Posts

Showing posts from November, 2015

2016ನೇ ಸಾಲಿನ ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

Image
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2016ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯನ್ನು ಮಾ.11 ರಿಂದ 28ರವರೆಗೆ ನಡೆಸಲಿದೆ. ಈ ಹಿಂದೆ ಮಾ.10 ರಿಂದ 26ವರೆಗೆ ನಡೆಸಲು ಪ್ರಸ್ತಾವಿತ ವೇಳಾಪಟ್ಟಿ ಬಿಡುಗಡೆ ಮಾಡಿ ಸಾರ್ವಜನಿಕರಿಂದ ಅಪೇಕ್ಷಣೆ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಅದಕ್ಕೆ ಸಾರ್ವಜನಿಕರಿಂದ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಾ.11 ರಿಂದ 28ರವರೆಗೆ ಪರೀಕ್ಷೆ ನಡೆಸಲು ಅಂತಿಮ ವೇಳಾಪಟ್ಟಿ ಸಿದ್ಧಪಡಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಅದನ್ನು ಸೋಮವಾರ ಬಿಡುಗಡೆ ಮಾಡಿದೆ. ವೇಳಾ ಪಟ್ಟಿಯನ್ನು ಕಾಲೇಜುಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ರಾಜ್ಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ. ಪರೀಕ್ಷಾ ದಿನಾಂಕ – ಸಮಯ ಬೆ.9ರಿಂದ ಮ.12.15 ಮಾ.11 – ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮಾ.12 – ಇತಿಹಾಸ, ಗಣಕ ವಿಜ್ಞಾನ ಮಾ.13 – ರಜಾ ದಿನ ಮಾ.14 – ಭೂಗೋಳ ಶಾಸ್ತ್ರ, ಗಣಿತ ಮಾ.15 – ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್ ಮಾ. 16 – ಅರ್ಥಶಾಸ್ತ್ರ ಮತ್ತು ಭೂ ಗರ್ಭಶಾಸ್ತ್ರ ಮಾ.17 – ಮನಃಶಾಸ್ತ್ರ, ಭೌತಶಾಸ್ತ್ರ (ಕರ್ನಾಟಿಕ್ ಸಂಗೀತ, ಹಿಂದೂಸ್ತಾನಿ ಸಂಗೀತ- ಮ.2ರಿಂದ ಸಂ.5.15) ಮಾ.18 – ತರ್ಕಶಾಸ್ತ್ರ, ಶಿಕ್ಷಣ ಮಾ.19 – ಐಚ್ಛಿಕ

ಮುಂದಿನ ವರ್ಷ ನೂತನ ಶಿಕ್ಷಣ ನೀತಿ ಜಾರಿ: ಸ್ಮೃತಿ ಇರಾನಿ:-

30 Nov, 2015 ನವದೆಹಲಿ(ಪಿಟಿಐ): ಮುಂದಿನ ವರ್ಷ ನೂತನ ಶಿಕ್ಷಣ ನೀತಿ ಜಾರಿ ಮಾಡಲಾಗುವುದು ಎಂದು ಸರ್ಕಾರ ಸೋಮವಾರ ಲೋಕಸಭೆಯಲ್ಲಿ ತಿಳಿಸಿದೆ. ಹೊಸ ಶಿಕ್ಷಣ ನೀತಿ ಪುನರ್ ರಚನೆ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು, ಪ್ರಸ್ತಾವಿತ ನೂತನ ಶಿಕ್ಷಣ ನೀತಿ ಮುಂದಿನ ವರ್ಷ ಫಲಪ್ರದವಾಗಲಿದೆ ಎಂದು ಸದನಕ್ಕೆ ತಿಳಿಸಿದರು. 'ಇ-ಪಾಠಶಾಲ': 'ಇ-ಪಾಠಶಾಲ' ಯೋಜನೆ ಜಾರಿಯಾಗಲಿದ್ದು, ಒಂದರಿಂದ 12ನೇ ತರಗತಿ(ಪಿಯು)ವರೆಗಿನ ಸಿಬಿಎಸ್ಇ ಪಠ್ಯಕ್ರಮದ ಪುಸ್ತಕಗಳು ಆನ್ಲೈನ್ ಹಾಗೂ ಮೊಬೈಲ್ ಪೋನ್ ಅಪ್ಲಿಕೇಷನ್ಗಳ ಮೂಲಕ ಉಚಿತವಾಗಿ ಲಭ್ಯವಾಗಲಿವೆ ಎಂದು ತಿಳಿಸಿದರು.

270 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ:-

Image
ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಎ, ಬಿ ಮತ್ತು ಗ್ರೂಪ್ ಸಿ ಗೆ ಸೇರಿದ ಸುಮಾರು 270 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ, ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭೂಮಾಪನ ಕಂದಾಯ ವ್ಯವಸ್ಥೆ, ಭೂದಾಖಲೆಗಳ ಇಲಾಖೆ, ಕರ್ನಾಟಕ ಮತ್ತು ನಾಗರಿಕ ಸರಬರಾಜು ನಿಗಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿ ನಡೆಯಲಿದೆ. ಹುದ್ದೆಗಳ ವಿವರ ವಿದ್ಯಾರ್ಹತೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ : ಸಿವಿಲ್ ಅಥವಾ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ ಪದವಿ ಪೌರಾಡಳಿತ ನಿರ್ದೇಶನಾಲಯ (ಸ್ಥಳೀಯ ಸೇರಿ) ಕಾರ್ಯಪಾಲಕ ಅಭಿಯಂತರ/ ಅಭಿವೃದ್ಧಿ ಅಧಿಕಾರಿ/ ಸಹಾಯಕ ಕಾರ್ಯಪಾಲಕ ಅಭಿಯಂತರರು (ನೀರು ಸರಬರಾಜು ಮತ್ತು ಒಳಚರಂಡಿ) : ಸಿವಿಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಸಹಾಯಕ ಅಭಿಯಂತರರು(ಸಿವಿಲ್): ಸಿವಿಲ್ ಎಂಜಿನಿಯರಿಂಗ್ ಪದವಿ ಪರಿಸರ ಅಭಿಯಂತರರು: ಎನ್ವಿರಾನ್ಮೆಂಟಲ್ ಅಥವಾ ಕೆಮಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರು : ಬಿ.ಇ/ಬಿ.ಟೆಕ್/ಬಿಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಜಿಲ್ಲಾ ಅಂ

ಕೃಷಿ ವಿವಿಗಳಲ್ಲಿ ಒಟ್ಟು 211 ಹುದ್ದೆಗಳು*:

Nov 30, 2015, 04.00 AM IST ರಾಯಚೂರು ಕೃಷಿ ವಿವಿ 167 ಹುದ್ದೆಗಳನ್ನು ಭರ್ತಿ ಮಾಡಲು ರಾಯಚೂರು ಕೃಷಿ ವಿವಿಯು ಹೈ-ಕ ಭಾಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಿತ್ತು, ಆದರೆ ಹಲವು ಕಾರಣಗಳಿಂದ ಈ ಅಧಿಸೂಚನೆಯನ್ನು ಹಿಂಪಡೆದಿತ್ತು. ಇದೀಗ ಕೃಷಿ ವಿವಿಯು ತಿದ್ದುಪಡಿಸಿಗೊಳಿಸಿದ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಮತ್ತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತೆ ಅಭ್ಯರ್ಥಿಗಳನ್ನು ಕೋರಿದೆ. ಆದರೆ, ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಕೆಲವು ಹುದ್ದೆಗಳ ಹೆಸರು ಮತ್ತು ಸಂಖ್ಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇದನ್ನು ಅಭ್ಯರ್ಥಿಗಳು ಗಮನಿಸಬೇಕಾಗಿದೆ. ಹುದ್ದೆಗಳ ವಿವರಗಳು 1. ಧಾರವಾಡದ ಕೃಷಿ ವಿವಿಯಿಂದ ವರ್ಗಗೊಂಡ ಬ್ಯಾಕ್ಲಾಗ್ ಹುದ್ದೆ: (ಜೂನಿಯರ್ ಎಂಜಿನಿಯರ್-1 (ಎಸ್ಸಿ) 2. ಹೈದರಬಾದ್-ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಟ್ಟಿರುವ ಹುದ್ದೆಗಳ ವಿವರ ಸರ್ವೀಸ್ ಪರ್ಸನಲ್ (ಡೈರೆಕ್ಟ್ ರಿಕ್ರೂಟ್ಮೆಂಟ್) ವಿದ್ಯಾರ್ಹತೆಗಳೇನು? ಅಸಿಸ್ಟೆಂಟ್ ವೈದ್ಯಾಧಿಕಾರಿ-ಎಂಬಿಬಿಎಸ್ (50% ಅಂಕಗಳು) + 3 ವರ್ಷ ಸೇವಾನುಭವ ಜೂನಿಯರ್ ಎಂಜಿನಿಯರ್ (ಸಿವಿಲ್/ಅಗ್ರಿ)- ಸಿವಿಲ್ ಅಥವಾ ಅಗ್ರಿ ಎಂ

103rd edition of Indian Science Congress at Mysuru from Jan 3:--

103rd edition of Indian Science Congress at Mysuru from Jan 3 UdayavaniEnglish.com, Nov 29, 2015, 5:45 PM IST Mysuru: The 103rd edition of Indian Science Congress (ISC), the country's largest science event, will be held at University of Mysore from January 3-7, 2016. The five-day congress will comprise plenary sessions, Pride of India expo, Hall of Pride, genesis symposium, Vigyan Jyot, vision talks, women and children science congress, young scientist's award, ISCA awards, science communicators' meet and public lectures, ISC said in a release. This prestigious congress is returning to Karnataka after a 13-year gap Prime Minister Narendra Modi is expected to inaugurate the ISC on January 3, the release said. The Congress, with the focal theme 'Science and Technology for Indigenous Development in India', will be addressed by over 500 eminent scientists and experts. Five Nobel laureates have already confirmed t

