ಮಿಂಚಿದ ಚೆಟ್ರಿ: ಭಾರತದ ಮಡಿಲಿಗೆ ಸ್ಯಾಫ್ ಕಪ್


4 Jan, 2016
ತಿರುವನಂತಪುರ
(ಐಎಎನ್ಎಸ್): ಸುನಿಲ್
ಚೆಟ್ರಿಯ ಚಾಕಚಕ್ಕತೆ
ಭಾನುವಾರದ ಸಂಜೆಗೆ
ವಿಜಯೋತ್ಸವದ
ರಂಗು ತುಂಬಿತು.
ಭಾರತ ಫುಟ್ಬಾಲ್
ತಂಡವು 'ಸ್ಯಾಫ್
ಕಪ್'ಗೆ ಮುತ್ತಿಕ್ಕಿತು.
ಕ್ರೀಡಾಂಗಣದಲ್ಲಿ
ತುಂಬಿದ್ದ ಅಭಿ
ಮಾನಿಗಳನ್ನು
ತುದಿಗಾಲಿನಲ್ಲಿ
ನಿಲ್ಲುವಂತೆ ಮಾಡಿದ್ದ
ರೋಚಕ ಫೈನಲ್ನಲ್ಲಿ
ಭಾರತ ತಂಡವು 2–1
ಗೋಲುಗಳಿಂದ
ಬಲಿಷ್ಠ ಆಫ್ಘಾನಿಸ್ಥಾನ
ತಂಡವನ್ನು ಮಣಿಸಿತು.
ಜೆಜೆ ಲಾಲ್ ಪೆಕ್ಲುವಾ
(72ನಿ) ಮತ್ತು
ಪಂದ್ಯದ ಹೆಚ್ಚುವರಿ
ಅವಧಿಯ 11ನೇ
ನಿಮಿಷದಲ್ಲಿ ನಾಯಕ
ಸುನಿಲ್ ಚೆಟ್ರಿ ಗಳಿಸಿದ
ಗೋಲುಗಳು ಭಾರತ
ತಂಡಕ್ಕೆ ಜಯದ ಕಾಣಿಕೆ
ನೀಡಿದವು.
2013ರ ಟೂರ್ನಿಯ
ಫೈನಲ್ನಲ್ಲಿ ಇದೇ
ತಂಡದ ಎದುರು
ಅನುಭವಿಸಿದ್ದ ಸೋಲಿಗೆ
ಭಾರತ ಮುಯ್ಯಿ
ತೀರಿಸಿ ಕೊಂಡಿತು.
ಆತಿಥೆಯ ತಂಡವು
ಸ್ಯಾಫ್ ಕಪ್ ಗೆದ್ದಿದ್ದು
ಇದು ಏಳನೇ ಬಾರಿ.
ಕಠಿಣ ಸವಾಲು: ಫಿಫಾ
150ನೇ ಸ್ಥಾನ
ದಲ್ಲಿರುವ ಆಫ್ಘನ್
ತಂಡವು ಸುಲಭ ವಾಗಿ
ಶರಣಾಗಲಿಲ್ಲ.
ಆತಿಥೇಯ ಭಾರತವೂ
ಜಗ್ಗಲಿಲ್ಲ. ಪಂದ್ಯದ
ಮೊದಲ ಎಪ್ಪತ್ತು
ನಿಮಿಷಗಳವರೆಗೂ ಉಭಯ
ತಂಡಗಳು ಗೋಲು
ಗಳಿಸಲು
ಸಾಧ್ಯವಾಗಲಿಲ್ಲ.
ಪ್ರಮುಖ ಆಟಗಾರ
ರಾಬಿನ್ ಸಿಂಗ್
ಗಾಯಗೊಂಡು
ಕಣಕ್ಕೆ ಇಳಿಯಲಿಲ್ಲ. ಅವರ
ಕೊರತೆಯಿಂದ ತಂಡಕ್ಕೆ
ಹಿನ್ನಡೆಯಾಗುವ
ಆತಂಕ ಕೋಚ್
ಸ್ಟೀಫನ್
ಕಾನ್ಸ್ಟೆಂಟೈನ್ ಅವರಿಗೆ
ಇತ್ತು. ಆದರೆ, ಚೆಟ್ರಿ
ಬಳಗವು ಶಿಸ್ತಿನ ಆಟ
ಪ್ರದರ್ಶಿಸುವ ಮೂಲಕ
ಆತಂಕವನ್ನು ದೂರ
ಮಾಡಿತು.
ಆತಿಥೇಯರ ರಕ್ಷಣಾ
ಆಟಗಾರರು
ಭದ್ರಕೋಟೆ ರಚಿಸಿ
ಆಫ್ಘನ್ ತಂಡದ
ದಾಳಿಯನ್ನು
ಹಿಮ್ಮೆಟ್ಟಿಸಿತು. ಕಳೆದ
ಬಾರಿಯ ಚಾಂಪಿಯನ್
ಆಫ್ಘನ್ ತಂಡವೂ
ಪದೇ ಪದೇ ದಾಳಿ
ಸಂಘಟಿಸಿತು. ಆದರೆ
ಗೋಲು ಗಳಿಸಲು
ಸಾಧ್ಯವಾಗಲಿಲ್ಲ.
