Posts

Showing posts from February, 2016

ಸುಮಾರು 163 ವರ್ಷಗಳ ಸುದಿರ್ಘ ಇತಿಹಾಸವಿರುವ ಭಾರತೀಯ ರೈಲ್ವೆ ಅನೇಕ ಆಸಕ್ತಿದಾಯಕ ವಿಷಯಗಳು:

ಭಾರತೀಯ ರೈಲ್ವೆ ಇಂದು ಅನೇಕ ಹೊಸ ಆಯಾಮ ಒಳಗೊಂಡು ಕಾರ್ಯನಿರ್ವಹಿಸುತ್ತಿದೆ. 163 ವರ್ಷಗಳ ಸುದೀರ್ಘ ಇತಿಹಾಸ ತಿರುವಿ ಹಾಕಿದಾಗ ನಮಗೆ ಅನೇಕ ಸಂಗತಿಗಳು ಕಾಣಸಿಗುತ್ತವೆ. 1. 1844 ರಲ್ಲಿ ಭಾರತೀಯ ರೈಲ್ವೆಗಳ ಅಭಿವೃದ್ಧಿ ಕಡೆಗೆ ಮೊದಲ ಪ್ರಯತ್ನ ಗವರ್ನರ್ ಜನರಲ್ ಲಾರ್ಡ್ ಹಾರ್ಡಿಂಗ್ ಮಾಡಿದ್ದಾರೆ. 2. 1850 ರಲ್ಲಿ ಗ್ರೇಟ್ ಇಂಡಿಯನ್ ರೈಲ್ವೆ ಹಾಗೂ ಈಸ್ಟ್ ಇಂಡಿಯನ್ ರೈಲ್ವೆಯ ಎರಡು ರೈಲ್ವೆ ಕಂಪನಿಗಳು ಹೆಸರಿನಲ್ಲಿ ರಚನೆಯಾಯಿತು. ಒಂದು ಮುಂಬೈ ಹಾಗೂ ಕೋಲ್ಕತಾದಲ್ಲಿ ಸ್ಥಾಪನೆ 3. ಮುಂಬೈ ಮತ್ತು ಥಾಣೆ, ಏಪ್ರಿಲ್ 16, 1853 ರ ನಡುವೆ ಮೊದಲ ಭಾರತದಲ್ಲಿ ಉಗಿ ಎಂಜಿನ್ ರೈಲು ಸಂಚಾರ ಯಶಸ್ವಿ 4. ಬಾಂಬೆ ಸರ್ಕಾರದ ಮುಖ್ಯ ಇಂಜಿನಿಯರ್ ಜಾರ್ಜ್ ಕ್ಲಾರ್ಕ್ ಕಲ್ಪನೆ ಕೂಸಾಗಿದ್ದ ಮೊದಲ ರೈಲು 1853ರಲ್ಲಿ ಮುಂಬೈ-ಠಾಣೆ ನಡುವೆ ಮೊದಲ ರೈಲು ಸಂಚಾರ 5. ಮೊದಲ ರೈಲು ಸಂಚಾರದಲ್ಲಿ 400 ಪ್ರಯಾಣಿಕರ ಪ್ರಯಾಣ 6. ದಕ್ಷಿಣದಲ್ಲಿ, ರೈಲು ಜುಲೈ 1856 ಮದ್ರಾಸ್ ರೈಲ್ವೆ ಕಂಪನಿ ಆರಂಭಿಸಿದರು. 7. ಭಾರತದಲ್ಲಿ ಪ್ರಥಮ ರೈಲು 1853ರಲ್ಲಿ ಆರಂಭಗೊಂಡರೇ, ಚೀನಾದಲ್ಲಿ 23 ವರ್ಷಗಳ ನಂತರ, 1876 ರಲ್ಲಿ ಆರಂಭ 8. ರೈಲು ಸೇವೆ 1853 ರಲ್ಲಿ ಆರಂಭವಾದರೂ ರೈಲಿನಲ್ಲಿ ಶೌಚಾಲಯ 50 ವರ್ಷಗಳ ನಂತರ 1909 ರಲ್ಲಿ ಅಳವಡಿಸಲಾಯಿತು 9. ಇಂದು, 23 ದಶಲಕ್ಷಕ್ಕಿಂತಲೂ ಹೆಚ್ಚು