ಬ್ಯಾಡ್ಮಿಂಟನ್: ಸಿಂಧು ಹ್ಯಾಟ್ರಿಕ್ ಸಾಧನೆ:-

ಮಕಾವ್ (ಪಿಟಿಐ): ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ನಿರೀಕ್ಷೆ ಹುಸಿಗೊಳಿಸಲಿಲ್ಲ. ಅಮೋಘ ಪ್ರದರ್ಶನ ತೋರಿದ ಸಿಂಧು ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಭಾನುವಾರ ಹ್ಯಾಟ್ರಿಕ್ ಪ್ರಶಸ್ತಿಯ ಸಾಧನೆಗೈದರು. 2013 ಹಾಗೂ 2014ರಲ್ಲಿ ಕೂಡ ಸಿಂಧು ಮಕಾವ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಆದರೆ, ಈ ಋತುವಿನಲ್ಲಿ ಸಿಂಧುಗೆ ಒಲಿದ ಮೊದಲ ಪ್ರಶಸ್ತಿ ಇದಾಗಿದೆ. ಫೈನಲ್ ಸುತ್ತಿನ ಹಣಾಹಣಿಯಲ್ಲಿ ಸಿಂಧು 21–9, 21–23, 21– 14ರಲ್ಲಿ ಜಪಾನಿನ ಮಿನಾತ್ಸು ಮಿತನಿ ಅವರನ್ನು ಮಣಿಸಿದರು. ಪ್ರಶಸ್ತಿ ಸುತ್ತಿನ ಈ ಹೋರಾಟ ಒಂದು ಗಂಟೆ ಆರು ನಿಮಿಷಗಳ ಕಾಲ ನಡೆಯಿತು. ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಸಿಂಧು, ಸೊಗಸಾದ ಸ್ಟ್ರೋಕ್ಸ್ ಹಾಗೂ ಚುರುಕಿನ ರಿಟರ್ನ್ಸ್ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಸಿಂಧು ಅವರ ಬಿರುಸಿನ ಆಟಕ್ಕೆ ತಿರುಗೇಟು ನೀಡುವಲ್ಲಿ ಮಿನಾತ್ಸು ಯಶ ಕಾಣಲಿಲ್ಲ. ಸಿಂಧು ಆರಂಭಿಕ ಗೇಮ್ನಿಂದಲೇ ಅಮೋಘ ಆಟವಾಡಿದರು. ಎದುರಾಳಿ ಎಸೆಗಿದ ತಪ್ಪುಗಳಿಂದ ಲಾಭ ಪಡೆದ ಸಿಂಧು ಮೊದಲ ಗೇಮ್ನಲ್ಲಿ ಸುಲಭವಾಗಿ ಜಯ ಕಂಡರು. ಎರಡನೇ ಗೇಮ್ನಲ್ಲಿಯೂ ಸಿಂಧು ಉತ್ತಮ ಆರಂಭ ಕಂಡರಾದರೂ, ಬೇಸ್ಲೈನ್ ಬಳಿ ಕೆಲ ತಪ್ಪು ಎಸೆಗಿದರು. ಇದರಿಂದ ಲಾಭ ಪಡೆದು ಚೇತರಿಕೆಯ ಆಟವಾಡಿದ ಮಿನಾತ್ಸು ಗೇಮ್ ಗೆದ್ದರು. ನಿರ್ಣಾಯಕ ಗೇಮ

ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ (RIE ಯ ಇಂಗ್ಲೀಷ್ DIPLOMA ಮಾಡಿದವರನ್ನು ಹೊರತುಪಡಿಸಿ)

28 Nov, 2015 ಪ್ರಜಾವಾಣಿ ವಾರ್ತೆ ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು 2014–15ನೇ ಸಾಲಿನ 9,511 ಪ್ರಾಥಮಿಕ ಶಾಲಾ (ಕಿರಿಯ ಮತ್ತು ಹಿರಿಯ) ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ. ಇದು ಇಲಾಖೆಯ ವೆಬ್ಸೈಟ್ನಲ್ಲಿ ( schooleducation.kar.nic.in ) ಲಭ್ಯವಿದೆ. ---------------------------------------- ಡಿಪ್ಲೊಮಾದವರಿಗೆ ಅವಕಾಶ ಇಲ್ಲ: ------------------------------------------ ಹಿರಿಯ ಪ್ರಾಥಮಿಕ ಶಾಲಾ (6ರಿಂದ 8ನೇ ತರಗತಿ) ಶಿಕ್ಷಕರ ಆಯ್ಕೆ ಪಟ್ಟಿ ಪ್ರಕಟಿಸುವಾಗ, ಇಂಗ್ಲಿಷ್ ವಿಷಯದಲ್ಲಿ ಒಂದು ವರ್ಷದ ಡಿಪ್ಲೊಮಾ ಮಾಡಿರುವ 154 ಅಭ್ಯರ್ಥಿಗಳನ್ನು ಇಲಾಖೆ ಪರಿಗಣಿಸಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ದಾಖಲಾತಿ ಪರಿಶೀಲನೆಗೆ ಹಾಜರಾಗಿದ್ದ ಈ ಅಭ್ಯರ್ಥಿಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಹೊರಗಿಡಲಾಗಿದೆ. ಒಂದು ವರ್ಷದ ಇಂಗ್ಲಿಷ್ ಕೋರ್ಸ್ ಮಾಡಿರುವವರನ್ನು ಪರಿಗಣಿಸಬಾರದು ಎಂದು ಸೂಚಿಸಿ ಹೈಕೋರ್ಟ್, 2003ರ ಶಿಕ್ಷಕರ ನೇಮಕಾತಿ ಸಂಬಂಧದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರದ್ದುಗೊಳಿಸಿತ್ತು. ಇದೇ ಕಾರಣಕ್ಕಾಗಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ವಿಳಂಬವಾಗಿದೆ. ಈ ವಿಚಾರವಾಗಿ 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, &

ಬಾಡದ ಅರಮನೆ ಕನಕನ ನೆನಪು:-

BY ವಿಜಯವಾಣಿ ನ್ಯೂಸ್ · NOV 26, 2015 'ತಲ್ಲಣಿಸದಿರು ಕಂಡ್ಯ ತಾಳು ಮನವೆ' ಎಂದು ಹಾಡಿದ ದಾಸಶ್ರೇಷ್ಠ ಕನಕದಾಸರ ಹುಟ್ಟೂರು ಬಾಡ. ಇಲ್ಲಿ ನಡೆದ ಉತ್ಖನನದಲ್ಲಿ ಕನಕದಾಸರು ಹಾಗೂ ಅವರ ಪೂರ್ವಿಕರು ವಾಸಿಸುತ್ತಿದ್ದ ಅರಮನೆಯ ಕುರುಹುಗಳು ಲಭ್ಯವಾಗಿದ್ದವು. ಈ ಅರಮನೆಯ ಅವಶೇಷಗಳನ್ನು ರಕ್ಷಿಸಿ ಅದರ ಪ್ರತಿರೂಪವಾಗಿ ಬಾಡ ಗ್ರಾಮದ ಗುಡ್ಡದ ಮೇಲೆ ವಿಜಯನಗರ ಶಿಲ್ಪಕಲಾ ಶೈಲಿಯಲ್ಲಿ ಸುಂದರ ಅರಮನೆಯನ್ನು ನಿರ್ವಿುಸಲಾಗಿದೆ. ಈ ಅರಮನೆಯ ಒಳಭಾಗದಲ್ಲಿ ಕನಕದಾಸರ ಸಾಹಿತ್ಯದ ವಿಶೇಷ ಸನ್ನಿವೇಶಗಳನ್ನು ತೈಲವರ್ಣ ಚಿತ್ರಗಳಲ್ಲಿ ಚಿತ್ರಿಸಲಾಗಿದೆ. ಪ್ರವಾಸಿಕೇಂದ್ರವಾಗಿ ರೂಪುಗೊಂಡಿರುವ ಈ ತಾಣದ ಪರಿಚಯಾತ್ಮಕ ಬರಹವಿದು. – ಐ. ಸೇಸುನಾಥನ್, ಚಿತ್ರ-ಲೇಖನ ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು ಕನಕದಾಸರು. ನಡುಗನ್ನಡ ಸಾಹಿತ್ಯದ ಪ್ರಮುಖ ಕೀರ್ತನೆಕಾರ, ಸಾಮಂತ, ಸಂತ, ಜ್ಞಾನಿ, ದಾರ್ಶನಿಕರಾಗಿ ಅವರು ನೀಡಿದ ಕೊಡುಗೆ ಅಪಾರ. 'ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ?' ಎಂದು ವರ್ಗ ತಾರತಮ್ಯದ ವಿರುದ್ಧ ದನಿ ಎತ್ತಿದ್ದ ಶ್ರೇಷ್ಠ ಸಮಾಜಸುಧಾರಕರೂ ಹೌದು. ಕನಕದಾಸರು 16ನೇ ಶತಮಾನದ ಪೂರ್ವಾರ್ಧದಲ್ಲಿ ಈಗಿನ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಎಂಬಲ್ಲಿ ಬೀರಪ್ಪನಾಯಕ- ಬಚ್ಚಮ್ಮ ದಂಪತಿ

RIE ಪದವೀಧರರಿಗೆ 6-8 ಶಿಕ್ಷಕರ ನೇಮಕಾತಿಯಲ್ಲಿ ನೀಡಿದ್ದ ಅವಕಾಶ ಹಿಂಪಡೆದು ಗೆಜೆಟ್ ಪ್ರಕಟಣೆ ಹೊರಡಿಸಲಾಗಿದೆ:-

Image

ಬನ್ನೇರುಘಟ್ಟಕ್ಕೆ ಇಸ್ರೇಲ್ ಜೀಬ್ರಾಗಳು; ವಿಮಾನ ಪ್ರಯಾಣದ ಮೂಲಕ ಆಗಮನ:-

ಉದಯವಾಣಿ, Nov 27, 2015, 4:57 PM IST ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನ ವನಕ್ಕೆ ಆಗಮಿಸಿದ ಇಸ್ರೇಲ್ ಅತಿಥಿಗಳನ್ನು ಇಲ್ಲಿನ ಸಿಬ್ಬಂದಿ ಸಂತಸದಿಂದ ಬರ ಮಾಡಿಕೊಂಡಿದ್ದಾರೆ. 12 ಗಂಟೆಗಳ ವಿಮಾನ ಪ್ರಯಾಣದ ಮೂಲಕ ಆಗಮಿಸಿದ ನಾಲ್ಕು ಅತಿಥಿಗಳನ್ನು ಪ್ರವಾಸಿಗರು ನೋಡಬೇ ಕಾದರೆ ಇನ್ನೂಒಂದು ತಿಂಗಳು ಕಾಯಬೇಕಾಗುತ್ತದೆ. ಇಸ್ರೇಲ್ನ ಜೂಲಾಜಿಕಲ್ ಸೆಂಟರ್ ಟೆಲ್ ಅವಿವ್-ರಮಾತ್ ಗನ್ ಸಫಾರಿಯಿಂದ ಒಂದು ವರ್ಷ ವಯಸ್ಸಿನ ನಾಲ್ಕು ಜೀಬ್ರಾ (ಹೇಸರಗತ್ತೆ)ಗಳ ತರಲಾಗಿದೆ. ಬುಧವಾರ ಸಂಜೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ನಾಲ್ಕು ಹೇಸರಗತ್ತೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ಭಾಗ್ಯಲಕ್ಷ್ಮಿ, ವೈದ್ಯರಾದ ಮಂಜುನಾಥ್, ನಿರುಪಮಾ ಬರಮಾಡಿಕೊಂಡು ಉದ್ಯಾನವಕ್ಕೆ ತಡ ರಾತ್ರಿ ಕರೆತಂದರು. ಸದ್ಯ ಉದ್ಯಾನವನದ ಸಸ್ಯಹಾರಿ ಸಫಾರಿ ಬಳಿಯ ವಿಶೇಷ ಬಯಲು ಆಲಯದಲ್ಲಿ ನಾಲ್ಕು ಹೇಸರಗತ್ತೆಗಳಿಗೆ ಆಶ್ರಯ ನೀಡಲಾಗಿದೆ. ವೈದ್ಯರ ತಂಡ ಜೀಬ್ರಾಗಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುತ್ತಿದೆ. ಇನ್ನೂ ಒಂದು ತಿಂಗಳು ಜೀಬ್ರಾಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿ ಕೊಡಲಾಗುವುದು ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದರು.

