Posts

Achal Kumar Jyoti takes over as new Election Commissioner (tenure 3 yrs)

Image
ನೂತನ ಚುನಾವಣಾ ಆಯುಕ್ತರಾಗಿ ಜ್ಯೋತಿ ನವದೆಹಲಿ: ಗುಜರಾತಿನ ಮಾಜಿ ಮುಖ್ಯ ಕಾರ್ಯದರ್ಶಿ ಅಚಲ್ ಕುಮಾರ್ ಜ್ಯೋತಿ ಅವರು ನೂತನ ಚುನಾವಣಾ ಆಯುಕ್ತರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ತ್ರಿಸದಸ್ಯ ಚುನಾವಣಾ ಆಯೋಗದಲ್ಲಿ ಖಾಲಿಬಿದ್ದಿದ್ದ ಆಯುಕ್ತರ ಎರಡು ಹುದ್ದೆಗಳ ಪೈಕಿ ಒಂದು ಭರ್ತಿಯಾದಂತಾಗಿದೆ. ಜ್ಯೋತಿ ಅವರು ಚುನಾವಣಾ ಆಯೋಗದಲ್ಲಿ ಈದಿನ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 1975ರ ತಂಡದ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಅಧಿಕಾರಿಯಾಗಿರುವ ಜ್ಯೋತಿ 2013ರ ಜನವರಿಯಲ್ಲಿ ಗುಜರಾತಿನ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಅತ್ಯುನ್ನತ ಅಧಿಕಾರಿಯ ಹುದ್ದೆಯಲ್ಲಿ ಅವರು ಸೇವೆ ಸಲ್ಲಿಸಿದ್ದರು. ರಾಜ್ಯ ಜಾಗೃತಾ ಕಮೀಷನರ್ ಆಗಿ ಸೇವೆ ಸೇವೆ ಸಲ್ಲಿಸಿದ್ದ ಜ್ಯೋತಿ 1999ರಿಂದ 2004ರವರೆಗೆ ಕಾಂಡ್ಲಾ ಬಂದರು ಟ್ರಸ್ಟ್ ನ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಸರ್ದಾರ್ ಸರೋವರ ನರ್ಮದಾ ನಿಗಮ ಲಿಮಿಟೆಡ್ ನ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ವರ್ಲ್ಡ್‌ ವೈಡ್‌ ವೆಬ್‌ ಮತ್ತು ಡೊಮೈನ್‌ ನೇಮ್

‌: ವರ್ಲ್ಡ್‌ ವೈಡ್‌ ವೆಬ್‌ (www) ಎನ್ನುವುದರ ಸಂಕ್ಷಿಪ್ತ ರೂಪ w3. ಇಂಗ್ಲೆಂಡ್‌ನ ಗಣಕ ವಿಜ್ಞಾನಿ ತಿಮೊಥಿ ಜಾನ್‌ ಬರ್ನರ್ಸ್‌ ಲೀ (ಟಿಮ್‌ ಬರ್ನರ್ಸ್‌ ಲೀ) ಅವರು 1989ರ ದಶಕದಲ್ಲಿ ಹೈಪರ್‌ ಟೆಕ್ಟ್ಸ್‌ ಟ್ರಾನ್ಸ್‌ಫರ್‌ ಪ್ರೋಟೊಕಾಲ್‌ (http) ಪರಿಕಲ್ಪನೆ ಬಳಸಿಕೊಂಡು ಜಾಗತಿಕ ಜಾಲ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸಿದರು. ಮುಂದೆ ಇದೇ ವರ್ಲ್ಡ್‌ ವೈಡ್‌ ವೆಬ್‌ ಎಂದು ಜನಪ್ರಿಯವಾಯಿತು. ವರ್ಲ್ಡ್‌ ವೈಡ್‌ ವೆಬ್‌ ಅನ್ನು  (w3) ಮಾನವ ಜ್ಞಾನದ ಭಂಡಾರ ಎಂದೇ ಬಣ್ಣಿಸಲಾಗುತ್ತದೆ. ಅನೇಕರು ಅಂತರ್ಜಾಲ ಮತ್ತು ವರ್ಲ್ಡ್‌ ವೈಡ್‌ ವೆಬ್‌ ಒಂದೇ ಎಂದು ಭಾವಿಸಿದ್ದಾರೆ. ಆದರೆ, ಇವೆರಡು ಪದಗಳನ್ನು ಕೆಲವೊಮ್ಮೆ ಸಮನ್ವಯಗೊಳಿಸ­ಲಾಗುತ್ತದೆಯಾದರೂ, ಎರಡರ ಅರ್ಥ ಒಂದೇ ಅಲ್ಲ. ಅಂತರ್ಜಾಲ ಎಂಬುದು ಅಂತರ್‌ ಸಂಪರ್ಕಿತ ಕಂಪ್ಯೂಟರ್‌ ಜಾಲಗಳ ಒಂದು ಜಾಗತಿಕ ವ್ಯವಸ್ಥೆಯಾದರೆ, ವೆಬ್‌ ಎಂಬುದು ಅಂತರ್ಜಾಲದ ಮೇಲೆ ನಡೆಯುವ ಒಂದು ಸೇವೆ. ಇದನ್ನು ಹೈಪರ್‌ ಲಿಂಕ್‌ಗಳು ಮತ್ತು ಯುಆರ್‌ಎಲ್‌ಗಳಿಂದ ಸಂಪರ್ಕಿಸ ಲಾಗಿರುತ್ತದೆ. ಬ್ರೌಸರ್‌ ತೆರೆದು ಅದರಲ್ಲಿ ವಿಳಾಸ  ಟೈಪಿಸುವ ಮೂಲಕ ವರ್ಲ್ಡ್‌ ವೈಡ್‌ ವೆಬ್‌ನ ಮೇಲೆ ಒಂದು ವೆಬ್‌ ಪುಟ ವೀಕ್ಷಿಸುವ ಕಾರ್ಯ ಆರಂಭವಾಗುತ್ತದೆ. ವಿಳಾಸ ಟೈಪಿಸಿ ಎಂಟರ್‌ ಬಟನ್‌ ಅದುಮುತ್ತಿದ್ದಂತೆ ಬ್ರೌಸರ್‌ನ ಹಿಂದೆ ತೆರೆಯ ಮರೆಯಲ್ಲಿ ಸಂವಹನಾ ಸಂದೇಶಗಳ ಒಂದು ಸರಣಿಯೇ ತೆರೆದುಕೊಳ್ಳುತ್ತದೆ. ಈ ಸಂದೇಶಗಳ ಪ್ರಕ್ರಿಯೆ ಪೂರ್ಣಗ

An Indian-origin woman Harbhajan Kaur Dheer, has been elected mayor of the Ealing Council in the west London suburban district,

Image
ಭಾರತೀಯ ಸಂಜಾತೆ ಯುಕೆಯಲ್ಲಿ ಮೇಯರ್ Published: 14 May 2015 12:33 PM IST ಹರ್ಭಜನ್ ಕೌರ್ ಧೀರ್ ಲಂಡನ್: ಭಾರತೀಯ ಮೂಲದ ಮಹಿಳಾ ಕೌನ್ಸಿಲರ್ ಲಂಡನ್ನ ಈಲಿಂಗ್ ಕೌನ್ಸಿಲ್ ಚುನಾವಣೆಯಲ್ಲಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬ್ರಿಟನ್ನಲ್ಲಿ ಮೇಯರ್ ಪಟ್ಟಕ್ಕೇರಿದ ಏಷ್ಯಾದ ಪ್ರಥಮ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿ ದ್ದಾರೆ. ಲೇಬರ್ ಪಾರ್ಟಿ ಯ ಕಾರ್ಯಕರ್ತೆಯಾಗಿ 20 ವರ್ಷಗಳಿಂದಸಕ್ರಿಯರಾಗಿರುವ ಹರ್ಭಜನ್ ಕೌರ್ ಧೀರ್(62) ಬುಧವಾರ ಲಂಡನ್ನ ವಿಕ್ಟೋರಿಯಾ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.

ಬಾಲ ಕಾರ್ಮಿಕ ಕಾಯಿದೆ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅಸ್ತು.

Image
ಬಾಲ ಕಾರ್ಮಿಕ ಕಾಯಿದೆ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅಸ್ತು. (PSGadyal Teacher Vijayapur) ಹೊಸದಿಲ್ಲಿ: 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೌಟಂಬಿಕ ಕೆಲಸ ಕಾರ್ಯಗಳೂ ಸೇರಿದಂತೆ ಅಪಾಯಕಾರಿಯಲ್ಲದ ವೃತ್ತಿಗಳಲ್ಲಿ ತೊಡಗಿಕೊಳ್ಳಲು ಅನುವಾಗುವಂತೆ ಬಾಲ ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಸ್ತು ಎಂದಿದೆ. ಆದಷ್ಟು ಬೇಗ ಬಾಲ ಕಾರ್ಮಿಕ ಕಾಯಿದೆ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ- 2012ಅನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಸಂಪುಟ ಸಭೆ ಅನುಮೋದನೆಯ ಬೆನ್ನಿಗೇ ಮಕ್ಕಳ ಹಕ್ಕುಗಳ ಹೋರಾಟಗಾರರು ಇದು ಬಾಲ ಕಾರ್ಮಿಕ ಪದ್ಧತಿ ಉತ್ತೇಜಿಸಲಿದೆ ಎಂದು ಟೀಕಿಸಿದ್ದಾರೆ. ಈ ಮಾತನ್ನು ಒಪ್ಪದ ಉದ್ದಿಮೆದಾರರು, ಮಕ್ಕಳಿಗೆ ಪಾರಂಪರಿಕ ಕಲೆಯನ್ನು ಬಾಲ್ಯದಿಂದಲೇ ಕಲಿಸಬೇಕು. ಇಲ್ಲವಾದಲ್ಲಿ ನೇಯ್ಗೆ, ಹೊಲಿಗೆಯಂಥ ಕೌಶಲ್ಯಗಳು ಒಲಿಯುವುದಿಲ್ಲ. ಹಾಗಾಗಿ ತಿದ್ದುಪಡಿ ಸ್ವಾಗತಾರ್ಹ ಎಂದಿದ್ದಾರೆ. ಮೂಲ ಕಾಯಿದೆಯಡಿ 14ರಿಂದ 18 ವರ್ಷದೊಳಗಿನ ಮಕ್ಕಳು ಯಾವುದೇ 18 ಅಪಾಯಕಾರಿ ಉದ್ಯಮಗಳಲ್ಲಿ ದುಡಿಯುವುದನ್ನು ನಿಷೇಧಿಸಲಾಗಿತ್ತು. ಈ ಹೊಸ ತಿದ್ದುಪಡಿಯಲ್ಲೂ ಇದು ಮುಂದುವರಿದಿದೆ. ಆದರೆ ಈ ತಿದ್ದುಪಡಿಯಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಪಾಯಕಾರಿಯಲ್ಲದ ಉದ್ಯಮದಲ್ಲಿ ಶಾಲೆಯ ರಜೆ ನಂತರ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಒಂ

ಭಾರತದ ಪ್ರೊಫೆಸರ್ ಗೆ USA ದ ಶ್ರೇಷ್ಠ ಬೋಧನಾ ಪ್ರಶಸ್ತಿ

Image
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ರಸಾಯನಶಾಸ್ತ್ರ ಪ್ರೊಫೆಸರ್ ಒಬ್ಬರಿಗೆ ಶ್ರೇಷ್ಠ ಬೋಧನೆಗಾಗಿ ಅಮೆರಿಕ ಯುನಿವರ್ಸಿಟಿ ಆಫ್ ಕರೋಲಿನಾ ನೀಡುವ 2015ರ ಪ್ರಶಸ್ತಿ ಲಭಿಸಿದೆ. ಮೂಲತಃ ತಮಿಳುನಾಡಿನವರಾದ ಡಾ. ಸಿವನಾದನೆ (ಸಿವ) ಮಾಂಡ್ಜಿನಿ ಅವರು ಬೋಧನೆಯ ಮಹತ್ವವನ್ನು ಎತ್ತಿಹಿಡಿದವರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿ ಲಭಿಸಿದ್ದು ಅಮೆರಿಕದ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ 17 ಮಂದಿಯಲ್ಲಿ ಅವರೂ ಒಬ್ಬರಾಗಿದ್ದಾರೆ. ಈ ಪ್ರಶಸ್ತಿಯು ಕಂಚಿನ ಸ್ಮಾರಕದ ಜೊತೆಗೆ 12,500 ಡಾಲರ್ ನಗದು ಬಹುಮಾನವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಪ್ರಕಟಿಸಿದ ಯುಎನ್ ಸಿ ಪೆಂಬ್ರೋಕ್ ಕುಲಪತಿ ಕೈಲ್ ಆರ್ ಕಾರ್ಟರ್ ಅವರು ಬೋಧನೆ ಬಗೆಗಿನ ಮಾಂಡ್ಜಿನಿ ಅವರ ನಿಷ್ಠೆಯನ್ನು, ತರಗತಿಯಲ್ಲಿ ಪಾಠ ಮಾಡುವಾಗಿನ ಅವರ ಉತ್ಸುಕತೆಯನ್ನು, ವಿದ್ಯಾರ್ಥಿಗಳ ಯಶಸ್ಸಿನ ಕುರಿತ ಅವರ ಬದ್ಧತೆ ಮತ್ತು ಎಂದೂ ಕ್ಯಾಂಪಸ್ ಗೆ ಬರುವುದನ್ನು ತಪ್ಪಿಸದ ಅವರ ನಡೆಯನ್ನು ಶ್ಲಾಘಿಸಿದರು.

ಶಿವಕುಮಾರ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

ಶಿವಕುಮಾರ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ (PSGadyal) ತುಮಕೂರು, ಮೇ 13 : ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಬುಧವಾರ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜನರು ಪರೋಪಕಾರ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ. ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮೇಶ್ ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ನೂರೆಂಟು ವಸಂತ ಕಂಡ ತ್ರಿವಿಧ ದಾಸೋಹಿಗೆ ಕೋಟಿ ವಂದನೆ] ಪ್ರಶಸ್ತಿ ಸ್ವೀಕರಿಸಿದ ನಂತರ ಸಂದೇಶ ನೀಡಿದ ಶಿವಕುಮಾರ ಸ್ವಾಮೀಜಿಗಳು, 'ಮನುಷ್ಯನಿಗೆ ಪ್ರಶಸ್ತಿ ಮುಖ್ಯವಲ್ಲ. ಪ್ರಶಸ್ತಿ ಪಡೆಯುವುದರಿಂದ ಘನತೆ, ಗೌರವ ಹೆಚ್ಚಾಗುವುದಿಲ್ಲ. ನಾನೆಂದೂ ಪ್ರಶಸ್ತಿಗಾಗಿ ಆಸೆ ಪಟ್ಟಿಲ್ಲ. ಸರ್ಕಾರ ನೀಡಿರುವ ಪ್ರಶಸ್ತಿಯನ್ನು ಸ್ವೀಕರಿಸಿರುವೆ' ಎಂದು ಹೇಳಿದರು. [ರಾಷ್ಟ್ರಪತಿಯಿಂದ ಬುಧವಾರ 'ಪದ್ಮ' ಪ್ರಶಸ್ತಿ ಪ್ರದಾನ] 'ಮನುಷ್ಯ ಜೀವನದಲ್ಲಿ ಪರೋಪಕಾರದ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ' ಎಂದು ಸ್ವಾಮೀಜಿ ಹೇಳಿದರು. [ಲೋಕ ಜಂ

ಫೇಸ್ ಬುಕ್ ನಿಂದ ಸುದ್ದಿ, ಲೇಖನ ಪ್ರಕಟ. http://media.fb.com

Published: 13 May 2015 04:28 PM IST | Updated: 13 May 2015 05:06 PM IST ತನ್ನದೇ ಜಾಲತಾಣದಲ್ಲಿ ತಾಜಾ ಸುದ್ದಿ, ಲೇಖನಗಳನ್ನು ಪ್ರಕಟಿಸುವ ಯೋಜನೆಗೆ ಸಾಮಾಜಿಕ ಜಾಲತಾಣದ ಅಗ್ರಗಣ್ಯ ಫೇಸ್ ಬುಕ್ ಸಂಸ್ಥೆ ಬುಧವಾರ ಚಾಲನೆ ನೀಡಿದೆ( http://media.fb.com/ ). ಲೇಖನಗಳನ್ನು ಪ್ರಕಟಿಸುವುದಕ್ಕಾಗಿ, ನ್ಯೂಯಾರ್ಕ್ ಟೈಮ್ಸ್, ನ್ಯಾಷನಲ್ ಜಿಯೋಗ್ರಾಫಿಕ್ ಸೇರಿದಂತೆ 9 ಸುದ್ದಿ ಸಂಸ್ಥೆಗಳೊಂದಿಗೆ ಫೇಸ್ ಬುಕ್ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಫೇಸ್ ಬುಕ್ ನ ಈ ಯೋಜನೆಯಿಂದ, ಜಾಲತಾಣಗಳಲ್ಲಿ ಲೇಖನಗಳನ್ನು ಓದುವ ಹವ್ಯಾಸವುಳ್ಳವರು, ವೆಬ್ ಸೈಟ್ ಲೋಡ್ ಆಗುವವರೆಗು ಕಾಯುವ ಅಗತ್ಯವಿರುವುದಿಲ್ಲ. ಫೇಸ್ ಬುಕ್ ಪ್ರಾರಂಭಿಸಿರುವ ನೂತನ ವೆಬ್ ಸೈಟ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಒಪ್ಪಂದ ಮಾಡಿಕೊಂಡಿ ಸುದ್ದಿ ಸಂಸ್ಥೆಗಳ ಲೇಖನಗಳು ಅಪ್ ಡೇಟ್ ಆಗಲಿವೆ. ಗೂಗಲ್ ವೆಬ್ ಸೈಟ್ ಇಣುಕದೆಯೆ ಲೇಖನ, ತಾಜಾ ಸುದ್ದಿಗಳ ಅಪ್ ಡೇಟ್ ಪಡೆಯಬಹುದಾಗಿರುವುದರಿಂದ  ಫೇಸ್ ಬುಕ್ ನ ಈ ಹೊಸ ಪ್ರಯೋಗ, ಮುಂದಿನ ದಿನಗಳಲ್ಲಿ ಗೂಗಲ್ ಗೆ ಪೈಪೋಟಿ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. Posted by: Srinivas Rao BV | Source: Online Desk

ಗೂಗಲ್ ಮ್ಯಾಪ್‌ನಲ್ಲಿ ರೈಲುಗಳ ವೇಳಾಪಟ್ಟಿ

ಏಜೆನ್ಸೀಸ್ | May 13, 2015, 04.00AM IST ಹೊಸದಿಲ್ಲಿ : ಭಾರತೀಯ ರೈಲ್ವೆಯ 12 ಸಾವಿರ ರೈಲುಗಳ ವೇಳಾಪಟ್ಟಿ ಮತ್ತು ಬೆಂಗಳೂರು ಸೇರಿದಂತೆ 8 ನಗರಗಳ ಸಾರ್ವಜನಿಕ ಸಾರಿಗೆ (ಬಸ್ಸು, ಮೆಟ್ರೊ)ಕುರಿತ ಪರಿಷ್ಕೃತ ಮಾಹಿತಿಗಳು ಗೂಗಲ್ ಟ್ರಾನ್ಸಿಟ್‌ನಲ್ಲಿ ಲಭ್ಯವಾಗಲಿವೆ. ಅಹಮದಾಬಾದ್, ಚೆನ್ನೈ, ಹೈದರಾಬಾದ್, ಕೋಲ್ಕೊತಾ, ಮುಂಬಯಿ, ದಿಲ್ಲಿ, ಪುಣೆ ನಗರಗಳ ಬಸ್ ಮತ್ತು ಮೆಟ್ರೊ ಮಾರ್ಗಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೂಡ ಒದಗಿಸುವುದಾಗಿ ಕಂಪೆನಿ ಹೇಳಿದೆ. ಈ ಗೂಗಲ್ ಟ್ರಾನ್ಸಿಟ್ ಜನರಿಗೆ ಸಾರ್ವಜನಿಕ ಸಾರಿಗೆ ಮೂಲಕ ತ್ವರಿತವಾಗಿ ಮತ್ತು ಸರಳವಾಗಿ ಪ್ರಯಾಣವನ್ನು ಯೋಜಿಸಿಕೊಳ್ಳಲು ನೆರವಾಗಲಿದೆ. ಜಗತ್ತಿನಾದ್ಯಂತ ಇದು ಒದಗಿಸುವ ಮಾಹಿತಿ ಸಮಗ್ರ ಮತ್ತು ಖಚಿತವಾಗಿದ್ದು ಬಹಳಷ್ಟು ಪ್ರಯೋಜನಕಾರಿ ಎಂದು ಕಂಪೆನಿಯ ನಿರ್ದೇಶಕ ಸುರೆನ್ ರುಹೆಲಾ ಹೇಳಿದ್ದಾರೆ. ಪ್ರಸಕ್ತ ಗೂಗಲ್ ಮ್ಯಾಪ್‌ನಲ್ಲಿ ನ್ಯೂಯಾರ್ಕ್, ಲಂಡನ್, ಟೋಕಿಯೊ, ಸಿಡ್ನಿ ಸೇರಿದಂತೆ ಜಗತ್ತಿನ 2,800 ನಗರಗಳ ಹತ್ತು ಲಕ್ಷ ನಿಲ್ದಾಣಗಳ ಮಾಹಿತಿಗಳಿವೆ.

BGS Global Hospitals successfully performs 100th liver transplant ...

100 ಲಿವರ್‌ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ: ಬಿಜಿಎಸ್‌ ಸಾಧನೆ ಉದಯವಾಣಿ, May 13, 2015, 3:40 AM IST ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ 100 ಯಕೃತ್‌ (ಲಿವರ್‌) ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿರುವ ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ಪಾತ್ರವಾಗಿದೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್‌.ಕೆ. ವೆಂಕಟರಮಣ, 2011ರ ಬಳಿಕ ಆಸ್ಪತ್ರೆಯ "ಗ್ಲೋಬಲ್‌ ಇಂಟಿಗ್ರೇಟೆಡ್‌ ಲಿವರ್‌' ತಂಡ ಈ ಸಾಧನೆ ಮಾಡಿದೆ. 100 ಲಿವರ್‌ ಕಸಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ರಾಜ್ಯದಲ್ಲಿ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ಹೊಸ ಸಾಧನೆ ಮಾಡಿದೆ ಎಂದರು. ಲಿವರ್‌ ಕಸಿಗಾಗಿ ದಾನ ಮಾಡಿದವರು ಮತ್ತು ಕಸಿ ಮಾಡಿಸಿಕೊಂಡವರು ಹೆಚ್ಚಾಗಿ ಕರ್ನಾಟಕದವರಾಗಿದ್ದಾರೆ. ಲಿವರ್‌ ಕಸಿ ತಂಡದಲ್ಲಿ ಹೆಪಟಾಲಜಿಸ್ಟ್‌ಗಳು, ನುರಿತ ಅರಿವಳಿಕೆ ತಜ್ಞರು ಮತ್ತು ಇಂಟೆನ್ಸಿವ್‌ ಕೇರ್‌ ತಜ್ಞರು, ವಿಶೇಷ ತರಬೇತಿ ಹೊಂದಿರುವ ಶುಶ್ರೂಷಕಿಯರು ಇದ್ದಾರೆ ಎಂದು ಹೇಳಿದರು. ರಾಜ್ಯದ ಜನರಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಘಟಿತ ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಸಾವಿನ ನಂತರವೂ ಜೀವನ ಎನ್ನುವ ಪರಿಕಲ್ಪನೆಗೆ ವಾಸ್ತವತೆಯನ್ನು ನೀಡಲಾಗಿದೆ. ರಾಜ್ಯದಲ್ಲಿ ಲಿವರ್‌ ಕಸಿ ಶಸ್ತ್ರಚಿಕಿತ್ಸೆಗಾಗಿ ನೋಂದಾಯಿತ ರೋ

ಉತ್ತೀರ್ಣಗೊಂಡವರಿಗೆ ಒಂದು ದಾರಿಫೇಲಾದವರಿಗೆ ನೂರು ದಾರಿ

ಬುಧವಾರ - ಮೇ -13-2015 ಎಸೆಸೆಲ್ಸಿ ಫಲಿತಾಂಶ ಹೊರಬಿದ್ದಿದೆ. ಎಂದಿನಂತೆಯೇ ಕುಸ್ತಿ ಪಟುಗಳನ್ನು ಗುರುತಿಸುವಂತೆ ಮೇಲುಗೈಯಾದವರ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಒಳ್ಳೆಯ ಕೊಯ್ಲು ಎನ್ನುವಂತೆ ಉತ್ತಮ ಲಿತಾಂಶ ಎಂಬಿತ್ಯಾದಿ ಅಳತೆಗಳೂ ನಡೆದಿವೆ. ಮಕ್ಕಳು ಬಾಚಿಕೊಂಡ ಅಂಕಗಳು ಸುದ್ದಿಯಾಗುತ್ತಿವೆ. ಆ ಜಿಲ್ಲೆ ಪ್ರಥಮ, ಈ ಜಿಲ್ಲೆ ಅಂತಿಮ ಎಂಬಿತ್ಯಾದಿ ಗುರುತಿಸುವಿಕೆಯೂ ನಡೆದಿದೆ. ಉಡುಪಿ ಎಂದಿನಂತೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡ 8ನೆ ಸ್ಥಾನವನ್ನು ಪಡೆದುಕೊಂಡಿದೆ. ಚಿಕ್ಕೋಡಿ ದ್ವಿತೀಯ ಸ್ಥಾನವನ್ನು ಪಡೆದು ಎಲ್ಲರ ಬೆರಗುಗಣ್ಣಿಗೆ ಕಾರಣವಾಗಿದೆ. ಅತ್ಯುತ್ತಮ ಎಸೆಸೆಲ್ಸಿ ಲಿತಾಂಶ ಶಿಕ್ಷಣದ ಸುಧಾರಣೆಯನ್ನು ತೋರಿಸುತ್ತದೆ ನಿಜ. ಹಾಗೆಂದು, ಅದುವೇ ಎಲ್ಲ ಅಲ್ಲ. ಅತ್ಯುತ್ತಮ ಅಂಕಗಳನ್ನು ಪಡೆದವರೆಲ್ಲ ಅಭಿನಂದನಾರ್ಹರು. ಹಾಗೆಂದು, ಅವರಿಂದಲೇ ಈ ಸಮಾಜಕ್ಕೆ ಭವಿಷ್ಯ ಎನ್ನಲಾಗದು. ಯಾಕೆಂದರೆ ಈ ವಿಶ್ವದ ಬಹುತೇಕ ಸಾಧಕರ ಇತಿಹಾಸವನ್ನು ಅವಲೋಕಿಸಿದಾಗ ಅವರಲ್ಲಿ ೇಲಾದವರೇ ಅಕ. ಹಲವರು ಅರ್ಧದಲ್ಲೇ ಶಾಲೆ ತೊರೆದವರಿದ್ದಾರೆ. ಆದರೆ ಇದು ಅವರ ಸಾಧನೆಗೆ ಯಾವ ಅಡ್ಡಿಯನ್ನೂ ತರಲಿಲ್ಲ. ಇದೇ ಸಂದರ್ಭದಲ್ಲಿ ಕಳೆದ ಮೂರು ದಶಕಗಳಲ್ಲಿ ನೂರಾರು ರ್ಯಾಂಕ್ ವಿದ್ಯಾರ್ಥಿಗಳು ಹುಟ್ಟಿ ಬಂದಿದ್ದಾರೆ. ರ್ಯಾಂಕ್ ಪಡೆದು ಪತ್ರಿಕೆಗಳಲ್ಲಿ ೆಟೋಗಳು ಪ್ರಕಟವಾಗಿದ್ದು ಬಿಟ್ಟರೆ, ಬಳಿಕ ಅವರಲ್ಲಿ ಬಹುತೇಕ

CET 2015: KEY ANSWERS WILL BE RELEASED ON 15th May, Results on 26th May..

ಸಿಇಟಿ-2015 : 15ಕ್ಕೆ ಕೀ ಉತ್ತರ, 26ರಂದು ಫಲಿತಾಂಶ ಬುಧವಾರ - ಮೇ -13-2015 ಬೆಂಗಳೂರು, ಮೇ 12: ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ 2015ನೆ ಸಾಲಿನ ಸಾಮಾನ್ಯ ಪ್ರವೇಶ (ಸಿಇಟಿ) ಪರೀಕ್ಷೆ ಮಂಗಳವಾರ ಬೆಂಗಳೂರಿನ 73 ಕೇಂದ್ರಗಳಲ್ಲಿ ನಡೆದಿದ್ದು, 1,57,580 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬೆಳಗ್ಗೆ 10:30ರಿಂದ 11:50ರ ವರೆಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ 2:30ರಿಂದ 3:30ರ ವರೆಗೆ ಗಣಿತ ವಿಷಯಕ್ಕೆ ಪರೀಕ್ಷೆ ಜರಗಿದವು. ನಾಳೆ (ಮೇ 13) ಬೆಳಗ್ಗೆ 10:30ರಿಂದ 11:50ರ ವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2:30ರಿಂದ 3:30ರ ವರೆಗೆ ರಸಾಯನಶಾಸ್ತ್ರ, ಸಂಜೆ 4:45 ರಿಂದ 5:45ರ ವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಪ್ರವೇಶ ಪರೀಕ್ಷೆ ನಡೆಯಲಿವೆ. ಸಿಇಟಿ ಪರೀಕ್ಷೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಎಲ್ಲ ಕೇಂದ್ರಗಳಲ್ಲೂ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಒಬ್ಬ ಸಹಾಯಕ ಪೊಲೀಸ್ ಆಯುಕ್ತರನ್ನು ವೀಕ್ಷಕರನ್ನಾಗಿ ನೇಮಿಸಲಾಗಿತ್ತು. ಸಿಇಟಿ ಪರೀಕ್ಷೆಯ ತಾತ್ಕಾಲಿಕ ಸರಿ ಉತ್ತರಗಳು ಮೇ 15ರಂದು ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ. ಸರಿ ಉತ್ತರಗಳಿಗೆ ಆಕ್ಷೇಪಣೆ ಯಿದ್ದಲ್ಲಿ ಮೇ 18ರ ಸಂಜೆಯೊ

4 ರಾಜ್ಯಗಳಿಗೆ ಹೊಸ ರಾಜ್ಯಪಾಲರು

4 ರಾಜ್ಯಗಳಿಗೆ ಹೊಸ ರಾಜ್ಯಪಾಲರು ಪ್ರಜಾವಾಣಿ ವಾರ್ತೆ Wed, 05/13/2015 - 01:00 ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜಾರ್ಖಂಡ್, ಅರುಣಾಚಲಪ್ರದೇಶ, ತ್ರಿಪುರಾ ಮತ್ತು ಮೇಘಾಲಯಕ್ಕೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು ಅವರನ್ನು  ಜಾರ್ಖಂಡ್, ಅಸ್ಸಾಂನ ಮಾಜಿ ಮುಖ್ಯ ಕಾರ್ಯದರ್ಶಿ  ಪಿ. ರಾಜ್‌ಖೋವಾ ಅವರನ್ನು ಅರುಣಾಚಲಪ್ರದೆಶ, ಬಿಜೆಪಿಯ ಮಾಜಿ ಕಾರ್ಯದರ್ಶಿ ತಥಾಗಥಾ ರಾಯ್ ಅವರನ್ನು ತ್ರಿಪುರಾ ಹಾಗೂ ವಿ. ಷಣ್ಮಖನಾಥನ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ವರ್ಗಾವಣೆ: ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಅವರು ಅರುಣಾಚಲಪ್ರದೇಶ ರಾಜ್ಯಪಾಲ ಲೆ.ಜ. ನಿರ್ಭಯ್ ಶರ್ಮಾ ಅವರನ್ನು ಮಿಜೋರಾಂಗೆ ಮತ್ತು ಜಾರ್ಖಂಡ್ ರಾಜ್ಯಪಾಲ ಡಾ. ಸೈಯದ್ ಅಹಮದ್ ಅವರನ್ನು ಮಣಿಪುರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಇಬ್ಬರನ್ನು ಹಿಂದಿನ ಎನ್‌ಡಿಎ ಸರ್ಕಾರದ ಕಾಲದಲ್ಲಿ ನೇಮಕ ಮಾಡಲಾಗಿತ್ತು. ನಾಲ್ಕು ರಾಜ್ಯಗಳಿಗೆ ರಾಜ್ಯಪಾಲರ ನೇಮಕವಾದರೂ ಬಿಹಾರ ಮತ್ತು ಅಸ್ಸಾಂ ರಾಜ್ಯಪಾಲರ ನೇಮಕವಾಗಿಲ್ಲ. ಈ ಎರಡೂ ರಾಜ್ಯಗಳಿಗೆ ಶೀಘ್ರ ರಾಜ್ಯಪಾಲರ ನೇಮಕವಾಗುವ ನಿರೀಕ್ಷೆ ಇದೆ.

ಎಸ್ ಎಸ್ ಎಲ್ ಸಿ ಟಾಪ್-5 ಸಾಧಕರು-೨೦೧೫:

Image
1. ವಿಶ್ವಜಿತ್ ಪ್ರಕಾಶ್ ಹೆಗಡೆ- 623 ಅಂಕ, ಶಿರಸಿ ಲಯನ್ಸ್ ಇಂಗ್ಲಿಷ್ ಹೈಸ್ಕೂಲ್, ಉತ್ತರ ಕನ್ನಡ.(ಫೋಟೊ ಕೆಳಗಿದೆ) 2. ದಿಶಾ ಹೆಗಡೆ- 622 ಅಂಕ, ಶಾಂತಿ ಸದನ ಹೈಸ್ಕೂಲ್, ಧಾರಾವಾಡ. 3. ಸಂಹಿತಾ ಎಂ. ರಾವ್- 622 ಅಂಕ, ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಹೈಸ್ಕೂಲ್, ರಾಜಾಜಿನಗರ, ಬೆಂಗಳೂರು ಉತ್ತರ. 4. ಸ್ವಾತಿ ಕೆ. - 622 ಅಂಕ, ಇಂದ್ರಪ್ರಸ್ಥ ವಿದ್ಯಾಲಯ ಹೈಸ್ಕೂಲ್, ಉಪ್ಪಿನಂಗಡಿ, ಮಂಗಳೂರು. 5. ರಿತುಪರ್ಣ ಭಾನಾಜಿರಾವ್- 622 ಅಂಕ, ಕೆಎಲ್​ಎಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಬೆಳಗಾವಿ.

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಯಾವಾಗ? ಮರು ಮೌಲ್ಯಮಾಪನ ಹೇಗೆ?

Posted by: Madhusoodhan Hegde | Tue, May 12, 2015, 17:31 [IST] ಬೆಂಗಳೂರು, ಮೇ. 12: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ಜೂನ್ 15 ರಿಂದ 22 ರವರೆಗೆ ನಡೆಸಲಾಗುವುದು ಎಂದು ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ. ಎಲ್ಲ ಶಾಲೆಗಳಿಗೆ ಫಲಿತಾಂಶದ ಜತೆಗೆ ಅನುತ್ತೀರ್ಣರಾದ ವಿದ್ಯಾರ್ಥಿಗಳ ರೋಲ್ ನಂಬರ್ ಕಳುಹಿಸಿಕೊಡಲಾಗಿದೆ. ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ. ಮರು ಮೌಲ್ಯಮಾಪನಕ್ಕೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೂ ಸಹ ಫಲಿತಾಂಶಕ್ಕೆ ಕಾಯದೇ ಪೂರಕ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಮಂಡಳಿ ಸ್ಪಷ್ಟವಾಗಿ ತಿಳಿಸಿದೆ. [SSLC ಫಲಿತಾಂಶ: ಉಡುಪಿ ಫಸ್ಟ್, ಗದಗ ಲಾಸ್ಟ್] ಪೂರಕ ಪರೀಕ್ಷೆ ವಿವರಗಳು * ನಿಗದಿತ ಶುಲ್ಕದೊಂದಿಗೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಮೇ 21 ಕೊನೆ ದಿನ * ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಶುಲ್ಕ ಪಾವತಿ ಮಾಡಬೇಕು * ಒಂದು ವಿಷಯಕ್ಕೆ 200 ರು. * ಎರಡು ವಿಷಯಕ್ಕೆ 250 * ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಕ್ಕೆ 315 ಮರು ಮೌಲ್ಯಮಾಪನ ಮತ್ತು ಛಾಯಾ ಪ್ರತಿ ಅರ್ಜಿ ಸಲ್ಲಿಕೆ ವಿವರ * ಛಾಯಾ ಪ್ರತಿಗಾಗಿ ಅರ್ಜಿ ಸಲ್ಲಿಸಲಿ ಕೊನೆ ದಿನ ಮೇ 22 * ಛಾಯಾ ಪ್ರತಿ ಇಲ್ಲವೇ ಮರು ಮರು ಮೌಲ್ಯಮಾಪನ ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. * ಒಂದು ವಿಷಯ ಮರು ಎಣಿಕೆಗೆ-150 ರು * ಒಂದು ವಿಷ

ಎಸ್ ಎಸ್ ಎಲ್ ಸಿ ಜಿಲ್ಲಾವಾರು ಫಲಿತಾಂಶ ೨೦೧೫

Image
ಜಿಲ್ಲೆಗಳ ಶೇಕಡವಾರು ಫಲಿತಾಂಶ 1. ಉಡುಪಿ 93.37 2. ಚಿಕ್ಕೋಡಿ- 93.32 3. ಉತ್ತರ ಕನ್ನಡ- 92.87 4. ಶಿರಸಿ- 91.52 5. ಬೆಂಗಳೂರು ಗ್ರಾಮಾಂತರ- 91.10 6. ಮಂಡ್ಯ- 89.78 7. ರಾಮನಗರ- 89.62 8. ಮಂಗಳೂರು- 89.35 9. ಕೋಲಾರ- 89.20 10. ಮೈಸೂರು- 89.13 11. ಚಾಮರಾಜನಗರ- 89.04 12. ತುಮಕೂರು- 88.96 13. ಮಧುಗಿರಿ- 88.12 14. ಬೆಳಗಾವಿ- 87.39 15. ಹಾಸನ- 87.21 16. ದಾವಣಗೆರೆ- 87.15 17. ರಾಯಚೂರು- 87.03 18. ಕೊಡಗು- 86.90 19. ಚಿತ್ರದುರ್ಗ- 85.95 20. ಶಿವಮೊಗ್ಗ- 85.71 21. ಹಾವೇರಿ- 85.59 22. ಯಾದಗಿರಿ- 85.06 23. ಬೆಂಗಳೂರು ಉತ್ತರ- 84.90 24. ಬಳ್ಳಾರಿ- 84.70 25. ಧಾರವಾಡ- 84.54 26. ಚಿಕ್ಕಮಗಳೂರು- 83.91 27. ಚಿಕ್ಕಬಳ್ಳಾಪುರ- 82.58 28. ಬೀದರ್- 80.24 29. ಬೆಂಗಳೂರು ದಕ್ಷಿಣ- 78.50 30. ಬಾಗಲಕೋಟೆ- 77.20 31. ವಿಜಯಪುರ- 75.70 32. ಕಲಬುರಗಿ- 74.97 33. ಕೊಪ್ಪಳ- 71.91 34. ಗದಗ- 66.74

ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪಡೆಯಬಹುದಾದ ವೆಬ್‌ಸೈಟ್‌ಗಳು ಹಾಗೂ ಮೊಬೈಲ್‌ ಸಂಖ್ಯೆಗಳ ವಿವರ ಇಲ್ಲಿದೆ

ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪಡೆಯಬಹುದಾದ ವೆಬ್‌ಸೈಟ್‌ಗಳು ಹಾಗೂ ಮೊಬೈಲ್‌ ಸಂಖ್ಯೆಗಳ ವಿವರ ಇಲ್ಲಿದೆ (PSG) www.kseeb.kar.nic.in www.indiaresults.com ಅಥವಾ KAR10 ಎಂದು ಟೈಪ್‌ ಮಾಡಿ, ಸ್ಪೇಸ್‌ ಕೊಟ್ಟು 567675 ಅಥವಾ KAR ಎಂದು ಟೈಪ್‌ ಮಾಡಿ, ಸ್ಪೇಸ್‌ ಕೊಟ್ಟು ನೋಂದಣಿ ಸಂಖ್ಯೆ ಟೈಪ್‌ ಮಾಡಿ 56263ಗೆ ಕಳುಹಿಸಬಹುದು. ಮೊ: 98115 54192, 98736 98968. www.Knowyourresult.com   ಅಥವಾ KR10 ಎಂದು ಟೈಪ್‌ ಮಾಡಿ, ಸ್ಪೇಸ್‌ ಕೊಟ್ಟು 5888 ಮೊ: 83739 14257.

ಇಂದು ಮಧ್ಯಾಹ್ನ 2.30ಕ್ಕೆ ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ.

ಇಂದು ಮಧ್ಯಾಹ್ನ 2.30ಕ್ಕೆ ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ. (PSGadyal Teacher) ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶ ಮಂಗಳವಾರ ಪ್ರಕಟಗೊಳ್ಳಲಿದೆ. ಮಧ್ಯಾಹ್ನ 2.30ಕ್ಕೆ ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಪ್ರಕಟಿಸಲಾಗುವುದು. ಫ‌ಲಿತಾಂಶ ಪ್ರಕಟಗೊಂಡ ಕೆಲವೇ ಹೊತ್ತಿನಲ್ಲಿ ಇಲಾಖಾ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ಫ‌ಲಿತಾಂಶ ವೀಕ್ಷಿಸಬಹುದು. ಆದರೆ, ಅಧಿಕೃತವಾಗಿ ವಿದ್ಯಾರ್ಥಿಗಳಿಗೆ ಫ‌ಲಿತಾಂಶ ಬುಧವಾರ ಮಧ್ಯಾಹ್ನ 3.30ಕ್ಕೆ ಆಯಾ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಕಚೇರಿಗಳಲ್ಲಿ ದೊರೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೊಹ್ಸಿನ್‌ ತಿಳಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 8,56,366 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 8,37,433 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟಾರೆ ನೋಂದಾಯಿತ ವಿದ್ಯಾರ್ಥಿಗಳಲ್ಲಿ 4.52 ಲಕ್ಷ ಬಾಲಕರು ಹಾಗೂ 4.03 ಬಾಲಕಿಯರಿದ್ದಾರೆ. ಅಲ್ಲದೆ, 16,337 ಖಾಸಗಿ ಮತ್ತು 32,607 ಪುನರಾವರ್ತಿತ ವಿದ್ಯಾರ್ಥಿಗಳೂ ಸೇರಿದ್ದಾರೆ. ಇವರೆಲ್ಲರ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. ಮತ್ತೆ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ? ಉಡುಪಿ: ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಅಧಿಕೃತವಾಗಿ ಮ

Karnataka SSLC RESULT2015: also available on private websites(given below)

Image

Notification of KEA's PU College Lectures' Recruitment( 1131 posts)

Image

First President of BRICS BANK- KAMAT K V

Image
ಬ್ರಿಕ್ಸ್‌ ಬ್ಯಾಂಕ್‌ ಮೊದಲ ಅಧ್ಯಕ್ಷರಾಗಿ ಕೆ.ವಿ ಕಾಮತ್‌ ನೇಮಕ ಏಜೆನ್ಸೀಸ್  |  May 11, 2015, 03.15PM IST ಲೇಖನ ಅನಿಸಿಕೆಗಳು  (1) Tweet 1 ಹೊಸದಿಲ್ಲಿ : ಐಸಿಐಸಿಐ ಬ್ಯಾಂಕ್‌ ಅಧ್ಯಕ್ಷ ಕೆ.ವಿ ಕಾಮತ್‌ ಅವರನ್ನು ಬ್ರಿಕ್ಸ್‌ ಬ್ಯಾಂಕ್‌ನ ಮೊದಲ ಅಧ್ಯಕ್ಷರಾಗಿ ನೇಮಿಸಲು ಸರಕಾರ ನಿರ್ಧರಿಸಿದೆ. ಬ್ರಿಕ್ಸ್‌ ಬ್ಯಾಂಕ್‌ನ ಮೊದಲ ಅಧ್ಯಕ್ಷರಾಗಿ ರಾಜಕೀಯ ಮೂಲದವರು ನೇಮಕಗೊಳ್ಳುವ ನಿರೀಕ್ಷೆ ದಟ್ಟವಾಗಿದ್ದ ಸಂದರ್ಭದಲ್ಲಿ ಕಾಮತ್‌ ನೇಮಕ ಅಚ್ಚರಿ ತಂದಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ- ಬಹುಪಕ್ಷೀಯ ನಿಧಿ ಸಂಸ್ಥೆಯ ಸ್ಥಾಪಕ ಸದಸ್ಯ ರಾಷ್ಟ್ರಗಳು. ದೇಶ ಹಾಗೂ ಪ್ರಾಂತ್ಯದಲ್ಲಿ ಮೂಲಸೌಕರ್ಯ ಹಾಗೂ ದೀರ್ಘ ಕಾಲೀನ ಯೋಜನೆಗಳಿಗೆ ಹಣ ಒದಗಿಸುವ ನಿಟ್ಟಿನಲ್ಲಿ ಬ್ರಿಕ್ಸ್‌ ಬ್ಯಾಂಕ್‌ ಅತ್ಯಂತ ಮಹತ್ವ ಪಡೆದಿದೆ. ಒಪ್ಪಂದದಂತೆ, ಚೀನಾದಲ್ಲಿ ಬ್ಯಾಂಕ್‌ನ ಕೇಂದ್ರ ಕಚೇರಿ ಸ್ಥಾಪನೆ ಆದರೆ, ಬಹುಪಕ್ಷೀಯ ಬ್ಯಾಂಕ್‌ನ ಮೊದಲ ಮುಖ್ಯಸ್ಥರನ್ನು ನಾಮನಿರ್ದೇಶನಗೊಳಿಸುವ ಹಕ್ಕು ಭಾರತಕ್ಕಿದೆ. ಬ್ಯಾಂಕ್‌ ಸ್ಥಾಪನೆಯ ಕಠಿಣ ಸವಾಲು ಕಾಮತ್‌ ಅವರಿಗಿದ್ದು, ಮುಂಬರುವ ವರ್ಷಗಳಲ್ಲಿ ಬ್ರಿಕ್ಸ್‌ ಬ್ಯಾಂ