Soon book your LPG cylinder via WhatsApp

ಇನ್ಮುಂದೆ ವಾಟ್ಸಾಪ್ ಮೂಲಕ ಅಡುಗೆ ಅನಿಲ (ಎಲ್ಪಿಜಿ) ಬುಕ್ ಮಾಡಿ
ನವದೆಹಲಿ, ಜೂನ್ 07: ಗ್ರಾಹಕರು ಇನ್ಮುಂದೆ ವಾಟ್ಸಾಪ್ ಮೂಲಕ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಗಳನ್ನು ಕಾಯ್ದಿರಿಸಬಹುದಾಗಿದೆ. ಫೋನ್ ಕರೆ/ಎಸ್ಎಂಎಸ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಈಗಾಗಲೇ ದೇಶದ ಹಲವೆಡೆ ಜಾರಿಯಲ್ಲಿದೆ.
ಈ ಎರಡು ವ್ಯವಸ್ಥೆ ಮೂಲಕ ಉದ್ದನೆಯ ಸಾಲಿನಲ್ಲಿ ನಿಂತು ಅನಿಲ ಸಿಲಿಂಡರ್ ಕಾಯ್ದಿರಿಸುವ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
[ಸಬ್ಸಿಡಿ ಸಿಲಿಂಡರ್ ಬೆಲೆ ಏರಿಕೆ, ಸಬ್ಸಿಡಿ ರಹಿತ ಸಿಲಿಂಡರ್ ಇಳಿಕೆ]
ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ತೈಲ ಸಚಿವಾಲಯ ಹೊಸದೊಂದು ಉಪಾಯ ಮಾಡಿದ್ದು, ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಸರಳಗೊಳಿಸಲಾಗುತ್ತಿದೆ. ಮೋದಿ ಸರ್ಕಾರ ಈ ಯೋಜನೆ ಮೊದಲಿಗೆ ಉತ್ತರಪ್ರದೇಶದಲ್ಲಿ ಜಾರಿಗೆ ಬರಲಿದೆ. [ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?]
ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯಂತೆ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿ (ಇಂಡೇನ್, ಎಚ್ ಪಿ, ಭಾರತ್) ನೋಂದಣಿ ಮಾಡಿದ ದೂರವಾಣಿ ಸಂಖ್ಯೆ ಮೂಲಕ ಕರೆ ಮಾಡಿ ಅಥವಾ ಎಸ್ಎಂಎಸ್ ಮೂಲಕ (REFILL ಎಂದು ಟೈಪಿಸಿ ನೋಂದಾಯಿತ ಸಂಖ್ಯೆಗೆ ಕಳಿಸಬಹುದು) ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು.
ಜತೆಗೆ ಬುಕ್ಕಿಂಗ್ ಬಗ್ಗೆ ದೂರು, ಸಿಲಿಂಡರ್ ಲಭ್ಯತೆ ಮುಂತಾದ ವಿವರಗಳನ್ನು ಪಡೆಯಬಹುದಾಗಿದೆ. ಇದೆಲ್ಲ ಸೌಲಭ್ಯಗಳನ್ನು ಒಳಗೊಂಡ ಹೊಸ ವ್ಯವಸ್ಥೆಯಲ್ಲಿ ವಾಟ್ಸಾಪ್ ಮೂಲಕ ಇನ್ನಷ್ಟು ಸುಲಭವಾಗಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಸಾಧ್ಯವಾಗಲಿದೆ.

Soon, you can start booking your LPG cylinder on WhatsApp. The Narendra Modi government which had made gas booking easy has now decided to make the process easier.
Although it is yet to be implemented, reports suggest that the scheme would begin in a few districts of Uttar Pradesh soon.Sources in the Ministry for Petroleum and Natural Gas indicate that work on this is on.
They are in touch with the various gas agencies across the country to get the scheme implemented. LPG can already be booked via phone and SMS. Introducing WhatsApp booking will make the process easier.
So far the response has been positive. The scheme which will first be introduced in Uttar Pradesh will spread across to other parts of the country soon, sources also indicated.
OneIndia News

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023