ಶ್ರೀ ಕನಕದಾಸರು :-

ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ. (PSGadyal Teacher Vijayapur) ಜೀವನ ಜನನ ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜಾತಿಗೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಸಾಧನೆ ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ. ಕನಕನ ಕಿಂತಿಂಡಿ. ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹ

ಅಗ್ನಿ- 1 ಕ್ಷಿಪಣಿ ಪರೀಕ್ಷೆ ಯಶಸ್ವಿ:-

· NOV 27, 2015 ಬಾಲಸೋರ್ (ಒಡಿಶಾ) ದೇಶೀಯವಾಗಿ ನಿರ್ಮಿಸಿದ ಪರಮಾಣು ಸಾಮರ್ಥ್ಯ ದ ಅಗ್ನಿ-1 ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಭಾರತ ಶುಕ್ರವಾರ ಯಶಸ್ವಿಯಾಗಿ ನಡೆಸಿತು. 700 ಕಿ.ಮೀ. ದೂರದ ಗುರಿಯನ್ನು ತಲುಪಬಲ್ಲ ಈ ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಭೂ ಮೇಲ್ಮೈಯಿಂದ ಮೇಲ್ಮೈಗೆ ಒಂದೇ ಹಂತದಲ್ಲಿ ನೆಗೆಯುವ ಕ್ಷಿಪಣಿಯನ್ನು ಅಬ್ದುಲ್ ಕಲಾಂ ದ್ವೀಪದ (ವ್ಹೀಲರ್ ದ್ವೀಪ) ಸಮಗ್ರ ಪರೀಕ್ಷಾ ವಲಯದ ಸಂಚಾರಿ ಉಡಾವಕದ ಮೂಲಕ ಉಡಾಯಿಸಲಾಯಿತು. ಈ ಉಡಾವಣೆಯನ್ನು ಭಾರತೀಯ ಸೇನೆಯ ವ್ಯೂಹಾತ್ಮಕ ಪಡೆಗಳ ತರಬೇತಿ ಕವಾಯತಿನ ಅಂಗವಾಗಿ ನಡೆಸಲಾಯಿತು. ಅದು ಅತ್ಯಂತ ಸಮರ್ಪಕ ಉಡಾವಣೆಯಾಗಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಅತ್ಯಂತ ಸಮಪರ್ಕವಾಗಿ ಪರೀಕ್ಷಿಸಲಾಗಿದೆ. ಪ್ರಯೋಗ ಪರೀಕ್ಷೆಯು ಯಶಸ್ವಿಯಾಗಿದೆ ಎಂದು ಮೂಲಗಳು ಹೇಳಿವೆ.

ಕಾರ್ಮಿಕರ ಕನಿಷ್ಠ ವೇತನ 10.520ಕ್ಕೆ ನಿಗದಿ : ಅಂತರ್ಜಾಲದಲ್ಲಿ ಸಕಲ ಮಾಹಿತಿ:-

ಬೆಂಗಳೂರು, ನ.27- ಕಾರ್ಮಿಕ ಇಲಾಖೆಯ 80 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲನೆ ಬಾರಿಗೆ 23 ವಿವಿಧ ಉದ್ಯಮಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ತಿಂಗಳಿಗೆ 10520 ರೂ. ನಿಗದಿ ಮಾಡಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ. ನ.20ರಂದು ಅಧಿಸೂಚನೆ ಪ್ರಕಟವಾಗಿದ್ದು , ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಧಿ ನೀಡಲಾಗಿದೆ. ಮುಂದಿನ ಏ.1ರಿಂದ ಪರಿಷ್ಕೃತ ವೇತನ ಜಾರಿಗೆ ಬರಲಿದೆ. ಕಾರ್ಮಿಕ ಇಲಾಖೆಯ ವೆಬ್ಸೈಟ್ ಉದ್ಘಾಟನೆ ನಂತರ ಸಚಿವ ಪರಮೇಶ್ವರ್ ನಾಯಕ್ ಕನಿಷ್ಠ ವೇತನ ನಿಗದಿಯನ್ನು ಪ್ರಕಟಿಸಿದರು. ನೂತನ ಅಧಿಸೂಚನೆಯಂತೆ 23 ಉದ್ದಿಮೆಗಳಲ್ಲಿ ಕೆಲಸ ಮಾಡುವ ಸುಮಾರು 32 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ. ಕುಶಲವಲ್ಲದ ತಾಂತ್ರಿಕರಿಗೆ ಮಾಸಿಕ 10500 ರೂ., ಅರೆಕುಶಲ ಮತ್ತು ಕುಶಲ ಕಾರ್ಮಿಕರು ಇದಕ್ಕಿಂತಲೂ ಹೆಚ್ಚಿನ ವೇತನ ಪಡೆಯುತ್ತಾರೆ. ದೇಶದಲ್ಲೇ ಪ್ರಥಮ ಬಾರಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದರು. ಆಹಾರ ಸಂಸ್ಕರಣೆ, ಆಹಾರ ಪದಾರ್ಥಗಳ ಪ್ಯಾಕಿಂಗ್ ಲಾಂಡ್ರಿ ಉದ್ಯಮ, ಮಿನಿ ಸಿಮೆಂಟ್ ಪ್ಲ್ಯಾಂಟ್, ಟಿಂಬರ್ ಡಿಪೊ, ಎಲೆಕ್ಟ್ರಾನಿಕ್ ಉದ್ಯಮ, ಮದ್ಯ ತಯಾರಿಕೆ ಉದ್ಯಮ, ಬೈಕ್ ತಯಾರಿಕೆ ಉದ್ಯಮ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಕಾರ್ಮಿಕರು , ಮನೆಗೆಲಸ ಕಾರ್ಮಿಕರು, ಎಲೆಕ್ಟ್ರೋ ಪ್ಲೇಟಿಂಗ್ ಉದ್ಯಮ, ಗ್ಲಾಸ್ ಉದ್ಯಮ, ಹಾಲು ಉತ್ಪಾದನೆ ಸಂಗ್ರಹಣೆ, ಹಂಚಿಕ

Primary School Teachers' Recruitment 1:1 provisional list published :-

1:1 Provisional Selection List of 1-5th, 6-8th Primary School Teachers Recruitment Announced. Note:Applicants who desired to file objections to 1:1 Provisional List must generate the  'Objection format' document provided in the website, get it printed and submit the objection with supporting documents to the concerned DDPI office through post or by person from 27/12/2015 to 02/12/2015 Click the below link pstr15.caconline.in/

ಪ್ರಥಮ ಸಂವಿಧಾನ ದಿನ’ ಆಚರಿಸಿದ ಭಾರತದ ಸಂಸತ್ತು:

· NOV 26, 2015 ನವದೆಹಲಿ: ಸಂವಿಧಾನಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ 1949ರ ನವೆಂಬರ್ 26ರ ಈದಿನವನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುವ ಮೂಲಕ ಸಂಸತ್ತು ಗುರುವಾರ 'ಪ್ರಥಮ ಸಂವಿಧಾನ ದಿನ'ವಾಗಿ ಆಚರಿಸಿತು. ಲೋಕಸಭೆಯಲ್ಲಿ ಡಾ. ಅಂಬೇಡ್ಕರ್ ಅವರನ್ನು ನೆನೆದ ಗೃಹ ಸಚಿವ ರಾಜನಾಥ್ ಸಿಂಗ್, 'ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿತ್ತು. ಆದರೆ ಅವರೆಂದೂ ದೇಶ ತ್ಯಜಿಸುವ ಮಾತುಗಳನ್ನು ಆಡಿರಲಿಲ್ಲ. ಸಂವಿಧಾನಕ್ಕೆ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಸೇರಿಸುವ ಅಗತ್ಯ ಅಂಬೇಡ್ಕರ್ ಅವರಿಗೆ ಕಂಡುಬಂದಿರಲಿಲ್ಲ. ಅದು ನಮ್ಮ ಮೂಲಪ್ರವೃತ್ತಿಯಲ್ಲೇ ಇದೆ ಎಂಬುದು ಅವರ ಗಮನದಲ್ಲಿತ್ತು. ಜಾತ್ಯತೀತ ಪದ ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚು ದುರುಪಯೋಗವಾಗಿರುವ ಪದ' ಎಂದು ರಾಜನಾಥ್ ಸಿಂಗ್ ನುಡಿದರು. ಸಮಾಜವಾದಿ, ಜಾತ್ಯತೀತ ಕುರಿತ ಗೃಹ ಸಚಿವರ ಮಾತಿಗೆ ಲೋಕಸಭೆಯಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ರಾಜನಾಥ್ ಸಿಂಗ್ ಅವರ ಬಳಿಕ ಮಾತನಾಡಿದ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ 'ಭಾರತದ ಸಂವಿಧಾನ ದಶಕಗಳ ಹೋರಾಟದ ಫಲ. ಈ ಹೋರಾಟಕ್ಕೆ ಮಹಾತ್ಮಾ ಗಾಂಧಿ ದೊಡ್ಡ ಕೊಡುಗೆ ನೀಡಿದರು. ಅಂಬೇಡ್ಕರ್ ಅವರು ಸಂವಿಧಾನ ರೂಪಿಸುವಲ್ಲಿ ಕಾ

ಭಾರತದ ಸಂವಿಧಾನ ಪ್ರಮುಖ ಕಾಲಘಟ್ಟಗಳು:

1. 1857 ರಲ್ಲಿ ಸಿಪಾಯಿ ದಂಗೆ ನಡೆಯಿತು. 2. 1857 ರಲ್ಲಿ ಬ್ರಿಟಿಷ್ ಸರ್ಕಾರದ ನೇರ ಆಡಳಿತ . 3. 1861 ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಕಾಯಿದೆ ಜಾರಿ . 4. 1885 ರಲ್ಲಿ ಕಾಂಗ್ರೆಸ್ ಸ್ಥಾಪನೆ . 5. 1906 ರಲ್ಲಿ ಮುಸ್ಲಿಂ ಲೀಗ್ ಸ್ಥಾಪನೆ . 6. 1909 ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿ 7. 1915 ರಲ್ಲಿ ಭಾರತ ಸರ್ಕಾರ ಕಾಯಿದೆ ಜಾರಿ . 8. 1930 ರಲ್ಲಿ ಸೈಮನ್ ಆಯೋಗ ಭಾರತಕ್ಕೆ . 9. 1935 ರಲ್ಲಿ ಭಾರತ ಸರ್ಕಾರದ ಕಾಯಿದೆ ಜಾರಿ 10. 1942 ರಲ್ಲಿ ಕ್ರಿಪ್ಸ್ ಆಯೋಗ ಭಾರತಕ್ಕೆ 11. 1946 ರಲ್ಲಿ ಕ್ಯಾಬಿನೆಟ್ ಮಿಷನ್ 12. 1946 ಜುಲೈ ಸಂವಿಧಾನ ಸಭೆಗೆ ಚುನಾವಣಿ 13. 1946 ಡಿಸೆಂಬರ್ 9 ಸಂವಿಧಾನ ಸಭೆಯ ಪ್ರಥಮ ಸಭೆ . 14. 1946 ಡಿಸೆಂಬರ್ 11 ಡಾ.ಬಾಬು ರಾಜೇಂದ್ರ ಪ್ರಸಾದ್ ಸಂವಿಧಾನ ಸಭೆಯ ಖಾಯಂ ಅಧ್ಯಕ್ಷರಾಗಿ ಆಯ್ಕೆ . 15. 1947 ಆಗಸ್ಟ್ 29 ಕರಡು ಸಮಿತಿ ( ಡ್ರಾಫ್ಟ್ ಕಮಿಟಿ ) ರಚನೆ. 16. 1948 ರಲ್ಲಿ ಕರಡು ಸಂವಿಧಾನ ಸಿದ್ಧ 17. 1949 ನವೆಂಬರ್ 26 ಸಂವಿಧಾನದ ಅಂಗೀಕಾರ 18. 1950 ಜನವರಿ 26 ಸಂವಿಧಾನ ಜಾರಿ . 19. ಮೂಲಭೂತ ಹಕ್ಕು , ಸ್ವತಂತ್ರ ನ್ಯಾಯಾಂಗ ಹಾಗೂ ನ್ಯಾಯಾಂಗೀಯ ಪರಿವಿಕ್ಷಣೆ ಇವುಗಳನ್ನು ಅಮೆರಿಕಾದ ಸಂವಿಧಾನದಿಂದ ಎತ್ತಿಕೊಳ್ಳಲಾಗಿದೆ. 20. ಕೇಂದ್ರ ಹಾಗೂ ರಾಜ್ಯಗಳ ವಿಷಯ ಪಟ್ಟಿಯನ್ನು ಹೊರತುಪಡಿಸಿ ಉಳಿದ ಅಧಿಕಾರ ಹಾಗೂ ವಿಷಯಗಳನ್ನೆಲ್ಲ ಕೇಂದ್ರ ಸರ್ಕಾರಕ

