Posts

ರಾಜ್ಯ ಪೋಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳು : 246 ಹೈ.ಕ.ವಿಭಾಗಕ್ಕೆ ಮಾತ್ರ. Details at

hkwr.ksponline.co.in/Default.aspx   ರಾಜ್ಯ ಪೋಲಿಸ್ ಇಲಾಖೆಯು ಹೈದರಾಬಾದ್ – ಕರ್ನಾಟಕ ವಿಭಾಗದಲ್ಲಿ ಖಾಲಿ ಇರುವ ಸ್ಥಳೀಯ ಸಶಸ್ರ್ತ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ(ಪುರುಷರಿಗೆ ಮಾತ್ರ)ನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ : ಒಟ್ಟು 246 ಹುದ್ದೆಗಳಿಗೆ (ಕಲಬುರಗಿ-178,ಬಳ್ಳಾರಿ-20,ಬೀದರ್-06 , ರಾಯಚೂರು-31,ಮತ್ತು ಯಾದಗಿರಿ-11) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-08-2015 ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಅರ್ಜಿ ಶುಲ್ಕ : ಎಸ್ಟಿ ಅಭ್ಯರ್ಥಿಗಳಿಗೆ ರೂ.25 (ಪ್ರವರ್ಗ 2ಬಿ,3ಎ3ಬಿ ಗೆ ಸೇರಿದೆ ಅಭ್ಯರ್ಥಿಗಳಿಗೆ 250 ರೂ. ಹಾಗೂ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ – 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 100 ರೂ.) ಆಯ್ಕೆ ವಿಧಾನ : ಸಲ್ಲಿಕೆಯಾದ ಅರ್ಜಿಗಳಲ್ಲಿ ಅರ್ಹತೆ ಮೇರೆಗೆ ಆಯ್ದ ಅಭ್ಯರ್ಥಿಗಳನ್ನು ದೇಹದಾಢ್ರ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.ಈ ಎರಡೂ ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರು ಮಾತ್ರ ಲಿಖಿತ ಪರೀಕ್ಷೆ ಬರೆಯಬಹುದಾಗಿರುತ್ತದೆ. ಲಿಖಿತ ಪರೀಕ್ಷೆಯನ್ನು ಸಂಬಂಧ ಪಟ್ಟ ಘಟಕಗಳ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುವುದು.ಪರೀಕ್ಷೆಗಳ ದಿನಾಂಕವನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸುವುದರಿಂದ ಅಭ್ಯರ್ಥಿಗಳನ್ನು ವೆಬ್ಸೈಟ್ನ್ನು

●ಆಧಾರ್ ಕಡ್ಡಾಯವಲ್ಲ : ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ

●ಆಧಾರ್ ಕಡ್ಡಾಯವಲ್ಲ : ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ @EDUCATIONGKNEWS:: ನವದೆಹಲಿ, ಆ.11-ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲಷ್ಟೆ ಆಧಾರ್ ಬಳಕೆ. ಅದು ಕಡ್ಡಾಯವಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯ, ಆಧಾರ್‌ನಲ್ಲಿನ ವೈಯಕ್ತಿಕ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.ಖಾಸಗಿತನ ಪ್ರತಿಯೊಬ್ಬನ ಮೂಲಭೂತ ಹಕ್ಕಲ್ಲವೇ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅದನ್ನು ಅಂತಿಮ ನಿರ್ಧಾರಕ್ಕಾಗಿ ಮೂವರು ನ್ಯಾಯಾಧೀಶರ ಸಾಂವಿಧಾನಿಕ ವಿಸ್ತೃತ ಪೀಠಕ್ಕೆ ಶಿಫಾರಸುಮಾಡಿತ್ತು. ಇಂತಹ ಹಲವು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು.ನ್ಯಾಯಮೂರ್ತಿಗಳಾದ ಜೆ.ಚಲ್ಮೇಶ್ವರ್ ನೇತೃತ್ವದ ಪೀಠ, ಈ ಕುರಿತಂತೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಿ, ಆಧಾರ್ ಕಡ್ಡಾಯವಲ್ಲ ಎಂಬುದನ್ನು ಸಾರ್ವಜನಿಕವಾಗಿ ಮನವರಿಕೆ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Google is reorganizing and Sundar Pichai will become new CEO.. ಗೂಗಲ್ನ CEOಆಗಿ ಭಾರತೀಯ ಪ್ರಜೆ ಸುಂದರ್ ಪಿಚ್ಬೈ ಅವರನ್ನು ನಿಯೋಜಿಸಲಾಗಿದೆ