2015-16ನೇ ಸಾಲಿಗೆ ಕೆಎಸ್ಆರ್ಪಿ ಪೇದೆ: ಫೆ.28ರಂದು ಲಿಖಿತ ಪರೀಕ್ಷೆ

ರಾಜ್ಯ ಪೊಲೀಸ್ ಇಲಾಖೆಯು ಈ ಹಿಂದೆ 2015-16ನೇ ಸಾಲಿಗೆ ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ (ಕೆಎಸ್ಆರ್ಪಿ) ಇಲಾಖೆಯಲ್ಲಿ ಖಾಲಿ ಇರುವ 822 ಪುರುಷ ಮತ್ತು ಮಹಿಳಾ ಪೇದೆಗಳ ನೇಮಕಕ್ಕೆ ಅರ್ಜಿ (ಅರ್ಜಿ ಸಲ್ಲಿಸಲು 2015ರ ಅಕ್ಟೋಬರ್ 06 ಕೊನೆಯ ದಿನಾಂಕ ಆಗಿತ್ತು) ಆಹ್ವಾನಿಸಿತ್ತು. ಇದೀಗ ಈ ಹುದ್ದೆಗಳಿಗೆ ಫೆ.28ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಪರೀಕ್ಷಾ ಕೇಂದ್ರಗಳು: ಹುದ್ದೆಗಳಿಗೆ ಸಂಬಂಧಪಟ್ಟಂತೆ ಇಲಾಖೆಯು ಈ ಹಿಂದೆ ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಮಾತ್ರ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿತ್ತು. ಆದರೆ, ಅಭ್ಯರ್ಥಿಗಳಿಗೆ ದೂರ ಪ್ರಯಾಣದ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದ ಐದು ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಆ ಕೇಂದ್ರಗಳೆಂದರೆ; ಬೆಂಗಳೂರು, ಮೈಸೂರು, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ. ಪರೀಕ್ಷಾ ಮಾಹಿತಿ: ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಬಗ್ಗೆ ಸೂಚನೆ ಕಳುಹಿಸಲಾಗಿದೆ. ಅಭ್ಯಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ಗುರುತಿಸುವುದು ಹಾಗೂ ಕರೆ ಪತ್ರವನ್ನು ವೆಬ್ಸೈಟ್ದಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದೆ. ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ 080-2294 3346ಗೆ ಕರೆ ಮಾಡಿ ಪರಿಹರಿ

👆This is belgum B.E.O order about 6-8 who re- recuitment get 252 KCSR benifts💥

Image

ಭವಿಷ್ಯ ನಿಧಿ ಬಡ್ಡಿ ಶೇ 8.80ಕ್ಕೆ ಏರಿಕೆ

Feb 16, 2016, 5: 35 PM IST ಹೊಸದಿಲ್ಲಿ, ಫೆ . 16: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ ) ಯು ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ 8 . 75ರಿಂದ ಶೇ . 8. 80 ಕ್ಕೆ ಏರಿಸಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಭವಿಷ್ಯ ನಿಧಿ ಬಡ್ಡಿ ಏರಿಕೆಗೆ ಅನುಮತಿ ನೀಡಿದ್ದರು. ಪ್ರಸ್ತುತ ಬಡ್ಡಿ ದರ ಶೇ . 8. 75 . ಇದೀಗ 2015- 16ನೆ ಸಾಲಿಗೆ ಶೇ 0. 05 ರಷ್ಟು ಏರಿಕೆಯಾಗಿದೆ.

2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ.

