ಪ್ರಪಂಚದ ಟಾಪ್ ಐದು ಜಲಂತರ್ಗಾಮಿಗಳು


ವಿವಿಧ ದೇಶಗಳ ನೌಕಾ ದಳದಲ್ಲಿ ಜಲಾಂತರ್ಗಾಮಿ ನೌಕೆಗಳು ಒಂದು ಪ್ರಮುಖ ಭಾಗವಾಗಿದೆ. ಪ್ರಪಂಚದ ಟಾಪ್ ಐದು ಜಲಾಂತರ್ಗಾಮಿ ವರ್ಗಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

Written By: 

ಜಲಾಂತರ್ಗಾಮಿ ನೌಕೆ ನೀರಿನಲ್ಲಿ ಮುಳುಗಿ ಪ್ರಯಾಣ ಮಾಡಲು ಬಳಸುವ ಒಂದು ವಾಹನ. ಮೊಟ್ಟ ಮೊದಲಿಗೆ ಇದನ್ನು ಪ್ರಥಮ ವಿಶ್ವ ಯುದ್ಧದ ಸಮಯದಲ್ಲಿ ಬಹಳವಾಗಿ ಉಪಯೋಗಿಸಲಾಯಿತು. ಭಾರತೀಯ ನೌಕಾ ಸೇನೆಯಲ್ಲಿ ಸಿಂಧುಘೋಷ್, ಸಿಂಧುರಕ್ಷಕ್ ಮೊದಲಾದ ಜಲಾಂತರ್ಗಾಮಿ ನೌಕೆಗಳಿವೆ.

  • ಟೈಫೂನ್ ವರ್ಗ, ರಷ್ಯಾ

    ಟೈಫೂನ್ ಕ್ಲಾಸ್ ಜಲಾಂತರ್ಗಾಮಿಯು 1980ರಲ್ಲಿ ಸೋವಿಯತ್ ನೌಕಾದಳ ನಿಯೋಜಿಸಿದ ಪರಮಾಣು-ಚಾಲಿತ ಕ್ಷಿಪಣಿ ಜಲಾಂತರ್ಗಾಮಿಯ ಒಂದು ವಿಧವಾಗಿದೆ. ಈ ಜಲಂತರ್ಗಾಮಿಯು ಸರಿ ಸುಮಾರು 48,000 ಸಾವಿರ ಟನ್ನಿನಷ್ಟು ಬಾರವನ್ನು ಹೊರುವಷ್ಟು ಶಕ್ತವಾಗಿದೆ.

  • ಈಗಲೂ ಸಹ ರಷ್ಯಾ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಜಲಾಂತರ್ಗಾಮಿಗಳು 2012ರಲ್ಲಿ ಪುನರ್ನಿರ್ಮಿಸಲು ಹೊರಟಿತ್ತಾದರೂ ಹೆಚ್ಚಿನ ಮಟ್ಟದ ಖರ್ಚು ತಗುಲುತ್ತದೆ ಎಂಬ ಕಾರಣಕ್ಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯಿತು. ಈ ಜಲಂತರ್ಗಾಮಿಯ ವರ್ಗದಲ್ಲಿ ಸಿಬ್ಬಂದಿ ಆರಾಮವಾಗಿ 120 ದಿನಗಳವರೆಗೆ ಯಾವುದೇ ತೊಂದರೆ ಇಲ್ಲದೆ ಬದುಕಬಹುದಾಗಿದೆ.

  • ಬೋರೆ ವರ್ಗ, ರಷ್ಯಾ

    ಬೋರೆ ವರ್ಗದಲ್ಲಿ, 24,000 ಸಾವಿರ ಟನ್ ಭಾರ ಹೊರಬಲ್ಲ ಜಲಂತರ್ಗಾಮಿಯಾಗಿದ್ದು, ವಿಶ್ವದ ಎರಡನೇ ಅತಿ ದೊಡ್ಡ ಸಬ್‌ಮೆರೀನ್ ಎನ್ನಿಸಿಕೊಂಡಿದೆ. ಮೊದಲ ಬೋರೆ ಜಲಾಂತರ್ಗಾಮಿ 'ಯೂರಿ ಡೊಳ್‌ಗೌರ್ಯ' ವನ್ನು ಜನವರಿ 2013ರಲ್ಲಿ ರಷ್ಯಾದ ನೌಕಾಪಡೆಯ ಪೆಸಿಫಿಕ್ ಸಾಗರಕ್ಕೆ ಸೇರಿಸಿತು.

  • ಸದ್ಯ ರಷ್ಯಾ ರಾಷ್ಟ್ರವು Vladimir Monomakh ಮತ್ತು Knyaz Vladimir ಎಂಬ ಹೆಸರಿನ ಬೋರೆ ಜಲಾಂತರ್ಗಾಮಿಗಳು ಪ್ರಸ್ತುತ ಅಭಿವೃದ್ಧಿ ಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆ ಮಾಡಲಿದೆ.

