Posts

Portugal's Jorge Sampaio and Namibian Helena Ndume were awarded the 1st UN Nelson Mandela Prize,

ಇಬ್ಬರಿಗೆ ನೆಲ್ಸನ್ ಮಂಡೇಲಾ ಪ್ರಶಸ್ತಿ ಪ್ರದಾನ ವಿಶ್ವಸಂಸ್ಥೆ (ಐಎಎನ್ಎಸ್): ವಿಶ್ವ ಸಂಸ್ಥೆಯ ಪ್ರತಿಷ್ಠಿತ ‘ನೆಲ್ಸನ್ ರೊಲಿಹ್ಲಾಹ್ಲ ಮಂಡೇಲಾ ಪ್ರಶಸ್ತಿ’ಗೆ ನಮೀಬಿಯಾ ದೇಶದ ನೇತ್ರ ತಜ್ಞೆ ಹೆಲೆನಾ ನುಡುಮೆ ಹಾಗೂ ಪೋರ್ಚ್ಗಲ್ನ ಜೋರ್ಗ್ ಸ್ಯಾಂಪಿಯೊ ಅವರು ಪಾತ್ರ ರಾಗಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರಿಗೆ ಪ್ರದಾನ ಮಾಡಲಾಯಿತು. ಮಾನವೀಯ ಸೇವೆಗಳಲ್ಲಿ ತೊಡಗಿ ಸಿಕೊಂಡವರಿಗೆ ನೆಲ್ಸನ್ ಮಂಡೇಲಾ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿ ನೀಡಲು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿತ್ತು. ನಿಡುಮೆ ಅವರು, ನಮೀಬಿಯಾ ಹಾಗೂ ವಿಶ್ವದ ಇತರೆಡೆಯ ಅಂಧರು ಹಾಗೂ ದೃಷ್ಟಿದೋಷ ತೊಂದರೆ ಅನುಭವಿಸುತ್ತಿರುವವರ ಸೇವೆಯಲ್ಲಿ ತೊಡಗಿಸಿಕೊಂಡಿದ್ ದಾರೆ. ಜೋರ್ಗ್ ಸ್ಯಾಂಪಿಯೊ ಅವರು, ಪೋರ್ಚುಗಲ್ನ ಮಾಜಿ ಅಧ್ಯಕ್ಷ. ಇವರು 1996ರಿಂದ 2006ರವರೆಗೆ ಪೋರ್ಚ್ ಗಲ್ನ ಅಧ್ಯಕ್ಷರಾಗಿದ್ದರು.

TET / BANK EXAM galalli barabahudad ODD MAN OUT Qsns

Image

FDA EXAM ge poorakavaguv Bahu Ayke prashnegalu..frm Vijay Next paper

Image

MCQs on Maths: Useful for all competitive exams.. frm Vijay Next paper

Image

Cut-Off Percentage of 1:2 verification list Group D posts in Karnataka Health Department

Image

Vijay Divas:celebrations to mark the 15th anniversary of India's victory in Kargil War,

Vijay Diwas celebrations kick-start in Drass today Drass: The elaborate celebrations to mark the 15th anniversary of India's victory in Kargil War, also called as Vijay Diwas, commenced here from today when senior officers and ex- servicemen will remember those who put down their lives while defending the country. Though the celebrations began on July 20, the main functions will be held over the next two days beginning today. In the evening, a pipe band and brass band display will be held which will be followed by a beating retreat ceremony. Then the army will hold a memorial service at the Kargil War Memorial where prayers by religious leaders will also be held. They will be followed by lighting of lamps. The wreath laying ceremony for the martyred will be held on Sunday which will be followed by an interaction with Veer Naris. Last evening, the army organised a dare devil show which enthralled the audience who had turned up in

ಜುಲೈ 26 ವಿಶ್ವ ಕಾಂಡ್ಲ(walking trees) ದಿನಾಚರಣೆ

Image
- ನಡೆದಾಡುವ ಮರಗಳು(ವಾಕಿಂಗ್ ಟ್ರೀಸ್) ಎಂದರೆ ಅದು ಕಾಂಡ್ಲಾ ಅಂತಲೇ ಅರ್ಥ. ಇವು ಭೂಮಿಯ ಮೇಲಿನ ಶ್ರೇಷ್ಠ ಪರಿಸರ ಉತ್ಪಾದಕ ಸಸ್ಯ ಸಂಪತ್ತು. ಸುನಾಮಿಗಳ ಹೊಡೆತಕ್ಕೂ ಜಗ್ಗದ ಬಿಗಿ ಹಿಡಿತದ ಕಾಂಡ್ಲಾಗಳು ಮನುಷ್ಯನೂ ಸೇರಿದಂತೆ ಜಗತ್ತಿನ ಬಹುಪಾಲು ಜೀವ ಸಂಕುಲಗಳ ದಿನಚರಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಆಸರೆಯಾಗಿ ನೆಲೆ ನಿಂತಿದೆ. ಉತೆ³ೆÅàಕ್ಷೆ ಎನಿಸುವಷ್ಟು ಮಟ್ಟದಲ್ಲಿ ವಿಶೇಷತೆಗಳು ಕಾಂಡ್ಲಾದಲ್ಲಿದೆ. ಒಮ್ಮೆ ಬೇರೂರಿತೆಂದರೆ ಮತ್ತೆಂದೂ ನಾಶವಿಲ್ಲದ ಇಂಥ ಕಾಂಡ್ಲಾದ ಬಗ್ಗೆ ಒಂದಿಷ್ಟು ಪ್ರಮುಖ ಮಾಹಿತಿ ಇಲ್ಲಿದೆ. ಕಾಂಡ್ಲ ಕಾಡುಗಳು ಕಾಂಡ್ಲಗಳು ಕರಾವಳಿ ಪ್ರದೇಶದ ಲವಣ ಮಿಶ್ರಿತ ಜೌಗು ಮಣ್ಣಿನಲ್ಲಿ ಬೆಳೆಯುವ ಸಾಮರ್ಥ್ಯವಿರುವ ವಿಶೇಷ ರೀತಿಯ ಸಸ್ಯಗಳಾಗಿದೆ. ನದಿ ಸಂಗಮದ ಅಳಿವೆ ಪ್ರದೇಶಗಳು, ಹಿನ್ನೀರ ಪ್ರದೇಶಗಳು ಮೊದಲಾದ ಕಡೆಗಳಲ್ಲಿ ಕಾಂಡ್ಲಾ ಸಸ್ಯಗಳು ಬೆಳೆಯುತ್ತವೆ. ಬೆಳೆಯುವ ಹಂತದಲ್ಲೇ ಒಂದಕ್ಕೊಂದು ಸರಣಿಯಂತೆ ಒತ್ತೂತ್ತಾಗಿ ಬೆಳೆಯುವ ಕಾಂಡ್ಲ ಸಸ್ಯಗಳು ಕೆಲ ಸಮಯದಲ್ಲೇ ದಟ್ಟ ಕಾಂಡ್ಲ ಕಾಡುಗಳಾಗಿ ರೂಪುಗೊಂಡು ನಿರಂತರ ಹಬ್ಬುತ್ತದೆ. ಆದ್ದರಿಂದ ಇವುಗಳನ್ನು ನಡೆದಾಡುವ ಮರಗಳು ಎನ್ನುತ್ತಾರೆ. ನಮ್ಮ ದೇಶದ ಕರಾವಳಿಯಲ್ಲಿ ಸುಮಾರು 4700 ಚ ಕಿ.ಮೀ ಕಾಂಡ್ಲ ಕಾಡುಗಳಿವೆ. ಇವುಗಳಲ್ಲಿ ಶೇ. 60 ರಷ್ಟು ಪೂರ್ವ ಕರಾವಳಿ, ಶೇ. 25 ರಷ್ಟು ಪಶ್ಚಿಮ

