2015-16ನೇ ಸಾಲಿಗೆ ಕೆಎಸ್ಆರ್ಪಿ ಪೇದೆ: ಫೆ.28ರಂದು ಲಿಖಿತ ಪರೀಕ್ಷೆ


ರಾಜ್ಯ
ಪೊಲೀಸ್
ಇಲಾಖೆಯು ಈ ಹಿಂದೆ
2015-16ನೇ ಸಾಲಿಗೆ ಕರ್ನಾಟಕ ಸ್ಟೇಟ್
ರಿಸರ್ವ್
ಪೊಲೀಸ್
(ಕೆಎಸ್ಆರ್ಪಿ) ಇಲಾಖೆಯಲ್ಲಿ ಖಾಲಿ
ಇರುವ 822 ಪುರುಷ ಮತ್ತು ಮಹಿಳಾ
ಪೇದೆಗಳ ನೇಮಕಕ್ಕೆ ಅರ್ಜಿ (ಅರ್ಜಿ
ಸಲ್ಲಿಸಲು 2015ರ ಅಕ್ಟೋಬರ್ 06
ಕೊನೆಯ ದಿನಾಂಕ
ಆಗಿತ್ತು) ಆಹ್ವಾನಿಸಿತ್ತು.
ಇದೀಗ ಈ ಹುದ್ದೆಗಳಿಗೆ
ಫೆ.28ರಂದು ಲಿಖಿತ
ಪರೀಕ್ಷೆ ನಡೆಯಲಿದೆ
ಎಂದು ಇಲಾಖೆಯ ಪ್ರಕಟಣೆ
ತಿಳಿಸಿದೆ.
ಪರೀಕ್ಷಾ ಕೇಂದ್ರಗಳು:
ಹುದ್ದೆಗಳಿಗೆ
ಸಂಬಂಧಪಟ್ಟಂತೆ
ಇಲಾಖೆಯು ಈ ಹಿಂದೆ ಕಲಬುರಗಿ
ಮತ್ತು ಬೆಂಗಳೂರಿನಲ್ಲಿ ಮಾತ್ರ
ಲಿಖಿತ ಪರೀಕ್ಷೆಯನ್ನು
ನಡೆಸಲಾಗುತ್ತದೆ ಎಂದು ತಿಳಿಸಿತ್ತು.
ಆದರೆ, ಅಭ್ಯರ್ಥಿಗಳಿಗೆ ದೂರ
ಪ್ರಯಾಣದ
ತೊಂದರೆಯನ್ನು
ತಪ್ಪಿಸುವ ಉದ್ದೇಶದಿಂದ
ರಾಜ್ಯದ ಐದು ಕೇಂದ್ರಗಳಲ್ಲಿ
ಪರೀಕ್ಷೆಯನ್ನು ನಡೆಸಲು
ನಿರ್ಧರಿಸಿದೆ.
ಆ ಕೇಂದ್ರಗಳೆಂದರೆ;
ಬೆಂಗಳೂರು, ಮೈಸೂರು, ಬೆಳಗಾವಿ,
ದಾವಣಗೆರೆ ಮತ್ತು ಕಲಬುರಗಿ.
ಪರೀಕ್ಷಾ ಮಾಹಿತಿ: ಅರ್ಹ
ಅಭ್ಯರ್ಥಿಗಳಿಗೆ ಲಿಖಿತ
ಪರೀಕ್ಷೆಯ ಬಗ್ಗೆ ಸೂಚನೆ
ಕಳುಹಿಸಲಾಗಿದೆ.
ಅಭ್ಯಥಿಗಳು ತಮ್ಮ
ಪರೀಕ್ಷಾ ಕೇಂದ್ರವನ್ನು
ಗುರುತಿಸುವುದು ಹಾಗೂ ಕರೆ ಪತ್ರವನ್ನು
ವೆಬ್ಸೈಟ್ದಿಂದ ಡೌನ್ಲೋಡ್
ಮಾಡಿಕೊಂಡು
ಪರೀಕ್ಷೆಗೆ ಹಾಜರಾಗುವಂತೆ
ಸೂಚಿಸಿದೆ. ಸಮಸ್ಯೆಗಳಿದ್ದಲ್ಲಿ
ಸಹಾಯವಾಣಿ 080-2294 3346ಗೆ ಕರೆ
ಮಾಡಿ
ಪರಿಹರಿಸಿಕೊಳ್ಳುವಂತೆ
ನೇಮಕಾತಿ ಮತ್ತು ತರಬೇತಿ ವಿಭಾಗದ
ಹೆಚ್ಚುವರಿ
ಪೊಲೀಸ್
ಮಹಾನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಪರೀಕ್ಷೆ ಹೇಗಿರುತ್ತದೆ?:
ವಸ್ತುನಿಷ್ಠ ಮಾದರಿಯಲ್ಲಿ
ಪರೀಕ್ಷೆ ನಡೆಯಲಿದ್ದು,
ಸಾಮಾನ್ಯ ಜ್ಞಾನ ಮತ್ತು
ಮನೋಸಾಮರ್ಥ್ಯವನ್ನು
ಪರೀಕ್ಷಿಸುವ 100
ಅಂಕಗಳ ಪ್ರಶ್ನೆಗಳಿರುತ್ತವೆ.
ಪರೀಕ್ಷೆಯ ಅವಧಿ 2
ಗಂಟೆ. ಸಾಮಾನ್ಯ ಜ್ಞಾನದಲ್ಲಿ
ಸಾಮಾನ್ಯ ಅಧ್ಯಯನ, ವಿಜ್ಞಾನ,
ನೀತಿ ಶಿಕ್ಷಣ, ಭೂಗೋಳ, ಆಧುನಿಕ
ಭಾರತದ ಇತಿಹಾಸ, ಭಾರತದ
ಸ್ವಾತಂತ್ರ್ಯ ಸಂಗ್ರಾಮ,
ಭಾರತದ ಸಂವಿಧಾನ, ಮೂಲಭೂತ
ಹಕ್ಕುಗಳು ಮತ್ತು ನಿರ್ದೇಶಾತ್ಮಕ
ತತ್ವಗಳು
ಒಳಗೊಂಡಿರುತ್ತವೆ.
ಮನೋಸಾಮರ್ಥ್ಯ ವಿಭಾಗದಲ್ಲಿ ಗಣನಾ
ಕೌಶಲ ಮತ್ತು ಪ್ರಾದೇಶಿಕ ಮನ್ನಣೆ
ಕೌಶಲಗಳು
ಒಳಗೊಂಡಿರುತ್ತವೆ.
ಈ ಲಿಖಿತ ಪರೀಕ್ಷೆ ಮತ್ತು
ಅರ್ಹತಾ ಪರೀಕ್ಷೆಯಲ್ಲಿ
ಪಡೆದ ಅಂಕಗಳನ್ನು ಆಧರಿಸಿ
ತಾತ್ಕಾಲಿಕ ಅರ್ಹತಾ ಪಟ್ಟಿ
ಪ್ರಕಟಿಸಲಾಗುತ್ತದೆ. ಬಳಿಕ
ವೈದ್ಯಕೀಯ
ಪರೀಕ್ಷೆ, ದಾಖಲೆಗಳ
ಪರಿಶೀಲನೆ ಬಳಿಕ ನೇಮಕಾತಿ
ಮಾಡಿಕೊಳ್ಳಲಾಗುತ್ತದೆ.
ವಿವರಗಳಿಗೆ: www.ksp.gov.in

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023