  • ಓಹಿಯೋ ವರ್ಗ, ಯುಎಸ್

    ವಿಶ್ವದಲ್ಲೇ ಮೂರನೇ ದೊಡ್ಡ ಜಲಂತರ್ಗಾಮಿ ವರ್ಗವಾಗಿರುವ ಓಹಿಯೋದಲ್ಲಿ 18 ಪರಮಾಣು ಚಾಲಿತ ಜಲಾಂತರ್ಗಾಮಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ಅಮೇರಿಕದಲ್ಲಿರುವ ಅತ್ಯಂತ ದೊಡ್ಡ ಜಲಂತರ್ಗಾಮಿಗಳು ಎಂಬ ಖ್ಯಾತಿ ಈ ವರ್ಗ ಪಡೆದುಕೊಂಡಿದೆ.

     

  • ಪ್ರತಿಯೊಂದು ಜಲಂತರ್ಗಾಮಿಯೂ 18,750 ಟನ್ ನಷ್ಟು ಸಾಮಾನು ಹೊರುವಷ್ಟು ಶಕ್ತವಾಗಿವೆ. ಓಹಿಯೋ ಕ್ಲಾಸ್ ಜಲಂತರ್ಗಾಮಿ ವರ್ಗ ನೀರಿನ ರಿಯಾಕ್ಟರ್ ಒಳಗೊಂಡಿದ್ದು, ಎರಡು ಗೇರ್ ಹೊಂದಿರುವ ಟರ್ಬೈನ್ ಒಳಗೊಂಡಿದೆ.

  • ಡೆಲ್ಟಾ ವರ್ಗ, ರಷ್ಯಾ

    ಸೇವಿರಾಡ್‌‍ವಿನ್ಸ್ಕ್ ನಿರ್ಮಿಸಿದ ಈ ಡೆಲ್ಟಾ ವರ್ಗವು ಪ್ರಪಂಚದ ನಾಲ್ಕನೇ ಅತಿ ದೊಡ್ಡ ಜಲಂತರ್ಗಾಮಿ ವರ್ಗ ಎಂಬ ಕೀತಿ ಪಡೆದುಕೊಂಡಿದೆ. ಈ ಡೆಲ್ಟಾ ವರ್ಗವು ಡೆಲ್ಟಾ I, II, III ಮತ್ತು IV ಉಪ ವರ್ಗಗಳನ್ನು ಪಡೆದುಕೊಂಡಿದೆ.

     

  • 1976ರಲ್ಲಿ ಮೊದಲ ಡೆಲ್ಟಾ ವರ್ಗ ಜಲಾಂತರ್ಗಾಮಿಯನ್ನು ಸೇವೆಗೆ ನಿಯೋಜಿಸಲಾಯಿತು. ಸದ್ಯ ಡೆಲ್ಟಾ ವರ್ಗದ III ಮತ್ತು IV ಜಲಾಂತರ್ಗಾಮಿಗಳು ಮಾತ್ರ ರಷ್ಯಾದ ನೌಕಾದಳದಲ್ಲಿ ಕಾರ್ಯಾಚರಣೆ ಮಾಡುತ್ತಿವೆ.

  • ವನ್‌ಗಾರ್ಡ್ ವರ್ಗ, ಯುಕೆ

    15,900 ಟನ್ ಭಾರ ಹೊತ್ತು ಸಾಗಬಲ್ಲ ವನ್‌ಗಾರ್ಡ್ ವರ್ಗದ ಜಲಂತರ್ಗಾಮಿಗಳು ವಿಶ್ವದ ಐದನೇ ಅತಿದೊಡ್ಡ ಜಲಾಂತರ್ಗಾಮಿ ವರ್ಗ ಎನ್ನಿಸಿಕೊಂಡಿದೆ. ಯುಕೆ ರಾಯಲ್ ನೌಕಾದಳಕ್ಕೆ ಶಕ್ತಿ ತುಂಬುವ ಕಾರ್ಯದಲ್ಲಿ ಗುರುತಿಸಿಕೊಂಡಿರುವ ವನ್‌ಗಾರ್ಡ್ ವರ್ಗವು ವನ್‌ಗಾರ್ಡ್, ವಿಕ್ಟೋರಿಯಸ್, ವಿಜಿಲೆಂಟ್ ಮತ್ತು ವೆಂಗೆಯನ್ಸ್ ಎಂಬ ಜಲಂತರ್ಗಾಮಿಗಳನ್ನು ಒಳಗೊಂಡಿದೆ.

     

  • 1993ರಲ್ಲಿ ಹೆಚ್ಎಂಎಸ್ ವನ್‌ಗಾರ್ಡ್ ಎಂಬ ಜಲಂತರ್ಗಾಮಿಯನ್ನು ಈ ವರ್ಗದ ಮೂಲಕ ಪರಿಚಯ ಮಾಡಲಾಯಿತು. ಈ ವರ್ಗದ ಎಲ್ಲ ಸಬ್‌ಮೆರೀನ್‌ಗಳೂ ಎಚ್ಎಂ ನೇವಲ್ ಬೇಸ್ ಕ್ಲ್ಯಾಡಿ ಹೊಂದಿದ್ದು, ಸ್ಕಾಟ್ಲೆಂಡ್‌ನ ಗ್ಲಾಸ್ಗೊ ಪ್ರದೇಶದ 40 ಕಿ.ಮೀ ಅಂತರದಲ್ಲಿ ಗಸ್ತು ತಿರುಗಲಿವೆ.


Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023