Drop


Saturday, January 16, 2016

ಜಾರ್ಖಂಡ್ ರಾಜ್ಯ ಪಠ್ಯದಲ್ಲಿ ಧೋನಿ, ದೀಪಿಕಾ ಅಧ್ಯಾಯ:-


ರಾಂಚಿ: ಶಾಲಾ ಪಠ್ಯದಲ್ಲಿ ರಾಂಚಿ ಮೂಲದ ಭಾರತ ಕ್ರಿಕೆಟ್
ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಆರ್ಚರಿ
ಪಟು ದೀಪಿಕಾ ಕುಮಾರಿ ಮತ್ತು ಮಾಜಿ ಹಾಕಿ ನಾಯಕ ಜೈಪಾಲ್
ಸಿಂಗ್ ಮುಂಡಾ ಕುರಿತು ಜಾರ್ಖಂಡ್ ವಿದ್ಯಾಥಿರ್ರ್ಗಳು
ಶೀಘ್ರದಲ್ಲೇ ಅಧ್ಯಯನ ನಡೆಸಲಿದ್ದಾರೆ ಎಂದು
ಅಲ್ಲಿನ ಶೈಕ್ಷಣಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೂತನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ
ಹೊಸ ಪಠ್ಯದಲ್ಲಿ ಎರಡರಿಂದ 8ನೇ
ತರಗತಿಯ ವಿದ್ಯಾರ್ಥಿಗಳು ಇವರ ಬಗ್ಗೆ ಅಧ್ಯಯನ
ನಡೆಸಲಿದ್ದಾರೆ.
1928ರಲ್ಲಿ ಭಾರತ ಹಾಕಿ ತಂಡದ ನಾಯಕರಾಗಿದ್ದ ಮುಂಡಾ
ಅದೇ ವರ್ಷ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಸಾಧನೆ
ಮಾಡಿದ್ದರು. ನಂತರ ಅವರು ಆದಿವಾಸಿ ಮಹಾಸಭಾ ಎಂಬ
ಬುಡಕಟ್ಟು ಸಂಸ್ಥೆಯೊಂದನ್ನು
ಸ್ಥಾಪಿಸಿದ್ದರು. ಇವರಲ್ಲದೆ, ಹೊಸ ಪುಸ್ತಕದಲ್ಲಿ
ಪರ್ವತರೋಹಿ ಬಚೇಂದ್ರಿಯಾ ಪಾಲ್ ಮತ್ತು ಪ್ರೇಮಲತಾ ಅಗರ್ವಾಲ್
ಅವರ ಬಗ್ಗೆಯೂ ತಿಳಿಸಲಾಗಿದೆ.