ದೈಹಿಕ ನ್ಯೂನತೆ ಇದ್ದರೂ ಚಿತ್ರಕಲೆಯಲ್ಲಿ ಸಾಧನೆ ಮಾಡಿ ತೋರಿಸಿದ ಅನು ಜೈನ್


Published: 18 Jan 2016 10:07 AM IST
ಅನು ಕಲೆಗೆ ವಿಕಲಚೇತನವೇ ನಿಬ್ಬೆರಗಾಯಿತು!
ಬೆಂಗಳೂರು: ದೈಹಿಕ ವಿಕಲಚೇತನಕ್ಕೆ
ಸವಾಲೆಸೆದು ಸಹಜ ಬದುಕಿನತ್ತ ಸಾಗಿ ಸಾಹಸ
ಮಾಡುತ್ತಿರುವವರೆಂದರೆ ಚಿತ್ರ ಕಲಾವಿದೆ
ಅನುಜೈನ್. ಇವರು ಗುರಿ ಸಾಧಿಸುವ ಛಲವಿದ್ದರೆ
ದೈಹಿಕ ನ್ಯೂನತೆಗಳು ನಗಣ್ಯ ಎಂದು
ಕೊಂಡವರು.
ಕಾಲಿನ ಸಂಪೂರ್ಣ ಸ್ವಾಧrನ
ಕಳೆದುಕೊಂಡಿರುವ ಅನು ತಮ್ಮ ಎರಡು
ಮೊಣಕೈ ಜೋಡಿಸಿ ಕುಂಚ ಹಿಡಿದು ಚಿತ್ರ
ಬಿಡಿಸುವ ರೀತಿಯನ್ನು ನೋಡಿದರೆ ಬರೀ
ಸಾಮಾನ್ಯ ಜನತೆ ಮಾತ್ರವಲ್ಲ, ಕಲಾವಿದರಿಗೂ
ಅಚ್ಚರಿ ಆಗುತ್ತದೆ. ಇವರ ಕೌಶಲ ನೋಡಿ
ವಿಕಲಚೇತನವೇ ನಾಚುತ್ತದೆ. ಅನುಜೈನ್
ಮೂಲತಃ ಪಶ್ಚಿಮ ಬಂಗಾಳದವರು, 33 ವರ್ಷದ
ಅನು ಕಳೆದ 20ವರ್ಷಗಳಿಂದ ಚಿತ್ರಕಲೆಯನ್ನು
ಹವ್ಯಾಸ ಹಾಗೂ
ವೃತ್ತಿಯಾಗಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನೂರಾರು ಮಕ್ಕಳಿಗೆ
ಕಲೆಯನ್ನು ಧಾರೆಯೆರೆದಿದ್ದಾರೆ. ಕಳೆದ 2008ರಲ್ಲಿ
ಬೆಂಗಳೂರಿನಲ್ಲಿ ಚಿತ್ರಕಲೆಯನ್ನು ಪ್ರದರ್ಶಿಸಿದ್ದರು.
ಚಂಡೀಘಡದ ಪ್ರಾಚೀನ
ಕಲಾಕೇಂದ್ರದಿಂದ ಅವರಿಗೆ ಪುರಸ್ಕಾರ
ದೊರೆತಿದೆ. ಇದುವರೆಗೆ ಕಢಕ್ ಪುರದಲ್ಲಿ ತರಬೇತಿ
ನೀಡುತ್ತಿದ್ದು, ಇನ್ನು ಇವರು
ಬೆಂಗಳೂರಿನಲ್ಲಿಯೇ ನೆಲೆಸಲಿದ್ದು ಇಲ್ಲಿಯೂ
ತರಬೇತಿಯನ್ನು ನೀಡುವ ಅಭಿಲಾಷೆ
ಹೊಂದಿದ್ದಾರೆ. ಭಾರತೀಯ ವಿದ್ಯಾಭವನ
ಹಾಗೂ ಇನ್ಫೋಸಿಸ್ ಫೌಂಡೇಶನ್ ಇಂತಹ
ಕಲಾವಿದರನ್ನು ಗುರುತಿಸಿ ಪೊ್ರೀತ್ಸಾಹಿಸುವ
ದೃಷ್ಟಿಯಲ್ಲಿ ಚಿತ್ರಕಲಾ ಪ್ರದರ್ಶನವನ್ನು
ಭಾರತೀಯ ವಿದ್ಯಾಭವನದಲ್ಲಿ ಜ.17ರಿಂದ
23ರವರೆಗೆ ಹಮ್ಮಿಕೊಂಡಿದೆ.
ಚಿತ್ರದ ವಿಶೇಷತೆಗಳೇನು?: ಎಕ್ಸ್-ರೇ
ಪೇಂಟಿಂಗ್ ಎನ್ನುವುದು ನೂತನವಾಗಿದೆ.
ಇದರಲ್ಲಿ ಎಕ್ಸ್ ರೇ ಪ್ಲೇಟ್ನ ಮೇಲೆ ಗ್ಲಾಸ್
ಆಕ್ರಿಲಿಕ್ ಪೇಂಟಿಂಗ್ ಮಾಡಲಾಗುತ್ತದೆ.
ಬಾಂದಿನಿ, ಜಲವರ್ಣ, ಫೈಬರ್ ಗ್ಲಾಸ್, ಆಕ್ರಿಲಿಕ್,
ಆಯಿಲ್ ಪೇಸ್ಟಲ್, ಪೆನ್ಸಿಲ್ ಇದ್ದಿಲುಗಳನ್ನು ಬಳಸಿ
ಚಿತ್ರರಚನೆ ಜತೆಗೆ ಸೂಜಿಕಲೆ,
ಫೋಟೊಗ್ರಫಿಯಲ್ಲೂ ತಮ್ಮನ್ನು
ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ
ಮಣ್ಣಿನ ಆಕರ್ಷಕ ಕುಡಿಕೆ, ಹೂವಿನ ಕುಂಡ,
ಗೃಹಾಲಂಕಾರ ವಸ್ತುಗಳನ್ನೂ ಕೂಡ
ಮಾಡುತ್ತಾರೆ. ಭಾರತೀಯ ವಿದ್ಯಾಭವನದ
ಹನುಮಂತರಾವ್ ಆಟ್ರ್ಸ್ ಗ್ಯಾಲರಿಯಲ್ಲಿ
ಜ.23ರವರೆಗೂ ಬೆಳಗ್ಗೆ 10.30ರಿಂದ ಸಂಜೆ 6.30. ರವರೆಗೆ
ಪ್ರದರ್ಶನ ನಡೆಯಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023