Drop


Thursday, September 22, 2016

ಸ್ವಾತಂತ್ರ್ಯ ಯೋಧರ ಪಿಂಚಣಿ ಏರಿಕೆ ಏಜೆನ್ಸೀಸ್ | Sep 22, 2016, 04.00 AM IST


hike-contribution-to-ensure-rs-1000-minimum-pension-epfo-to-governmenthike-contribution-to-ensure-rs-1000-minimum-pension-epfo-to-government
ಹೊಸದಿಲ್ಲಿ: ಸ್ವಾತಂತ್ರ್ಯ ಯೋಧರ ಮಾಸಿಕ ಪಿಂಚಣಿಯನ್ನು ಶೇಕಡ 20ಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅಸ್ತು ಎಂದಿದೆ. ಈ ಬಾರಿ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ 'ಫ್ರೀಡಂ ಫೈಟರ್‌'ಗಳ ಪಿಂಚಣಿ ಹೆಚ್ಚಿಸುವ ಭರವಸೆ ನೀಡಿದ್ದರು. ಅದೀಗ ಈಡೇರಿದ್ದು, ಪರಿಷ್ಕೃತ ಪಿಂಚಣಿಯು ಆಗಸ್ಟ್‌ಗೆ ಪೂರ್ವಾನ್ವಯವಾಗುವಂತೆ ಸ್ವಾತಂತ್ರ್ಯ ಯೋಧರಿಗೆ, ವಿಧವಾ ಪತ್ನಿಯರಿಗೆ, ಇಲ್ಲವೇ ಕುಟುಂಬದ ಅವಲಂಬಿತರ ಕೈಸೇರಲಿದೆ. ಅಂಡಮಾನ್‌ ಜೈಲು ಸೇರಿದ್ದ ಹೋರಾಟಗಾರರ ಪಿಂಚಣಿಯನ್ನು 24,775 ರೂ.ನಿಂದ 30,000ರೂ.ಗೆ ಏರಿಸಲಾಗಿದ್ದರೆ, ಬ್ರಿಟಿಷ್‌ ವ್ಯಾಪ್ತಿಯ ಹೊರತಾದ ಪ್ರದೇಶಗಳಲ್ಲಿ ಶಿಕ್ಷೆ ಅನುಭವಿಸಿದ ದೇಶಭಕ್ತರ ಪಿಂಚಣಿಯನ್ನು 23,085 ರೂ.ನಿಂದ 28,000 ರೂ.ಗೆ ಏರಿಕೆ ಮಾಡಲಾಗಿದೆ. ಉಳಿದಂತೆ ಇಂಡಿಯನ್‌ ನ್ಯಾಷನಲ್‌ ಆರ್ಮಿ ಸದಸ್ಯರೂ ಸೇರಿ ಇತರ ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನು 21,395 ರೂ.ನಿಂದ 26,000 ರೂ.ಗೆ ಹೆಚ್ಚಿಸಲಾಗಿದೆ