ನೋಟು ರದ್ದಾದರೆ ಸಾಮಾನ್ಯರಿಗೇನು ಲಾಭ?

ಸಂಪೂರ್ಣ ವರದಿ:

ಪ್ರಧಾನಿ ನರೇಂದ್ರ ಮೋದಿ 130 ಕೋಟಿ ಭಾರತೀಯರ ಕನಸುಗಳಲ್ಲಿ ಅಚ್ಛೇ ದಿನಗಳ ಕನಸು ತುಂಬಿದ ನಾಯಕರು. ಪ್ರಧಾನಿಯಾದ ಕ್ಷಣದಿಂದ ದೇಶದ ಬದಲಾವಣೆಗಾಗಿ ಪಣತೊಟ್ಟು ನಿಂತ ನಾಯಕ. ಕಪ್ಪು ಹಣದ ವಿರುದ್ಧ ಸಮರ ಸಾರಿರೋ ಮೋದಿ 1000 ಮತ್ತು 500 ರೂಪಾಯಿ ನೋಟ್​ಗಳನ್ನ ಬ್ಯಾನ್ ಮಾಡಿದ್ದಾರೆ. ಈಗ ಕಪ್ಪು ಕುಬೇರರ ಬ್ಲಾಕ್ ಮನಿ ಹೊರಗೆ ಬರ್ತಾ ಇದೆ.

ಕಪ್ಪು ಹಣಗಳೆಲ್ಲಾ ಈಗ ಹೊರಗೆ ಬರ್ತಾ ಇದ್ದು, ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗ್ತಾ ಇದೆ. ಡಿಸೆಂಬರ್​ 30ರವರೆಗೆ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಹರಿದು ಬರೋ ನಿರೀಕ್ಷೆ ಇದ್ದು, ಮುಂದಿನ ದಿನಗಳಲ್ಲಿ ಭಾರತೀಯರಿಗೆ ಅಚ್ಛೇದಿನಗಳು ಸಿಗಲಿದೆ ಅಂತ ಹೇಳಲಾಗ್ತಿದೆ.

ಕಡಿಮೆಯಾಗಲಿವೆ ಬೆಲೆಗಳು, ಇಳಿಯಲಿವೆ ತೆರಿಗೆದರಗಳು

ಇಡೀ ದೇಶವೇ ಬೆಲೆ ಏರಿಕೆಯಿಂದ ತತ್ತರಿಸಿದೆ.

ಇಷ್ಟು ವರ್ಷಗಳಾದ್ರೂ, ಯಾವ ಸರ್ಕಾರ ಬಂದ್ರೂ ಬೆಲೆ ಏರಿಕೆಗೆ ಕಡಿವಾಣ ಹಾಕೋದಕ್ಕೆ ಆಗ್ಲೇ ಇಲ್ಲ. ಆದರೆ ಮೋದಿ ನೋಟ್​ ಬ್ಯಾನ್ ಮಾಡಿದ್ದೇ ತಡ, ಅತಿ ಹೆಚ್ಚಿನ ಪ್ರಮಾಣದ ಹಣ ಸರ್ಕಾರದ ಖಜಾನೆ ಸೇರ್ತಾ ಇದೆ. ಇದ್ರಿಂದ ಮುಂದಿನ ದಿನಗಳಲ್ಲಿ ಎಲ್ಲಾ ವಸ್ತುಗಳ ಬೆಲೆಗಳು ಕಡಿಮೆಯಾಗಲಿವೆ ಅಂತ ಅಂದಾಜಿಸಲಾಗಿದೆ. ಇಷ್ಟೇ ಅಲ್ಲ, ಸರ್ಕಾರಕ್ಕೆ ನಾವುಗಳು ಕಟ್ಟೋ ತೆರಿಗೆ ಹಣದ ಪ್ರಮಾಣ ಕೂಡ, ಗಣನೀಯವಾಗಿ ಇಳಿಮುಖವಾಗೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