ಡೈಮಂಡ್ ಲೀಗ್ ಕ್ರೀಡಾಕೂಟದ 100 ಮೀ. ಓಟದಲ್ಲಿ ಸ್ವರ್ಣ ಪದಕ ಗೆದ್ದ ಬೋಲ್ಟ್

Image
ಲಂಡನ್: ಆರು ಬಾರಿ ಒಲಿಂಪಿಕ್ ಚಾಂಪಿಯನ್ ಎನಿಸಿಕೊಂಡಿರುವ ಉಸೇನ್ ಬೋಲ್ಟ್ ಮತ್ತೆ ಫಾಮರ್್​ಗೆ ಮರಳಿಸಿದ್ದಾರೆ. ಲಂಡನ್ ಒಲಿಂಪಿಕ್ ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಕ್ರೀಡಾಕೂಟದ 100 ಮೀ. ಓಟದಲ್ಲಿ ಸ್ವರ್ಣ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೋಲ್ಟ್ 2012ರಲ್ಲಿ ನಡೆದ ಒಲಿಂಪಿಕ್ಸ್​ ನಲ್ಲಿ ಇದೇ ಟ್ರ್ಯಾಕ್ ಮೇಲೆ ಮೂರು ಸ್ವರ್ಣ ಪದಕ ಗೆದ್ದುಕೊಂಡಿದ್ದರು. 100 ಮೀಟರ್ ದೂರವನ್ನು ಕೇವಲ 9.87 ಸೆಕೆಂಡ್​ಗಳಲ್ಲಿ ತಲುಪಿ ಅಚ್ಚರಿ ಮೂಡಿಸಿದ್ದರು. ಈಗಲೂ ಇದೇ ಸಮಯದಲ್ಲಿ 100 ಮೀಟರ್ ಗುರಿ ತಲುಪಿ ಸ್ವರ್ಣ ಸಂಪಾದಿಸಿದ್ದಾರೆ.ಸ ನಂತರ ಪ್ರತಿಕ್ರಿಯಿಸಿರುವ ಬೋಲ್ಟ್, ಹೀಟ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಆದರೆ ಫೈನಲ್​ನಲ್ಲಿ ನಿರೀಕ್ಷೆಂತೆ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಅದು ಬೇಸರವನ್ನುಂಟು ಮಾಡಿತು ಎಂದಿದ್ದಾರೆ. 9.9 ಸೆಕೆಂಡ್​ಗಳಲ್ಲಿ ಗುರಿ ತಲುಪಿದ ಅಮೆರಿಕದ ಮೈಕೆಲ್ ರೋಜರ್ಸ್ ಬೆಳ್ಳಿ, ಇನ್ನೊಬ್ಬ ಜಮೈಕಾ ಅಥ್ಲೀಟ್ ಕೆಮರ್ ಬೈಲಿ ಕಂಚು ಸಂಪಾದಿಸಿದ್ದಾರೆ. ಇನ್ನು ಬ್ರಿಟನ್​ನ ಜನಪ್ರಿಯ ಅಥ್ಲೀಟ್ ಮೊ ಫರ್ಹ ಡೋಪ್ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಸ್ಪರ್ಧಾ ಕಣಕ್ಕೆ ಧುಮುಕಿ 3000 ಮೀಟರ್ ಓಟದಲ್ಲಿ ಬಂಗಾರ ಪದಕ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