2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ. ಸಂಚಾರಿ ವಿಜಯ್, ವಿಜಯಲಕ್ಷ್ಮಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ. @educationgknews ಬೆಂಗಳೂರು: 2014-15 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ನಾನು ಅವನಲ್ಲ ಅವಳು ಚಿತ್ರದ ನಟನೆಗೆ ಸಂಚಾರಿ ವಿಜಯ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ವಿದಾಯ ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮೀ ಗೋಪಾಲಸ್ವಾಮಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಸಂತ್ ಕುಮಾರ್ ಪಾಟೀಲ್ ಅವರಿಗೆ ಡಾ.ರಾಜ್‍ಕುಮಾರ್ ಪ್ರಶಸ್ತಿ ಮತ್ತು ಸುರೇಶ್ ಕೃಷ್ಣ ಅರಸ್ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಚಿತ್ರ: ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಹರಿವು ಚಿತ್ರಕ್ಕೆ ಮೊದಲನೇ ಸ್ಥಾನ, ಅಭಿಮನ್ಯು ಚಿತ್ರಕ್ಕೆ ದ್ವೀತೀಯ ಸ್ಥಾನ ಮತ್ತು ಹಗ್ಗದ ಕೊನೆ ಚಿತ್ರಕ್ಕೆ ತೃತೀಯ ಸ್ಥಾನ ಸಿಕ್ಕಿದೆ. ಯಾವ ಚಿತ್ರಕ್ಕೆ ಯಾರಿಗೆ ಯಾವ ಪ್ರಶಸ್ತಿ? ಅತ್ಯುತ್ತಮ ಪೋಷಕ ನಟ – ಅರುಣ್ ದೇವಸ್ಯ ಅತ್ಯುತ್ತಮ ಪೋಷಕ ನಟಿ – ಬಿ ಜಯಶ್ರೀ, (ಕೌದಿ) ಅತ್ಯುತ್ತಮ ಕಥೆ – ವಿದ್ಯಾ (`ನಾನು ಅವನಲ್ಲ ಅವಳು') ಅತ್ಯುತ್ತಮ ಚಿತ್ರಕಥೆ – ಪಿ.ಶೇಷಾದ್ರಿ (ವಿದಾಯ) ಅತ್ಯುತ್ತಮ ಸಂಭಾಷಣೆ – ವೇಣು (ತಿಪ್ಪಜ್ಜಿ ಸರ್ಕಲ್) ಅತ್ಯುತ್ತಮ ಛಾಯಾಗ್ರಹಣ -ಸತ್ಯ ಹೆಗಡೆ (ರಾಟ

ವಿಶ್ವದ ಅತಿ ಎತ್ತರದ ಗಡಿಯಾರ ಗೋಪುರ: ಇನ್ಫಿ ಸಜ್ಜು

Image
ವಿಕ ಸುದ್ದಿಲೋಕ | Feb 3, 2016, 04.00 AM IST Patni was where NR Narayana Murthy and most of the other founders of Infosys met. A A A ಮೈಸೂರಿನ ಇನ್ಫೋಸಿಸ್ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ನಲ್ಲಿ 135 ಅಡಿ ಎತ್ತರದ ಕ್ಲಾಕ್ ಟವರ್ ಅಂದಾಜು 60 ಕೋಟಿ ರೂ. ವೆಚ್ಚ ಬೆಂಗಳೂರು: ಸಾಂಸ್ಕೃತಿ ರಾಜಧಾನಿ ಮೈಸೂರಿನಲ್ಲಿ ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ ಎಂಬ ಐತಿಹಾಸಿಕ ಅವಳಿ ಗೋಪುರಗಳು ತನ್ನ ಅಂದ ಚೆಂದಗಳಿಂದ ಪ್ರಸಿದ್ಧವಾಗಿದೆ. ಮೈಸೂರು ವಿಶ್ವ ವಿದ್ಯಾಲಯದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಮಾನಸಗಂಗೋತ್ರಿಯಲ್ಲೂ ಕಳೆದ ವರ್ಷ ಮತ್ತೊಂದು ಗಡಿಯಾರ ಗೋಪುರ ನಿರ್ಮಾಣವಾಗಿತ್ತು. ಈಗ ಐಸಿ ದಿಗ್ಗಜ ಇನ್ಫೋಸಿಸ್ ಮೈಸೂರಿನಲ್ಲಿರುವ ತನ್ನ ಕ್ಯಾಂಪಸ್ನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಸಜ್ಜಾಗಿದೆ. ಸುಮಾರು 345 ಎಕರೆ ಪ್ರದೇಶಗಳಲ್ಲಿ ಹರಡಿರುವ ಇನ್ಫೋಸಿಸ್ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ನಲ್ಲಿ 135 ಮೀಟರ್ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಇನ್ಫೋಸಿಸ್ ಉದ್ದೇಶಿಸಿದೆ. ಇದು ಲಂಡನ್ನಲ್ಲಿರುವ ಬಿಗ್ ಬೆನ್ (96 ಮೀಟರ್), ಕ್ಯಾಲಿಫೋರ್ನಿಯಾದ ಹೋವರ್ ಟವರ್ಗಿಂತಲೂ (87 ಮೀಟರ್) ಎತ್ತರಕ್ಕೇರಲಿದೆ. ಗೋಥಿಕ್ ಶೈಲಿಯಲ್ಲಿ ನಿರ್ಮಾಣವಾಗಲಿರುವ ಈ ಗೋಪುರ ಕಟ್ಟಲು ಸುಮಾರು 60 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ 19 ಅಂತಸ್ತುಗಳು ಇರ