ಭಾಗ್ಯಲಕ್ಷ್ಮೀ ಯೋಜನೆಯ ಸಮಗ್ರ ಮಾಹಿತಿ :-

ಬಿಪಿಎಲ್ ಕುಟುಂಬದ ಹೆಣ್ಮಕ್ಕಳಿಗೆ ಭಾಗ್ಯಲಕ್ಷ್ಮೀ BY ವಿಜಯವಾಣಿ ನ್ಯೂಸ್ · NOV 26, 2015 ಜನರ ಬದುಕು ಹಸನಾಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ ಆ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ. ಈ ಕೊರತೆ ನೀಗಿಸಿ ಯೋಜನೆಗಳ ಪ್ರಯೋಜನ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ ಪ್ರತಿ ಗುರುವಾರ ಪ್ರಕಟಿಸುತ್ತಿರುವ 'ನಿಮ್ಮ ಹಕ್ಕಿಗೆ ನಮ್ಮ ಧ್ವನಿ' ಮಾಹಿತಿ ಕೈಪಿಡಿ ಸರಣಿಯಲ್ಲಿ ಈ ವಾರ ಭಾಗ್ಯಲಕ್ಷ್ಮೀ ಯೋಜನೆಯ ಸಮಗ್ರ ಮಾಹಿತಿಯನ್ನು ನೀಡಲಾಗಿದೆ. ನಿರೂಪಣೆ: ನಾಗರತ್ನ. ಎಸ್ *** 2001ರ ಜನಗಣತಿಯಂತೆ ಪ್ರಕಾರ ರಾಜ್ಯದಲ್ಲಿನ ಲಿಂಗಾನುಪಾತದ ಪ್ರಕಾರ 1000 ಪುರುಷರಿಗೆ 964 ಮಹಿಳೆಯರಿದ್ದಾರೆ. ದಿನದಿಂದ ದಿನಕ್ಕೆ ಇಳಿಯುತ್ತಿರುವ ಅನುಪಾತವನ್ನು ಸರಿದೂಗಿಸಿ, ಹೆಣ್ಣು ಮಗುವಿನ ಹುಟ್ಟಿನಿಂದಲೇ ಆಕೆಯ ಜೀವನಕ್ಕೆ ಹೆಚ್ಚಿನ ಮೌಲ್ಯ ಕಲ್ಪಿಸುವುದರ ಜತೆಗೆ, ಲಿಂಗಾನುಪಾತ ಸರಿದೂಗಿಸುವುದು, ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ ತಡೆಗಟ್ಟುವಿಕೆ, ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡುವುದು, ಹೆಣ್ಣುಮಗುವಿನ ಶಿಕ್ಷಣ, ಆರೋಗ್ಯಮಟ್ಟ ಉತ್ತಮಪಡಿಸಿ, ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 2006-07ನೇ ಸಾಲಿನಲ್ಲಿ 'ಭಾಗ್ಯಲಕ್ಷ್ಮೀ' ಎಂಬ ಕಲ್ಯಾಣ ಯೋಜನೆ ಜಾರಿಗ

ವಲಯ ಅರಣ್ಯಾಧಿಕಾರಿ ವೃಂದದಲ್ಲಿ 110 ಸಂಖ್ಯಾತಿರಿಕ್ತ ಹುದ್ದೆಗಳನ್ನು ಸೃಜಿಸುವ ಬಗ್ಗೆ. 24/11/2015

Image

ಮೇಲ್ಮನೆ 25 ಸ್ಥಾನಗಳಿಗೆ ಡಿ.27ರಂದು ಚುನಾವಣೆ: ಡಿ.30ಕ್ಕೆ ಫಲಿತಾಂಶ:-

ಉದಯವಾಣಿ, Nov 24, 2015, 8:58 PM IST ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ಚಿಂತಕರ ಚಾವಡಿ ಎಂದೆನಿಸಿಕೊಂಡಿರುವ ಮೇಲ್ಮನೆಯ 25 ಸ್ಥಾನಗಳಿಗೆ ಡಿಸೆಂಬರ್ 27ರಂದು ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.9 ಕಡೆಯ ದಿನವಾಗಿದೆ. ಡಿ.10ರಂದು ನಾಮಪತ್ರಗಳ ಪರಿಶೀಲನೆ ಹಾಗೂ ನಾಮಪತ್ರ ಹಿಂಪಡೆಯಲು ಡಿ.12 ಕೊನೆಯ ದಿನವಾಗಿದೆ ಎಂದು ಹೇಳಿದೆ. 25 ಸದಸ್ಯರ ಅವಧಿ 2016ರ ಜನವರಿ 5ರಂದು ಅಂತ್ಯವಾಗಲಿದೆ. ಆ ನಿಟ್ಟಿನಲ್ಲಿ ತೆರವಾಗಲಿರುವ ವಿಧಾನಪರಿಷತ್ ನ 25 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ಸುಮಾರು 1.07 ಲಕ್ಷ ಮತದಾರರನ್ನು ಹೊಂದಿದ್ದು, ಒಟ್ಟು 6,500 ಗ್ರಾಮ ಪಂಚಾಯ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರಯ ಮತ ಚಲಾಯಿಸಲಿದ್ದಾರೆ. ಡಿ.27ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಡಿ.30ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದ

The Blade Runner::-

ಕಾಲಿಲ್ಲದ ಬ್ಲೇಡ್ ರನ್ನರ್ 25 Nov, 2015 ಪಿ.ರಾಮ ದಕ್ಷಿಣ ಆಫ್ರಿಕದ ಅಥ್ಲೀಟ್ ಆಸ್ಕರ್ ಪಿಸ್ಟೋರಿಯಸ್ ಜನ್ಮತಃ ಅಂಗವಿಕಲರು. ಮೊಣಗಂಟುಗಳಿಂದ ಕೆಳಗೆ ನಿಷ್ಕ್ರಿಯವಾಗಿದ್ದ ಕಾಲುಗಳನ್ನು ಹನ್ನೊಂದು ತಿಂಗಳು ವಯಸ್ಸಿನಲ್ಲೇ ವೈದ್ಯರು ಕತ್ತರಿಸಿ ಹಾಕಿದ್ದರು. ವಿಶಿಷ್ಟವಾಗಿರುವ ಅಲಗಿನಂತಿರುವ ಕೃತಕ ಕಾಲುಗಳನ್ನು ಕಟ್ಟಿಕೊಂಡು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಂಗಾರದ ಪದಕಗಳನ್ನು ಬಾಚಿಕೊಂಡರು. 'ಬ್ಲೇಡ್ ರನ್ನರ್' ಎಂಬ ಅಭಿದಾನಕ್ಕೂ ಪಾತ್ರರಾದರು. ಭಗವಂತನ ಕೃಪೆಯಿದ್ದರೆ ಮೂಗನೂ ಮಾತನಾಡಬಹುದು, ಹೆಳವನೂ ಗಿರಿಯನ್ನೇರಬಹುದು ಎಂಬ ಭಗವದ್ಗೀತೆಯ ಮಾತು ಸುಳ್ಳಲ್ಲ ಎನಿಸುವುದು ದಕ್ಷಿಣ ಆಫ್ರಿಕದ ಅಥ್ಲೀಟ್ ಆಸ್ಕರ್ ಪಿಸ್ಟೋರಿಯಸ್ ಮಾಡಿದ ಸಾಧನೆಯನ್ನು ನೋಡಿದಾಗ. ಇವರು ಜನ್ಮತಃ ಅಂಗವಿಕಲರು. ಮೊಣಗಂಟುಗಳಿಂದ ಕೆಳಗೆ ನಿಷ್ಕ್ರಿಯವಾಗಿದ್ದ ಕಾಲುಗಳನ್ನು ಹನ್ನೊಂದು ತಿಂಗಳು ವಯಸ್ಸಿನಲ್ಲೇ ವೈದ್ಯರು ಕತ್ತರಿಸಿ ಹಾಕಿದ್ದರು. ಹೆಳವನಾಗಿ ಜೀವನವಿಡೀ ಯಾರಿಗೋ ಆತ ಹೊರೆಯಾಗಲಿಲ್ಲ. ವಿಶಿಷ್ಟವಾಗಿರುವ ಅಲಗಿನಂತಿರುವ ಕೃತಕ ಕಾಲುಗಳನ್ನು ಕಟ್ಟಿಕೊಂಡು ಓಟದ ಸ್ಪರ್ಧೆಯಲ್ಲಿ ಪಾಲುಗೊಂಡು ಬಂಗಾರದ ಪದಕಗಳನ್ನು ಬಾಚಿಕೊಂಡರು. 'ಬ್ಲೇಡ್ ರನ್ನರ್' ಎಂಬ ಅಭಿದಾನಕ್ಕೂ ಪಾತ್ರರಾದರು. ಹಲವು ಸಲ ವಿಶ್ವ ಚಾಂಪಿಯನ್ ಪದವಿಯ ಕಿರೀಟವನ್ನು ಮುಡಿಗೇರಿಸಿಕೊಂಡರು