NEXT YEAR ONWARDS RTE SEATS ONLY FOR BPL CARDHOLDERS - KIMMANE RATNAKAR

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳಿಗೆ ಮಾತ್ರ ಆರ್ಟಿಇ ಸೀಟು ಬೆಂಗಳೂರು,ಜು.25-ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲೇ ಯುಕೆಜಿ ಶಿಕ್ಷಣ ಆರಂಭಿಸುವ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳಿಗೆ ಮಾತ್ರ ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಕೊಡಿಸುವ ಮಹತ್ವದ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯಲು ಆದಾಯ ಪ್ರಮಾಣಪತ್ರವನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಇದು ಬಹಳಷ್ಟು ದುರುಪಯೋಗವಾಗುತ್ತಿದೆ. 10 ಲಕ್ಷ ಆದಾಯ ಇರುವವರು ಸುಲಭವಾಗಿ 35 ಸಾವಿರ ರೂ.ಆದಾಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದರಿಂದ ಆರ್ಹರಿಗೆ ಅವಕಾಶಗಳು ಸಿಗುತ್ತಿಲ್ಲ. ನಾವು ಎಲ್ಲಾ ಸೀಟುಗಳನ್ನು ಭರ್ತಿ ಮಾಡುವುದಕ್ಕಿಂತಲೂ ಎಷ್ಟು ಮಂದಿ ಅರ್ಹರಿಗೆ ಸೀಟು ಕೊಡಿಸಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಜತೆಗೆ ಸರ್ಕಾರವೇ ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಉಂಟಾಗಿದೆ. ಹೀಗಾಗಿ ನಿಯಮಾವಳಿಗಳನ್ನು ಬದ

Mandya ZP CEO Rohini Sindhuri launches M-Aasthi android app to issue land records and to put and end to delay in providing land records to rural areas. M aasthi is an Android-based mobile application in the district.

ಎಂ- ಆಸ್ತಿ ಅಪ್ ಮೂಲಕ ಇ ಖಾತಾ ಪಡೆಯಿರಿ: ರೋಹಿಣಿ Posted by: Mahesh | Fri, Jul 24, 2015, 17:24 [IST] ಮಂಡ್ಯ, ಜುಲೈ 24: ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಅವರು ಗ್ರಾಮೀಣ ಭಾಗದಲ್ಲಿ ಆಸ್ತಿ ಪತ್ರ ಪಡೆಯಲು ಈಗ ಸುಲಭ ಹಾಗೂ ಸರಳ ವಿಧಾನವನ್ನು ಪರಿಚಯಿಸಿದ್ದಾರೆ. ಮೊಬೈಲ್ ಅಪ್ಲಿಕೇಷನ್ ಮೂಲಕ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ. ಎಂ ಆಸ್ತಿ ಎಂಬ ಹೆಸರಿನ ಮೊಬೈಲ್ ಅಪ್ಲಿಕೇಷನ್ ಸದ್ಯಕ್ಕೆ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಲಭ್ಯವಿದ್ದು, ಸುಲಭವಾಗಿ ಆಸ್ತಿ ಪಾಸ್ತಿ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದುಕೊಳ್ಳಬಹುದಾಗಿದೆ ಎಂದು ರೋಹಿಣಿ ಹೇಳಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಅಪ್ಲಿಕೇಷನ್ ಇದಾಗಿದೆ. ಈ ಎಂ -ಆಸ್ತಿ ಅಪ್ಲಿಕೇಷನ್ ಬಳಸಿಕೊಂಡು ಸುಲಭವಾಗಿ ಇ ಖಾತಾವನ್ನು ಪಡೆದುಕೊಳ್ಳಬಹುದು ಎಂದು ರೋಹಿಣಿ ವಿವರಿಸಿದರು. ಮಂಡ್ಯ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಹೊಸ ಯಶಸ್ಸು ಸಾಧಿಸಿ ರಾಷ್ಟ್ರಮಟ್ಟದಲ್ಲಿ ಸಿಇಒ ರೋಹಿಣಿ ಅವರು ಮಾನ್ಯತೆ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಎಂ-ಆಸ್ತಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಿ.

1401 ಸರ್ಕಾರಿ ವೈದ್ಯರ ನೇಮಕಕ್ಕೆ ಅಧಿಸೂಚನೆ

1401 ಸರ್ಕಾರಿ ವೈದ್ಯರ ನೇಮಕಕ್ಕೆ ಅಧಿಸೂಚನೆ (PSGadyal Teacher Vijayapur). ವಿಧಾನಸಭೆ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1401 ವೈದ್ಯರು, ತಜ್ಞ ವೈದ್ಯರು ಮತ್ತು ದಂತವೈದ್ಯರ ನೇಮಕಾತಿಗೆ ಕೆಪಿಎಸ್‌ಸಿ ಅಧಿಸೂಚನೆ ಪ್ರಕಟಿಸಿದೆ. ಗುರುವಾರ ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್‌ ಈ ವಿಷಯ ಪ್ರಕಟಿಸಿದರು. ವೈದ್ಯರ ನೇಮಕಾತಿ ಕುರಿತಂತೆ ಕೆಪಿಎಸ್‌ಸಿ ಅಧಿಸೂಚನೆ ಪ್ರಕಟಿಸಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್‌ 10 ಕೊನೆಯ ದಿನ. ಅರ್ಜಿ ಶುಲ್ಕ ಪಾವತಿಸಲು ಆ. 10 ಕಡೆಯ ದಿನವಾಗಿದೆ ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 983 ತಜ್ಞ ವೈದ್ಯರು, 331 ಎಂಬಿಬಿಎಸ್‌ ವೈದ್ಯರು ಮತ್ತು 87 ದಂತ ವೈದ್ಯ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಇದಕ್ಕಾಗಿ ವಿಶೇಷ ನೇಮಕಾತಿ ನಿಯಮ ರೂಪಿಸಿ ಕೆಪಿಎಸ್‌ಸಿಗೆ ನೀಡಲಾಗಿದ್ದು, ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, 2-3 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಪರೀಕ್ಷೆ, ಸಂದರ್ಶನ ಇಲ್ಲ: ಹೊಸ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಲಿಖೀತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆ ತೇರ್ಗಡೆಯಾಗಲು ನೇಮಕಾತಿ ನಂತರ 2 ವರ್ಷ ಕಾಲಾವಕಾಶ ನೀಡ