ನ್ಯೂಯಾರ್ಕ್, ಆ.11- ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಯಾಗಿರುವ ಗೂಗಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಭಾರತೀಯ ಪ್ರಜೆ ಸುಂದರ್ ಪಿಚ್ಬೈ ಅವರನ್ನು ನಿಯೋಜಿಸಲಾಗಿದೆ. ಗೂಗಲ್ ಕಂಪೆನಿ ಆಡಳಿತ ವ್ಯವಸ್ಥೆಯನ್ನು ಒಂದು ಬಾರಿ ಸಮಗ್ರ ಪುನಾರಚನೆ ಮಾಡಲು ಮುಂದಾಗಿರುವ ಕಂಪೆನಿ, ಆಲ್ಫಬೆಟ್ ಪದ್ಧತಿಯಲ್ಲಿ ಪುನಶ್ಚೇತನಗೊಳಿಸಲು ನಿರ್ಧರಿಸಿದೆ. ಗೂಗಲ್ ಕಂಪೆನಿಯ ಈ ಮೊದಲಿನ ಷೇರುಗಳು ಅದೇ ರೀತಿ ಮುಂದುವರೆಯಲಿವೆ. ಗೂಗಲ್ ಸಹ ಸಂಸ್ಥಾಪಕ ಸರ್ಜಿಬಿನ್ ಅಧ್ಯಕ್ಷರಾಗಿರುತ್ತಾರೆ. 43 ವರ್ಷದ ಭಾರತ ಮೂಲದ ಪಿಚ್ಬೈ ಈ ಮೊದಲು ಗೂಗಲ್ ಅಂತರ್ಜಾಲ ವ್ಯವಹಾರದ ಮೇಲುಸ್ತುವಾರಿ ನೋಡುತ್ತಿದ್ದರು.ಭಾರತದ ಖರಗ್ಪುರ ವಿಶ್ವವಿದ್ಯಾನಿಲಯದಿಂದ ಬಿ.ಟೆಕ್ ಪದವಿ ಪಡೆದಿರುವ ಪಿಚ್ಬೈ 2004ರಲ್ಲಿ ಗೂಗಲ್ ಉತ್ಪನ್ನಗಳ ನಿರ್ವಹಣೆ ಮಾಡುತ್ತಿದ್ದರು. ಪಿಚ್ಬೈ ಅವರ ವ್ಯಾವಹಾರಿಕ ಪ್ರತಿಭೆಯನ್ನು ಗಮನಿಸಿದ ಗೂಗಲ್ ಆಡಳಿತ ನಿನ್ನೆ ನಡೆದ ಸದಸ್ಯರ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಿತು.

Sania Mirza to be conferred Rajiv Gandhi Khel Ratna - ಸಾನಿಯಾಗೆ ಒಲಿಯಿತು ಖೇಲ್ ರತ್ನ ಪ್ರಶಸ್ತಿ:

. ನವದೆಹಲಿ: ಕ್ರೀಡಾ ಸಚಿವಾಲಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಹೆಸರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಅವರ ಹೆಸರನ್ನು ಶಿಫಾರಸು ಮಾಡಲಾಗಿದ್ದು, ಅಂತಿಮ ನಿರ್ಧಾರವನ್ನು ಪ್ರಶಸ್ತಿ ಸಮಿತಿ ಕೈಗೊಳ್ಳಲಿದೆ ಎಂದು ಕ್ರೀಡಾ ಕಾರ್ಯದರ್ಶಿ ಅಜಿತ್ ಶರ್ಮಾ ಕಳೆದ ವಾರ ತಿಳಿಸಿದ್ದರು. ಅಖಿಲ ಭಾರತ ಟೆನ್ನಿಸ್ ಅಸೋಸಿಯೇಷನ್ ನಿಂದ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಹೆಸರು ಶಿಫಾರಸ್ಸು ತಡವಾಗಿ ಬಂದಿತ್ತು. ಆದರೂ ಕ್ರೀಡಾ ಸಚಿವಾಲಯ ಸಾನಿಯಾ ಹೆಸರನ್ನು ಶಿಫಾರಸು ಮಾಡಿತ್ತು. ಈಗ ಪ್ರಶಸ್ತಿ ಸಮಿತಿ ಕ್ರೀಡಾ ಸಚಿವಾಲಯದ ಶಿಫಾರಸನ್ನು ಪುರಸ್ಕರಿಸಿ ಸಾನಿಯಾ ಹೆಸರನ್ನು ಅಂತಿಮಗೊಳಿಸಿದೆ. ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಜೊತೆಗೆ ಸ್ವ್ಕಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಮತ್ತು ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಹೆಸರನ್ನು ಕ್ರೀಡಾ ಸಚಿವಾಲಯ ಶಿಫಾರಸು ಮಾಡಿತ್ತು. 2015ರ ವಿಂಬಲ್ಡನ್ ಮಹಿಳಾ ಡಬಲ್ಸ್ ನಲ್ಲಿ ಸ್ವಿಜರ್ಲ್ಯಾಂಡ್‍ನ ಮಾರ್ಟಿನಾ ಹಿಂಗೀಸ್ ಜೊತೆಗೂಡಿ ಸಾನಿಯಾ ಮಿರ್ಜಾ ನಲ್ಲಿ ಪ್ರಪ್ರಥಮ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರು. ಸಾನಿಯಾ ಇದುವರೆಗೆ ಮೂರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದು, ಪ್ರಸ್ತುತ ವಿಶ್ವದ ಮಹಿಳಾ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಮಾರ್ಟಿನಾ ಹಿಂಗೀಸ್, ಸಾನಿಯಾ ಮ

ಆ.15 ರಂದು ಪ್ರಧಾನಿಯಿಂದ 'ಸಾರ್ವತ್ರಿಕ ಆರೋಗ್ಯ ಸುರಕ್ಷಾ' ಯೋಜನೆ ಘೋಷಣೆ

ನವದೆಹಲಿ, ಆ.11-ಇಡೀ ದೇಶದ ಜನತೆಗೆ ವರದಾನವಾಗಬಲ್ಲ ಹೊಸ ಹೆಲ್ತ್ಕೇರ್ (ಆರೋಗ್ಯಸುರಕ್ಷೆ) ಯೋಜನೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ 69ನೇ ಸ್ವಾತಂತ್ರ್ಯ ದಿನೋತ್ಸವದಂದು ಘೋಷಿಸುವ ಸಾಧ್ಯತೆಯಿದೆ. ಪ್ರಧಾನಿಯವರ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಬಂಧಿಸಿದಂತೆ ನಾವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಆ.15ರ ತಮ್ಮ ಭಾಷಣದಲ್ಲಿ ಮೋದಿಯವರು ಯೋಜನೆ ಘೋಷಿಸಲಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯಿತಿ

ಚಿಕ್ಕಮಗಳೂರು, ಆ.11- ಖಾಸಗಿ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಶೇ.25ರಷ್ಟು ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲು ಖಾಸಗಿ ಬಸ್ಗಳ ಮಾಲೀಕರು ಒಪ್ಪಿಗೆ ನೀಡಿದ್ದಾರೆಂದು ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ನಂಜುಂಡಸ್ವಾಮಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಸಾರಿಗೆ ಸಭೆಯಲ್ಲಿ ಚರ್ಚಿಸಿ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಲು ನಿರ್ಧರಸಿದ್ದು, ಈ ಬಗ್ಗೆ ನಿವೃತ್ತ ನೌಕರರ ಸಂಘ ಮಾಡಿದ ಮನವಿಗೆ ಮನ್ನಣೆ ದೊರೆತಂತಾಗಿದೆ ಎಂದರು. ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ಅನ್ನಪೂರ್ಣೇಶ್ವರಿ ಬಸ್ ಮಾಲೀಕ ಕೆ.ಕೆ.ಬಾಲಕೃಷ್ಣ, ಡಿ.ಎನ್.ಮಹೇಶ್ ಸೇರಿದಂತೆ ಹಲವರು ಈ ಬಗ್ಗೆ ಆ.15ರಿಂದಲೆ ವ್ಯವಸ್ಥೆ ಜಾರಿಗೆ ಬರಲು ಕ್ರಮ ಕೈಗೊಳ್ಳಲಾಗುವುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಿರಿಯ ನಾಗರಿಕರು ತಮಗೆ ನೀಡಿರುವ ಗುರುತಿನ ಚೀಟಿಯನ್ನು ಬಸ್ಸಿನ ನಿರ್ವಾಹಕರಿಗೆ ತೋರಿಸಿ ರಿಯಾಯಿತಿ ಪಡೆಯಬಹುದಾಗಿದ್ದು, ಇದೇ ರೀತಿಯಲ್ಲಿ ಅಂಗವಿಕಲರಿಗೂ ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

MESCOM callformed apprentice traineese for ITI DIPLOMA HOLDERS( NCVT&SCVT certified )

Image
:see VK PG 11

SDA/FDA 2,464 ಹುದ್ದೆ, 19 ಲಕ್ಷ ಅರ್ಜಿ! ಪರೀಕ್ಷೆ ನಡೆಸುವ ಸವಾಲು ಕೆಪಿಎಸ್ಸಿ ಮುಂದಿದೆ

ಬೆಂಗಳೂರು: ಹುದ್ದೆಗಳಿರುವುದು 2,464. ಅರ್ಜಿಗಳು ಬಂದಿರುವುದು 19 ಲಕ್ಷ! ಅಂದರೆ, ಒಂದು ಹುದ್ದೆಗೆ ಸರಾಸರಿ 771 ಆಕಾಂಕ್ಷಿಗಳು! ಸಚಿವಾಲಯ ಮತ್ತು ಸರ್ಕಾರದ ವಿವಿಧ ಇಲಾಖೆಗಳಿಗೆ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕರ (ಎಸ್ಡಿಎ) ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 19 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಎಫ್ಡಿಎ, ಎಸ್ಡಿಎ ಹುದ್ದೆಗಳಿಗೆ ಆರರಿಂದ ಏಳು ಲಕ್ಷ ಮಂದಿ ಅರ್ಜಿ ಸಲ್ಲಿಸುತ್ತಾರೆ. ಈ ಬಾರಿ ಹೆಚ್ಚೆಂದರೆ 10 ಲಕ್ಷ ಅರ್ಜಿಗಳು ಬರಬಹುದು ಎಂದು ಕೆಪಿಎಸ್ಸಿ ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆಯನ್ನು ಮೀರಿ ಅರ್ಜಿಗಳು ಬಂದಿವೆ. ಕೆಪಿಎಸ್ಸಿಯು 2,464 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಜುಲೈ 3 ರಂದು ಆರಂಭಿಸಿತ್ತು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಆಗಸ್ಟ್ 1ನೇ ತಾರೀಖಿನವರೆಗೆ ಅವಕಾಶ ಕಲ್ಪಿಸಿತ್ತು. ಪರೀಕ್ಷೆ ಅಕ್ಟೋಬರ್ನಲ್ಲಿ ನಡೆಯಲಿದೆ. ಆದರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಉತ್ತರ ಕರ್ನಾಟಕದಿಂದ ಹೆಚ್ಚು ಅರ್ಜಿ: ಈ ಬಾರಿ, ಉತ್ತರ ಕರ್ನಾಟಕ ಭಾಗದಿಂದಲೂ ಹೆಚ್ಚು ಅರ್ಜಿಗಳು ಬಂದಿವೆ. ವಿಜಯಪುರ, ಕಲಬುರ್ಗಿ ಜಿಲ್ಲೆಗಳಿಂದ ಬಂದಿರುವ ಅರ್ಜಿಗಳ ಸಂಖ್ಯೆಯೇ 2 ಲಕ್ಷ ದಾಟಿದೆ. ಹೆಚ