KARNATAKA TEACHERS ELIGIBILITY TEST RESULTS- 2015 PUBLISHED

"TET ಪರೀಕ್ಷಾ ಫಲಿತಾಂಶ ಪ್ರಕಟ" TET ಫಲಿತಾಂಶ ನೋಡಲು ಈ ಕೆಳಗಿನ 'ಲಿಂಕ್' CLICK ಮಾಡಿ. http://keyans.kartet.caconline.in/DisplayResult.aspx http://kartet.caconline.in/

ಮ್ಯಾನ್ಮಾರ್ನಲ್ಲಿ ಮೊದಲ ಪ್ರಜಾಸತ್ತೆ ಸರಕಾರ:*

-ಅರ್ಧ ಶತಮಾನದ ಸೇನಾಡಳಿತ ವಿರೋಧಿಸಿ ಸೂಚಿ ನಡೆಸಿದ ದಶಕಗಳ ಕಾಲದ ಹೋರಾಟಕ್ಕೆ ಸಂದ ಫಲ- ನೇಪಿತಾ(ಮ್ಯಾನ್ಮಾರ್): ಮ್ಯಾನ್ಮಾರ್ನಲ್ಲಿ ಅರ್ಧ ಶತಮಾನದ ಸೇನಾಡಳಿತದ ನಂತರ ಇದೇ ಮೊದಲ ಬಾರಿಗೆ ಔಂಗ್ ಸಾನ್ ಸೂಚಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಂಘಟನೆ 'ಎನ್ಎಲ್ಡಿ' ಪಕ್ಷದ ಹೊಸ ಸರಕಾರ ತನ್ನ ಕಾರ್ಯ ಕಲಾಪಗಳನ್ನು ಆರಂಭಿಸಿದೆ. ನವೆಂಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ ಎನ್ಎಲ್ಡಿ ಮ್ಯಾನ್ಮಾರ್ನಲ್ಲಿ ಇದೇ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವಾಗಿ ಹೊರಹೊಮ್ಮಿದ್ದು, ನೂತನ ಚುನಾಯಿತ ಸದಸ್ಯರು ಸೋಮವಾರ ಸಂಸತ್ತಿನ ಕಲಾಪಗಳಲ್ಲಿ ಪಾಲ್ಗೊಂಡರು. ಅರ್ಧ ಶತಮಾನದ ಕಾಲ ನಿರಂತರ ಸೇನಾಡಳಿತದ ದಬ್ಬಾಳಿಕೆಗೆ ಒಳಗಾಗಿದ್ದ ಮ್ಯಾನ್ಮಾರ್ ಸಂಸತ್ತಿನ ಪಾಲಿಗೆ ಸೋಮವಾರ ಐತಿಹಾಸಿಕ ದಿನ. ಔಂಗ್ ಸಾನ್ ಸೂಚಿ ಅವರು ಮ್ಯಾನ್ಮಾರ್ನಲ್ಲಿ ಪ್ರಜಾಸತ್ತೆ ಮರಳಿ ತರಲು ಮಾಡಿದ ತ್ಯಾಗ ಮತ್ತು ಕಠಿಣ ಹೋರಾಟಗಳ ಫಲವಾಗಿ ಜನರಿಂದ ಆಯ್ಕೆಯಾದ ಪ್ರಜಾಸತ್ತಾತ್ಮಕ ಸರಕಾರವೊಂದು ಇದೀಗ ಕಾರ್ಯಭಾರ ಆರಂಭಿಸಿದೆ. ಸೂಚಿ ಅವರು ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ್ದರೂ, ಅವರ ಎನ್ಎಲ್ಡಿ ಪಕ್ಷ ಸೇನೆ ಜತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ಮ್ಯಾನ್ಮಾರ್ ಸಂವಿಧಾನವು ಸೇನೆಗೆ ಶೇ 25ರಷ್ಟು ಸ್ಥಾನಗಳನ್ನು ಸ