ಬಿಪಿಎಲ್‌ ಕಾರ್ಡುದಾರರಿಗೆ ಇನ್ನು ಎಸ್ಸೆಮ್ಮೆಸ್‌ನಲ್ಲಿ ಮಾಹಿತಿ

ಬಿಪಿಎಲ್‌ ಕಾರ್ಡುದಾರರಿಗೆ ಇನ್ನು ಎಸ್ಸೆಮ್ಮೆಸ್‌ನಲ್ಲಿ ಮಾಹಿತಿ Educationgknews. ವಿಧಾನಸಭೆ: ಪಡಿತರ ವ್ಯವಸ್ಥೆಯಡಿ ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಆಯಾ ತಿಂಗಳು ಸಿಗುವ ಅಕ್ಕಿ, ಗೋಧಿ, ಸೀಮೆ ಎಣ್ಣೆ, ತಾಳೆಎಣ್ಣೆ, ಉಪ್ಪು ಎಷ್ಟು? ಅದಕ್ಕೆ ಪಾವತಿಸಬೇಕಾದ ದರ ಏನು ಎಂಬ ಬಗ್ಗೆ ಇನ್ನು ಮುಂದೆ ಬಿಪಿಎಲ್‌ ಕಾರ್ಡ್‌ದಾರರ ಮೊಬೈಲ್‌ಗೆ ಪ್ರತಿ ತಿಂಗಳು ಇಲಾಖೆಯಿಂದ ಎಸ್‌ಎಂಎಸ್‌ ಬರಲಿದೆ. ಹೌದು, ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚು ದರ ವಸೂಲಿ ಮಾಡುವುದು, ನಿಗದಿತ ಪ್ರಮಾಣದಲ್ಲಿ ಪಡಿತರ ವಿತರಿಸದೇ ಇರುವುದನ್ನು ತಡೆಗಟ್ಟಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ವ್ಯವಸ್ಥೆ ಜಾರಿಗೆ ತರಲಿದೆ. ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಜೆಡಿಎಸ್‌ ಸದಸ್ಯ ಅಖಂಡ ಶ್ರೀನಿವಾಸಮೂರ್ತಿ ಅವರ ಪರವಾಗಿ ಗೋಪಾಲಯ್ಯ ಕೇಳಿದ ಪ್ರಶ್ನೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಈ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ಜತೆಗೆ ಕಾರ್ಡ್‌ದಾರರ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸಲಾಗುತ್ತಿದ್ದು, ಪ್ರಸ್ತುತ 80 ಲಕ್ಷ ಮಂದಿ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಡ್‌ದಾರರಿಗೆ ಪ್ರತಿ ತಿಂಗಳು ಲಭ್ಯವಿರುವ ಪಡಿತರ ಮತ್ತು ಅದಕ್ಕೆ ಎಷ್ಟು ದರ ಪಾವತಿಸಬೇಕು ಎಂಬ ಬಗ್ಗೆ ಈ ಮೊಬೈಲ್‌ ಸಂಖ್ಯೆಗಳಿಗೆ ಎಸ್‌ಎಂಎಸ್‌ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ ಎಂದರು. ಅಕ್ರಮ ಬಿಪಿಎಲ್‌ ಕಾರ್

ಫಾರ್ಚ್ಯೂನ್ ಪಟ್ಟಿಗೆ ಭಾರತದ 7 ಕಂಪೆನಗಳು

Image
ನ್ಯೂಯಾರ್ಕ್ (ಪಿಟಿಐ): ಫಾರ್ಚ್ಯೂನ್ ಸಿದ್ಧಪಡಿಸಿರುವ ವಿಶ್ವದ 500 ಬೃಹತ್ ಕಂಪೆನಿಗಳ ಪಟ್ಟಿಯಲ್ಲಿ ಭಾರತದ ಏಳು ಕಂಪೆನಿಗಳೂ ಸ್ಥಾನ ಪಡೆದುಕೊಂಡಿವೆ. ಭಾರತೀಯ ತೈಲ ನಿಗಮ (ಐಒಸಿ), ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಎಚ್ಪಿಸಿಎಲ್), ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ) 'ಫಾರ್ಚ್ಯೂನ್-500 ಲಾರ್ಜೆಸ್ಟ್ ಕಂಪೆನೀಸ್' ಪಟ್ಟಿಗೆ ಸೇರಿವೆ. ವಿಶ್ವದ ಈ 500 ಬೃಹತ್ ಕಂಪೆನಿಗಳು 2014ರಲ್ಲಿ ಒಟ್ಟಾರೆಯಾಗಿ 31.2 ಲಕ್ಷ ಕೋಟಿ ಅಮೆರಿಕನ್ ಡಾಲರ್ ವರಮಾನ ಗಳಿಸಿದ್ದು, ಒಟ್ಟು 1.70 ಲಕ್ಷ ಕೋಟಿ ಡಾಲರ್ಗಳಷ್ಟು ನಿವ್ವಳ ಲಾಭವನ್ನೂ ಗಳಿಸಿವೆ. 500 ಕಂಪೆನಿಗಳು ವಿಶ್ವದ 36 ದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದು, ಒಟ್ಟಾರೆಯಾಗಿ 65 ಲಕ್ಷ ಮಂದಿಗೆ ಉದ್ಯೋಗಾವಕಾಶ ನೀಡಿವೆ. ವಾಲ್ಮಾರ್ಟ್ ಪ್ರಥಮ: 'ಫಾರ್ಚ್ಯೂನ್-500 ಲಾರ್ಜೆಸ್ಟ್ ಕಂಪೆನೀಸ್' ಪಟ್ಟಿಯಲ್ಲಿ ವಾಲ್ಮಾರ್ಟ್ ಮೊದಲ ಸ್ಥಾನದಲ್ಲಿದೆ. ಚೀನಾದ ತೈಲ ಸಂಸ್ಕರಣೆ ಕಂಪೆನಿ ಸಿನ್ ಒಪೆಕ್ ಗ್ರೂಪ್ ಎರಡನೇ ಸ್ಥಾನದಲ್ಲಿದೆ. ನೆದರ್ಲೆಂಡ್ನ ರಾಯಲ್ ಡಚ್ ಷೆಲ್, ಚೀನಾ ನ್ಯಾಷನಲ್ ಪೆಟ್ರೋಲಿಯಂ, ಎಕ್ಸಾನ್ ಮೊಬಿಲ್ ನಂತರದ ಸ್ಥಾನಗಳಲ

