ಕರ್ನಾಟಕ ಮೂಲದ ಡಾ.ಮಾಧುರಿ ಆನಂದ್ ಅವರಿಗೆ ಗ್ರೇಟ್ ಬ್ರಿಟನ್ನ ಬ್ರಿಟಿಷ್ ವೈದ್ಯಕೀಯ ಅಸೋಸಿಯೇಷನ್ "ಅತ್ಯುತ್ತಮ ವೈದ್ಯಕೀಯ ಪ್ರಶಸ್ತಿ' ನೀಡಿ ಗೌರವಿಸಿದೆ.


ಬೆಂಗಳೂರು: ವೈದ್ಯಕೀಯ
ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ
ಸಲ್ಲಿಸಿದ ಕರ್ನಾಟಕ ಮೂಲದ
ಡಾ.ಮಾಧುರಿ ಆನಂದ್
ಅವರಿಗೆ ಗ್ರೇಟ್ ಬ್ರಿಟನ್ನ ಬ್ರಿಟಿಷ್
ವೈದ್ಯಕೀಯ ಅಸೋಸಿಯೇಷನ್
"ಅತ್ಯುತ್ತಮ ವೈದ್ಯಕೀಯ
ಪ್ರಶಸ್ತಿ' ನೀಡಿ ಗೌರವಿಸಿದೆ. ಬ್ರಿಟನ್ನಲ್ಲಿನ
ಕರ¾ಥೆìನ್ನಲ್ಲಿರುವ ವೆಸ್ಟ್ವೆಲ್ಸ್ ಜನರಲ್
ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು
ಸ್ತ್ರೀರೋಗ ತಜ್ಞೆಯಾಗಿ ಕಾರ್ಯ
ನಿರ್ವಹಿಸುತ್ತಿರುವ ಡಾ.ಮಾಧುರಿ
ಆನಂದ್ ಅವರು ವೈದ್ಯಕೀಯ
ಸೇವೆಯಲ್ಲಿ ಹಲವು
ಸಂಶೋಧನೆಗಳಲ್ಲಿ
ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಅವರ
ಅತ್ಯುತ್ತಮ ಸೇವೆ ಪರಿಗಣಿಸಿ ಪ್ರಶಸ್ತಿ
ಪ್ರದಾನ ಮಾಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ
ಡಾ.ಮಾಧುರಿ ಆನಂದ್, ಕಳೆದ 12
ವರ್ಷಗಳಿಂದ ಪ್ರಸೂತಿ ಮತ್ತು
ಸ್ತ್ರೀರೋಗ ವಿಭಾಗದಲ್ಲಿ ಸೇವೆ
ಸಲ್ಲಿಸಲು ಅವಕಾಶ ನೀಡಿದ ವೆಸ್ಟ್ ವೆಲ್ಸ್
ಜನರಲ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಯ
ಸಹಕಾರದಿಂದ ಪ್ರಶಸ್ತಿಗೆ
ಭಾಜನವಾಗಿದ್ದೇನೆ. ಪ್ರಶಸ್ತಿಯಿಂದ
ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು
ಉತ್ತೇಜನ ನೀಡಿದಂತಾಗಿದೆ
ಎಂದು
ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನದಲ್ಲಿ ಮಾತೃಭೂಮಿ
ಭಾರತಕ್ಕೆ ತೆರಳಿ ಇಲ್ಲಿನ ಜನರಿಗೆ ಸೇವೆ
ಸಲ್ಲಿಸಲು ಆಸಕ್ತಿ ಹೊಂದಿದ್ದೇನೆ.
ಬ್ರಿಟನ್ನಲ್ಲಿ ಪಡೆದ ಜ್ಞಾನ, ಸೇವೆಯ
ಅನುಭವವನ್ನು ಬೆಂಗಳೂರಿಗೆ ಧಾರೆ
ಎರೆಯುವ ಬಗ್ಗೆ ನಿರ್ಧರಿಸಿದ್ದೇನೆ.
ಬೆಂಗಳೂರಿನಲ್ಲಿ ಮುಂದಿನ
ವೈದ್ಯಕೀಯವೃತ್ತಿಜೀವನ
ಆರಂಭಿಸಲಾಗುವುದು.
ಪ್ರಶಸ್ತಿಯನ್ನು ನನ್ನ ಕುಟುಂಬ
ಮತ್ತು
ಮಾತೃಭೂಮಿಗೆ ಸಮರ್ಪಿಸುತ್ತೇನೆ
ಎಂದಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023