ಜೊಕೊವಿಕ್ ನೊವಾಕ್ಗೆ ಆರನೇ ಆಸ್ಟ್ರೇಲಿಯಾ ಕಿರೀಟ:-

Image
ನೊವಾಕ್ಗೆ ಆರನೇ ಆಸ್ಟ್ರೇಲಿಯಾ ಕಿರೀಟ ಏಜೆನ್ಸೀಸ್ | Feb 1, 2016, 04.30 AM IST 3101-2-2-NOVAK A A A -ರಾಯ್ ಎಮರ್ಸನ್ ದಾಖಲೆ ಸರಿಗಟ್ಟಿದ ಜೊಕೊವಿಕ್ ಐದನೇ ಬಾರಿ ಫೈನಲ್ನಲ್ಲಿ ಮುಗ್ಗರಿಸಿದ ಬ್ರಿಟನ್ನ ಆಂಡಿ ಮರ್ರೆ- ಮೆಲ್ಬೋರ್ನ್: ಅಕ್ಷರಶಃ ಅಬ್ಬರದ ಆಟವಾಡಿದ ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್, ಇಲ್ಲಿ ಮುಕ್ತಾಯಗೊಂಡ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಬ್ರಿಟನ್ನ ಆ್ಯಂಡಿ ಮರ್ರೆ ಅವರನ್ನು ಬಗ್ಗು ಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದರು. ಇಲ್ಲಿನ ರಾಡ್ ಲೆವರ್ ಅರೆನಾದಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ಫೈನಲ್ ಪಂದ್ಯದಲ್ಲಿ ಮಿಂಚಿದ ಹಾಲಿ ಚಾಂಪಿಯನ್ ನೊವಾಕ್, 6-1, 7-5, 7-6(7/3)ರ ನೇರ ಸೆಟ್ಗಳಿಂದ ಐದನೇ ಬಾರಿ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯವನ್ನಾಡುತ್ತಿದ್ದ ಆ್ಯಂಡಿ ಮರ್ರೆಗೆ ಸೋಲುಣಿಸಿದರು. ಎರಡು ಗಂಟೆ 53 ನಿಮಿಷಗಳ ಕಾಲ ನಡೆದ ಫೈನಲ್ ಕದನದಲ್ಲಿ ಸಿಕ್ಕಂತಹ ಅಮೋಘ ಗೆಲುವಿನೊಂದಿಗೆ ವೃತ್ತಿ ಬದುಕಿನ ಆರನೇ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲ್ಯಾಮ್ ಗೆದ್ದ ನೊವಾಕ್ ಜೊಕೊವಿಕ್, ಅತಿ ಹೆಚ್ಚು ಬಾರಿ ಆಸೀಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯ್ ಎಮರ್ಸನ್ (6 ಪ್ರಶಸ್ತಿ) ಅವರ ದಾಖಲೆಯನ್ನು ಸರಿಗಟ್ಟಿದರು. 11ನೇ ಗ್ರ್ಯಾನ್ ಸ್ಲ್ಯಾಮ್ ಗೆಲುವು ಬ್ರಿಟನ್ನ ತಾರೆ ಆ್ಯಂಡಿ ಮರ್ರೆ

ಅಕ್ಕಿ ರಫ್ತು: ಭಾರತ ನಂ.1

Image
ಅಕ್ಕಿ ರಫ್ತು: ಭಾರತ ನಂ.1 1 Feb, 2016 ಬ್ಯಾಂಕಾಕ್ (ಐಎಎನ್ಎಸ್): ಕಳೆದ ವರ್ಷ ಅತಿ ಹೆಚ್ಚು ಅಕ್ಕಿ ರಫ್ತು ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. 2015ರಲ್ಲಿ ಭಾರತವು ಜಾಗತಿಕ ಮಾರುಕಟ್ಟೆಗೆ 1.2 ಕೋಟಿ ಟನ್ ಅಕ್ಕಿ ರಫ್ತು ಮಾಡಿದ್ದು, ಇಲ್ಲಿಯವರೆಗೆ ಮೊದಲ ಸ್ಥಾನದಲ್ಲಿದ್ದ ಥಾಯ್ಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದೆ. 2014ರಲ್ಲಿ 1.09 ಕೋಟಿ ಟನ್ ಅಕ್ಕಿ ರಫ್ತು ಮಾಡಿದ್ದ ಥಾಯ್ಲೆಂಡ್ನ ಸಾಮರ್ಥ್ಯ 2015ರಲ್ಲಿ 98 ಲಕ್ಷ ಟನ್ಗೆ ಕುಸಿದಿದೆ ಎಂದು ಥಾಯ್ ಅಕ್ಕಿ ರಫ್ತು ಸಂಘದ ಮುಖ್ಯಸ್ಥ ಚಾರೋನ್ ಲೌಥಮ್ಥಾಟ್ ತಿಳಿಸಿದ್ದಾರೆ.