ಪಿಯು ಉಪನ್ಯಾಸಕರ ನೇಮಕಾತಿ ಶುರು

ಪಿಯು ಉಪನ್ಯಾಸಕರ ನೇಮಕಾತಿ ಶುರು ♣GKPOINTS♣ ಬೆಂಗಳೂರು: ಎಸ್​ಸಿ, ಎಸ್ಟಿ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ದುಬಾರಿ ಶುಲ್ಕದ ವಿಚಾರವಾಗಿ ಅರ್ಧಕ್ಕೇ ಸ್ಥಗಿತವಾಗಿದ್ದ ಪಿಯು ಉಪನ್ಯಾಸಕರ ನೇಮಕಾತಿಗೆ ಸರ್ಕಾರ 3 ತಿಂಗಳ ಬಳಿಕ ಹಸಿರು ನಿಶಾನೆ ತೋರಿದೆ. ಸಂಗೀತ, ಗಣಕ ವಿಜ್ಞಾನ ಹಾಗೂ ಜೀವಶಾಸ್ತ್ರ ವಿಭಾಗದ 61 ಹುದ್ದೆಗಳನ್ನು ಹೊರತುಪಡಿಸಿ, ಉಳಿದ 1,069 ಪಿಯು ಉಪನ್ಯಾಸಕರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಪಿಯು ಉಪನ್ಯಾಸಕರ ಹುದ್ದೆಗಾಗಿ 30 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 7.5 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ. ಈಗಾಗಲೇ ಅರ್ಧಂಬರ್ಧ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೂಡ ಪೂರ್ಣವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ನೇರ ನೇಮಕಾತಿ ವಿಧಾನದಡಿ ಭರ್ತಿ ಮಾಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಖಾಲಿಯಿರುವ 1130 ಪಿಯು ಉಪನ್ಯಾಸಕರ ಹುದ್ದೆಗೆ 2015ರ ಮೇ 16ರಂದು ಅರ್ಜಿ ಆಹ್ವಾನಿಸಲಾಗಿತ್ತು. ಜೂ.16ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಗೊಂದಲ ಏನು?: ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು ಸಂಬಂಧಪಟ್ಟ ಸ್ನಾತಕೋತ್ತರ ಕೋರ್ಸ್​ನಲ್ಲಿ ಶೇ.55 ಅಂಕ ಪಡೆದಿರಬೇಕು ಎಂದು ಪಿಯು ಇಲಾಖೆ ಸುತ್ತೋಲೆ ಹೊರಡಿಸಿತ್ತು. ಯುಜಿಸಿ ನಿಯಮದಂತೆ ಪ್ರಾಧ್ಯಾಪಕರ ಹುದ್ದೆ ನೇಮಕಾತಿಯಲ್ಲಿ ಎಸ್​ಸಿ, ಎಸ್​ಟಿ ಅಭ್ಯ

ಕರಿ ಮೆಣಸು ಉತ್ಪಾದನೆ: ಕರ್ನಾಟಕ ನಂ.1:-

ವಿಕ ಸುದ್ದಿಲೋಕ | Nov 24, 2015, ಮೈಸೂರು: ಕಾಫಿ, ತಂಬಾಕಿನ ಜತೆಗೆ ಕರಿಮೆಣಸು ಬೆಳೆಯುವಲ್ಲಿಯೂ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕಾಫಿ ಬೆಳೆಯಲ್ಲಿ ಆಗುತ್ತಿರುವ ವ್ಯತ್ಯಾಸದ ಲಾಭ ಪಡೆದು ಕರ್ನಾಟಕದ ಪಶ್ಚಿಮಘಟ್ಟದ ಭಾಗದಲ್ಲಿ ಕರಿಮೆಣಸು ಬೆಳೆಯುವ ಪ್ರಮಾಣ ಹೆಚ್ಚಿದ್ದು, ಕೇರಳಕ್ಕಿಂತ ಉತ್ಪಾದನೆಯಲ್ಲಿ ಕರ್ನಾಟಕ ಮುಂದಿದೆ ಎಂದು ಕೇಂದ್ರ ಸಾಂಬಾರ ಮಂಡಳಿ ಅಧ್ಯಕ್ಷರೂ ಆಗಿರುವ ಅಂತಾರಾಷ್ಟ್ರೀಯ ಮೆಣಸು ಸಮುದಾಯದ ಅಧ್ಯಕ್ಷ ಎ.ಜಯತಿಲಕ್ ಹೇಳಿದ್ದಾರೆ. ಮೈಸೂರಿನಲ್ಲಿ ಸೋಮವಾರ ಆರಂಭಗೊಂಡ ವಿಶ್ವ ಸಂಸ್ಥೆಯ ಏಷ್ಯಾ ಮತ್ತು ಪೆಸಿಫಿಕ್ ಆರ್ಥಿಕ ಮತ್ತು ಸಾಮಾಜಿಕ ಆಯೋಗದೊಂದಿಗೆ ಮೆಣಸು ಬೆಳೆಯುವ ದೇಶಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಮೆಣಸು ಸಮುದಾಯದ 43ನೇ ಸಮಾವೇಶದ ಉದ್ಘಾಟನೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ''ಒಂದು ಅಂದಾಜಿನ ಪ್ರಕಾರ 2015-16ನೇ ಸಾಲಿನಲ್ಲಿ ಕರ್ನಾಟಕದಲ್ಲಿ 30ರಿಂದ 40 ಟನ್ ಕರಿಮೆಣಸು ಉತ್ಪಾದನೆ ಮಾಡಿರುವ ಅಂದಾಜಿದೆ. ಇದೇ ಅವಧಿಯಲ್ಲಿ ಕೇರಳದಲ್ಲಿ 25ರಿಂದ 30 ಟನ್ ಉತ್ಪಾದಿಸಲಾಗಿದೆ. ಇನ್ನೂ ನಿಖರ ಅಂಕಿ ಅಂಶ ಬಂದಿಲ್ಲ. ಆನಂತರ ಖಚಿತ ಪ್ರಮಾಣ ತಿಳಿಯಬಹುದು'' ಎಂದು ಹೇಳಿದರು. ''ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಕಿಲೋ ಮೆಣಸಿನ ಬೆಲೆ 600 ರೂ.ನಿಂದ 700 ರೂ.ಗೆ ಏರಿಕೆಯಾಗಿದೆ.

ಪರಿಷ್ಕೃತ ಅಧಿಸೂಚನೆ :-2016ನೇ ಸಾಲಿಗೆ ಸಾರ್ವತ್ರಿಕ ಹಾಗೂ ನಿರ್ಬಂಧಿತ ರಜೆಗಳನ್ನು ಘೋಷಿಸುವ ಬಗ್ಗೆ 23/11/2015

Image

‘ಪ್ರಭಾ ಪಥ’ (Prabha's Walk) :-

ಆಸ್ಟ್ರೇಲಿಯಾದ ಪಥಕ್ಕೆ ಮೃತ ಪ್ರಭಾ ಹೆಸರು:ಆಸ್ಟ್ರೇಲಿಯಾದ ಪಥಕ್ಕೆ ಮೃತ ಪ್ರಭಾ ಹೆಸರು:- ಮೆಲ್ಬರ್ನ್ (ಪಿಟಿಐ) : ಆಸ್ಟೇಲಿಯಾದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ಪ್ರಭಾ ಅರುಣ್ ಕುಮಾರ್ ಅವರ ಸ್ಮರಣಾರ್ಥ ಕೊನೆಯದಾಗಿ ಅವರು ನಡೆದುಕೊಂಡು ಬಂದಿದ್ದ ದಾರಿಗೆ ಅವರ ಹೆಸರಿಡಲಾಗಿದೆ. ಮಂಗಳೂರು ಮೂಲದ ಪ್ರಭಾ ಅವರು ಐ.ಟಿ ಉದ್ಯೋಗಿಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ್ನಲ್ಲಿ ಅವರು ಕೆಲಸ ಮುಗಿಸಿ ಮರಳುತ್ತಿದ್ದಾಗ ಪರ್ರಮಟ್ಟಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅವರಿಗೆ ಚಾಕುವಿನಿಂದ ಇರಿದಿದ್ದ. ಬಳಿಕ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಪ್ರಭಾ ಅವರು ಅರ್ಗೈಲ್ ಸ್ಟ್ರೀಟ್ ಮೂಲಕ ವೆಸ್ಟ್­ ಮೀಡ್ನತ್ತ ತೆರಳುತ್ತಿದ್ದಾಗ ಈ ಅವಘಡ ನಡೆದಿತ್ತು. ಇದೀಗ ಅದೇ ದಾರಿಗೆ 'ಪ್ರಭಾ ಪಥ' (Prabha's Walk) ಎಂದು ನಾಮಕರಣ ಮಾಡಲಾಗಿದೆ. ಭಾನುವಾರ ನಡೆದ ಈ ಕಾರ್ಯಕ್ರಮದಲ್ಲಿ ಭಾರತದಿಂದ ಬಂದಿದ್ದ ಪ್ರಭಾ ಅವರ ಪುತ್ರಿ, ಪತಿ ಹಾಗೂ ತಂದೆ–ತಾಯಿ ಅವರು ಪಾಲ್ಗೊಂಡಿದ್ದರು.

ಕೌಲಾಲಂಪುರದಲ್ಲಿ ೧೨ ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿದ ಮೋದಿ:-

ಕೌಲಾಲಂಪುರ್: ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ಬಸವ ಹಾಗೂ ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಇಲ್ಲಿ 12 ಅಡಿ ಎತ್ತರದ ಸ್ವಾಮಿ ವಿವೇಕಾನಂದ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. 'ವಿವೇಕಾನಂದ ಎಂದರೆ ವ್ಯಕ್ತಿಯ ಅಥವಾ ಯಾವುದೇ ಗುರುತಿನ ಸಂಕೇತವಲ್ಲ. ಬದಲಿಗೆ ಭಾರತದ ಆತ್ಮ ಹಾಗೂ ಭಾರತದ ಸಾವಿರಾರು ವರ್ಷಗಳ ಸನಾತನ ಸಂಸ್ಕೃತಿಯ ಪ್ರತೀಕ,' ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು. ಇಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಬೇಲೂರು ಮಠ ಕೊಡುಗೆಯಾಗಿ ನೀಡಿದ, ಕೊಲ್ಕತ್ತಾದ ಅನಿಲ್ ಕುಮಾರ್ ಘೋಷ್ ಸೃಷ್ಟಿಸಿದ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಮೋದಿ, 'ಇದೀಗ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಮಾತನಾಡುತ್ತಿರುವ ಏಕ ಏಷ್ಯಾ ಕಲ್ಪನೆಯನ್ನು ಮೊದಲು ನೀಡಿದ್ದು ವಿವೇಕಾನಂದ,' ಎಂದರು. ವಿಶ್ವ ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆಗಳಾದ ಹವಾಮಾನ ವೈಪರಿತ್ಯ ಮತ್ತು ಭಯೋತ್ಪಾದನೆ ಬಗ್ಗೆ ಮಾತನಾಡಿದ ಮೋದಿ, 'ವೈರುಧ್ಯಗಳು ಕೊನೆಯಾದಾಗ ಭಯೋತ್ಪಾದನೆಗೆ ಅಂತ್ಯ ಹಾಡಬಹುದು. ಯಾವುದಕ್ಕೂ ಸತ್ಯವೇ ಮೇಲಾಗಬೇಕು,' ಎಂದು ಸುಮಾರು 2000 ಭಾರತೀಯರು ಸೇರಿದ್ದ ಕಾರ್ಯಕ್ರಮದಲ್ಲಿ ಮೋದಿ ಹೇಳಿದರು. ವಿವೇಕಾನಂದ ಅವರ ಜೀವನದ ಅನೇಕ ಘಟನೆಗಳನ್ನು ಮೋದಿ ನೆನಪಿಸಿಕೊಂಡರು. ಇಲ್ಲಿನ ಆಶ್ರಮದ ನೇತೃತ್ವ ವಹಿಸಿದ ಸ್ವ