E-SIMCARD:Samsung and others look to create a single e - SIM card for all carriers

ಶೀಘ್ರವೇ ಸಿಮ್ ಕಾರ್ಡ್ ಜಾಗಕ್ಕೆ ಇ-ಸಿಮ್? ಲಂಡನ್: ಪೇಜರ್, ಕಾರ್ ಫೋನ್ ನಂತೆಯೇ ಸಿಮ್ ಕಾರ್ಡ್ ಕೂಡ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ. ಸಿಮ್ ಕಾರ್ಡ್ಗಳ ಜಾಗದಲ್ಲಿ ಇ-ಸಿಮ್ ಗಳನ್ನು ತರಲು ಆ್ಯಪಲ್ ಮತ್ತು ಸ್ಯಾಮ್ ಸಂಗ್ ಚಿಂತನೆ ನಡೆಸುತ್ತಿದೆ. ಮೊಬೈಲ್ ಟೆಲಿಕಾಂ ಇಂಡಸ್ಟ್ರಿಯನ್ನು ಪ್ರತಿನಿಧಿಸುತ್ತಿರುವ ಜಿಎಸ್ಎಂಎ ಜತೆ ಈ ಎರಡೂ ಮೊಬೈಲ್ ಸಂಸ್ಥೆಗಳು ಈ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಎಲೆಕ್ಟ್ರಾನಿಕ್ ಸಿಮ್ ಕಾರ್ಡ್ಗಳ ಬಳಕೆಯು ಬಹಳ ಸರಳವಾಗಿದ್ದು, ಗ್ರಾಹಕರು ಸುಲಭವಾಗಿ ಮೊಬೈಲ್ ನೆಟ್ ವರ್ಕ್ಗಳನ್ನು ಅದಲು ಬದಲು ಮಾಡಬಹುದು. ಐಪ್ಯಾಡ್ ಏರ್ 2 ಜೊತೆಗೆ ಬಿಡುಗಡೆಯಾದ ಆ್ಯಪಲ್ ಸಿಮ್ ನಲ್ಲಿ ಬಳಸಲಾದ ತಂತ್ರಜ್ಞಾನದ ಮಾದರಿಯನ್ನೇ ಇ-ಸಿಮ್ ನಲ್ಲೂ ಬಳಸಲಾಗುತ್ತದೆ. ಹೀಗಾಗಿ ಗ್ರಾಹಕರು ಡಾಟಾ ನೆಟ್ವರ್ಕ್ ಅನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳ ಬಹುದು. ಇ-ಸಿಮ್ ಅನ್ನು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ನಲ್ಲೂ ಬಳಸಬಹುದಾಗಿದೆ. ಮುಂದಿನ ತಲೆಮಾರಿನ ಎಲ್ಲ ಫೋನುಗಳೂ ಇ-ಸಿಮ್ಅನ್ನು ಒಳಗೊಂಡಿರಲಿದೆ. 2016ರ ವೇಳೆಗೆ ಹೊಸ ಸಿಮ್ ಚಾಲ್ತಿಗೆ ಬರಬಹುದು ಎಂದು ಜಿಎಸ್ಎಂಎ ತಿಳಿಸಿದೆ.

ಟ್ವಿಟರ್ ಜೊತೆ ಕಲಿ ಕನ್ನಡ LEARN KANNADA WITH TWITTER

ಅಧುನೀಕರಣ, ಜಾಗತೀಕರಣ, ತಾಂತ್ರೀಕರಣ ಮುಂತಾದ ಬೃಹತ್ ಪರಿವರ್ತನೆಗಳಲ್ಲಿ ಕನ್ನಡದ ಉಳಿವು–ಬೆಳವಿನ ಕುರಿತು ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯಾಕೆಂದರೆ ಕನ್ನಡ ಈ ಹೊತ್ತು ಭಾಷೆಯಾಗಿ ಮಾತ್ರ ಉಳಿದಿಲ್ಲ. ವ್ಯವಹಾರ, ಸಂಸ್ಕೃತಿ, ಚಿಂತನೆ, ಸಂಪ್ರದಾಯ ಮುಂತಾಗಿ ವ್ಯಾಪಿಸಿಕೊಂಡಿದೆ. ಅದರಲ್ಲೂ ದಶಕದ ಈಚೆಗಿನ ತಾಂತ್ರಿಕ ಬೆಳವಣಿಗೆಗಳು ಕನ್ನಡ ಭಾಷೆಯನ್ನು ಜಾಗತಿಕ ಮಟ್ಟದಲ್ಲಿ ಸಜ್ಜುಗೊಳಿಸಿವೆ. ಟ್ವಿಟರ್, ಫೇಸ್ಬುಕ್, ವಾಟ್ಸ್ಆ್ಯಪ್ನಂತಹ ಸಾಮಾಜಿಕ ತಾಣಗಳು ಕನ್ನಡಕ್ಕೆ ಜಾಗತಿಕ ನೆಲೆ, ಬೆಲೆ ತಂದುಕೊಟ್ಟಿವೆ. ಆದರೆ, ಅಲೈಯನ್ಸ್ ಫ್ರಾನ್ಸೆನಲ್ಲಿ ( https:// goo.gl/3SuwtZ ) ಫ್ರೆಂಚ್, ಮ್ಯಾಕ್ಸ್ ಮ್ಯುಲರ್ನಲ್ಲಿ ಜರ್ಮನ್ ಕಲಿಸುವ ರೀತಿಯಲ್ಲಿ ಅತ್ಯಂತ ವೃತ್ತಿಪರವಾದ ರೀತಿಯಲ್ಲಿ ಕನ್ನಡ ಕಲಿಕೆಯ ವ್ಯವಸ್ಥೆಗಳು ನಮ್ಮಲ್ಲಿ ಇನ್ನೂ ರೂಪುಗೊಂಡಿಲ್ಲ. ಹೀಗೆ ಕನ್ನಡ ಜನಪ್ರಿಯಗೊಂಡರೆ ಅದಕ್ಕೆ ಮಾರುಕಟ್ಟೆ ಮೌಲ್ಯ ಹೆಚ್ಚುತ್ತದೆ. ಅನ್ಯಭಾಷಿಕರು ಕನ್ನಡ ಕಲಿಯಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಅಷ್ಟೇ ಅಲ್ಲ, ಹೊಸ ತಲೆಮಾರಿನ ತಾಂತ್ರಿಕ ಆವಿಷ್ಕಾರಗಳಲ್ಲಿ ಕನ್ನಡ ಬಳಕೆಯ ಸಾಧ್ಯತೆಯೂ ಹೆಚ್ಚಲಿದೆ ಎನ್ನುತ್ತಾರೆ ಐಟಿ ವೃತ್ತಿಪರರಾದ ಶಿವಮೊಗ್ಗ ಜಿಲ್ಲೆಯ ಜಯಂತ್ ಸಿದ್ಮಲ್ಲಪ್ಪ ಮತ್ತು ರವಿ ಸಾವ್ಕಾರ್. ಬೆಂಗಳೂರಿನ ಬೇರೆ ಬೇರೆ ಸಾಫ್ಟ್ವೇರ್ ಕಂಪೆನಿಗಳಲ್ಲಿ ಎಂಜ

Billgates couples RICHEST IN THE WORLD

Image
ವೆಲ್ತ್ ಎಕ್ಸ್ ಜಾಗತಿಕ ಸಂಪತ್ತು ಸಮೀಕ್ಷೆ : ಬಿಲ್ ಗೇಟ್ಸ್ ದಂಪತಿ ಜಗದ ಸಿರಿವಂತರು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ನ್ಯೂಯಾರ್ಕ್ (ಪಿಟಿಐ): ಎಂಟು ಸಾವಿರದ ಐನೂರು ಕೋಟಿ ಡಾಲರ್ (ಅಂದಾಜು ₹5.44 ಲಕ್ಷ ಕೋಟಿ) ಮೌಲ್ಯದ ಸಂಪತ್ತು ಹೊಂದಿರುವ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಜಗತ್ತಿನ ಶ್ರೀಮಂತ ದಂಪತಿ ಎಂದು ಜಾಗತಿಕ ಸಂಪತ್ತು ಸಮೀಕ್ಷಾ ಸಂಸ್ಥೆ ವೆಲ್ತ್ ಎಕ್ಸ್ ವರದಿ ಬುಧವಾರ ಹೇಳಿದೆ. 1975ರಲ್ಲಿ ಸ್ಥಾಪನೆಗೊಂಡ ಮೈಕ್ರೊಸಾಫ್ಟ್ ಸಂಸ್ಥೆಗೆ ಬಿಲ್ ಗೇಟ್ಸ್ ಸಹ ಸಂಸ್ಥಾಪಕರಾಗಿದ್ದರು. ಇದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮೆಲಿಂಡಾ ಅವರನ್ನು ಗೇಟ್ಸ್ 1994ರಲ್ಲಿ ಮದುವೆಯಾದರು. 2000ನೇ ಇಸವಿಯಲ್ಲಿ ಗೇಟ್ಸ್ ದಂಪತಿ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಆರಂಭಿಸಿದರು. ಕೃಷಿ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಮತ್ತು ಇತರ ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಪ್ರತಿಷ್ಠಾನದ ಮುಖ್ಯ ಗುರಿ. ಏಳು ಸಾವಿರ ಕೋಟಿ ಡಾಲರ್ (ಸುಮಾರು ₹4.40 ಲಕ್ಷ ಕೋಟಿ) ಮೌಲ್ಯದ ಸಂಪತ್ತು ಹೊಂದಿರುವ ಸ್ಪೇನ್ ಮೂಲದ ಚಿಲ್ಲರೆ ವ್ಯಾಪಾರ ಕ್ಷೇತ್ರದ ದಿಗ್ಗಜ ಆ್ಯಮಾನ್ಸಿಯೊ ಒರ್ಟೆಗ ಗೊವಾನ್ ಮತ್ತು ಅವರ ಎರಡನೇ ಹೆಂಡತಿ ಪ್ಲೋರ್ ಪೆರೆಝ್ 'ವೆಲ್ತ್ ಎಕ್ಸ್' ಪ್ರಕಟಿಸಿದ ಶ್ರೀಮಂತ ದಂಪತಿ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಆರು ಸಾವಿರದ ಐನೂರು ಕೋಟ

Link ur Aadhar to NPR Data SMS to 166 or 51969.

Image
ECILINK <EPIC Number> <Aadhaar number> e.g. ECILINK IJH3456780 123456789123 Govt linking NPR data with Aadhaar numbers UdayavaniEnglish.com, Jul 22, 2015, 5:42 PM IST New Delhi: Government has decided to update the National Population Register (NPR) and seed the Aadhaar number in the NPR database. Minister of State for Home Haribhai Parathibhai Chaudhary told Rajya Sabha that the initiative would cost Rs 951.35 crore and the field work would be completed by March 2016. "This updated NPR database along with Aadhaar number would become the mother database and can be used by various government departments for selection of beneficiaries under their respective schemes," he said in reply to a written question. There is no duplication of efforts as all the agencies namely Registrar General of Citizen Registration India, Ministry of Home Affairs, Unique Identification Authority of India, NITI Aayog, Direct Benefi

ಬೆಂಗಳೂರು ಶಿಕ್ಷಕರಿಗೆ ಅಮೆರಿಕದದಲ್ಲಿ ಬಾಹ್ಯಾಕಾಶ ತರಬೇತಿ

ಬೆಂಗಳೂರು ಶಿಕ್ಷಕರಿಗೆ ಅಮೆರಿಕದದಲ್ಲಿ ಬಾಹ್ಯಾಕಾಶ ತರಬೇತಿ (PSGadyal Teacher Vijayapur ). ಬೆಂಗಳೂರು, ಜು, 22: ನಗರದ ನಾಲ್ಕು ಜನ ಶಿಕ್ಷಕರು ಅಮೆರಿಕಕ್ಕೆ ತೆರಳಿ ಬಾಹ್ಯಾಕಾಶ ವಿಜ್ಞಾನದಲ್ಲಿ ಅನುಭವ ಮತ್ತು ತರಬೇತಿ ಪಡೆದು ಹಿಂದಿರುಗಿದ್ದಾರೆ. ಅಮೆರಿಕದ ಅಲಬಾಮಾದ ಹಂಟ್ಸ್ ವಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಯುಎಸ್ ಅಂತರಿಕ್ಷ ಕಾರ್ಯಾಗಾರದಲ್ಲಿ ಭಾಗವಹಿಸಿ ಹಿಂದಿರುಗಿದ್ದಾರೆ, ಕೇವಲ ಬಾಹ್ಯಾಕಾಶದ ಬಗ್ಗೆ ತಿಳಿವಳಿಕೆ ಮಾತ್ರವಲ್ಲದೇ, ಚಂದ್ರನ ಮೇಲೆ ಕಾಲಿಟ್ಟರೆ ಯಾವ ರೀತಿಯಾಗುತ್ತದೆ ಎಂಬ ಅನುಭವವನ್ನು ಪಡೆದುಕೊಂಡು ಬಂದಿದ್ದಾರೆ. ಕಾರ್ಯಾಗಾರದಲ್ಲಿ 200 ಜನ ಶಿಕ್ಷಕರು ಭಾಗವಹಿಸಿದ್ದರು. ಜೂನ್ 10 ರಂದು ಕಾರ್ಯಾಗಾರ ಆರಂಭಗೊಂಡಿತ್ತು. ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿ ಇಲ್ಲಿ ಕಲಿತ ಹೊಸ ಸಂಗತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರೆ ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಂದು ಅಂಕ ಸಿಕ್ಕ ಹಾಗೆ ಆಗುತ್ತದೆ ಎಂದು ಹಿಂದಿರುಗಿದ ಶಿಕ್ಷಕರು ಅಭಿಪ್ರಾಯ ಹಂಚಿಕೊಂಡರು. ಹನಿ ವೆಲ್ ಸಂಸ್ಥೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂತರಿಕ್ಷಯಾನದ ಘಟನಾವಳಿಗಳು, ಬದಲಾವಣೆ, ರಾಕೆಟ್ ತಂತ್ರಜ್ಞಾನ ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ವಿಜ್ಞಾನದ ಬೆಳವಣಿಗೆಗಳ ಸೂಕ್ತ ಪರಿಕಲ್ಪನೆ ಇದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಹೇಳಲು ಸಾಧ್ಯ. ನ

ಗಂಟೆಗೆ 603 ಕಿ.ಮೀ ವೇಗದಲ್ಲಿ ಚಲಿಸುವ ರೈಲು ಮೆಗ್ಲೆವ್:

Image
ಉಳ್ಳವರು ವಿಮಾನದಲ್ಲಿ ಪ್ರಯಾಣಿಸಿದರೆ, ಬಡವರು ರೈಲಿನಲ್ಲಿ ಸಂಚರಿಸುತ್ತಾರೆ. ಚೀನಾ, ಜಪಾನ್, ಜರ್ಮನಿ ದೇಶಗಳಲ್ಲಿ ಚಾಲ್ತಿಯಲ್ಲಿರುವ ಬುಲೆಟ್ ಮತ್ತು ಅತ್ಯಂತ ವೇಗದ ರೈಲಿನ ಸರಾಸರಿ ವೇಗ ಗಂಟೆಗೆ 300 ಕಿ.ಮೀ. ನಮ್ಮ ದೇಶದ ಅತೀ ವೇಗದ ಶತಾಬ್ದಿ ರೈಲಿನ ವೇಗ ಗಂಟೆಗೆ 150 ಕಿ.ಮೀ. ಮೆಗ್ಲೆವ್ ತಂತ್ರಜ್ಞಾನ ಬಳಸಿದ ರೈಲುಗಳು ಗಂಟೆಗೆ 552 ಕಿ.ಮೀ., 590 ಕಿ.ಮೀ ವೇಗದವರೆಗೂ ಸಂಚರಿಸಿ ಹಳೆ ದಾಖಲೆ ಮುರಿಯುತ್ತಾ, ಹೊಸ ದಾಖಲೆ ನಿರ್ಮಿಸುತ್ತಾ ಬಂದಿವೆ. ಈ ಮೆಗ್ಲೆವ್ ರೈಲು ಓಬಿರಾಯನ ಕಾಲದ ಚಕ್ರಗಳು ಮತ್ತು ಹಳಿಗಳ ಮೇಲೆ ಚಲಿಸುವುದಿಲ್ಲ, ಇದು ಬಳಸು ವುದು ಮ್ಯಾಗ್ನೆಟಿಕ್ ಲೀವಿಟೀಷನ್ (ಮೆಗ್+ಲೆವ್= ಮೆಗ್ಲೆವ್) ತಂತ್ರಜ್ಞಾನವನ್ನು ಅಂದರೆ ಅಯಸ್ಕಾಂತೀಯ ತತ್ವದಡಿ ಇದು ಹಳಿಗಳ ಮೇಲೆ ತೇಲುತ್ತಾ ಸಾಗುತ್ತದೆ. ನೂಕುಬಲ ಹೇಗೆ ಸಿಗುತ್ತದೆ? ಎರಡು ಅಯಸ್ಕಾಂತದ ತುಂಡುಗಳನ್ನು ತೆಗೆದುಕೊಂಡು ಒಂದಕ್ಕೊಂದು ಜೋಡಿಸಲು ಯತ್ನಿಸಿದರೆ ವಿರುದ್ಧ ಧ್ರುವಗಳು ಆಕರ್ಷಿಸಿದರೆ ಸಮಾನ ಧ್ರುವಗಳು ದೂರಕ್ಕೆ ನೂಕುತ್ತವೆ. ಏಳು ಬೋಗಿಗಳನ್ನು ಹೊಂದಿರುವ ಈ ರೈಲಿಗೆ ಮುಂದೆ ನೂಕಲು ಎಂಜಿನ್ ಇರುವುದಿಲ್ಲ. ಇದು ಎಲೆಕ್ಟ್ರೋ ಮ್ಯಾಗ್ನೆಟಿಕ್ (ವಿದ್ಯುತ್ಕಾಂತೀಯ) ಶಕ್ತಿಯನ್ನು ಬಳಸಿಕೊಂಡು ತೇಲುತ್ತಾ ಚಲಿಸುತ್ತದೆ. ವಿದ್ಯುತ್ಕಾಂತೀಯ ಕ್ಷೇತ್ರವನ್ನು ಹಳಿಗಳು ಮತ್ತು ರೈಲಿನ ನಡುವೆ ಸ್ಪಷ್ಟಿಸುತ್ತಾರೆ. ಕ

16 ಲಕ್ಷ ಕಿ.ಮೀ ದೂರದಿಂದ ತೆಗೆದ ಫೋಟೊ ಸೂರ್ಯ ಪ್ರಕಾಶದಲ್ಲಿ ಹೊಳೆವ ಭೂಮಿಯ ಮೊದಲ ಚಿತ್ರ

Image
ಬಹುವರ್ಣ ಕ್ಯಾಮರಾ ಬಳಸಿ ತೆಗೆದಿರುವ ಭೂಮಿಯ ವರ್ಣರಂಜಿತ ಚಿತ್ರ –ರಾಯಿಟರ್‌್ಸ್ ಚಿತ್ರ ವಾಷಿಂಗ್ಟನ್‌ (ಪಿಟಿಐ):  ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಸೂರ್ಯನ ಬೆಳಕು ಇರುವ ಭೂಮಿಯ ಭಾಗದ ಚಿತ್ರವನ್ನು ಸೆರೆ ಹಿಡಿದಿದೆ. ಭೂಮಿಯಿಂದ 16 ಲಕ್ಷ ಕಿಲೋಮೀಟರ್‌ ದೂರದಿಂದ ಈ ಚಿತ್ರವನ್ನು ತೆಗೆಯಲಾಗಿದೆ. ಈ ಚಿತ್ರವನ್ನು ನೋಡಿದ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು 'ನಮಗೆ ಇರುವ ಏಕೈಕ ಗ್ರಹವನ್ನು ಸಂರಕ್ಷಿಸಬೇಕಾದ ಅಗತ್ಯ ಇದೆ' ಎಂದು ಟ್ವೀಟ್‌ ಮಾಡಿದ್ದಾರೆ. ನಾಸಾದ ಡೀಪ್‌ ಸ್ಪೇಸ್‌ ಕ್ಲೈಮೆಟ್‌ ಆಬ್ಸರ್ವೇಟರಿ (ಡಿಎಸ್‌ಸಿಒವಿಆರ್‌) ಉಪಗ್ರಹದಲ್ಲಿ ಅಳವಡಿಸಲಾಗಿರುವ ಬಹುವರ್ಣ ಕ್ಯಾಮರಾ (ಎಪಿಕ್‌) ಬಳಸಿ ಈ ಚಿತ್ರವನ್ನು ತೆಗೆಯಲಾಗಿದೆ. ಫೋಟೊದ ಗುಣಮಟ್ಟ ಹೆಚ್ಚಿಸಲು ಮೂರು ಚಿತ್ರಗಳನ್ನು ಜೊತೆಯಾಗಿ ಇರಿಸಿ ಈ ಚಿತ್ರವನ್ನು ನಾಸಾ ಸಿದ್ಧಪಡಿಸಿದೆ. ಜುಲೈ 6ರಂದು ತೆಗೆಯಲಾದ ಈ ಚಿತ್ರದಲ್ಲಿ ಮರುಭೂಮಿ ಮತ್ತು ಮರಳಿನ ರಚನೆಗಳು, ನದಿಗಳು ಮತ್ತು ಸಂಕೀರ್ಣ ಮೋಡದ ವಿನ್ಯಾಸಗಳನ್ನು ಕಾಣಬಹುದು ಎಂದು ನಾಸಾ ಹೇಳಿದೆ. 'ನೀಲಿ ಬಣ್ಣದ ಈ ಚಿತ್ರ ಈಗಷ್ಟೇ ಸಿಕ್ಕಿತು. ನಮಗೆ ಇರುವ ಏಕೈಕ ಗ್ರಹವನ್ನು ಸಂರಕ್ಷಿಸುವ ಅಗತ್ಯ ಇದೆ ಎಂಬುದನ್ನು ಇದು ಸುಂದರವಾಗಿ ನೆನಪಿಸುತ್ತದೆ' ಎಂದು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ (@POTUS) ಒಬಾಮ ಹೇಳಿದ್ದಾರೆ. ಬಾಹ್ಯಾಕಾಶದಿಂದ ಭೂಮಿಯನ್ನು ಗಮನಿಸುವುದರ ಮಹತ