ಶೀಘ್ರದಲ್ಲೇ ಮಾರುಕಟ್ಟೆಗೆ ಗೂಗಲ್ ನಿಂದ 3 ಸಾವಿರ ರೂ. ಸ್ಮಾರ್ಟ್ ಫೋನ್

ಉದಯವಾಣಿ, Aug 10, 2015, 1:35 PM IST ನವದೆಹಲಿ: ಭಾರತದಲ್ಲಿ ಆಂಡ್ರಾಯ್ಡ್ ಒನ್ ಪ್ರೊಜೆಕ್ಟ್ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲು ಗೂಗಲ್ ಚಿಂತಿಸುತ್ತಿದೆ. ಪ್ರಸಿದ್ಧ ಆಂಡ್ರಾಯ್ಡ್ ಮೇಕರ್ ಸಂಸ್ಥೆಯಾಗಿರುವ ಗೂಗಲ್ ಕಳೆದ ಸೆಪ್ಟೆಂಬರ್ ನಲ್ಲಿ 6,500 ರೂಪಾಯಿಗಳ ಹ್ಯಾಂಡ್ ಸೆಟ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ ಗ್ರಾಹಕರನ್ನು ಹೆಚ್ಚಿನ ರೀತಿಯಲ್ಲಿ ಸೆಳೆದುಕೊಳ್ಳಲು 3 ಸಾವಿರ ರೂಪಾಯಿಗೆ ಅತೀ ಕಡಿಮೆ ಬೆಲೆಯ ಆಂಡ್ರಾಯ್ಡ್ ಸೆಟ್ ಅನ್ನು ಬಿಡುಗಡೆ ಮಾಡುವ ಮುಖೇನ ದೇಶದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗೆ ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ. ಈ ಯೋಜನೆಯನ್ನು ಜಾರಿಗೊಳಿಸಲು ಸಂಸ್ಥೆ ಬದ್ಧವಾಗಿದೆ. ಹಾಗಾಗಿ ತುಂಬಾ ಉತ್ತಮವಾದ ಸೆಟ್ ಅನ್ನು ಕಡಿಮೆ ಬೆಲೆಗೆ ದೊರೆಯುವಂತೆ ಮಾಡುವ ಗುರಿ ತಮ್ಮದು ಎಂದು ಭಾರತ ಮತ್ತು ದಕ್ಷಿಣ ಏಷ್ಯಾದ ಗೂಗಲ್ ಮ್ಯಾನೇಜಿಂಗ್ ಡೈರೆಕ್ಟರ್ ರಾಜನ್ ಆನಂದನ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾರತದ ಮಾರುಕಟ್ಟೆಗೆ 2 ಸಾವಿರ ರೂ. ಮತ್ತು 3 ಸಾವಿರ ರೂಪಾಯಿ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ಹೇಳಿದರು. ಕಳೆದ ವರ್ಷ ಗೂಗಲ್ ಆಂಡ್ರಾಯ್ಡ್ ಒನ್ ಪ್ರಾಜೆಕ್ಟ್ ಅನ್ನು ಮೂಲಕ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಟ್ಟಿತ್ತು. ಗೂಗಲ್ ಭಾರತಲ್ಲಿ ಕಾರ್ಬೋನ್