ಕಾಳಧನಿಕರಿಗೆ ನಿದ್ದೆ ಬರ್ತಿಲ್ಲ

ಮೋದಿ ಇಟ್ಟ ದಿಟ್ಟ ಹೆಜ್ಜೆಯಿಂದ, ಕಪ್ಪು ಕುಳಗಳಿಗೆ ನಡುಕ ಶುರುವಾಗಿದೆ. ಬ್ಲಾಕ್ ಮನಿ ಇಟ್ಟುಕೊಂಡಿರೋ ಕಾಳಧನಿಕರ ನಿದ್ದೆನೇ ಬರ್ತಿಲ್ಲ.ಆದರೆ ನಿಷ್ಠಾವಂತರು, ಪ್ರಾಮಾಣಿಕರಿಗೆ ಇದು ಖುಷಿ ತಂದಿದೆ. ತೊಂದರೆ ಆದರೂ ಪರವಾಗಿಲ್ಲ ಅಂತ, ನೋಟಿಗಾಗಿ ಹಪಹಪಿಸುತ್ತಲೇ ಮೋದಿ ಕಾರ್ಯವನ್ನ ಶ್ಲಾಘಿಸುತ್ತಿದ್ದಾರೆ.

ಬ್ಲಾಕ್ ಆಯ್ತು ' ಸಾವಿರಾರು ಕೋಟಿ ಕಪ್ಪುಹಣ '

ಹೌದು, ಮೋದಿ ಯಾವಾಗ 1000,500 ರೂಪಾಯಿ ನೋಟ್​ಗಳನ್ನು ಬ್ಯಾನ್​ ಮಾಡಿದರೋ, ಆ ಕ್ಷಣದಿಂದಲೇ ಅಚ್ಛೇ ದಿನ ಆರಂಭವಾದ್ವು. ಯಾಕಂದ್ರೆ, ಹತ್ತಾರು ವರ್ಷಗಳಿಂದ ಕಾಳಧನಿಕರು ಕೂಡಿಟ್ಟಿದ್ದ ಕಪ್ಪು ಹಣ ಹೊರಗೆ ಬರೋದಕ್ಕೆ ಶುರುವಾಯ್ತು.. ಸಾವಿರಾರು ಕೋಟಿ ಕಪ್ಪು ಹಣದ ವಹಿವಾಟಿಗೆ ಬ್ರೇಕ್​ ಬಿತ್ತು.. ಇದು ಭಾರತೀಯ ಪ್ರಜೆಗಳಾದ ನಮಗೆ ನಿಮಗೆ ನಿಜಕ್ಕೂ ಅಚ್ಛೇ ದಿನಾನೇ ಅಲ್ವಾ?

ಕಪ್ಪು ಹಣದ ಸಂಗ್ರಹದಲ್ಲಿ ಭಾರತಕ್ಕೆ 8 ನೇ ಸ್ಥಾನ !,ಭಾರತದಲ್ಲಿದೆ ಲಕ್ಷ 80 ಸಾವಿರ ಕೋಟಿಗೂ ಹೆಚ್ಚು ಬ್ಲಾಕ್ ​ ಮನಿ

ಕಪ್ಪು ಹಣ ಹೊಂದಿರೋ ವಿಶ್ವದ ನಾನಾ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆ. ಇದು ನಿಜಕ್ಕೂ ಶಾಕಿಂಗ್​ ವಿಷ್ಯ. ಭಾರತದಲ್ಲಿ ಇರೋದು ಬರೋಬ್ಬರಿ 4 ಲಕ್ಷದ 80 ಸಾವಿರ ಕೋಟಿ ರೂಪಾಯಿಗೂ ಹೆಚ್ಚುಬ್ಲಾಕ್​ ಮನಿ. ಅದೂ ದೊಡ್ಡ ದೊಡ್ಡ ಬ್ಯುಸಿನೆಸ್​ ಮ್ಯಾನ್​ಗಳು, ರಾಜಕಾರಣಿಗಳು ವಿದೇಶಿ ಬ್ಯಾಂಕ್​ಗಳಲ್ಲಿರೋ ಬ್ಲಾಕ್​ ಮನಿ ಮಾಹಿತಿ ಇದು. ಸ್ವಿಸ್​ ಬ್ಯಾಂಕ್ ಸೇರಿದಂತೆ ವಿವಿಧ ಕಡೆ ಹೂಡಿಕೆ ಮಾಡಿದ ಕಪ್ಪು ಹಣವೇ 4 ಲಕ್ಷದ 80 ಸಾವಿರ ಕೋಟಿ. ಆದರೆ ಒಟ್ಟಾರೆಯಾಗಿ ಹೇಳೋದಾದ್ರೆ, ಭಾರತದಲ್ಲಿ ಇರೋದು ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್​ಗಿಂತಲೂ ಡಬಲ್​​ ಬ್ಲಾಕ್​ ಮನಿ.

