ಐಎಎಸ್ ಪರೀಕ್ಷೆ ಅಧಿಸೂಚನೆ ಪ್ರಕಟ ಆಗಸ್ಟ್ 7ಕ್ಕೆ ಪೂರ್ವಭಾವಿ ಪರೀಕ್ಷೆ.!!

ನವದೆಹಲಿ (ಏ.23): ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್'ಸಿ) 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳಿಗೆ (ಐಎಎಸ್, ಐಪಿಎಸ್, ಐಎಫ್ಎಸ್ ಇತ್ಯಾದಿ) ಅಧಿಸೂಚನೆ ಪ್ರಕಟಿಸಿದೆ.

ಅಧಿಸೂಚನೆಯು ವೆಬ್'ಸೈಟ್ http://upsconline.nic.in ನಲ್ಲಿ ಲಭ್ಯವಿದ್ದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ.20 ಹಾಗೂ ಪೂರ್ವಭಾವಿ ಪರೀಕ್ಷೆ ಆಗಸ್ಟ್ 7 ರಂದು ನಡೆಯಲಿದೆ.

ಪರೀಕ್ಷೆಯನ್ನು ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದೊಂದಿಗೆ ಮೂರು ಪ್ರಕಾರಗಳಲ್ಲಿ ನಡೆಸಲಾಗುತ್ತದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳು
32 ವರ್ಷ ವಯೋಮಿತಿಯೊಂದಿಗೆ 6 ಬಾರಿ,

ಹಿಂದುಳಿದ ವರ್ಗದವರಿಗೆ
35 ವಯೋಮಿತಿ 9 ಬಾರಿ

ಹಾಗೂ ಎಸ್'ಸಿ, ಎಸ್'ಟಿ ಅಭ್ಯರ್ಥಿಗಳು 37 ವಯೋಮಿತಿಯಿದ್ದು
ಎಷ್ಟು ಬಾರಿ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳಬಹುದು.

*ಶೈಕ್ಷಣಿಕ ಅರ್ಹತೆ:

ಐಎಎಸ್ ಪರೀಕ್ಷೆ ತೆಗೆದುಕೊಳ್ಳಲು ಯುಜಿಸಿ'ಯಲ್ಲಿ ಅಂಗೀಕೃತಗೊಂಡ ಯಾವುದೇ ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಪದವಿ ಪಡೆದುಕೊಂಡಿರಬೇಕು. ಪದವಿಯ ಅಂತಿಮ ವರ್ಷದ ಪರೀಕ್ಷೆ ಬರೆದವರು ಸಹ ಪರೀಕ್ಷೆ ತೆಗೆದುಕೊಳ್ಳಬಹುದು ಆದರೆ ಮುಖ್ಯ ಪರೀಕ್ಷೆ ವೇಳೆಗೆ ಫಲಿತಾಂಶ ಪ್ರಕಟಗೊಂಡಿರಬೇಕು.

ಐಎಫ್ಎಸ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಲ್ಲಿ  ಪಶುಪಾಲನಾ ಮತ್ತು ಪಶುವೈದ್ಯ ವಿಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ, ಗಣಿತ, ಭೌತಶಾಸ್ತ್ರ, ಅಂಕಿಅಂಶ ಮತ್ತು ಪ್ರಾಣಿಶಾಸ್ತ್ರ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಅಥವಾ ಕೃಷಿ, ಅರಣ್ಯ ವಿಜ್ಞಾನ ಅಥವಾ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್'ಸೈಟ್  http://upsconline.nic.in ವೀಕ್ಷಿಸಿ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023