ಅನಂತ ಮತ್ತು ನಾಗೇಂದ್ರಗೆ ಆರ್ಯಭಟ ಪ್ರಶಸ್ತಿ

ಉದಯವಾಣಿ, Aug 10, 2015, 4:17 PM IST ಯಾವುದೇ ಒಂದು ಸಿನಿಮಾ ಸಂಭ್ರಮವಿರಲಿ ಅಥವಾ ಸಿನಿಮಾ ಮಂದಿಯ ಖಾಸಗಿ ಕಾರ್ಯಕ್ರಮವಿರಲಿ, ಅಲ್ಲೊಬ್ಬ ವ್ಯಕ್ತಿ ಖಾಯಂ ಹಾಜರಿರುತ್ತಾರೆ. ಕೈಯಲ್ಲೊಂದು ಮೊಬೈಲ್, ಕಣ್ಣಿಗೊಂದು ಕನ್ನಡಕ, ಸದಾ ಲವಲವಿಕೆಯ ಮಾತು, ಅತ್ತಿಂದಿತ್ತ ಓಡಾಟ, ಬಂದ ಅತಿಥಿಗಳನ್ನೆಲ್ಲಾ ಪ್ರೀತಿಯಿಂದ ಸ್ವಾಗತಿಸಿ ಅವರನ್ನು ಸೇಫ್ ಆಗಿ ಕಾರ್ಯಕ್ರಮದ ಸ್ಥಳದವರೆಗೂ ಕರೆದೊಯ್ಯುವುದೇ ಆ ವ್ಯಕ್ತಿಯ ಕೆಲಸ. ಅದು ಆ ವ್ಯಕ್ತಿ ಕಳೆದ ಮೂರು ದಶಕಗಳಿಂದಲೂ ನಡೆದುಕೊಂಡ ಬಂದಿರುವ ರೀತಿ. ಅವರು ಬೇರಾರೂ ಅಲ್ಲ. ಎಸ್.ಕೆ.ಅನಂತ. ಇವರನ್ನು ಗಾಂಧಿನಗರದ ಮಂದಿ ಪ್ರೀತಿಯಿಂದ ಅನಂತು ಅಂತಾರೆ. ಇಂತಹ ಅನಂತು ಈಗ "ಆರ್ಯಭಟ' ಪ್ರಶಸ್ತಿ ಸ್ವೀಕರಿಸಿದ್ದಾರೆ. ಆರ್ಯಭಟ ಸಾಂಸ್ಕೃತಿ ಸಂಸ್ಥೆ ಅಪರೂಪದ ವ್ಯಕ್ತಿಗಳ ಸೇವೆ ಗುರುತಿಸಿ ನೀಡುವ ಈ ಆರ್ಯಭಟ ಪ್ರಶಸ್ತಿ ಸ್ವೀಕರಿಸಿರುವ ಅನಂತ ಅವರು ಸಿನಿಮಾ ರಂಗ ಸೇರಿದಂತೆ ಇತರೆ ಕ್ಷೇತ್ರದವರಿಗೂ ಗೊತ್ತು. ಆದರೆ, ಅವರ ಬಗ್ಗೆ ಗೊತ್ತಿರದ ಒಂದಷ್ಟು ವಿಷಯ ಇಲ್ಲಿದೆ. ಅನಂತು ಎಲ್ಎನ್ಟಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು. ಅಲ್ಲೊಂದು ಸಂಘ ಕಟ್ಟಿಕೊಂಡು ನಾಟಕದ ಗೀಳು ಹಚ್ಚಿಕೊಂಡವರು. ಎಲ್ಲೇ ನಾಟಕ ನಡೆದರೂ ಅಲ್ಲಿ ಅನಂತು ಹಾಜರಾಗುತ್ತಿದ್ದರು. ಅಲ್ಲೊಂದಷ್ಟು ಕಲಾವಿದರ ಪರಿಚಯಿಸಿಕೊಂಡು ಹಾಗೇ, ಸಿನ

