Drop


Monday, May 16, 2016

ಎಸ್ ಎಸ್ ಎಲ್ ಸಿ ಫಲಿತಾಂಶ; ಬೆಂಗಳೂರು ಗ್ರಾಮಾಂತರ ಪ್ರಥಮ

ಬೆಂಗಳೂರು: ಬಹು ನಿರೀಕ್ಷಿತ ಎಸ್
ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ
ಹೊರಬಿದ್ದಿದ್ದು, ಬೆಂಗಳೂರು
ಗ್ರಾಮಾಂತರ ಮೊದಲ
ಸ್ಥಾನದಲ್ಲಿದ್ದರೆ, ಉಡುಪಿ ಹಾಗೂ ಮಂಗಳೂರು
ದ್ವಿತೀಯ ಮತ್ತು ತೃತೀಯ
ಸ್ಥಾನದಲ್ಲಿದೆ.
ರಾಜ್ಯದ 3,082 ಪರೀಕ್ಷಾ
ಕೇಂದ್ರಗಳಲ್ಲಿ ಕಳೆದ ಮಾರ್ಚ್-
ಏಪ್ರಿಲ್'ನಲ್ಲಿ ಪರೀಕ್ಷೆ ನಡೆಸಲಾಗಿತ್ತು.
ರಾಜ್ಯದ ಒಟ್ಟು 13,993 ಶಾಲೆಗಳಲ್ಲಿ
8,49,233 ವಿದ್ಯಾರ್ಥಿಗಳು ಪರೀಕ್ಷೆಗೆ
ಹಾಜರಾಗಿದ್ದು 617235 ಪಾಸಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಪೂರ್ಣ
ಪ್ರಜ್ಞಾ ಶಾಲೆಯ ರಂಜನ್ ಕುಮಾರ್
625/625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ
ಸ್ಥಾನ, ಹೋಲಿ ಚೈಲ್ಡ್ ಸ್ಕೂಲ್ ವಿದ್ಯಾರ್ಥಿನಿ
ಸುಪ್ರೀತಾ 624/625, ಹಾಗೂ ಮೈಸೂರಿನ
ಮರಿಮಲ್ಲಪ್ಪ ಶಾಲೆಯ ಈಶು 624/625
ಅಂಕಗಳೊಂದಿಗೆ
ದ್ವಿತೀಯ ಸ್ಥಾನದಲ್ಲಿದ್ದಾರೆ.
ಸ್ವಾತಿ ಎಂ ಬೆಂಗಳೂರು ಗ್ರಾಮಂತರ
ರಾಜಾಜಿನಗರ ಶ್ರೀವಾಣಿ
ಬಾಲಕೀಯರ ಪ್ರೌಡಶಾಲಾ ವಿದ್ಯಾರ್ಥಿನಿ
98.56% (616/625) ಪಡೆದಿದ್ದಾರೆ.
ಈ ಬಾರಿ ಬೆಂಗಳೂರು ಗ್ರಾಮಾಂತರ
89.63 % ಫಲಿತಾಂಶ ಪಡೆದು ರಾಜ್ಯಕ್ಕೆ
ಪ್ರಥಮ ಸ್ಥಾನ
ಪಡೆದುಕೊಂಡರೆ, ಉಡುಪಿ
ಜಿಲ್ಲೆಗೆ 89.52% ಮಂಗಳೂರು 88.01%
ಹಾಗೂ ಬಳ್ಳಾರಿ ಕೊನೇ ಸ್ಥಾನ 56.68%
ಪಡೆದುಕೊಂಡಿದೆ. ರಾಜ್ಯದಲ್ಲಿ
ಒಟ್ಟಾರೆ 79.16% ಫಲಿತಾಂಶ
ಬಂದಿದ್ದು ಕಳೆದ ವರುಷಕ್ಕಿಂತ 2% ಕಡಿಮೆ
ಬಂದಿದೆ. ಸರಕಾರಿ ಶಾಲೆಗಳಲ್ಲಿ ಕೇವಲ ಮೂರು
ಶಾಲೆಗಳು ಶೂನ್ಯ ಪಲಿತಾಂಶ
ಪಡೆದುಕೊಂಡರೆ, 49
ಖಾಸಗೀ ಶಾಲೆಗಳು ಶೂನ್ಯ ಫಲಿತಾಂಶ
ಪಡೆದುಕೊಂಡಿದೆ ಎಂದು
ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಅನುತ್ತೀರ್ಣಗೊಂಡಿರು
ವಿದ್ಯಾರ್ಥಿಗಳು ಎದೆಗುಂದ ಬೇಡಿ, ಬರುವ ಜೂನ್
ತಿಂಗಳಲ್ಲಿ ಮರುಪರೀಕ್ಷೆ
ನಡೆಸಲಾಗುವುದು. ಎಸ್ಸೆಸ್ಸೆಲ್ಸಿ
ಪರೀಕ್ಷೆಯಲ್ಲಿ ತೇರ್ಗಡೆ
ಹೊಂದಿರುವ ಎಲ್ಲಾ
ವಿದ್ಯಾರ್ಥಿಗಳಿಗೆ ಧನ್ಯವಾದ ಹೇಳುತ್ತೇನೆ
ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್
ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳ
ಫಲಿತಾಂಶ ಎಸ್ಸೆಮ್ಮೆಸ್ ಮೂಲಕ
ರವಾನೆಯಾಗುತ್ತದೆ. ನಗರ ಪ್ರದೇಶದ
ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ
ಪರಿಶೀಲಿಸಬಹುದು. ಮಂಗಳವಾರ
ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಸಿಗುತ್ತದೆ
ಎಂದಿದ್ದಾರೆ.
ಗ್ರಾಮೀಣ ಭಾಗದ ಬಾಲಕರ
ಫಲಿತಾಂಶ
ಹಾಜರಾದ ವಿದ್ಯಾರ್ಥಿಗಳು – 229244
ತೇರ್ಗಡೆಯಾದ ವಿದ್ಯಾರ್ಥಿಗಳು- 177273
ಬಾಲಕಿಯರು
ಹಾಜರಾದ ವಿದ್ಯಾರ್ಥಿಗಳು – 206865
ತೇರ್ಗಡೆಯಾದ ವಿದ್ಯಾರ್ಥಿಗಳು- 173200
ನಗರ ಭಾಗ ಬಾಲಕರು
ಹಾಜರಾದ ವಿದ್ಯಾರ್ಥಿಗಳು- 170375
ತೇರ್ಗಡೆಯಾದ ವಿದ್ಯಾರ್ಥಿಗಳು-125815
ಬಾಲಕಿಯರು
ಹಾಜರಾದ ವಿದ್ಯಾರ್ಥಿಗಳು-173269
ತೇರ್ಗಡೆಯಾದ ವಿದ್ಯಾರ್ಥಿಗಳು-140947
ರಾಜ್ಯದಲ್ಲಿ ವಿಷಯವಾರು ಫಲಿತಾಂಶ
ಪ್ರಥಮ ಭಾಷೆ 91.06%
ದ್ವಿತೀಯ ಭಾಷೆ 88.79%
ತೃತೀಯ ಭಾಷೆ 92.79%
ಗಣಿತ 85.46%
ವಿಜ್ಞಾನ 85.97%
ಸಮಾಜ ವಿಜ್ಞಾನ 89.70%