ಒರಿಸ್ಸಾದ ಕಡಲ ತೀರದಲ್ಲಿ ಇಂಟರ್ಸೆಪ್ಟರ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ::-

ಬಾಲಸೂರು (ಒರಿಸ್ಸಾ), ನ.22-ರಕ್ಷಣಾ ಇಲಾಖೆಯ ಬಹುದಿನಗಳ ಅಗತ್ಯವಾಗಿದ್ದ ದೇಶೀ ನಿರ್ಮಿತ ಖಾಂಡಾಂತರ ಕ್ಷಿಪಣೆಯನ್ನು ಇಂದು ಒರಿಸ್ಸಾದ ಕಡಲ ತೀರದ ಕ್ಷಿಪಣಿ ಉಡ್ಡಯನ ಕೇಂದ್ರದಿಂದ ಪರೀಕ್ಷಾರ್ಥ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ಮೂಲಗಳು ತಿಳಿಸಿವೆ. ವಿಮಾನದ ಮಾದರಿಯಲ್ಲಿದ್ದ ಶತ್ರುವಿಮಾನ, ಕ್ಷಿಪಣಿಗಳನ್ನು ಸಮರ್ಥವಾಗಿ ಭೇದಿಸುವ ಸಾಮರ್ಥ್ಯದ ಕ್ಷಿಪಣಿಯ ಉಡಾವಣೆ ಯಶಸ್ವಿಯಾಗಿದ್ದು, ಇದರಿಂದ ರಾಷ್ಟ್ರದ ಸೇನಾಪಡೆಗೆ ಆನೆಯ ಬಲ ಬಂದಂತಾಗಿದೆ ಎಂದು ರಕ್ಷಣಾ ಖಾತೆ ಮೂಲಗಳು ಹೇಳಿವೆ. ವಿಜ್ಞಾನಿಗಳು ನಿಗದಿಪಡಿಸಿದ್ದ ಸಮಯಕ್ಕೆ ಸರಿಯಾಗಿ ಇಂಟರ್ಸೆಪ್ಟರ್ (ಅಂತಃಛೇದ) ಖಂಡಾಂತರ ಕ್ಷಿಪಣಿಯನ್ನು, ಸುವ್ಯವಸ್ಥಿತವಾಗಿ ಬೆಳಗ್ಗೆ 9.46ಕ್ಕೆ ಸರಿಯಾಗಿ ಉಡಾಯಿಸಲಾಯಿತು. ಈ ಇಂಟರ್ಸೆಪ್ಟರ್ ಕ್ಷಿಪಣಿ 7.5 ಮೀಟರ್ ಉದ್ದವಿದೆ. ಅದರಲ್ಲಿ ಗಣಕೀಕೃತ ವ್ಯವಸ್ಥೆಯೂ ಇದ್ದು, ವಿದ್ಯುನ್ಮಾನ ಸ್ವಯಂಚಾಲಿತ ವ್ಯವಸ್ಥೆ ಇದೆ. ವಿಶೇಷವೆಂದರೆ, ಇದು ತನ್ನದೇ ಆದ ಸಂಚಾರಿ ಲಾಂಚರ್ ಕೂಡ ಹೊಂದಿದೆ. ಇತ್ತೀಚೆಗೆ ಡಾ.ಅಬ್ದುಲ್ಕಲಾಂ ಉಡಾವಣಾ ಕೇಂದ್ರ ಎಂದು ಮರು ನಾಮಕರಣ ಮಾಡಲ್ಪಟ್ಟ ವೀಲರ್ ಐಲ್ಯಾಂಡ್ ಕೇಂದ್ರದಿಂದ ಉಡಾಯಿಸಲಾಯಿತು ಎಂದು ರಕ್ಷಣಾ ಮೂಲಗಳು ಹೇಳಿವೆ.

ಪಂಕಜ್ ಆಡ್ವಾಣಿಗೆ 15ನೇ ವಿಶ್ವ ಪ್ರಶಸ್ತಿ:-

ಚೀನಾದ ಜಾವೊ ಕ್ಸಿಂಗ್ಟಾಂಗ್ ವಿರುದ್ಧ ರೋಚಕ ಜಯ ಹರ್ಗದಾ (ಈಜಿಪ್ಟ್): ವಿಶ್ವ ಸ್ನೂಕರ್ ಹಾಗೂ ಬಿಲಿಯರ್ಡ್ಸ್ನಲ್ಲಿ ಇದುವರೆಗೂ 14 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಭಾರತದ ಪಂಕಜ್ ಆಡ್ವಾಣಿ ಶನಿವಾರ ಈಜಿಪ್ಟ್ನಲ್ಲಿ ನಡೆದ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಮತ್ತೊಂದು ಯಶಸ್ಸು ಸಾಧಿಸಿ 15ನೇ ವಿಶ್ವ ಕಿರೀಟ ತಮ್ಮದಾಗಿಸಿಕೊಂಡರು. 18 ವರ್ಷದ ಪ್ರತಿಭಾನ್ವಿತ ಆಟಗಾರ ಚೀನಾದ ಜಾವೊ ಕ್ಸಿಂಗ್ಟಾಂಗ್ ನೀಡಿದ ಸವಾಲಿಗೆ ತಕ್ಕ ಉತ್ತರ ನೀಡಿದ ಪಂಕಜ್ 8-6 ಅಂತರದಲ್ಲಿ ಜಯ ತಮ್ಮದಾಗಿಸಿಕೊಂಡರು. 15 ಸುತ್ತುಗಳ ಫೈನಲ್ ಓಹೋರಾಟದಲ್ಲಿ ಪಂಕಜ್ ಆರಂಭದಲ್ಲೇ 5-2ರ ಮುನ್ನಡೆ ಕಂಡಿದ್ದರು, ಆದರೆ ಕ್ಸಿಂಗ್ಟಾಂಗ್ ದಿಟ್ಟ ಹೋರಾಟ ನೀಡಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡರು. ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಎರಡರಲ್ಲೂ ವಿಶ್ವ ಚಾಂಪಿಯನ್ ಪಟ್ಟ ಗೆದ್ದಿರುವ ಜಗತ್ತಿನ ಏಕೈಕ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಂಕಜ್ ಟೈಮ್ ಫಾರ್ಮೆಟ್ ವಿಭಾಗದಲ್ಲಿ 7 ಬಾರಿ ವಿಶ್ವ ಚಾಂಪಿಯನ್ಪಟ್ಟ ಗೆದ್ದಿರುತ್ತಾರೆ. 2 ಬಾರಿ ಐಡಿಎಸ್ಎಫ್ ವಿಶ್ವ ಸಿಕ್ಸ್-ರೆಡ್ ಸ್ನೂಕರ್ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಪಾಯಿಂಟ್ ಫಾರ್ಮೆಟ್ನಲ್ಲಿ ಮೂರು ಬಾರಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. 2014ರಲ್ಲಿ ವಿಶ್ವ ಟೀಮ್ ಬಿಲಿಯರ್ಡ್ಸ್ ಹಾಗ

ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಮುಖ್ಯ ಅತಿಥಿ: French President Francois Hollande to be Chief Guest on Republic Day:

Image
ಫ್ರಾನ್ಸ್ ಮತ್ತು ಭಾರತ ದೇಶಗಳ ಬಾಂಧವ್ಯ ವೃದ್ಧಿಗೆ ಪ್ರಧಾನಿ ಮೋದಿ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ಜನೆವರಿ 26 ರಂದು ನಡೆಯಲಿರುವ 67ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕು ಎನ್ನುವ ಮೋದಿ ಆಹ್ವಾನವನ್ನು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಸ್ವೀಕರಿಸಿದ್ದಾರೆ. ಪ್ಯಾರಿಸ್ ದಾಳಿಯ ನಂತರ ಉಭಯ ದೇಶಗಳ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಸಲು ಫ್ರಾನ್ಸ್ ಅಧ್ಯಕ್ಷ ಹೊಲಾಂಡೆಯವರಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಲಾಗಿದೆ. ಹೊಲಾಂಡೆ, ಭಾರತಕ್ಕೆ ಬರಲು ಒಪ್ಪಿರುವುದು ಭಾರತದ ರಾಜತಾಂತ್ರಿಕ ಗೆಲುವಾಗಿದೆ ಎಂದು ಬಣ್ಣಿಸಲಾಗುತ್ತಿದೆ. ಸರಕಾರಿ ಮೂಲಗಳ ಪ್ರಕಾರ, ಭಾರತ ಸರಕಾರ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎನ್ನುವ ಕಠಿಣ ಸಂದೇಶವನ್ನು ವಿಶ್ವಕ್ಕೆ ಸಾರಲು ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾರತಕ್ಕೆ ಆಗಮಿಸಿದ್ದರು.

ಆರ್ಟಿಇ ರದ್ದುಗೊಳಿಸಲು ಕೇಂದ್ರ ಚಿಂತನೆ?:-

ವಿಧಾನಪರಿಷತ್ತು: ಶಿಕ್ಷಣ ಹಕ್ಕು (ಆರ್ಟಿಇ) ಕಾಯ್ದೆ ಬಗ್ಗೆ ಕೇಂದ್ರ ಸರ್ಕಾರ ಪುನರ್ಪರಿಶೀಲನೆ ನಡೆಸುತ್ತಿದ್ದು, ಬರುವ ಜನವರಿ ವೇಳೆಗೆ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ಸಿನ ದಯಾನಂದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್ಟಿಇ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಪುನರ್ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಮಟ್ಟದ ಮೂರು ವಿಚಾರ ಸಂಕಿರಣಗಳಲ್ಲಿ ಈ ವಿಷಯ ಚರ್ಚೆ ಆಗಿದೆ. ಈ ಯೋಜನೆಯನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಕುರಿತು ಮುಂದಿನ ವರ್ಷ ಜನವರಿ ವೇಳೆಗೆ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ ಎಂದರು. ಕರ್ನಾಟಕದಲ್ಲಿ ಈವರೆಗೆ 3.16 ಲಕ್ಷ ಮಕ್ಕಳಿಗೆ ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ದೊರಕಿಸಿಕೊಡಲಾಗಿದ್ದು, ಅದಕ್ಕಾಗಿ ಸರ್ಕಾರದಿಂದ 368 ಕೋಟಿ ರೂ. ಪಾವತಿ ಮಾಡಲಾಗಿದೆ. ಈ ಮಕ್ಕಳಿಗೆ ಎಂಟನೆ ತರಗತಿವರೆಗೆ ಹಣ ಕೊಟ್ಟರೆ ಅಂದಾಜು 1,300 ಕೋಟಿ ರೂ. ಬೇಕಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗಿಂತ ದುಪ್ಪಟ್ಟು ಸಂಖ್ಯೆಯ ಮಕ್ಕಳನ್ನು ಸರ್ಕಾರದಿಂದ ಹಣ ಕೊಟ್ಟು ಖಾಸಗಿ ಶಾಲೆಗಳಲ್ಲಿ ಓದಿಸಬೇಕಾದಂತಹ ಪರಿಸ್ಥಿತಿ ಬಂದಿದೆ. ಖಾಸಗಿ ಶಾಲೆಗಳಿಗೆ ಕೊಡುವ ಹಣವನ್ನು ಸರ್

