Posts

Showing posts from June, 2016

ಕನ್ನಡ ಪದ್ಯಗಳ ತಿಜೋರಿ

[ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕನ್ನಡ ಪಠ್ಯಪುಸ್ತಕದಲ್ಲಿದ್ದ ಪದ್ಯಗಳ ಸಂಗ್ರಹ. ಇವೆಲ್ಲವೂ ಶ್ರೀವತ್ಸ ಜೋಶಿ ಫೇಸ್‌ಬುಕ್ ಪೋಸ್ಟುಗಳ ಲಿಂಕುಗಳು. ಫೇಸ್‌ಬುಕ್ ಎಕೌಂಟ್ ಇದ್ದವರಿಗೆ ಮಾತ್ರ (ಫ್ರೆಂಡ್ ಆಗಿರ್ಬೇಕು ಅಂತ ಇಲ್ಲ) ತೆರೆದುಕೊಳ್ಳುತ್ತವೆ.] 01. ಸೋಮೇಶ್ವರ ಶತಕದಿಂದಾಯ್ದ ಪದ್ಯಗಳು http://tinyurl.com/sjfbreqpost01 02. ಲೋಹಿತಾಶ್ವನ ಸಾವು http://tinyurl.com/sjfbreqpost02 03. ಸಂತೆಗೆ ಹೋದನು ಭೀಮಣ್ಣ... http://tinyurl.com/sjfbreqpost03 04. ಗಿಳಿಯ ಮರಿಯನು ತಂದು... http://tinyurl.com/sjfbreqpost04 05. ತಿರುಕನೋರ್ವನೂರ ಮುಂದೆ.... http://tinyurl.com/sjfbreqpost05 06. ಬಕಾಸುರ ವಧೆ http://tinyurl.com/sjfbreqpost06 07. ಸ್ತ್ರೀ ಎಂದರೆ ಅಷ್ಟೇ ಸಾಕೇ... http://tinyurl.com/sjfbreqpost07 08. ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ... http://tinyurl.com/sjfbreqpost08 09. ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ http://tinyurl.com/sjfbreqpost09 10. ಇವನೆ ನೋಡು ಅನ್ನದಾತ... http://tinyurl.com/sjfbreqpost10 11. ಸ್ವಾಮಿದೇವನೇ ಲೋಕಪಾಲನೇ http://tinyurl.com/sjfbreqpost11 12. ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ htt

ಬ್ರಿಟನ್​ಗೆ ಸ್ವಾತಂತ್ರ್ಯ

ಬ್ರಿಟನ್ ನಿರ್ಗಮನ ಒಕ್ಕೂಟ ಕಂಗಾಲು ಮಾರುಕಟ್ಟೆ ತಲ್ಲಣ ದೇಶದ ಆರ್ಥಿಕತೆಗೆ ಹೊರೆಯಾಗಿ ಬಿಳಿಯಾನೆ ಎಂಬ ಅಪವಾದ ಹೊತ್ತಿದ್ದ ಐರೋಪ್ಯ ಒಕ್ಕೂಟ(ಇಯು) ದಿಂದ ಕೊನೆಗೂ ಬ್ರಿಟನ್ ಹೊರಬರಲಿದೆ. ಚಾರಿತ್ರಿಕ ರೆಫರೆಂಡಮ್ೆ ಆದೇಶಿಸಿದ್ದ ಬ್ರಿಟನ್ ಸರ್ಕಾರ ಜನಾದೇಶಕ್ಕೆ ತಲೆಬಾಗಿದೆ. ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ಪರವಾಗಿ (ಬ್ರೆಕ್ಸಿಟ್) ಶೇ.51.9 ಹಾಗೂ ವಿರುದ್ಧವಾಗಿ (ಬ್ರೆಮೇನ್) ಶೇ.48.1 ಜನರು ಮತ ಚಲಾಯಿಸಿದ್ದಾರೆ. ಆ ಮೂಲಕ 43 ವರ್ಷಗಳ ನಂತರ ಬ್ರಿಟನ್ ಅಧಿಕೃತವಾಗಿ ಒಕ್ಕೂಟದಿಂದ ಹೊರಹೋಗಲಿರುವ ಪ್ರಥಮ ದೇಶವಾಗಲಿದೆ. ಒಟ್ಟಾರೆ ಈ ಬೆಳವಣಿಗೆಯ ಸಾಧಕ-ಬಾಧಕ, ಒಕ್ಕೂಟದ ಮುಂದಿರುವ ಸವಾಲುಗಳ ವಿವರ ಇಲ್ಲಿದೆ. ಬ್ರಿಟನ್ ಹೊರಹೋಗಿದ್ದೆ ೕಕೆ ಬ್ರಿಟನ್ ಸಿರಿವಂತ ದೇಶವಾಗಿದ್ದರೂ ಐರೋಪ್ಯ ಒಕ್ಕೂಟವನ್ನು ಮುನ್ನಡೆಸುವ ಹೊಣೆಗಾರಿಕೆ ಅದರ ಆರ್ಥಿಕತೆಗೂ ಭಾರವಾಗಿತ್ತು. ಜತೆಗೆ ಒಕ್ಕೂಟದ ನೀತಿಯಿಂದಾಗಿ ಸದಸ್ಯ ರಾಷ್ಟ್ರಗಳ ನಡುವೆ ವಲಸೆಗೆ ನಿರ್ಬಂಧವಿಲ್ಲದ ಪರಿಣಾಮ ವಲಸೆ ಹೆಚ್ಚಾಗಿ ಸ್ಥಳೀಯರು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಒಕ್ಕೂಟದಿಂದ ಹೊರಬಂದಿರುವ ಕಾರಣ ಬ್ರಿಟನ್ ಆರ್ಥಿಕ ಹೊರೆ ತಗ್ಗಲಿದೆ. ಜತೆಗೆ ವಲಸೆ ಹಾಗೂ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ದಿಂದ ಪ್ರೌಢ ಶಾಲೆ ಶಿಕ್ಷಕರ ವೃಂದಕ್ಕೆ ಬಡ್ತಿ ನೀಡುವ ಸಂಬಂದ

