Follow by Email

Friday, January 1, 2016

ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಹೊಸ ವರ್ಷಕ್ಕೆ ಭಾರತೀಯ ಪೌರತ್ವ:-

ನಾಳೆಯಿಂದ ಅದ್ನಾನ್ ಸಾಮಿ
ಭಾರತೀಯ
31 Dec, 2015
ನವದೆಹಲಿ (ಏಜೆನ್ಸೀಸ್): ಭಾರತದಲ್ಲಿ
ನೆಲೆಸಿರುವ ಪಾಕಿಸ್ತಾನ ಮೂಲದ
ಗಾಯಕ ಅದ್ನಾನ್ ಸಾಮಿ ಹೊಸ
ವರ್ಷಕ್ಕೆ ಭಾರತೀಯ ಪೌರತ್ವ
ಹೊಂದಲಿದ್ದಾರೆ.
ಅದ್ನಾನ್ ಸಾಮಿ ಅವರಿಗೆ 2016ರ ಜನವರಿ
1ರಿಂದ ಭಾರತದ ಪೌರತ್ವ ದೊರೆಯಲಿದೆ
ಎಂದು ಕೇಂದ್ರ ಗೃಹ ಇಲಾಖೆ
ತಿಳಿಸಿದೆ.
ಮಾನವೀಯತೆಯ ನೆಲೆಯಲ್ಲಿ ತಮಗೆ
ಭಾರತದ ಪೌರತ್ವ ನೀಡಬೇಕೆಂದು
ಕೋರಿ ಅದ್ನಾನ್ ಸಾಮಿ ಅವರು
2015ರ ಮೇ 26ರಂದು ಕೇಂದ್ರ
ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು.