Posts

KEY ANSWERS OF GAZETTED PROBATIONS' 2014 (Exam held on 19/4/2015)PRELIMS GENERAL STUDIES PAPER-I

Image
SmB

Pulitzer Award to Palani Kumanan (T.N)

ಕೊಯಮತ್ತೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ 'ಪುಲಿಟ್ಜರ್‌' Thu, 04/23/2015 - 01:00 ನ್ಯೂಯಾರ್ಕ್‌ (ಐಎಎನ್ಎಸ್):   ವರದಿ­ಗಾರಿಕೆ ಹಾಗೂ ಅದನ್ನು ಪ್ರಸ್ತುತ­­ಪಡಿಸಲು ಮಾಹಿತಿ ತಂತ್ರ­ಜ್ಞಾನದ ಬಳಕೆಯ ಹೆಚ್ಚಳದ ಬಗ್ಗೆ ತನಿಖಾ ವರದಿ  ಮಾಡಿರುವ ತಮಿಳು­­ನಾಡು ರಾಜ್ಯದ ಕೊಯಮ­ತ್ತೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಪಳನಿ ಕುಮಾನನ್‌ ಅವರಿಗೆ 'ದಿ ವಾಲ್‌ ಸ್ಟ್ರೀಟ್‌ ಜರ್ನಲ್‌'ನ ಪ್ರತಿಷ್ಠಿತ 'ಪುಲಿಟ್ಜರ್‌' ಪ್ರಶಸ್ತಿ ಸಂದಿದೆ. ಸಾಫ್ಟ್‌ವೇರ್‌ ವಾಸ್ತುಶಾಸ್ತ್ರ ಮತ್ತು ತಾಂತ್ರಿಕ ಮುಖ್ಯಸ್ಥರಾಗಿರುವ ಕುಮಾನನ್‌,  'ಡೋವ್‌ ಜೋನ್ಸ್‌' ಜರ್ನಲ್‌ನ ಪ್ರಶಸ್ತಿ ಪುರಸ್ಕೃತ ವರದಿ 'ಮೆಡಿಕೇರ್‌ ಅನ್‌ಮಾಸ್ಕ್‌ಡ್‌'ಗೆ ಗ್ರಾಫಿಕ್ಸ್‌ ತಂಡದ ಸದಸ್ಯರಾಗಿ ದುಡಿದಿದ್ದರು ಎಂದು ಜರ್ನಲ್‌ನ ತನಿಖಾ ಸಂಪಾದಕ ಮಿಖಾಯಿಲ್‌ ಸಿಕೋನೊಲ್ಫಿ  ಹೇಳಿದ್ದಾರೆ. ಕೊಯಮತ್ತೂರಿನ ಪಿಎಸ್ಜಿ ತಾಂತ್ರಿಕ ಕಾಲೇಜಿನಲ್ಲಿ ಕುಮಾನನ್‌ ಪದವಿ ಪಡೆದಿದ್ದಾರೆ. ವೈದ್ಯರು, ಆಸ್ಪತ್ರೆಗಳು ಸೇರಿದಂತೆ ಸುಮಾರು 8.80 ಲಕ್ಷ ವೈದ್ಯಕೀಯ ಸೇವಾದಾರರ ಮೇಲೆ ಸರ್ಕಾರಿ ಪಾವತಿ ವಿಶ್ಲೇಷಣೆಗೆ ಬಳಸುವ ಆರೋಗ್ಯ ಸುರಕ್ಷಾ ಬಿಲ್ಲಿಂಗ್‌ನಲ್ಲಿ ಸಂವಹನ ದತ್ತಾಂಶವನ್ನು ಕುಮಾನನ್ ತಂಡ ಅಭಿವೃದ್ಧಿಪಡಿಸಿದೆ.

KEA's CET 2015 POSTPHONED to MAY 12 & 13

ಸಿ ಇಟಿ ಮುಂದೂಡಿಕೆ: ಮೇ 12, 13ಕ್ಕೆ ಪರೀಕ್ಷೆ ಗುರುವಾರ - ಏಪ್ರಿಲ್ -23-2015 ಬೆಂಗಳೂರು, ಎ.22: ವಿವಿಧ ಕಾರ್ಮಿಕ ಸಂಘಟನೆಗಳು ದಿನಾಂಕ 30.04.2015ರಂದು ಒಂದು ದಿನದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ-2015 ಪ್ರವೇಶ ಪರೀಕ್ಷೆಯನ್ನು ಮುಂದೂಡಿದೆ. ಆದ್ದರಿಂದ, ಎಪ್ರಿಲ್ 29, 30 ಹಾಗೂ ಮೇ 1ರಂದು ನಡೆಯಬೇಕಾಗಿದ್ದ ಸಿಇಟಿ ಪರೀಕ್ಷೆಗಳನ್ನು ಮೇ 12 ಮತ್ತು 13ಕ್ಕೆ ಮುಂದೂಡಲಾಗಿದೆ.  ಪರೀಕ್ಷಾ ವೇಳಾಪಟ್ಟಿಯ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್: ಠಿಠಿ://ಛಿ.ಚ್ಟ.್ಞಜ್ಚಿ.ಜ್ಞಿಗೆ ಭೇಟಿ ನೀಡಿ. ಟ್ರೇಡ್ ಯೂನಿಯನ್ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿನ ಕಾರ್ಮಿಕ ಸಂಘಗಳ ಒಕ್ಕೂಟ ಮತ್ತು ಸೆಂಟ್ರಲ್ ಟ್ರೇಡ್ ಯೂನಿಯನ್ನುಗಳು ಎ.30ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಡಚಣೆಯಾಗುವ ಸಂಭವವಿರುವ ಕಾರಣ ಸರಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಆದೇಶ ನೀಡಿದ ಹಿನ್ನೆಲೆಯಲ್ಲಿ ಸಿಇಟಿ-2015 ಪ್ರವೇಶ ಪರೀಕ್ಷೆಯನ್ನು ಮುಂದೂಡಿದೆ.

All India Radio goes online...

Image
ಆನ್ ಲೈನ್ ನಲ್ಲಿ "ಆಲ್ ಇಂಡಿಯಾ ರೆಡಿಯೋ' Published: 22 Apr 2015 04:45 PM IST ಸಾಂದರ್ಭಿಕ ಚಿತ್ರ ನವದೆಹಲಿ:  ಆಲ್ ಇಂಡಿಯಾ ರೇಡಿಯೋ ಅಂತರ್ಜಾಲ ಕ್ಷೇತ್ರಕ್ಕೆ ಕಾಲಿರಿಸಿದೆ, ಈಗ 4 ಪ್ರಾದೇಶಿಕ ಚಾನಲ್‌ಗಳನ್ನು ವೆಬ್‌ಸೈಟ್ ಮೂಲಕ ಪ್ರಸಾರ ಮಾಡುವ ಹೊಸ ಪ್ರಯತ್ನಕ್ಕೆ ಆಲ್ ಇಂಡಿಯಾ ರೇಡಿಯೋ ಮುಂದಾಗಿದೆ. ಈಗಾಗಲೇ ಆಲ್ ಇಂಡಿಯಾ ರೇಡಿಯೋದ ವೆಬ್‌ಸೈಟ್‌ನಲ್ಲಿ ‌ದೆಹಲಿಯ ಎಫ್ ಎಂ ಗೋಲ್ಡ್, ಎಫ್ ಎಂ ರೈಂಬೋ ಮತ್ತು ಎಫ್ ಎಂ ಉರ್ದು ಚಾನಲ್‌ಗಳು ಹಾಗೂ ಮುಂಬೈನ ವಿವಿಧ ಭಾರತಿ ಚಾನೆಲ್‌ನಲ್ಲಿ ಲಭ್ಯವಿದೆ. ಕೇಳುಗರು ವೆಬ್‌ಸೈಟ್‌ನಲ್ಲಿ ಚಾನಲ್ ಕೇಳಬಹುದಾಗಿದೆ. ಆಲ್ ಇಂಡಿಯಾ ರೇಡಿಯೋ ಮತ್ತಷ್ಟು ಚಾನಲ್‌ಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದ್ದು, ಪ್ರಾರಂಭಿಕ ಹಂತದಲ್ಲಿ ಗುಜರಾತಿ, ಮರಾಠಿ, ಪಂಜಾಬಿ ಮತ್ತು ಮಲಯಾಳಿ ಪ್ರಾದೇಶಿಕ ಚಾನಲ್‌ಗಳನ್ನು ಅಂತರ್ಜಲಕ್ಕೆ ಸೇರ್ಪಡೆ ಮಾಡಿದೆ. ಕೇಳುಗರು www.allindiaradio.gov.in ನಲ್ಲಿ ರೇಡಿಯೋ ಕೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾದೇಶಿಕ ಚಾನಲ್‌‌ಗಳನ್ನೂ ಅಂತರ್ಜಾಲಕ್ಕೆ ಸೇರ್ಪಡೆ ಮಾಡುತ್ತಿದೆ. ಇದರಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿ ಪ್ರಾದೇಶಿಕ ಚಾನಲ್‌ಗಳನ್ನು ಕೇಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

"KALASHREE AWARD" to JAYAPRADA

Image
ಜಯಪ್ರದಾಗೆ ಕಲಾಶ್ರೀ ಪ್ರಶಸ್ತಿ ಗೌರವ Published: 22 Apr 2015 01:17 PM IST | Updated: 22 Apr 2015 06:39 PM IST ಜಯಪ್ರದಾ ಮುಂಬೈ : ನಟನೆ ಹಿಂದಕ್ಕೆ ಸರಿಸಿ ರಾಜಕಾರಿಣಿಯಾದ ಜಯಪ್ರದಾ ಅವರು ಕಲೆ ಮತ್ತು ಮನರಂಜನಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರ ಫೌಂಡೇಶನ್ ಮಂಗಳವಾರ ಕಲಾಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ. ಈ ಗೌರವದಿಂದ ಸಂತಸಗೊಂಡಿರುವ ೫೩ ವರ್ಷದ ಜಯಪ್ರದ "ಇಂತಹ ಪ್ರತಿಷ್ಟಿತ ಗೌರವನ್ನು ಅತಿ ವಿನಯದಿಂದ ಸ್ವೀಕರಿಸುತ್ತೇನೆ. ಅದಕ್ಕಾಗಿ ಫೌಂಡೇಶನ್ ಮತ್ತು ನನ್ನ ಹಿತೈಶಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮನರಂಜನಾ ಕ್ಷೇತ್ರಕ್ಕೆ ಹೀಗೆಯೇ ನನ್ನ ಸೇವೆಯನ್ನು ಮುಂದುವರೆಸುತ್ತೇನೆ" ಎಂದು ಜಯಪ್ರದಾ ತಿಳಿಸಿದ್ದಾರೆ. ಜಯಪ್ರದಾ ತನ್ನ ಸರಳ ನೋಟ ಮತ್ತು ಸಮರ್ಥ ನಟನೆಯಿಂದ ಸಿನೆಮಾರಂಗದಲ್ಲಿ ಹಲವು ವರ್ಷಗಳ ಮಿಂಚಿದ್ದರು. 'ತ್ಹೊಫಾ', 'ಔಲಾದ್', 'ಸರ್ಗಮ್' ಮತ್ತು 'ಶರಾಭಿ' ಜಯಪ್ರದಾ ಅವರಿಗೆ ಮನ್ನಣೆ ತಂದುಕೊಟ್ಟ ಹಿಂದಿ ಚಿತ್ರಗಳು. ೨೦೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಈ ನಟಿ ಹಿಂದಿ ಅಲ್ಲದೆ, ತಮಿಳು, ಮಲಯಾಳಮ್, ತೆಲುಗು, ಕನ್ನಡ ಸಿನೆಮಾಗಳಲ್ಲು ನಟಿಸಿದ್ದಾರೆ. ಧೀಮಂತ ನಟರಾದ ಕಮಲ ಹಾಸ್ಸನ್, ರಜನಿಕಾಂತ್, ಅಮಿತಾಬ್ ಬಚ್ಚನ್ ಮತ್ತು ಜಿತೇಂದ್ರ ಜೊತೆಗಿದ್ದ ಸಿನೆಮಾ ಕೆಮಿಸ್ಟ್ರಿಗೆ ಜಯಪ್ರ

👆BRP ಮತ್ತು CRP ಗಳ ಪರೀಕ್ಷೆ ದಿನಾಂಕ ಮುಂದೂಡಿದ ತಿದ್ದುಪಡಿ ಆದೇಶ. (26/04/15ರ ಬದಲು03/05/15)

Image
👆BRP ಮತ್ತು CRP ಗಳ ಪರೀಕ್ಷೆ ದಿನಾಂಕ ಮುಂದೂಡಿದ ತಿದ್ದುಪಡಿ ಆದೇಶ. (26/04/15ರ ಬದಲು03/05/15)

KPTCL Recruitment 2015 - Apply Online for 912 AE, JE & Accounts Officer Posts :

Image

TRANSFER GUIDELINES 2015-16 PUBLISHED (udayavani paper)

Image
​ಇಂದಿನಿಂದ ಸರ್ಕಾರಿ ನೌಕರರ ವರ್ಗಾವಣೆ ಭರಾಟೆ: ಮಾರ್ಗಸೂಚಿ ಪ್ರಕಟ ಉದಯವಾಣಿ, Apr 22, 2015, 3:40 AM IST ಬೆಂಗಳೂರು:  ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಸೋಮವಾರ ಪ್ರಕಟವಾಗಿದ್ದು, ಮೇ 2ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಬುಧವಾರದಿಂದ ವರ್ಗಾವಣೆ ಭರಾಟೆ ಆರಂಭವಾಗಲಿದೆ. ಪೊಲೀಸ್‌, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಹೊರತುಪಡಿಸಿ ಇತರೆಲ್ಲಾ ಇಲಾಖೆಗಳ ಸರ್ಕಾರಿ ನೌಕರರ ವರ್ಗಾವಣೆ ಈ ಮಾರ್ಗಸೂಚಿಯಂತೆ ನಡೆಯಲಿದೆ. 2013 ಮತ್ತು 2014ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಯನ್ವಯ ಸರ್ಕಾರಿ ನೌಕರರ ವರ್ಗಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ. ವರ್ಗಾವಣೆಯಾಗುವ ನೌಕರರು ಒಂದು ಹುದ್ದೆಯಲ್ಲಿ ಇರಬೇಕಾದ ಕನಿಷ್ಠ ಸೇವಾವಧಿಯನ್ನು 2014ರ ಮಾರ್ಗಸೂಚಿಯನ್ವಯವೇ ನಿಗದಿಪಡಿಸಲಾಗಿದೆ. ಆದರೆ, ಈ ಬಾರಿಯೂ ಎಷ್ಟು ಪ್ರಮಾಣದಲ್ಲಿ ನೌಕರರ ವರ್ಗಾವಣೆ ಮಾಡಬೇಕು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಿಲ್ಲ. ಹೋದ ವರ್ಷದ ಮಾನದಂಡ: ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿಯವರು ಸೋಮವಾರ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಿದ್ದು, 2013 ಮತ್ತು 2014ರಲ್ಲಿ ವರ್ಗಾವಣೆ ಮಾರ್ಗಸೂಚಿಯಲ್ಲಿರುವ ಷರತ್ತುಗಳನ್ವಯ ಸರ್ಕಾರಿ ನೌಕರರ ವರ್ಗಾವಣೆಯನ್ನು ಮೇ 2ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ

NATIONAL AWARD TO SHEEGEEHALLI GRAM PANCHAYAT

Image
ಶೀಗೇಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರ ಪ್ರಶಸ್ತಿ ಮಹದೇವಪುರ, ಏ.21- ಕ್ಷೇತ್ರದ ಶೀಗೇಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸರ್ಕಾರ ವಿತರಿಸುವ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರಕ್ಕೆ ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾಗುವ ಮೂಲಕ ಇತರೆ ಗ್ರಾಪಂಗಳಿಗೆ ಮಾದರಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ಶೀಗೇಹಳ್ಳಿ ಗ್ರಾಮ ಪಂಚಾಯಿತಿ ಇತರೆ ಪಂಚಾಯಿತಿಗಳಿಗೆ ಮಾದರಿ ಯನ್ನಾಗಿ ಮಾಡಿದ್ದಾರೆ ಇಲ್ಲಿನ ಗ್ರಾಪಂ ಅಧ್ಯಕ್ಷ ವೆಂಕಟೇಶ್(ಮಧು).  ನೈರ್ಮಲ್ಯ, ಮಹಿಳಾ ಸಬಲೀ ಕರಣ ಸೇರಿದಂತೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಉತ್ತಮ ಕೆಲಸಗಳನ್ನು ಗುರುತಿಸಿ ಇತ್ತೀಚೆಗೆ ಕೇಂದ್ರದ ತಂಡ ಶೀಗೇಹಳ್ಳಿ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ 24ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಪಂಚಾಯ್ತಿ ಅಧ್ಯಕ್ಷ ವೆಂಕಟೇಶ್ ಮತ್ತು ಪಿಡಿಒ ಅಂಬರೀಶ್ ಅವರು  ಪುರಸ್ಕಾರ ಸ್ವೀಕರಿಸಲಿದ್ದಾರೆ. ಅಂತರ್ಜಲ ಕಾಪಾಡಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪಕ್ಕದ ಹೊಸಕೋಟೆ ಕೆರೆಗೆ ಹಾದುಹೋಗುವ ನೀರನ್ನು ಇಲ್ಲಿ ಶೇಖರಿಸಿರುವುದರಿಂದ ಅಂತರ್ಜಲ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಿದೆ.   ಗ್ರಾಪಂ ವ್ಯಾಪ್ತಿಯ ದೊಮ್ಮಸಂದ್ರದಲ್ಲಿ 100 ಮನೆಗಳಿದ್ದು, 50ಕ್ಕೂ ಹೆಚ್ಚು ಮನೆಗಳಿಗೆ ಕೇಂದ್ರ ಸರ್ಕಾರದ ಶೇ.22 ರಷ್ಟು ಯೋಜನೆಯಲ್

New Record of JAPAN BULLET TRAIN:-

Image
ಹೊಸ ದಾಖಲೆ ಬರೆದ ಜಪಾನ್ 'ಬುಲೆಟ್ ಟ್ರೈನ್' ಟೋಕಿಯೊ: ವಿಶ್ವದ ಅತ್ಯಂತ ವೇಗದ ಬುಲೆಟ್ ರೈಲನ್ನು ಇಂದು ಜಪಾನ್​ನಲ್ಲಿ ಮಂಗಳವಾರ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೈಲು 600 ಕಿ.ಮೀ. (373 ಮೈಲು) ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿ ದಾಖಲೆ ನಿರ್ಮಿಸಿದೆ. ಮ್ಯಾಗ್ಲೆವ್ ರೈಲು (ಅಯಸ್ಕಾಂತ ಬಲದಿಂದ ಸಂಚರಿಸುವ ರೈಲು) ಪರೀಕ್ಷಾರ್ಥ ಸಂಚಾರದಲ್ಲಿ ಗರಿಷ್ಠ 603 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿತ್ತು ಮತ್ತು ಸುಮಾರು 11 ಸೆಕೆಂಡುಗಳ ಕಾಲ 600 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಮೂಲಕ ನೂತನ ದಾಖಲೆ ಬರೆದಿದೆ ಎಂದು ಜಪಾನ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೈಲು ಒಂದು ವಾರದ ಹಿಂದೆ 590 ಕಿ.ಮೀ. ವೇಗದಲ್ಲಿ ಸಂಚರಿಸಿತ್ತು, ಈ ಮೂಲಕ 2003ರಲ್ಲಿ ನಿರ್ಮಿಸಿದ್ದ 581 ಕಿ.ಮೀ. ವೇಗದ ದಾಖಲೆಯನ್ನು ಅಳಿಸಿಹಾಕಿತ್ತು. ಮ್ಯಾಗ್ಲೆವ್ ರೈಲು ಹಳಿಯಿಂದ ಸುಮಾರು 4 ಇಂಚು ಎತ್ತರದಲ್ಲಿ ತೇಲುತ್ತಾ ಸಂಚರಿಸುತ್ತದೆ. ರೈಲಿಗೆ ವಿದ್ಯುತ್​ಚ್ಛಕ್ತಿ ಆಧರಿತ ಅಯಸ್ಕಾಂತಗಳು ಚಲನ ಶಕ್ತಿ ನೀಡುತ್ತವೆ. ಕಂಪನಿಯು 2027ರ ವೇಳೆಗೆ ಟೋಕಿಯೋ ಮತ್ತು ನಗೋಯ ನಗರಗಳ ನಡುವಿನ 286 ಕಿ.ಮೀ. ದೂರದ ಹಳಿ ನಿರ್ಮಿಸಿ ರೈಲು ಸಂಚಾರ ಆರಂಭಿಸುವ ಯೋಜನೆ ಹೊಂದಿದೆ. ಜತೆಗೆ ತಂತ್ರಜ್ಞಾನವನ್ನು ಹೊರದೇಶಗಳಿಗೆ ಮಾರಾಟ ಮಾಡಲೂ ಸಹ ಕಂಪನಿ ಚಿಂತಿಸುತ್ತಿದೆ.

2015-16ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಯ ಮಾರ್ಗಸೂಚಿಯ ಆದೇಶ.

Image
2015-16ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಯ ಮಾರ್ಗಸೂಚಿಯ ಆದೇಶ.

SRI BASAVESHWAR:

★~~~ ಬಸವೇಶ್ವರ ~~~★         ಶ್ರೀ ಬಸವೇಶ್ವರ ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು. ಬಸವಣ್ಣನವರು೧೧೩೧ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಾಗೇವಾಡಿ ಗ್ರಾಮದಲ್ಲಿ, ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು.ಬಸವಣ್ಣನವರ ಹುಟ್ಟು ಹಾಗೂ ಬಾಲ್ಯದ ಕುರಿತು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆರಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದ ಅವರು ವಿದ್ಯಾಭ್ಯಾಸಕ್ಕಾಗಿ ಕೂಡಲ ಸಂಗಮಕ್ಕೆ ಬಂದರು.ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು.ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವಲ್ಲಿದ್ದಾನೆ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನೆಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು,ಪ್ರಾಣಿಬಲಿ ನೀಡುವುದು,ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮ

No P.E.Teachers in 47,000 Govt Primary Schools in Karnataka.

Image
 47 ಸಾವಿರ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ..! - ಎ. ಅಪ್ಪಾಜಿಗೌಡ ಮುಳಬಾಗಿಲು: ವಿದ್ಯಾರ್ಥಿಗಳ ಶಾರೀರಿಕ, ಬೌದ್ಧಿಕ, ಸಾಮಾಜಿಕ, ನೈತಿಕ ವಿಕಸನ ಹಾಗೂ ಸರ್ವತೋಮá-ಖ ಅಭಿವೃದ್ಧಿಹಿನ್ನೆಲೆಯಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ರಾಜ್ಯಾದ್ಯಂತ ದೈಹಿಕ ಶಿಕ್ಷಣಪಠ್ಯಪುಸ್ತಕಗಳನ್ನು ಪೂರೈಸಿರುವ ಸರ್ಕಾರ, ಸುಮಾರು 47 ಸಾವಿರ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲು ಮೀನಮೇಷ ಎಣಿಸುತ್ತಿದೆ. ರಾಜ್ಯ ಹಾಗೂ ರಾಷ್ಟ್ರೀಯ ಪಠ್ಯ ಚೌಕಟ್ಟಿನಲ್ಲಿ ದೈಹಿಕ ಶಿಕ್ಷಣ ಜಾರಿಗೆ ಸಂಬಂಧ ಹಲವು ಸಮಿತಿಗಳು ವರದಿ ಸಲ್ಲಿಸಿದ್ದವು. 2001-02ರಲ್ಲಿ ಕೆ.ಪಿ.ಸಿಂಗ್ ದೇವ್ ಸಮಿತಿ ಹೊಸ ರಾಷ್ಟ್ರೀಯ ನೀತಿ ಅನುಷ್ಠಾನಕ್ಕೆ ಶಿಫಾರಸು ಮಾಡಿತ್ತು. 2003-04ರಲ್ಲಿ ದೈಹಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ವಿಷಯವನ್ನಾಗಿ ಪರಿಗಣಿಸಲಾಗಿತ್ತು. 2004-05ರಲ್ಲಿ ರಾಜ್ಯ ಸರ್ಕಾರ ತ್ರೖೆಮಾಸಿಕ ಶಿಕ್ಷಣ ಪದ್ಧತಿ ಜಾರಿಗೆ ತಂದು ದೈಹಿಕ ಶಿಕ್ಷಣವನ್ನು ಸಹಪಠ್ಯದಲ್ಲಿ ಸೇರಿಸಿ ಜೀವನ ವಿಜ್ಞಾನದ ಒಂದು ಅವಿಭಾಜ್ಯ ಅಂಗವಾಗಿ ಪರಿಗಣಿಸಿ ಯೋಗ ಶಿಕ್ಷಣಕ್ಕೆ ಮಹತ್ವ ನೀಡಿತ್ತು. 2005ರಲ್ಲಿ ರಾಷ್ಟ್ರೀಯ ಪಠ್ಯ ಚೌಕಟ್ಟು ಹಾಗೂ ಪ್ರೊ.ಎಲ್.ಆರ್.ವೈದ್ಯನಾಥನ್ ವರದಿ ಆಧರಿಸಿ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ರಚಿಸಿರುವ ಪಠ್ಯಪುಸ್

Dr. Nasim took charge as 20th chief election commissioner ..

Image
ಮುಖ್ಯ ಚುನಾವಣಾ ಆಯುಕ್ತರಾಗಿ ಡಾ.ನಸೀಮ್ ಅಧಿಕಾರ ಸ್ವೀಕಾರ ನವದೆಹಲಿ, ಏ.19- ದೇಶದ 20ನೆ ಮುಖ್ಯ ಚುನಾವಣಾಧಿಕಾರಿಯಾಗಿ (ಸಿಇಸಿ) ಡಾ.ನಸೀಮ್ ಝೈದಿ ಅವರು ಇಂದು ಅಧಿಕಾರ ವಹಿಸಿಕೊಂಡರು. ನಿನ್ನೆ ನಿವೃತ್ತರಾದ ಹರಿಶಂಕರ್ ಬ್ರಹ್ಮ ಅವರ ಸ್ಥಾನಕ್ಕೆ ನಸೀಮ್ ಝೈದಿ ನಿಯೋಜಿತರಾಗಿದ್ದರು. 2017ರ ಜುಲೈಗೆ ನಜೀಮ್ ತಮ್ಮ 65ನೆ ವಯಸ್ಸಿಗೆ ನಿವೃತ್ತರಾಗುವರು. ಚುನಾವಣಾ ಆಯೋಗಕ್ಕೆ ಇನ್ನಿಬ್ಬರು ಆಯುಕ್ತರ ನೇಮಕವಾಗುವವರೆಗೆ ನಜೀಮ್ ಒಬ್ಬರೇ ಕಾರ್ಯನಿರ್ವಹಿಸುವರು. ಸಾಮಾನ್ಯವಾಗಿ ಚುನಾವಣಾ ಆಯೋಗದ ಆಯುಕ್ತರ ಅವಧಿ ಆರು ವರ್ಷವಾಗಿರುತ್ತದೆ. ಆದರೆ, ಆಯುಕ್ತರಿಗೆ 65 ವಷರ ತುಂಬಿದರೆ ಅವರು ನಿವೃತ್ತರಾಗುತ್ತಾರೆ. 1976ನೆ ಉತ್ತರ ಪ್ರದೇಶ ಕೇದರ್ನ ಐಎಎಸ್ ಅಧಿಕಾರಿ ನಸೀಮ್. ನಾಗರಿಕ ವಿಮಾನಯಾನ ಖಾತೆಯ ಕಾರ್ಯದರ್ಶಿಯಾಗಿದ್ದ ನಸೀಮ್ 2012ರ ಜು.31ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು.

👆ಜಾತಿಗಣತಿ ಮಾಡುತ್ತಿರುವ ಶಿಕ್ಷಕರಿಗೆ ಇನ್ನೂ ಹೆಚ್ಚಿನ ಮಾಹಿತಿಯ ಅಂಶಗಳು.

Image
👆ಗಣತಿ ಮಾಡುತ್ತಿರುವ ಶಿಕ್ಷಕರಿಗೆ ಇನ್ನೂ ಹೆಚ್ಚಿನ ಮಾಹಿತಿಯ ಅಂಶಗಳು.

Growing trees very fast technology succeeded :

Image
ವೇಗವಾಗಿ ಮರ ಬೆಳೆಸುವ ಸಂಶೋಧನೆ ಯಶಸ್ವಿ ಲಂಡನ್: ಮರಗಿಡಗಳು ವೇಗವಾಗಿ ಮತ್ತು ದೊಡ್ಡದಾಗಿ ಬೆಳೆಯಲು ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಲಂಡನ್​ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಪಾಪ್ಲರ್ ಎಂಬ ಜಾತಿಯ ಮರಗಳ 2 ಜೀನ್​ಗಳಲ್ಲಿ ಸ್ವಲ್ಪ ಬದಲಾವಣೆ ಮಾಡುವ ಮೂಲಕ, ಮರಗಳು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ, ದೊಡ್ಡದಾಗಿ ಬೆಳೆಯುತ್ತವೆ ಎಂಬುದನ್ನು ಕಂಡು ಕೊಂಡಿದ್ದಾರೆ. ಸಂಶೋಧಕರು ಗಿಡಗಳು ಬೆಳೆಯಲು ಸಹಕರಿಸುವ ಜೀನಗಳನ್ನು ಪತ್ತೆ ಹಚ್ಚಿ, ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದಾರೆ. ಅದರಿಂದಾಗಿ ಗಿಡಗಳು ಹೆಚ್ಚು ವೇಗವಾಗಿ ಬೆಳೆಯುತ್ತವೆ. ಪ್ರಾಯೋಗಿಕವಾಗಿ ಈ ವಿಧಾನವು ಯಶಸ್ವಿಯಾಗಿದ್ದು ಹೊರಗಿನ ವಾತಾವರಣದಲ್ಲಿ ಇದನ್ನು ಪರೀಕ್ಷಿಸಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ದಿನೇ ದಿನೇ ಭೂಮಿಯ ತಾಪಮಾನ ಏರುತ್ತಿದೆ ಮತ್ತು ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ ಹೆಚ್ಚು ವೇಗವಾಗಿ ಮತ್ತು ದೊಡ್ಡದಾಗಿ ಮರಗಳನ್ನು ಬೆಳೆಸುವಂತಾದರೆ ವಾತಾವರಣದ ಸಮತೋಲನ ಕಾಪಾಡಲು ಅನುಕೂಲವಾಗುತ್ತದೆ. ಜತೆಗೆ ಇಂಧನ ಮೂಲವಾಗಿ ಈ ಮರಗಳನ್ನು ಬಳಕೆ ಮಾಡಬಹುದು ಎಂದು ಸಂಶೋಧಕರು ತಿಳಿಸುತ್ತಾರೆ.

