ಕನ್ನಡದ ಉರ್ವಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ :* ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ ‘ಉರ್ವಿ’ ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

By Suvarna Web Desk | 10:27 PM Thursday, 06 April 2017

ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣದ ಕುರಿತಾದ ಮತ್ತು ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ 'ಉರ್ವಿ' ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ನ್ಯೂಯಾರ್ಕ್ (ಏ.06): ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣದ ಕುರಿತಾದ ಮತ್ತು ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ 'ಉರ್ವಿ' ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಬುಧವಾರ ರಾತ್ರಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡೀ ಫಿಲಂ ಪ್ರಶಸ್ತಿ ಸಮಾರಂಭದಲ್ಲಿ ಉತ್ತಮ ಚಿತ್ರ ಎಂಬ ಖ್ಯಾತಿಯನ್ನು ಸ್ಯಾಂಡಲ್‌ವುಡ್‌ನ 'ಉರ್ವಿ' ಪಡೆದುಕೊಂಡಿದೆ. ಶೃತಿ ಹರಿಹರನ್, ಶ್ವೇತಾ ಪಂಡಿತ್ ಮತ್ತು 'ಯು ಟರ್ನ್' ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿದ್ದ ಶ್ರದ್ಧಾ ಶ್ರೀನಾಥ್ ಅಭಿನಯದ ಉರ್ವೀ ಚಿತ್ರ ಜನರ ಗಮನ ಸೆಳೆದಿತ್ತು. ಅಲ್ಲದೆ, ಹಲವು ಅಂತಾರಾಷ್ಟ್ರೀಯ ಫೆಸ್ಟಿವಲ್‌ಗಳ ಪ್ರಶಸ್ತಿಗಳಿಗಾಗಿನ ಪೈಪೋಟಿಯಲ್ಲಿ ಚಿತ್ರ ತೀವ್ರ ಸ್ಪರ್ಧೆಯೊಡ್ಡುತ್ತಿದೆ. 

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023