ಅಮೆರಿಕಾವೇ ಬ್ಲ್ಯಾಕ್ ಮನಿಯಲ್ಲಿ ನಂ 1

ಅಮೆರಿಕ ವಿಶ್ವದ ದೊಡ್ಡಣ್ಣ. ವಿಜ್ಞಾನ ತಂತ್ರಜ್ಞಾನದಿಂದ ಹಿಡಿದು, ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯನ್ನು ಹೊಂದಿರೋ ದೇಶ ಅಮೆರಿಕ. ಇಂಥಾ ಅಮೆರಿಕಾದಲ್ಲೇ ಅತಿ ಹೆಚ್ಚು ಬ್ಲಾಕ್​ ಮನಿ ಓಡಾಡ್ತಿದೆ. ಎಷ್ಟೋ ಮಂದಿ ಅಮೆರಿಕ ಅಧ್ಯಕ್ಷರು ಬಂದ್ರು ಹೋದ್ರು. ಆದ್ರೆ ಈ ಕಪ್ಪು ಹಣಕ್ಕೆ ಕಡಿವಾಣ ಹಾಕೋದಕ್ಕೆ ಆಗ್ಲೇ ಇಲ್ಲ.. ವಿಶ್ವದ ಅತಿ ಹೆಚ್ಚು ಬ್ಲಾಕ್ ಮನಿ ಹೊಂದಿರೋ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಆದ್ರೆ ಬ್ಲಾಕ್​ ಮನಿ ವಿಷಯದಲ್ಲಿ ಎಂಟನೇ ಸ್ಥಾನದಲ್ಲಿ ಇರೋದು ಭಾರತ..

-------------------------------------------------=

ದೇಶ ಕಪ್ಪು ಹಣ

-------------------------------------------------=

1. ಅಮೆರಿಕ - 42 ಲಕ್ಷದ 49 ಸಾವಿರ ಕೋಟಿ

2. ಚೀನಾ - 17 ಲಕ್ಷದ 67 ಸಾವಿರ ಕೋಟಿ

3. ಮೆಕ್ಸಿಕೋ- 8 ಲಕ್ಷದ 52 ಸಾವಿರ ಕೋಟಿ

4. ಸ್ಪೇನ್​ - 8 ಲಕ್ಷದ 40 ಸಾವಿರ ಕೋಟಿ

5. ಇಟಲಿ - 7 ಲಕ್ಷದ 47 ಸಾವಿರ ಕೋಟಿ

6. ಜಪಾನ್​- 7 ಲಕ್ಷದ 45 ಸಾವಿರ ಕೋಟಿ

7. ಕೆನಡಾ - 5 ಲಕ್ಷದ 17 ಸಾವಿರ ಕೋಟಿ

8. ಭಾರತ - 4 ಲಕ್ಷದ 80 ಸಾವಿರ ಕೋಟಿ

9. ಇಂಗ್ಲೆಂಡ್-​ 4 ಲಕ್ಷದ 11 ಸಾವಿರ ಕೋಟಿ

10.ರಷ್ಯಾ- 3 ಲಕ್ಷದ 23 ಸಾವಿರ ಕೋಟಿ

-------------------------------------------------=

ಹೀಗೆ ವಿಶ್ವದಾದ್ಯಂತ ಬ್ಲಾಕ್​ ಮನಿ ಅಬ್ಬರ ಹೆಚ್ಚಾಗಿದೆ. ಎಲ್ಲಾ ದೇಶಗಳಲ್ಲೂ ಕಪ್ಪು ಹಣದ ಕುಬೇರರು ಇದ್ದಾರೆ. ಆದರೆ ಅಭಿವೃದ್ಧಿಯಲ್ಲಿ 113ನೇ ಸ್ಥಾನದಲ್ಲಿರೋ ಭಾರತ, ಬ್ಲಾಕ್ ಮನಿ ವಿಷಯದಲ್ಲಿ 9ನೇ ಸ್ಥಾನದಲ್ಲಿದೆ ಅನ್ನೋದು ನಿಜಕ್ಕೂ ಆತಂಕಾರಿ ವಿಷ್ಯ. ಇದೇ ಕಾರಣಕ್ಕೆ, ಮೋದಿ ಕಪ್ಪು ಹಣದ ವಿರುದ್ಧ ಸಮರ ಸಾರಿದರು. 1000,500 ರೂಪಾಯಿ ನೋಟ್​ಗಳನ್ನ ಬ್ಯಾನ್​ ಮಾಡೋ ಮೂಲಕ, ಕಪ್ಪು ಹಣ ಕೂಡಿಟ್ಟ ಕುಬೇರರಿಗೆ ಶಾಕ್​ ಕೊಟ್ಟಿದ್ದಾರೆ.

