ದಿವ್ಯಾಂಗ ಪರ್ವತಾರೋಹಿ ಅರುಣಿಮಾ ಅರ್ಜೆಂಟೀನಾದ ಅಕಾಂಗೊ ಪರ್ವತವೇರುವ ಮೂಲಕ ಮತ್ತೊಂದು ಸಾಹಸ!


BY ವಿಜಯವಾಣಿ ನ್ಯೂಸ್
· JAN 2, 2016
ಲಖನೌ : ದೇಶದ ಖ್ಯಾತ ದಿವ್ಯಾಂಗ
ಪರ್ವತಾರೋಹಿ ಅರುಣಿಮಾ
ಸಿನ್ಹಾ ಮೌಂಟ್ ಎವರೆಸ್ಟ್ ಪರ್ವತ ಏರಿ
ದಾಖಲೆ ನಿರ್ವಿುಸಿದ್ದು ಇತಿಹಾಸ. ಈಗ
ಮತ್ತೊಂದು ಸಾಹಸದ ಮೂಲಕ
ಅವರು ಸುದ್ದಿಯಾಗಿದ್ದಾರೆ.
ಅರ್ಜೆಂಟೀನಾದ ಅಕಾಂಗೊ
ಪರ್ವತವೇರುವ ಮೂಲಕ ವಿಶ್ವದ ಗಮನ
ಸೆಳೆಯುವಲ್ಲಿ ಅರುಣಿಮಾ
ಯಶಸ್ವಿಯಾಗಿದ್ದಾರೆ.
ಎರಡನೇ ಮೌಂಟ್ ಎವರೆಸ್ಟ್ ಎಂದೇ
ಪ್ರಸಿದ್ಧಗೊಂಡಿರುವ ಈ
ಪರ್ವತವನ್ನು ಎಡಗಾಲಿನ ನ್ಯೂನತೆ
ಇರುವ ಅರುಣಿಮಾ ಏರಿ
ಹೊಸದೊಂದು ಸಾಧನೆ
ಮಾಡಿದ್ದಾರೆ. ಡಿಸೆಂಬರ್ 12 ರಂದು
ಪರ್ವತ ಹತ್ತಲು ಶುರು ಮಾಡಿ
ಡಿಸೆಂಬರ್ 25 ರಂದು ತುತ್ತ ತುದಿ
ತಲುಪಿ ಭಾರತದ ತ್ರಿವರ್ಣ ಧ್ವಜ
ಹಾರಿಸಿದ್ದಾರೆ. ದೇಶದ ಕೀರ್ತಿ
ಹೆಚ್ಚಿಸಿದ್ದಾರೆ.
ಅಕಾಂಗೊ ಪರ್ವತ ಸಮುದ್ರ
ಮಟ್ಟದಿಂದ 6960.8 ಮೀಟರ್
ಎತ್ತರವಿದ್ದು, ಏಷ್ಯೇತರ
ಬೆಟ್ಟಗಳಲ್ಲಿಯೆ ಅತಿ
ದೊಡ್ಡದೆನಿಸಿಕೊಂಡಿದೆ. ಸಾಧನೆಗೆ
ಸಂತಸ ವ್ಯಕ್ತಪಡಿಸಿದ ಅರುಣಿಮಾ,
ನಾನು ಜಗತ್ತಿನ 7 ದೊಡ್ಡ
ಪರ್ವತವೇರುವ ಗುರಿ
ಹೊಂದಿದ್ದೇನೆ. ಅದರಲ್ಲಿ 5 ನೇ
ಪರ್ವತ ಇದಾಗಿದೆ. ಜತೆಗೆ 5
ಪರ್ವತಗಳನ್ನೇರಿದ ಪ್ರಥಮ ವಿಕಲಾಂಗ
ಮಹಿಳೆ ಎಂದು ವಿಶ್ವ ದಾಖಲೆ
ಬರೆದಿರುವುದಾಗಿ ಹೆಮ್ಮೆಯಿಂದ
ಹೇಳಿಕೊಂಡಿದ್ದಾರೆ.
ಅರುಣಿಮಾಗೆ ಭಾರತ ಸರ್ಕಾರ
ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ
ಗೌರವಿಸಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023