Drop


Monday, April 4, 2016

ಕಣಿವೆ ರಾಜ್ಯದ ಮೊದಲ ಮಹಿಳಾ ಸಿ .ಎಂ . ಮುಫ್ತಿ:-


ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು
ಕಾಶ್ಮೀರದ ಮೊದಲ ಮಹಿಳಾ
ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ
ಮುಫ್ತಿ ಅವರು ಸೋಮವಾರ ಪ್ರಮಾಣ ವಚನ
ಸ್ವೀಕರಿಸಿದರು .
ರಾಜ್ಯಪಾಲ ಎನ್ . ಎನ್ . ವೋಹ್ರಾ ಅವರು ಪ್ರಮಾಣ ವಚನ
ಬೋಧಿಸಿದರು. ಮುಫ್ತಿ ಅವರು ರಾಜ್ಯದ 13 ನೇ
ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ .
ಇದೇ ವೇಳೆ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ
ನಿರ್ಮಲ್ ಸಿಂಗ್ ಅವರೂ ಪ್ರಮಾಣ ವಚನ
ಸ್ವೀಕರಿಸಿದರು .
ಕೇಂದ್ರ ಸಚಿವ ಎಂ . ವೆಂಕಯ್ಯ ನಾಯ್ಡು
ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ
ಪಾಲ್ಗೊಂಡಿದ್ದರು