ಎನ್ಪಿಎಸ್ಗೆ ತೆರಿಗೆ ವಿನಾಯಿತಿ ಸಂಭವ:-

ಇಇಇ ಸ್ಟೇಟಸ್ ನೀಡುವಂತೆ ವೇತನ ಆಯೋಗದ ಶಿಫಾರಸು ಹೊಸದಿಲ್ಲಿ: ಭವಿಷ್ಯ ನಿಧಿ(ಪಿಎಫ್) ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಿದಂತೆಯೇ, ರಾಷ್ಟ್ರೀಯ ಪಿಂಚಣಿ ಯೋಜನೆಗೂ(ಎನ್ಪಿಎಸ್) ವಿನಾಯಿತಿ ನೀಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಎನ್ಪಿಎಸ್ ಸೇರಿದಂತೆ ಇತರೆ ಪಿಂಚಣಿ ಯೋಜನೆಗಳಿಗೂ ತೆರಿಗೆ ವಿನಾಯಿತಿ ನೀಡಬೇಕು. ಎನ್ಪಿಎಸ್ಗೆ ಪೂರ್ಣ ತೆರಿಗೆ ವಿನಾಯಿತಿಯ ಇಇಇ ಸ್ಟೇಟಸ್ ನೀಡಬೇಕು ಎನ್ನುವ ಶಿಫಾರಸನ್ನು ಏಳನೇ ವೇತನ ಆಯೋಗ ಮಾಡಿದೆ. ಕೇಂದ್ರ ಸರಕಾರಕ್ಕೆ ಗುರುವಾರ ಸಲ್ಲಿಕೆಯಾದ ಆಯೋಗದ ವರದಿಯಲ್ಲಿರುವ ಎನ್ಪಿಎಸ್ ಪ್ರಸ್ತಾವನೆ ಜಾರಿಗೊಂಡರೆ, ದುಡಿಯುವ ವರ್ಗಕ್ಕೆ ಅನುಕೂಲವಾಗಲಿದೆ. ಎನ್ಪಿಎಸ್ ಅನ್ನು ತೆರಿಗೆ ಮುಕ್ತವಾಗಿಸುವ ಕುರಿತಾಗಿ ಮಾತನಾಡಿರುವ ಆರ್ಥಿಕ ಸೇವೆಗಳ ಕಾರ್ಯದರ್ಶಿ ಅಂಜುಲಿ ಚಿಬ್ ದುಗ್ಗಲ್, ''ತೆರಿಗೆ ಮುಕ್ತಗೊಳಿಸಿ ವಿನಾಯಿತಿ ನೀಡುವ ವಿಷಯಗಳಲ್ಲಿ ಎನ್ಪಿಎಸ್ ಸಹ ಒಂದು. ಈ ಕುರಿತಾಗಿ ಎಲ್ಲ ದೃಷ್ಟಿಯಿಂದಲೂ ಪರಮಾರ್ಶಿಸಬೇಕಾದ ಅಗತ್ಯವಿದೆ,'' ಎಂದಿದ್ದಾರೆ. ಸದ್ಯದ ನಿಯಮಗಳ ಪ್ರಕಾರ, ಎನ್ಪಿಎಸ್ನ ಶ್ರೇಣಿ-1ರ ಖಾತೆಗಳು ಇಇಟಿ ಸ್ಟೇಟಸ್ ಹೊಂದಿವೆ. ಅಂದರೆ, ಹೂಡಿಕೆ ಮಾಡುವ ಹಣವು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಹಣವನ್ನು ವಾಪಸ್ ಪಡೆಯುವಾಗ ತೆರಿಗೆ ಪಾವತಿಸಬೇಕಾಗುತ್ತದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅ

ಆಫ್ರಿಕಾದಲ್ಲಿ ಪತ್ತೆಯಾಯ್ತು ಜಗತ್ತಿನ ಎರಡನೇ ಅತಿ ದೊಡ್ಡ ವಜ್ರದ ತುಣುಕು...!:-

Image
ಗಬೋರೋನಿ, ನ.20- ಜಗತ್ತಿನಲ್ಲೇ ಎರಡನೆ ಅತಿ ದೊಡ್ಡ ವಜ್ರದ ತುಣುಕು ಆಫ್ರಿಕಾ ಖಂಡದ ಬೋಟ್ಸ್ವಾನಾ ದೇಶದಲ್ಲಿ ಪತ್ತೆಯಾಗಿದೆ. ಇಲ್ಲಿಂದ ಸುಮಾರು 500 ಕಿಲೋ ಮೀಟರ್ ಉತ್ತರದಲ್ಲಿರುವ ಕರೋವಿ ಗಣಿ ಪ್ರದೇಶದಲ್ಲಿ 1,111 ಕ್ಯಾರೆಟ್ನ ವಜ್ರ ಪತ್ತೆಯಾಗಿದ್ದು, ಇದರ ಶತಮಾನದಲ್ಲೇ ದೊರೆತ ದೊಡ್ಡ ಸಂಪತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಗಣಿ ಉಸ್ತುವಾರಿ ಹೊತ್ತಿರುವ ಕೆನಡಾ ಮೂಲದ ಲ್ಯೂಸಾರಾ ಡೈಮಂಡ್ ಕಂಪೆನಿ ಈ ಕುರಿತಂತೆ ಮಾಹಿತಿ ಮತ್ತು ಚಿತ್ರವನ್ನು ಬಹಿರಂಗಪಡಿಸಿದ್ದು, ಇದರ ಬೆಲೆ ಇನ್ನೂ ಎಷ್ಟಿರಬಹುದು ಎಂದು ನಿಗದಿಪಡಿಸುವ ಕಾರ್ಯ ನಡೆದಿದೆ ಎಂದು ಇದರ ಸಿಇಒ ವಿಲಿಯಮ್ ಲ್ಯಾಂಬ್ ತಿಳಿಸಿದ್ದಾರೆ. ಟೆನ್ನಿಸ್ ಬಾಲ್ ಆಕೃತಿಯ ಈ ವಜ್ರ ಬಹು ಅಮೂಲ್ಯವಾಗಿದ್ದು, ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಳೆದ 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲೇ 3106 ಕ್ಯಾರೆಟ್ ವಜ್ರವನ್ನು ಗಣಿಯಿಂದ ತೆಗೆದು ಬ್ರಿಟನ್ ರಾಣಿಯ ಕಿರೀಟದಲ್ಲಿ ಅಳವಡಿಸಲಾಗಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಪ್ರಸ್ತುತ ಬೋಟ್ಸ್ವಾನಾ ರಾಷ್ಟ್ರದಲ್ಲಿ ದೊರೆತಿರುವ ಈ ವಜ್ರ ಕೂಡ ಅಪೂರ್ವವಾಗಿದೆ. ನಾವು ಹೊಕ್ಕಿ ತೆಗೆಯುತ್ತಿರುವ ವಜ್ರದಲ್ಲಿ ಇದು ನಮಗೆ ಸಿಕ್ಕ ಜಗತ್ತಿನ ಎರಡನೆ ಅತಿ ದೊಡ್ಡ ವಜ್ರವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಏಪ್ರಿಲ್ನಲ್ಲಿ ನ್ಯೂಯಾರ್ಕ್ನಲ್ಲಿ ನೂರು ಕ

ಖಾಸಗಿ ಅನುದಾನ ರಹಿತ ಶಾಲಾ- ಕಾಲೇಜುಗಳು ಸದ್ಯದಲ್ಲೇ ಅನುದಾನಕ್ಕೊಳಪಡಲಿದೆ : ಕಿಮ್ಮನೆ ರತ್ನಾಕರ್:-

ಬೆಂಗಳೂರು, ನ.20-1994-95ನೆ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾದ ಖಾಸಗಿ ಅನುದಾನ ರಹಿತ ಶಾಲಾ- ಕಾಲೇಜುಗಳನ್ನು ಅನುದಾನಕ್ಕೊಳಪಡಿಸಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಡಿ.30ರೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಅನುದಾನಕ್ಕೊಳಪಡಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಗಣೇಶ್ ಕಾರ್ನಿಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಭಾವಿ ಕೆಲ ಸಂಸ್ಥೆಗಳು ಮಾತ್ರ ಅನುದಾನ ಪಡೆಯುತ್ತವೆ. ವರ್ಷಕ್ಕೆ 8-10 ಶಾಲಾ- ಕಾಲೇಜುಗಳನ್ನು ನುದಾನಕ್ಕೊಳಪಡಿಸಲಾಗುತ್ತಿದೆ. ಹಾಗಾಗಿ ಆರ್ಥಿಕ ಇಲಾಖೆಗೆ ಹೊರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅರ್ಹತೆಯಿರುವ ಎಲ್ಲಾ ಶಾಲಾ- ಕಾಲೇಜುಗಳನ್ನು ಪಟ್ಟಿಮಾಡಿ ಅನುದಾನಕ್ಕೊಳಪಡಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಆರ್ಥಿಕ ಇಲಾಖೆ ಕೂಡ ಸಹಮತ ವ್ಯಕ್ತಪಡಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ಅವರೂ ಕೂಡ ಅರ್ಹವಿರುವ ಶಾಲಾ-ಕಾಲೇಜುಗಳನ್ನು ಪಟ್ಟಿ ಮಾಡಿ ಅನುದಾನಕ್ಕೊಳಪಡಿಸಲು ಮೌಖಿಕವಾಗಿ ಸೂಚಿಸಿದ್ದಾರೆ. ಎರಡು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಡಿ.31ರೊಳಗೆ ಅರ್ಹ ಅನುದಾನರಹಿತ ಎಲ್ಲಾ ಶಾಲಾ- ಕಾಲೇಜುಗಳನ್ನು ಅನುದಾನ ವ್ಯಾಪ್ತಿಗೊಳಿಸಲು ಪ್ರಕ್ರಿಯೆ ಪರಿಶೀಲನೆಯಲ್ಲಿದೆ ಎಂದರು. ಪ್ರಾಥಮಿಕ, ಪ್ರೌಢ,

ಐದನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ:-

ಪಟನಾ: ಐದನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಮನಾಥ್ ಕೋವಿಂದ್ ಅವರು ನಿತೀಶ್ ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಮಕ್ಕಳಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಸೇರಿದಂತೆ 28 ಮಂದಿ ಸಚಿವರಾಗಿ ನಿತೀಶ್ ಕುಮಾರ್ ಜೊತೆಗೇ ಪ್ರಮಾಣ ವಚನ ಸ್ವೀಕರಿಸಿದರು. ನಿತೀಶ್ ಹೊರತಾಗಿ ಆರ್​ಜೆಡಿ ಮತ್ತು ಜೆಡಿ(ಯು)ವಿನ ತಲಾ 12 ಮಂದಿ ಮತ್ತು ಕಾಂಗ್ರೆಸ್​ನ 4 ಮಂದಿ ಸಚಿವರಾಗಿ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ 8 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅಂದಾಜು 2 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಆರ್ ಜೆ ಡಿ ಹಾಗೂ ಜೆಡಿಯು ಮೈತ್ರಿಕೂಟದ ನಿತೀಶ್ ಹಾಗೂ ಸಂಪುಟ ಸಹದ್ಯೋಗಿಗಳ ಪ್ರಮಾಣ ವಚನ ಸಮಾರಂಭ ನಡೆಯಿತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಎನ್ ಸಿ ಪಿ ಅಧ್ಯಕ್ಷ ಶರದ್ ಪವಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಗಣ್ಯಾತೀಗಣ್ಯರು ಹಾಜರಾಗಿದ್ದರು. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಅರವಿ

7th Pay Commission proposes 23.55% pay hike for government employees:-

New Delhi: The 7th Pay Commission headed by Justice A.K. Mathur has proposed a hefty 23.55% increase in emoluments including pay, allowances and pension for 4.8 million government employees and 5.5 million pensioners, potentially providing a boost to the ailing consumer economy although it seems to have missed an opportunity to reform the hiring process for government services. The impact on the finances of the centre and subsequently on the finances of state governments may force the governments to reduce their development expenses. The basic salary hike recommended is 16%, while that of housing rent allowance, other allowances and pensions are 138.71%, 49.79% and 23.63% respectively. Significantly, the Pay Commission passed on the opportunity to provide a mechanism for formal lateral induction to the government from the private sector. The vexed issue of parity of pay scales for officers from the Indian Administrative Services (IA

Interpol notices:

Red Notice:- To seek the location and arrest of a person wanted by a judicial jurisdiction or an international tribunal with a view to his/her extradition. Blue Notice:- To locate, identify or obtain information on a person of interest in a criminal investigation. Green Notice:- To warn about a person's criminal activities if that person is considered to be a possible threat to public safety. Yellow Notice:- To locate a missing person or to identify a person unable to identify himself/herself. Black Notice To seek information on unidentified bodies . Orange Notice'- To warn of an event, a person, an object or a process representing an imminent threat and danger to persons or property. Purple Notice:- To provide information on modi operandi , procedures, objects, devices or hiding places used by criminals.

ಮೋದಿ ಅಂಚೆ ಚೀಟಿ ಬಿಡುಗಡೆ:-

Image
ಅಂಟಾಲಿಯಾ: ಎರಡು ದಿನಗಳ ಹಿಂದಷ್ಟೇ ಪೂರ್ಣಗೊಂಡ ಜಿ-20 ಶೃಂಗಸಭೆಯ ಸ್ಮರಣಾರ್ಥ ಟರ್ಕಿಯು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಮೋದಿ ಅವರ ಭಾವಚಿತ್ರವಿದ್ದು, ಅದರ ಕೆಳಭಾಗದಲ್ಲಿ ರಾಷ್ಟ್ರಧ್ವಜ ಹಾಗೂ ಮೋದಿ ಅವರ ಹೆಸರಿದೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಬ್ರೆಜಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್ ಸೇರಿದಂತೆ ಒಟ್ಟು 33 ವಿಶ್ವ ನಾಯಕರ ಅಂಚೆ ಚೀಟಿಗಳನ್ನು ಟರ್ಕಿ ಬಿಡುಗಡೆಗೊಳಿಸಿದೆ.

ಕನ್ನಡಿಗ ಶಿವಮೊಗ್ಗದ ಶ್ರೀಧರಮೂರ್ತಿಯ ಕೈಯಲ್ಲಿ ಅರಳಿದ ಲಂಡನ್ ಬಸವಣ್ಣ!::

Image
ಶಿವಮೊಗ್ಗ: ಲಂಡನ್​ನಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ವಿಶ್ವಗುರು ಬಸವೇಶ್ವರರ ಪುತ್ಥಳಿ ತಯಾರಿಸಿದ್ದು ಶಿವಮೊಗ್ಗದ ಕಲಾವಿದ! ಹೌದು. ಐತಿಹಾಸಿಕ ಹಾಗೂ ಅವಿಸ್ಮರಣೀಯ ಪುತ್ಥಳಿ ನಿರ್ವಿುಸಿದ್ದು ಶಿವಮೊಗ್ಗದ ಖ್ಯಾತ ಶಿಲ್ಪಿ ಕಾಶೀನಾಥ್ ಪುತ್ರ ಶ್ರೀಧರಮೂರ್ತಿ. ಹಲವು ಸಾಧನೆ ಮಾಡಿರುವ ಇವರು ಈಗ ವಿದೇಶದಲ್ಲೂ ಛಾಪು ಮೂಡಿಸಿದ್ದಾರೆ. ದೇಶದ ಪ್ರಸಿದ್ಧ ಶಿಲ್ಪಿಗಳು ಲಂಡನ್​ನಲ್ಲಿ ಸ್ಥಾಪಿತವಾಗಬೇಕಿದ್ದ ಬಸವಣ್ಣನ ಮೂರ್ತಿಯನ್ನು ಸಿದ್ಧಪಡಿಸಿದ್ದರು. ಅದರಲ್ಲಿ ಶ್ರೀಧರಮೂರ್ತಿ ಸಿದ್ಧಪಡಿಸಿದ ಪುತ್ಥಳಿ ಅಲ್ಲಿನ ನಿಯಮಾವಳಿ ಮತ್ತು ಸೌಂದರ್ಯದ ಕಾರಣಕ್ಕೆ ಆಯ್ಕೆಯಾಗಿ ಅನಾವರಣಗೊಂಡಿದೆ. ಶ್ರೀಧರಮೂರ್ತಿ ಸದ್ಯ ಬೆಂಗಳೂರಿನಲ್ಲಿ ಶಿಲ್ಪಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಲ್ಯಾಂಬೆತ್ ನಗರದ ಮೇಯರ್ ಆಗಿದ್ದ ನೀರಜ್ ಪಾಟೀಲ್ ಕಳೆದ ವರ್ಷ ಬಸವಣ್ಣನ ಮೂರ್ತಿ ಸಿದ್ಧಪಡಿಸಿಕೊಡಬೇಕು ಎಂದಿದ್ದರಂತೆ. ಇದರಿಂದ ಸಂತಸಗೊಂಡ ಶ್ರೀಧರಮೂರ್ತಿ ತಕ್ಷಣ ಒಪ್ಪಿಗೆ ಸೂಚಿಸಿದ್ದರು. ಅಲ್ಲಿನ ನಿಯಮಾವಳಿಗೆ ಅನುಗುಣವಾಗಿ 4 ತಿಂಗಳ ಅವಧಿಯಲ್ಲಿ ಶ್ರೀಧರಮೂರ್ತಿ ಮೂರೂವರೆ ಅಡಿ ಎತ್ತರದ ಬಸವಣ್ಣನ ಪುತ್ಥಳಿ ಸಿದ್ಧಪಡಿಸಿದರು. ಸಂಪೂರ್ಣ ಕಂಚಿನಲ್ಲಿ ಸಿದ್ಧಪಡಿಸಲಾಗಿರುವ ಈ ಪ್ರತಿಮೆ 500 ಕಿಲೋ ತೂಕವಿದೆ. ಕಂಚಿನಲ್ಲಿ ಸಿದ್ಧಗೊಂಡಿರುವ ಬಸವಣ್ಣ

ಸುಪ್ರೀಂನ ನೂತನ ಸಿಜೆಯಾಗಿ ಠಾಕೂರ್ ನೇಮಕ:::

Image
ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ಸುಪ್ರೀಂಕೋರ್ಟ್ನ 43ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ಈಗ ಮುಖ್ಯ ನ್ಯಾಯಮೂರ್ತಿಯಾಗಿರುವ ಎಚ್.ಎಲ್.ದತ್ತು ಅವರು ಡಿ. 2ರಂದು ನಿವೃತ್ತರಾಗಲಿದ್ದು, ಡಿ.3 ರಂದು ಠಾಕೂರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಶಾರದ ಚಿಟ್ ಫಂಡ್ ಹಗರಣ ಸೇರಿ ಅನೇಕ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಪೀಠದ ನೇತೃತ್ವವನ್ನು ಠಾಕೂರ್ ವಹಿಸಿದ್ದರು.

ಜನವರಿ ಅಂತ್ಯದೊಳಗೆ 9511 ಶಿಕ್ಷಕರ ನೇಮಕ : ಟಿ.ಬಿ.ಜಯಚಂದ್ರ

ಬೆಂಗಳೂರು, ನ.18- ಮುಂಬರುವ ಜನವರಿ ಅಂತ್ಯದೊಳಗೆ 9511 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳ ಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪರವಾಗಿ ಉತ್ತರಿಸಿದ ಸಚಿವರು, 1 ರಿಂದ 5ನೇ ತರಗತಿವರೆಗೆ 2511 ಹಾಗೂ 6 ರಿಂದ 8ನೇ ತರಗತಿವರೆಗೆ 7000 ಶಿಕ್ಷಕರ ಹುದ್ದೆಗಳನ್ನು ಇದೇ ತಿಂಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, 1:2ರಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕ ಹೊಸ ಶಿಕ್ಷಕರನ್ನು ನೀಡಲಾಗುವುದು ಎಂದು ತಿಳಿಸಿದರು. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಹೊಂದಿರುವವರನ್ನು ಮಾತ್ರ ರೋಸ್ಟರ್ ಹಾಗೂ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶೌಚಾಲಯ ಹಾಗೂ ಅಗತ್ಯ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಯು.ಬಿ.ಬಣಕಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಜನವರಿ ಅಂತ್ಯದೊಳಗೆ 9511 ಶಿಕ್ಷಕರ ನೇಮಕ : ಟಿ.ಬಿ.ಜಯಚಂದ್ರ.

ಜನವರಿ ಅಂತ್ಯದೊಳಗೆ 9511 ಶಿಕ್ಷಕರ ನೇಮಕ : ಟಿ.ಬಿ.ಜಯಚಂದ್ರ     ♦GKPOINTS♦ ಬೆಂಗಳೂರು, ನ.18- ಮುಂಬರುವ ಜನವರಿ ಅಂತ್ಯದೊಳಗೆ 9511 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳ ಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪರವಾಗಿ ಉತ್ತರಿಸಿದ ಸಚಿವರು, 1 ರಿಂದ 5ನೇ ತರಗತಿವರೆಗೆ 2511 ಹಾಗೂ 6 ರಿಂದ 8ನೇ ತರಗತಿವರೆಗೆ 7000 ಶಿಕ್ಷಕರ ಹುದ್ದೆಗಳನ್ನು ಇದೇ ತಿಂಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, 1:2ರಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಮುಗಿದ ಬಳಿಕ ಹೊಸ ಶಿಕ್ಷಕರನ್ನು ನೀಡಲಾಗುವುದು ಎಂದು ತಿಳಿಸಿದರು. ♠ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಹೊಂದಿರುವವರನ್ನು ಮಾತ್ರ ರೋಸ್ಟರ್ ಹಾಗೂ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ♠ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶೌಚಾಲಯ ಹಾಗೂ ಅಗತ್ಯ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಯು.ಬಿ.ಬಣ