Image

CLICK HERE TO ENTER THE DEPT. PREFERENCES FOR THE POST OF SECOND DIVISION ASSISTANT/JR.ASSISTANT

http://www.kpscapps1.com/fda_sda_2015/

LIST OF CANDIDATES ELIGIBLE FOR DOCUMENT VERIFICATION FOR THE POST OF JR.ASSISTANT(FOOD AND CIVIL SUPPLIES)

http://kpsc.kar.nic.in/ELGLIST%20OF%20JR%20ASST.htm

Non Teaching Transfer Guidelines for the year 2016-17.

http://schooleducation.kar.nic.in/pdffiles/NTTransferGuidelines060616.PDF

ಸರ್ಕಾರಿ ಶಾಲೆ: 'ವಿದ್ಯಾಂಜಲಿ'ಗೆ 16 ರಂದು ಚಾಲನೆ

ನವದೆಹಲಿ: ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಶೀಘ್ರ 'ವಿದ್ಯಾಂಜಲಿ' ಎಂಬ ಹೊಸ ಕಾರ್ಯಕ್ರಮ ಆರಂಭಿಸಲಿದೆ. ಸರ್ಕಾರಿ ಶಾಲೆಗಳಲ್ಲಿನ ಬೋಧನಾ ವ್ಯವಸ್ಥೆ ಸುಧಾರಣೆಗೆ ಮತ್ತು ಶಿಕ್ಷಕರ ಕೊರತೆ ನೀಗಿಸುವಲ್ಲಿ 'ವಿದ್ಯಾಂಜಲಿ' ನೆರವಾಗಲಿದೆ. ಇದಕ್ಕಾಗಿ ನಾಗರಿಕ ಸೇವೆ ಸಲ್ಲಿಸಿ ನಿವೃತ್ತರಾದವರು ಸೇರಿದಂತೆ ಬೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾಭಿಮಾನಿಗಳನ್ನು ಬಳಸಿಕೊಳ್ಳಲಾಗುತ್ತದೆ. ವಿದ್ಯಾಂಜಲಿ ಕಾರ್ಯಕ್ರಮಕ್ಕೆ ಜೂನ್ 16 ರಂದು ಚಾಲನೆ ನೀಡಲಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾಲೆಗಳಲ್ಲಿ ಬೋಧನೆ ಮಾಡಲು ಮುಂದಾಗುವ 'ಸ್ವಯಂಸೇವಕ'ರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವೇದಿಕೆ ರೂಪಿಸಿದೆ. 'ವಿದ್ಯಾಂಜಲಿ' ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ದೇಶದ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ. ಈ ಕೊರತೆ ನೀಗಿಸಲು 'ಸ್ವಯಂಪ್ರೇರಿತರ' ಗುಂಪು ರಚನೆಯಾಗಲಿದೆ. ಇವರು ತಮ್ಮ ಅಮೂಲ್ಯ ಸಮಯವನ್ನು ವಿದ್ಯಾರ್ಥಿಗಳಿಗಾಗಿ ವಿನಿಯೋಗಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ತಿಂಗಳ ಬಾನುಲಿ ಭಾಷಣ 'ಮನದ ಮಾತು'ವಿನಲ್ಲಿ ವಿದ್ಯಾಂಜಲಿ