FREEGKSMS ನ ರಸಪ್ರಶ್ನೆಗಳು. 19-04-2015

FREEGKSMS ನ  ರಸಪ್ರಶ್ನೆಗಳು. 19-04-2015 1.ಯಾವ ನೃತ್ಯಪ್ರಕಾರದಲ್ಲಿ ಕೇದಿಯಾವನ್ನು ಉಡುಗೆಯಾಗಿ ಬಳಸಲಾಗುತ್ತದೆ. ○ರಾಸ್● ○ತುಲ್ಲಾಲ್ ○ಪೆರಿನಿ ○ಬಿಹು 2 ಗರ್ವಾಲ್ ಮತ್ತು ಕುಮಾವೊನ್ಗಳು ಯಾವ ರಾಜ್ಯದ ಭಾಗಗಳು? ○ಹಿಮಾಚಲ ಪ್ರದೇಶ ○ಛತ್ತೀಸ್ಗಡ ○ಮಧ್ಯಪ್ರದೇಶ ○ಉತ್ತರಾಂಚಲ● 3 ನೂರ್ ಜಹಾನ್ನ ಸಹೋದರ ಅಸಫ್ ಖಾನ್ನ ಅಳಿಯ ಯಾರು? ○ಜಹಾಂಗೀರ್ ○ಅಕ್ಬರ್ ○ಶಾ ಜಹಾನ್● ○ಬಹಾದೂರ್ ಶಾ ಜಾಫರ್ 4 ಜುಂಗು ಮತ್ತು ಸುಮ್ಮಿ ಯಾವ ವಿಧದ ಕಲೆ? ಪ್ರೇಮಕ್ಕೆ ಸಂಬಂಧಿಸಿದ ಹಾಡು● ○ಬ್ಲಾಕ್ ಪೇಂಟಿಂಗ್ ○ಉಡುಪುಗಳು ○ಆಭರಣಗಳು 5 ಭಾರತದ ಯಾವ ನಗರಿಯು ಮೂಲತಃ ಕಪಿಲ ಎಂದು ಕರೆಯಲ್ಪಡುತ್ತಿತ್ತು? ○ಗುವಾಹಟಿ ○ಹರದ್ವಾರ● ○ಅಮೃತಸರ ○ಶ್ರೀನಗರ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ

40 Gram Panchayats uplifted to Town Panchayat

Image
40 ಗ್ರಾ. ಪಂ ಮೇಲ್ದರ್ಜೆಗೆ Sat , 04 /18/2015 ಬೆಂಗಳೂರು : ರಾಜ್ಯದ 64 ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದೆ. ನಂಜಯ್ಯನ ಮಠ ಸಮಿತಿಯ ಅವರ ಶಿಫಾರಸಿನ ಮೇರೆಗೆ 40 ಗ್ರಾಮ ಪಂಚಾಯಿತಿಗಳನ್ನು ಹಾಗೂ ನಗರಾಭಿವೃದ್ಧಿ ಇಲಾಖೆ ಶಿಫಾರಸು ಮಾಡಿರುವ 24 ಗ್ರಾಮ ಪಂಚಾಯಿತಿಗಳು ಮೇಲ್ದರ್ಜೆಗೇರಲಿವೆ . ಮೇಲ್ದರ್ಜೆಗೆ ಏರಲಿರುವ 64 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ .

ವಿ ಕ ವಿಶೇಷ : ಗಣತಿ ಗೊಂದಲ:

ದೇಶದಲ್ಲಿಯೇ ಅತಿ ವಿಸ್ತೃತ ಜಾತಿ ಗಣತಿ ಎನ್ನಬಹುದಾದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ರಾಜ್ಯಾದ್ಯಂತ ಚಾಲನೆ ಸಿಕ್ಕಿದೆ. ಆದರೆ, ಸಮೀಕ್ಷೆಗೆ ಆರಂಭದಲ್ಲೇ ಹಲವು ಎಡರು- ತೊಡರುಗಳು ಎದುರಾಗಿದ್ದು ಸಹಜ. ಜಾತಿಗಳ ಬಗೆಗಿನ ಕೋಡ್ ನಮೂದಿಸುವಲ್ಲಿ ಜನಸಾಮಾನ್ಯರಿಗೆ ಇರುವ ಅರಿವಿನ ಕೊರತೆ, ಎಲ್ಲ 55 ಪ್ರಶ್ನೆಗಳಿಗೂ ಕೋಡ್ ಹುಡುಕಿ ಉತ್ತರ ಪಡೆಯುವುದು ಗಣತಿದಾರರಿಗೂ ಸವಾಲಿನ ಕೆಲಸ ಅನಿಸಿತು. ಆದರೆ, ತದನಂತರ ಗ್ರಾಮೀಣ ಪ್ರದೇಶದಲ್ಲಿ ಗಣತಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ, ಬೆಂಗಳೂರಿನಂತಹ ನಗರದಲ್ಲಿ ಸಮೀಕ್ಷೆ ಇನ್ನೂ 'ಟೇಕಾಫ್' ಹಂತದಲ್ಲಿದೆ. ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ ಸಮೀಕ್ಷೆಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಏ. 11ರಿಂದ ಪ್ರಾರಂಭವಾದ ಈ ಗಣತಿ 30ರವರೆಗೆ ಮುಂದುವರಿಯಲಿದೆ. ರಾಜ್ಯದಲ್ಲಿನ 1.26 ಕೋಟಿ ಮನೆಗಳ ಸಮೀಕ್ಷೆಗಾಗಿ 1.33 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಬ್ಬ ಗಣತಿದಾರನಿಗೆ 120ರಿಂದ 150 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆಯೋಗ ಹೇಳುತ್ತಿದ್ದರೂ ಕೆಲವು ಕಡೆಗಳಲ್ಲಿ 200ಕ್ಕೂ ಅಧಿಕ ಮನೆಗಳನ್ನು ಹಂಚಲಾಗಿದೆ ಎಂದು ಗಣತಿದಾರರು ಅಲವತ್ತುಕೊಳ್ಳುತ್ತಿದ್ದಾರೆ. ಒಬ್ಬ ಗಣತಿದಾರ ಒಂದು ಮನೆ ಸಮೀಕ್ಷೆ ನಡೆಸಲು ಕನಿಷ್ಟ 40ರಿಂದ 45 ನಿಮಿಷ ಸಮಯ ಬೇಕಾಗುತ್ತದೆ. ಎಲ್ಲ 55 ಪ್ರಶ್ನೆಗಳಿಗೂ ಉತ್ತರ ಪಡೆದು ಪಟ್ಟಿಯಲ್ಲಿನ

