Drop


Wednesday, May 18, 2016

ಬನಹಟ್ಟಿಯ ತರಕಾರಿ ಮಾರುವ ಹುಡುಗಿಗೆ ಶೇ . 96 . 64 ಅಂಕ


ಬನಹಟ್ಟಿ : ಮನೆಯಲ್ಲಿ ಕಿತ್ತು ತಿನ್ನುವ
ಬಡತನ . ತಂದೆ ನಿಧನರಾಗಿ 10 ವರ್ಷಗಳೇ
ಕಳೆದಿವೆ . ತಾಯಿ ಸಂತೆಯಲ್ಲಿ ತರಕಾರಿ
ಮಾರುತ್ತ ಅಷ್ಟೋ - ಇಷ್ಟೋ ಬಂದ
ದುಡ್ಡಿನಲ್ಲಿ ತನ್ನ ಮಗಳ ವಿದ್ಯಾಭ್ಯಾಸದ
ವೆಚ್ಚ ತೂಗಿಸುತ್ತಿದ್ದರೆ ,
ತಾಯಿಯೊಂದಿಗೆ ತರಕಾರಿ
ಮಾರುತ್ತ ಎಸ್ಎಸ್ಎಲ್ಸಿ ಪರೀಕ್ಷೆ
ಬರೆದಳು . 604 ಅಂಕಗಳೊಂದಿಗೆ
ಶೇ . 96 . 64 ಫಲಿತಾಂಶದೊಂದಿಗೆ
ಉತ್ತಮ ಸಾಧನೆ ಮೆರೆದಳು ಇದು ಬನಹಟ್ಟಿಯ
ಎಸ್ಆರ್ಎ ಪ್ರೌಢಶಾಲೆಯ ವಿದ್ಯಾರ್ಥಿನಿ
ಸೌಮ್ಯ ಮುರಿಗೆಪ್ಪ ಸಗರಿಯ ಸಾಹಸಗಾಥೆ .
ಬನಹಟ್ಟಿಯ ಎಸ್ಆರ್ಎ ಪ್ರೌಢಶಾಲೆಯ
ವಿದ್ಯಾರ್ಥಿನಿಯಾಗಿರುವ ಸೌಮ್ಯ , ಶಾಲೆಗೆ
ಬರಬೇಕಾದರೆ ಮೊದಲು
ತಾಯಿಯೊಂದಿಗೆ ತರಕಾರಿ
ವ್ಯಾಪಾರ ಮಾಡಲೇಬೇಕು . ನಂತರ ಶಿಕ್ಷಣ.
ಹೀಗಿದ್ದರೂ ಶಿಕ್ಷಣವನ್ನು
ಶ್ರದ್ಧೆಯಿಂದ ಕಲಿತು ಯಾರಿಗೂ
ಕಡಿಮೆಯಿಲ್ಲವೆಂಬಂತೆ
ಮಹತ್ವದ ಸಾಧನೆ ಮಾಡಿ ಎಸ್ಆರ್ಎ ಪ್ರೌಢಶಾಲೆಗೆ
ನಾಲ್ಕನೇ ಸ್ಥಾನ ಪಡೆದಿದ್ದಾಳೆ . ಕನ್ನಡದಲ್ಲಿ
124, ಗಣಿತ 98 , ಹಿಂದಿ 97 , ವಿಜ್ಞಾನ,
ಸಾಮಾನ್ಯ ವಿಜ್ಞಾನ ಹಾಗೂ ಇಂಗ್ಲಿಷ್
ವಿಷಯಗಳಲ್ಲಿ ತಲಾ 95 ಅಂಕ
ಪಡೆದಿರುವ ಸೌಮ್ಯಾ, ಮುಂದೆ ವೈದ್ಯೆ
ಆಗುವ ಕನಸು
ಹೊಂದಿದ್ದಾಳೆ .
ಮುಂದಿನ ಶಿಕ್ಷಣಕ್ಕೆ ಇವರ
ಕುಟುಂಬಕ್ಕೆ ಬಡತನವೆಂಬುದು
ಕಂಟಕವಾಗಿದೆ . ಆದರೂ ಇವಳ ತಾಯಿ
ಸಾಧ್ಯವಾದಷ್ಟು ದುಡಿದು ಶಿಕ್ಷಣ ಒದಗಿಸುವುದಾಗಿ
ಹುಮ್ಮಸ್ಸಿನಿಂದ ಹೇಳುತ್ತಾರೆ .
ಪ್ರತಿದಿನ
ತಾಯಿಯೊಂದಿಗೆ
ಮನೆಗೆಲಸ ಮುಗಿಸಿ ವಿದ್ಯಾಭ್ಯಾಸ
ಮಾಡುತ್ತಿದ್ದೆ . ತಂದೆಯಿಲ್ಲವೆಂಬ
ಕೊರಗನ್ನು ನನ್ನ ತಾಯಿ ದೂರ ಮಾಡಿ, ನನಗೆ ಓದಿಗೆ
ಅವಕಾಶ ಕಲ್ಪಿಸುತ್ತಿದ್ದಾರೆ. ಇವರ
ಪ್ರೋತ್ಸಾಹದಿಂದಲೇ
ಇಷ್ಟೊಂದು ಅಂಕ
ಪಡೆಯಲು ಸಾಧ್ಯವಾಯಿತು ಎನ್ನುತ್ತಾಳೆ
ಸೌಮ್ಯಾ .