ಕಪ್ಪುಹಣ ಒಂದು ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡುತ್ತೆ. ಅರ್ಥ ವ್ಯವಸ್ಥೆಯನ್ನೇ ತಲೆಕೆಳಗಾಗಿಸುತ್ತೆ. ಭಾರತ ಸ್ವತಂತ್ರಗೊಂಡು ಇಷ್ಟು ವರ್ಷವಾದ್ರೂ, ಬಡತನ, ನಿರುದ್ಯೋಗ ತಾಂಡವವಾಡ್ತಾ ಇದೆ. ಇದಕ್ಕೆ ಕಾರಣ ಇಷ್ಟೇ.ಸಂಪತ್ತು ಕೆಲವರ ಬಳಿ ಮಾತ್ರ ಕ್ರೋಢೀಕರಣವಾಗ್ತಿರೋದು. ಮತ್ತು ಇದಕ್ಕೆ ಕಾರಣ, ಬ್ಲಾಕ್​ ಮನಿ. ಆ ಬ್ಲಾಕ್​ ಮನಿಯ ಬೆನ್ನೆಲುಬನ್ನೇ ಮುರೀತಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಕೆಲ ದಿನಗಳಲ್ಲಿ ದೇಶದ ಚಿತ್ರಣ ಬದಲಾಗಲಿದೆ

ಭಾರತ ಬಡರಾಷ್ಟ್ರ. ಐಟಿಬಿಟಿ ಇದ್ರೂ, ತಂತ್ರಜ್ಞಾನದಲ್ಲಿ ಅತಿ ದೊಡ್ಡ ಸಾದನೆ ಮಾಡಿದ್ರೂ, ಮಂಗಳನ ಅಂಗಳಕ್ಕೆ ಹೋಗಿ ಬಂದಿದ್ರೂ, ಭಾರತದ ಬಡತನ ಮಾತ್ರ ದೂರ ಆಗಿಲ್ಲ.. ಹಸಿದ ಹೊಟ್ಟೆಗಳಿಗೆ ಸರಿಯಾಗಿ ಊಟಾನೂ ಸಿಗ್ತಾ ಇಲ್ಲ. ಆದ್ರೆ ಇನ್ನು ಸ್ವಲ್ಪ ದಿನ ಅಷ್ಟೇ.. ಇಡೀ ದೇಶದ ಚಿತ್ರಣವೇ ಬದಲಾಗಲಿದೆ. ಭಾರತವನ್ನ ಬದಲಾಯಿಸೋದಕ್ಕೆ ಎನೆಲ್ಲಾ ಕಠಿಣ ನಿಲುವುಗಳನ್ನ ತೆಗೆದುಕೊಳ್ಳಬೇಕೋ, ಆ ಎಲ್ಲಾ ನಿಲುವುಗಳನ್ನ ತೆಗೆದುಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.. ಇದರ ಮೊದಲ ಹೆಜ್ಜೇನೇ ನೋಟ್​ ಬ್ಯಾನ್​ ಅನ್ನೋ ಅಸ್ತ್ರ.