ವಿಶ್ವ ಪರಿಸರ ದಿನದ ಹುಟ್ಟು*... 05 Jun 2016

* ನಮ್ಮ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಹಾಗೂ ಆ ಬಗ್ಗೆ ವಿಶ್ವಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1974ರ ಜೂನ್ 5ರಂದು 'ವಿಶ್ವ ಪರಿಸರ ದಿನ'ವನ್ನು ಆರಂಭಿಸಿತು. ಅಲ್ಲಿಂದ ಮುಂದೆ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರತಿವರ್ಷವೂ ಈ ದಿನವನ್ನು ಆಚರಿಸಲಾಗುತ್ತಿದೆ. ಪರಿಸರದ ಕುರಿತು ಜನಜಾಗೃತಿ ಮೂಡಿಸಲು ಈ ದಿನವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಈ ದಿನವನ್ನು ಒಂದು ಧ್ಯೇಯದೊಂದಿಗೆ ಆಚರಿಸಲಾಗುತ್ತದೆ. *ಈ ವಷ೯ದ ಧ್ಯೇಯ ವಾಕ್ಯ "ವನ್ಯ ಜೀವಿಗಳ ಕಾನೂನುಬಾಹಿರ ಮ‌ಾರಾಟದ ವಿರುಧ್ದ ಹೋರಾಟ*" ಈ ಧ್ಯೇಯವು ಪರಿಸರಕ್ಕೆ ಸಂಬಂಧಿಸಿ ಕಾಳಜಿ ವಹಿಸಬೇಕಾದ ಯಾವುದೋ ಒಂದು ವಿಚಾರವನ್ನು ಒಳಗೊಂಡಿರುತ್ತದೆ. ಈ ಧ್ಯೇಯಕ್ಕೆ ಅನುಗುಣವಾಗಿ ಆ ವರ್ಷದ ಪರಿಸರ ದಿನದ ಲಾಂಛನವನ್ನೂ ರೂಪಿಸಲಾಗುತ್ತದೆ. ಪ್ರತಿವರ್ಷವೂ ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ದಿನದ ಅಧಿಕೃತ ಆಚರಣೆ ನಡೆಯುತ್ತದೆ. ಆ ವರ್ಷದ ಧ್ಯೇಯಕ್ಕೆ ಅನುಗುಣವಾಗಿ ಹೆಚ್ಚಿನ ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರವನ್ನು ಆರಿಸಿಕೊಂಡು ಅಲ್ಲಿನ ತೊಂದರೆ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಈ ವರ್ಷ ಅಂಗೋಲಾದಲ್ಲಿ ವಿಶ್ವ ಪರಿಸರ ದಿನ ಆಯೋಜನೆಗೊಂಡಿದೆ.

ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ನಿಧನ

Image
ಫೂನಿಕ್ಸ್, ಶನಿವಾರ, 4 ಜೂನ್ 2016 (11:47 IST) ಬಹಳ ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಅಮೆರಿಕಾದ ಫೂನಿಕ್ಸ್ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲಿ ಕುಟುಂಬದ ವಕ್ತಾರರು ಕೂಡ ಅವರ ನಿಧನ ವಾರ್ತೆಯನ್ನು ದೃಢಪಡಿಸಿದ್ದಾರೆ. 32 ವರ್ಷಗಳ ದೀರ್ಘ ಕಾಲದಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ವಕ್ತಾರ ಬೊಂಬ್ ಗುನ್ನೆಲ್ ಪ್ರಕಟಣೆ ಹೊರಹಾಕಿದ್ದಾರೆ. ಹೆವಿವೇಟ್ ಬಾಕ್ಸಿಂಗ್ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಅವರು ತಾವಾಡಿದ್ದ 61 ಪಂದ್ಯಗಳಲ್ಲಿ 56 ರಲ್ಲಿ ಜಯ ಪಡೆದು ಬಾಕ್ಸಿಂಗ್ ದಂತಕಥೆ ಎನಿಸಿಕೊಂಡಿದ್ದಾರೆ. ಟ್ರೆವರ್ ಬೆರ್ಬಿಕ್ ಎಂಬುವರ ವಿರುದ್ದ 1981 ರಲ್ಲಿ ಸೋಲುಂಡ ಬಳಿಕ ಬಾಕ್ಸಿಂಗ್​ಗೆ ವಿದಾಯ ಹೇಳಿದ್ದ ಅವರು ಮೂರು ವರ್ಷದ ಬಳಿಕ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು. ನ್ಯೂಯಾರ್ಕ್ನಲ್ಲಿ (1971ರ ಮಾರ್ಚ್) ಜೋ ಫ್ರೇಜರ್ ಮತ್ತು ಅಲಿ ನಡುವೆ ನಡೆದ ಕದನ 'ಫೈಟ್ ಆಫ್ ದಿ ಸೆಂಚುರಿ' ಎಂದೇ ಪ್ರಸಿದ್ಧಿ ಪಡೆದಿದೆ.

"ಖಾಸಗಿ ಶಾಲೆಗಳು ನೀಡುವ 'ವರ್ಗಾವಣೆ ಪ್ರಮಾಣಪತ್ರ' ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ಸಹಿ ಅಗತ್ಯವಿಲ್ಲ"

Image