NASA's MESSENGER Mission To Crash Into Mercury in two weeks.

Image
ಬುಧ ಗ್ರಹಕ್ಕೆ ಅಪ್ಪಳಿಸಲಿದೆ ನಾಸಾ ನೌಕೆ Sat, 04/18/2015 - 01:00 ವಾಷಿಂಗ್ಟನ್ (ಐಎಎನ್ಎಸ್):  ಇಂದಿಗೆ ಸರಿಯಾಗಿ ಎರಡು ವಾರಗಳಲ್ಲಿ ನಾಸಾದ ಮೆಸೆಂಜರ್ ಬಾಹ್ಯಾಕಾಶ ನೌಕೆಯು ಪ್ರತಿ ಗಂಟೆಗೆ 14,080 ಕಿ. ಮೀ. ವೇಗದಲ್ಲಿ ಸಾಗಿ  ಸೂರ್ಯಗ್ರಹಕ್ಕೆ ಅತೀ ಸಮೀಪದಲ್ಲಿ ಇರುವ ಬುಧಗ್ರಹವನ್ನು ಅಪ್ಪಳಿಸಿ ಅಂತ್ಯ ಕಾಣಲಿದೆ. ಈ ಬಾಹ್ಯಾಕಾಶ ನೌಕೆಯು ಅಪ್ಪಳಿಸುವ ಹೊಡೆತಕ್ಕೆ ಬುಧಗ್ರಹದಲ್ಲಿ 52 ಅಡಿ ಅಗಲದ ದೊಡ್ಡ ಗುಳಿ ಉಂಟಾಗಲಿದೆ. ಈ ತಿಂಗಳ 30ರಂದು ಮಧ್ಯಾಹ್ನ 3.25 ಗಂಟೆ ಸುಮಾರಿಗೆ (ವಿಶ್ವದ ಪೂರ್ವ ಭಾಗದ ಹಗಲು ವೇಳೆ)ಬಾಹ್ಯಾಕಾಶ ನೌಕೆಯು ಬುಧ ಗ್ರಹವನ್ನು ಅಪ್ಪಳಿಸುವಂತೆ  ಮಾಡುತ್ತೇವೆ ಎಂದು ಈ ಯೋಜನೆಯ ಎಂಜಿನಿಯರ್ ಡಾನ್ ಒ' ಶುಂಗ್‌ನೆಸ್ಸಿ ಅವರು ತಿಳಿಸಿದ್ದಾರೆ. ಬುಧಗ್ರಹದ ಮೇಲ್ಮೈ ವಾತಾವರ ಣವನ್ನು ಅಧ್ಯಯನ ಮಾಡಲು 2004ರಲ್ಲಿ  ಉಡಾವಣೆ ಮಾಡಲಾಗಿದ್ದ ಈ ಬಾಹ್ಯಾಕಾಶ ನೌಕೆಯ ಒಟ್ಟು 7.9 ಶತಕೋಟಿ ಕಿ.ಮೀ. ಕ್ರಮಿಸಿದ್ದು, ಈ ಸಂದರ್ಭದಲ್ಲಿ ಸೂರ್ಯನ ಸುತ್ತ 15 ಸುತ್ತು ಹಾಕಿದೆ. ಇದಲ್ಲದೆ ಭೂಮಿಯ ಸಮೀಪ ಒಂದು ಬಾರಿ, ಶುಕ್ರ ಗ್ರಹದ ಬಳಿ ಎರಡು ಬಾರಿ ಹಾಗೂ ಬುಧ ಗ್ರಹದ ಬಳಿ ಮೂರು ಬಾರಿಗೆ ಹಾದು ಹೋಗಿದೆ. ನಾಸಾದ ಮೆರಿನರ್ ಬಾಹ್ಯಾಕಾಶ ನೌಕೆಯು  1974ರಿಂದ 75ರ ಅವಧಿಯಲ್ಲಿ ಮೂರು ಬಾರಿ ಬುಧ ಗ್ರಹಕ್ಕೆ ಹೋಗಿ ಬಂದಿತ್ತು. ಬುಧ ಗ್ರಹದ ತುಂಬಾ ಕುಳಿಗಳು (ಹೊಂಡ) ಇವೆ ಎಂದು ಹೇಳಲಾಗಿದ್ದು, ಮೆಸೆಂಜರ್ ಬಾಹ್ಯಾಕಾಶ ನೌಕೆಯು ಉಂಟು