ಕಾಶ್ಮೀರದಲ್ಲಿ ಗಲಾಟೆ ಕಡಿಮೆಯಾಗಿತ್ತು

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಹುಚ್ಚಾಟ ಮಿತಿ ಮೀರಿತ್ತು. ದಿನದಿಂದ ದಿನಕ್ಕೆ ಕಿಡಿಗೇಡಿಗಳು ಕಿರಿಕ್ ಮಾಡ್ತಿದ್ರು. ಆದ್ರೀಗ ಉಗ್ರರ ಉಪಟಳಕ್ಕೆ ಬ್ರೇಕ್​ ಬಿದ್ದಿದೆ. ಉಗ್ರಕೃತ್ಯಗಳಿಗೆ ಸಪೋರ್ಟ್ ಮಾಡ್ತಿದ್ದವರು, ಈಗ ದುಡ್ಡಿದಲ್ಲದೇ ಸೈಲೆಂಟಾಗಿದ್ದಾರೆ. ಇದ್ರಿಂದಾಗಿ, ಜಮ್ಮು ಕಾಶ್ಮೀರದಲ್ಲಿ ಗಲಾಟೆ ಕಡಿಮೆಯಾಗಿದೆ. ಕಲ್ಲು ತೂರಾಟ ನಿಂತುಬಿಟ್ಟಿದೆ.ಇಷ್ಟೇ ಅಲ್ಲ, ದೇಶದೊಳಗೆ ಇದ್ದುಕೊಂಡು, ದೇಶದಕ್ಕೇ ಕಂಟಕವಾಗಿ ಕಾಡ್ತಿದ್ದ ನಕ್ಸಲರ ಅಟ್ಟಹಾಸಕ್ಕೂ ಬ್ರೇಕ್ ಬಿದ್ದಿದೆ. ನಕ್ಸಲರು ದುಡ್ಡಿಲ್ಲದೇ ಕಂಗಾಲಾಗಿದ್ದು, ಉಗ್ರ ಚಟುವಟಿಕೆಗಳು ಸ್ಥಗಿತವಾಗಿವೆ.

ಮೋದಿ ಬಿಟ್ಟ ಮೊದಲ ಬಾಣಕ್ಕೆ ಕಾಳಧನಿಕರು, ಉಗ್ರರು ಬೆಚ್ಚಿ ಬಿದ್ದಿದ್ದಾರೆ. ಆದ್ರೆ ಇಷ್ಟಕ್ಕೆ ಎಲ್ಲಾ ಮುಗೀತು ಅನ್ಕೋಬೇಡಿ. ಮೋದಿ ಡಿಸೆಂಬರ್​ ನಂತರ, ಇನ್ನಷ್ಟು ಕಠಿಣ ನಿಲುವುಗಳನ್ನ ಜಾರಿಗೊಳಿಸೋದಕ್ಕೆ ಆಲ್ರೆಡಿ ಪ್ಲಾನ್​ ರೂಪಿಸಿದ್ದಾರೆ. ಡಿಸೆಂಬರ್​ 30 ಆದ್ಮೇಲೆ, ಕಾಳಧನಿಕರಿಗೆ ಮತ್ತಷ್ಟು ಕಂಟಕ ಕಾದಿದೆ.

ಕಡಿಮೆಯಾಗುತ್ತೆ ತೆರಿಗೆ ದರಗಳು,ಸುಲಭವಾಗುತ್ತೆಜನರ ಬದುಕು

ಈಗ ಬ್ಯಾಂಕ್​ ಖಾತೆಗಳ ಮೇಲೆ ಕಣ್ಣಿಟ್ಟಿರೋ ಸರ್ಕಾರ, ತೆರಿಗೆ ವಂಚಿಸಿ ದುಡ್ಡು ಡಿಟ್ಟುಕೊಂಡಿದ್ದವರನ್ನ ವಾಚ್ ಮಾಡ್ತಿದೆ. ಡಿಸೆಂಬರ್​30 ರ ನಂತರ ಬೇನಾಮಿ ಆಸ್ತಿಗಳ ಮೇಲೆ ಕಣ್ಣಿಟ್ಟಿರೋ ಮೋದಿ, ಈ ಬಗ್ಗೆ ಮತ್ತಷ್ಟು ಕಠಿಣ ಕಾನೂನುಗಳನ್ನ ಜಾರಿಗೊಳಿಸೋ ಸಾಧ್ಯತೆ ಇದೆ. ಆ ಎಲ್ಲಾ ಕಠಿಣ ಕಾನೂನುಗಳು ಬಂದಿದ್ದೇ ಆದ್ರೆ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳೋದು ಗ್ಯಾರಂಟಿ.. ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಯಾಗೋದ್ರಿಂದ, ಎಲ್ಲಾ ತೆರಿಗೆಗಳನ್ನ ರದ್ದುಗೊಳಿಸಿ, ಕೇವಲ ಬ್ಯಾಂಕಿಂಗ್​ ಟ್ರಾನ್ಸಾಕ್ಷನ್​ ಮೇಲೆ 2 ರಷ್ಟು ತೆರಿಗೆ ವಿಧಿಸೋ ಸಾಧ್ಯತೆ ಇದೆ. ಹೀಗಾದಾಗ, ಜನರ ಬದುಕು ಅಕ್ಷರಶಃ ಸುಲಭವಾಗಲಿದೆ.

ವರದಿ : ಶೇಖರ್ ಪೂಜಾರ್, ಸುವರ್ಣ ನ್ಯೂಸ್

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023