರ್ನಾಟಕ
ಕೈಪಿಡಿ-2012 ಇದೆ. ಇಲ್ಲಿ ಹತ್ತು ಹಲವು
ವಿಷಯಗಳ ಕುರಿತು ಮಾಹಿತಿ
ಕನ್ನಡದಲ್ಲಿಯೇ ದೊರಕುತ್ತದೆ.
ಇತ್ತ ಗಮನಿಸಿ
* ಇಂಟರ್ನೆಟ್ ಅನ್ನು ನಿಮ್ಮ ಜ್ಞಾನ
ಹೆಚ್ಚಿಸಿಕೊಳ್ಳುವ
ವಿಶ್ವವಿದ್ಯಾಲಯವಾಗಿ
ಪರಿವರ್ತಿಸಿಕೊಳ್ಳಿ.
* ಕೆಲವೊಂದು ವೆಬ್ಸೈಟ್ಗಳಿಗೆ
ಪ್ರವೇಶಿಸಲು ನಿಮ್ಮ ಇಮೇಲ್
ವಿಳಾಸ ನೀಡುವುದು ಕಡ್ಡಾಯ.
ಒಮ್ಮೆ ಭೇಟಿ ನೀಡಿದ ತಪ್ಪಿಗೆ ನಿಮ್ಮ
ಇಮೇಲ್ ಖಾತೆಗೆ ರಾಶಿ ರಾಶಿ
ಇಮೇಲ್ಗಳು ಬಂದು
ಬೀಳಬಹುದು. ಇದನ್ನು ತಪ್ಪಿಸಲು
ಇಂತಹ ವೆಬ್ಸೈಟ್ಗಳಿಗಾಗಿಯೇ
ಒಂದು ಪರ್ಯಾಯ ಇಮೇಲ್ ಖಾತೆ
ನಿಮ್ಮಲ್ಲಿ ಇರಲಿ.
* ಇಂಟರ್ನೆಟ್ನಲ್ಲಿ ಅತ್ಯುತ್ತಮವೆನಿಸಿದ
ಮಾಹಿತಿಗಳನ್ನು ಮತ್ತೆ ಓದಲು
ಅನುವಾಗುವಂತೆ ಬುಕ್ಮಾರ್ಕ್
ಮಾಡಿಟ್ಟುಕೊಳ್ಳಿ.
* ಇಂಟರ್ನೆಟ್ನಲ್ಲಿ ಓದಿದ ವಿಷಯಗಳ
ಪ್ರಮುಖಾಂಶಗಳನ್ನು ನೋಟ್
ಬುಕ್ನಲ್ಲಿ ಬರೆದಿಡಿ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023