Drop


Friday, January 8, 2016

ಪ್ರಿಯಾಂಕಾ ಚೋಪ್ರಾ, ಅಮೆರಿಕದ ಜನಪ್ರಿಯ ಧಾರಾವಾಹಿ ‘ಕ್ವಾಂಟಿಕೊ’ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ

ನಟಿ ಪ್ರಿಯಾಂಕಾಗೆ ಪ್ರಶಸ್ತಿ

8 Jan, 2016

ಲಾಸ್‌ ಏಂಜಲಿಸ್‌ (ಪಿಟಿಐ): ಹಿಂದಿ ಚಿತ್ರ ತಾರೆ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಜನಪ್ರಿಯ ಧಾರಾವಾಹಿ 'ಕ್ವಾಂಟಿಕೊ'ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಹಾಲಿವುಡ್‌ ತಾರೆಯರಾದ ಎಮ್ಮಾ ರಾಬರ್ಟ್ಸ್‌, ಜಾಮಿ ಲೀ ಕರ್ಟಿಸ್‌, ಲೀ ಮಿಷೆಲೆ ಮತ್ತು ಮಾರ್ಸಿಯಾ ಹಾರ್ಡನ್‌ರಂತಹ ನಟಿಯರನ್ನು ಹಿಂದಿಕ್ಕಿ ಪ್ರಿಯಾಂಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 'ಜನರ ಆಯ್ಕೆಯ ಪ್ರಶಸ್ತಿ'ಗೆ ಭಾಜನರಾದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಯೂ ಅವರದಾಗಿದೆ.

ತಮಗೆ ಮತ ಹಾಕಿ ಬೆಂಬಲಿಸಿದ ಎಲ್ಲರಿಗೂ ಪ್ರಿಯಾಂಕಾ ಟ್ವಿಟ್ಟರ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. 'ನಾನು ತುಂಬಾ ಅದೃಷ್ಟವಂತೆ. ನನಗೆ ಮತಹಾಕಿದ ಎಲ್ಲರಿಗೂ ಧನ್ಯವಾದಗಳು. ನೀವಿಲ್ಲದೆ ನಾನು ಏನೂ ಅಲ್ಲ' ಎಂದು ಪ್ರಿಯಾಂಕಾ, ಪ್ರಶಸ್ತಿ ಹಿಡಿದುಕೊಂಡ ಚಿತ್ರದೊಂದಿಗೆ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ 'ಕ್ವಾಂಟಿಕೊ' ಸರಣಿಯಲ್ಲಿ ಪ್ರಿಯಾಂಕಾ, ಭಯೋತ್ಪಾದನಾ ದಾಳಿಯ ಪ್ರಮುಖ ಶಂಕಿತ ಆರೋಪಿ ಅಲೆಗ್ಸಾಂಡ್ರಾ ಪಾರಿಶ್‌ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.