Drop


Saturday, June 25, 2016

ಬ್ರಿಟನ್​ಗೆ ಸ್ವಾತಂತ್ರ್ಯ


ಬ್ರಿಟನ್ ನಿರ್ಗಮನ ಒಕ್ಕೂಟ ಕಂಗಾಲು
ಮಾರುಕಟ್ಟೆ ತಲ್ಲಣ
ದೇಶದ ಆರ್ಥಿಕತೆಗೆ ಹೊರೆಯಾಗಿ
ಬಿಳಿಯಾನೆ ಎಂಬ ಅಪವಾದ
ಹೊತ್ತಿದ್ದ
ಐರೋಪ್ಯ ಒಕ್ಕೂಟ(ಇಯು)
ದಿಂದ ಕೊನೆಗೂ ಬ್ರಿಟನ್
ಹೊರಬರಲಿದೆ. ಚಾರಿತ್ರಿಕ
ರೆಫರೆಂಡಮ್ೆ ಆದೇಶಿಸಿದ್ದ ಬ್ರಿಟನ್ ಸರ್ಕಾರ
ಜನಾದೇಶಕ್ಕೆ ತಲೆಬಾಗಿದೆ. ಒಕ್ಕೂಟದಿಂದ ಬ್ರಿಟನ್
ಹೊರಹೋಗುವ
ಪರವಾಗಿ (ಬ್ರೆಕ್ಸಿಟ್) ಶೇ.51.9 ಹಾಗೂ ವಿರುದ್ಧವಾಗಿ
(ಬ್ರೆಮೇನ್) ಶೇ.48.1 ಜನರು ಮತ
ಚಲಾಯಿಸಿದ್ದಾರೆ. ಆ ಮೂಲಕ 43 ವರ್ಷಗಳ
ನಂತರ ಬ್ರಿಟನ್ ಅಧಿಕೃತವಾಗಿ
ಒಕ್ಕೂಟದಿಂದ
ಹೊರಹೋಗಲಿರುವ
ಪ್ರಥಮ ದೇಶವಾಗಲಿದೆ. ಒಟ್ಟಾರೆ ಈ ಬೆಳವಣಿಗೆಯ
ಸಾಧಕ-ಬಾಧಕ, ಒಕ್ಕೂಟದ ಮುಂದಿರುವ ಸವಾಲುಗಳ
ವಿವರ ಇಲ್ಲಿದೆ.
ಬ್ರಿಟನ್
ಹೊರಹೋಗಿದ್ದೆ
ೕಕೆ
ಬ್ರಿಟನ್ ಸಿರಿವಂತ ದೇಶವಾಗಿದ್ದರೂ
ಐರೋಪ್ಯ ಒಕ್ಕೂಟವನ್ನು
ಮುನ್ನಡೆಸುವ ಹೊಣೆಗಾರಿಕೆ ಅದರ
ಆರ್ಥಿಕತೆಗೂ ಭಾರವಾಗಿತ್ತು. ಜತೆಗೆ ಒಕ್ಕೂಟದ
ನೀತಿಯಿಂದಾಗಿ ಸದಸ್ಯ
ರಾಷ್ಟ್ರಗಳ ನಡುವೆ ವಲಸೆಗೆ ನಿರ್ಬಂಧವಿಲ್ಲದ
ಪರಿಣಾಮ ವಲಸೆ ಹೆಚ್ಚಾಗಿ ಸ್ಥಳೀಯರು
ನಿರುದ್ಯೋಗ ಸಮಸ್ಯೆ
ಎದುರಿಸುವಂತಾಗಿತ್ತು. ಇದೀಗ
ಒಕ್ಕೂಟದಿಂದ
ಹೊರಬಂದಿರುವ ಕಾರಣ ಬ್ರಿಟನ್
ಆರ್ಥಿಕ ಹೊರೆ ತಗ್ಗಲಿದೆ. ಜತೆಗೆ
ವಲಸೆ ಹಾಗೂ ನಿರುದ್ಯೋಗ
ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬ
ನಿರೀಕ್ಷೆ ವ್ಯಕ್ತವಾಗಿದೆ.