ಆದರೆ, 70ನೇ ನಿಮಿಷದಲ್ಲಿ
ಆಫ್ಘನ್ ತಂಡದ
ಜುಬೇರ್ ಅಮೀರಿ
ಭಾರತದ
ಗೋಲ್ಕೀಪರ್ ಕಣ್ತಪಿಸಿ
ಮೊದಲ ಗೋಲು
ಹೊಡೆ ದರು. ತಂಡಕ್ಕೆ
1–0 ಮುನ್ನಡೆ ನೀಡಿ
ದರು.
ಪ್ರವಾಸಿ ತಂಡದ ಈ
ಸಂತಸ ಕೇವಲ ಎರಡು
ನಿಮಿಷಗಳಿಗೆ ಮಾತ್ರ
ಉಳಿದಿತ್ತು. ಏಕೆಂದರೆ,
ಮಿಜೋರಾಂ
ಆಟಗಾರ ಜೆಜೆ
ಲಾಲ್ಪೆಕ್ಲುವಾ (72)
ಅವರ ಮಿಂಚಿನ
ವೇಗದಲ್ಲಿ ಗೋಲು
ಗಳಿಸಿದರು. ಇದರಿಂದಾಗಿ
ಎರಡೂ ತಂಡಗಳು 1–
1ರ ಸಮಬಲ ಸಾಧಿಸಿ ದವು.
ನಂತರದ 18 ನಿಮಿಷಗಳಲ್ಲಿ
ಆಟ ಅತ್ಯಂತ
ಬಿಸಿಯೇರಿತ್ತು.
ನಾರಾಯಣ ದಾಸ್
(77ನಿ) ಮತ್ತು ಹಸನ್
ಅಮೀನ್ (86ನಿ) ಹಳದಿ
ಕಾರ್ಡ್ ದರ್ಶನ ಪಡೆದರು.
ಆದರೆ, ಪಂದ್ಯದ ನಿಗದಿತ
ಅವಧಿ ಮುಗಿದಾಗ
ಎರಡೂ ತಂಡಗಳು
ಜಯ ಸಾಧಿಸಲಿಲ್ಲ. ಆಗ 30
ನಿಮಿಷಗಳ ಹೆಚ್ಚುವರಿ
ಅವಧಿಯನ್ನು
ಘೋಷಿಸಲಾಯಿತು.
ಯುಗೇನ್ಸನ್
ಲಿಂಗ್ಡೋ (93ನಿ) ಹಳದಿ
ಕಾರ್ಡ್ ದರ್ಶನ ಪಡೆದರು.
101ನೇ ನಿಮಿಷದಲ್ಲಿ
ಆಫ್ಘನ್ ರಕ್ಷಣಾ
ಆಟಗಾರ ಹಾಶೀಮಿ
ಅವರನ್ನು ತಪ್ಪಿಸಿದ ಚೆಟ್ರಿ
ಚೆಂಡಿನ ಮೇಲೆ
ಅದ್ಭುತ ನಿಯಂತ್ರಣ
ಸಾಧಿಸಿದ್ದರು.
ಶರವೇಗದೊಂದಿಗೆ
ಒಳನುಗ್ಗಿದ ಅವರು
ಕಾರ್ನರ್ನಿಂದ
ಚೆಂಡನ್ನು
ಗೋಲುಪೆಟ್ಟಿಗೆಗೆ
ಮಿಂಚಿನ ವೇಗದಲ್ಲಿ ಕಿಕ್
ಮಾಡಿದರು.
ನಂತರದ 19 ನಿಮಿಷಗಳ
ಆಟದಲ್ಲಿ ಭಾರತದ
ರಕ್ಷಣಾ ಪಡೆ ಮತ್ತು
ಮಿಡ್ ಫೀಲ್ಡರ್ಗಳು
ಆಫ್ಘನ್ ತಂತ್ರಗಳನ್ನು
ವಿಫಲಗೊಳಿಸಿದರು.
ಏಳನೇ ಕಪ್
ಭಾರತ ತಂಡವು ಕಳೆದ
26 ವರ್ಷಗಳಲ್ಲಿ ಏಳು
ಬಾರಿ ಸ್ಯಾಫ್ ಕಪ್
ಗೆದ್ದಿದೆ. 1993, 1997, 1999,
2005, 2009, 2011
ಮತ್ತು 2015ರಲ್ಲಿ
ಸ್ಯಾಫ್ ಚಾಂಪಿಯನ್
ಆದ ಸಾಧನೆಯನ್ನು
ಭಾರತ ತಂಡವು
ಮಾಡಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023