ಭಾರತೀಯ ಮೂಲದ ಪತ್ರಕರ್ತೆ ಅಡ್ರಿಯಾನ್ ಬಾತ್ರಾಗೆ ‘ಶ್ರೇಷ್ಠ ಪತ್ರಕರ್ತೆ’ ಪ್ರಶಸ್ತಿ

ಟೊರೊಂಟೊ (ಪಿಟಿಐ): ಭಾರತೀಯ ಮೂಲದ ಪತ್ರಕರ್ತೆ ಅಡ್ರಿಯಾನ್ ಬಾತ್ರಾ 'ಶ್ರೇಷ್ಠ ಪತ್ರಕರ್ತೆ' ಪ್ರಶಸ್ತಿ ಪಡೆದಿದ್ದಾರೆ. ಇಲ್ಲಿನ ಭಾರತೀಯ ಸಮುದಾಯದ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 41ರ ಹರೆಯದ ಬಾತ್ರಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ' ಟೊರೊಂಟೊ ಸನ್' ಪತ್ರಿಕೆಯ ಸಂಪಾದಕರಾಗಿರುವ ಬಾತ್ರಾ ಕೆನಡಾ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿಯೂ ಕೆಲಸ ಮಾಡಿದ್ದರು.

UIDAI - Update your Aadhaar data

ನಿಮ್ಮ ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿ ಮಾಡಬೇಕೆಂದರೆ ಹೀಗೆ ಮಾಡಿ.... ಆಧಾರ್ ಕಾರ್ಡಿನಲ್ಲಿ ಹೆಸರು, ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ಬದಲಾವಣೆ ಅಥವಾ ತಪ್ಪುಗಳನ್ನು ಸರಿ ಮಾಡಲು ಎಲ್ಲಿಯೂ ಅಲೆಯಬೇಕಿಲ್ಲ. ಕ್ಯೂ ನಲ್ಲಿ ನಿಲ್ಲಬೇಕಾಗಿಲ್ಲ. http://uidai.gov.in/update-your-aadh aar-data.html ಎಂಬ ವೇಬ್ ಲಿಂಕಿಗೆ ಭೇಟಿ ನೀಡುವ ಮೂಲಕ ಸುಲಭವಾಗಿ ನಿಮ್ಮ ಕಂಪ್ಯೂಟರ್ ನಿಂದ ನೀವೇ ಮಾಹಿತಿಯನ್ನು ಅಪ್ ಡೇಟ್ ಮಾಡಬಹುದು http://uidai.gov.in/update-your-aadhaar-data.html

ಕಾಸರಗೋಡಿನ ಕನ್ನಡದ ಗಟ್ಟಿದನಿ ಕಯ್ಯಾರ ಕಿಞ್ಞಣ್ಣ ರೈ ಅಸ್ತಂಗತ

Image
Posted by: Mahesh | Sun, Aug 9, 2015, 16:33 [IST] ಕಾಸರಗೋಡು, ಆಗಸ್ಟ್ 09: ಸ್ವಾತಂತ್ರ್ಯ ಹೋರಾಟಗಾರ, ಕವಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕ ಗಡಿ ನಾಡಲ್ಲಿ ಕನ್ನಡದ ಗಟ್ಟಿದನಿಯಾಗಿದ್ದ 101 ವರ್ಷದ ಹಿರಿಯ ಚೇತನ ಕಯ್ಯಾರ ಕಿಞ್ಞಣ್ಣ ರೈ ಅವರು ಭಾನುವಾರ ಬದಿಯಡ್ಕದ ತಮ್ಮ್ ಮನೆಯಲ್ಲಿ ಕೊನೆಯುಸಿರೆಳೆದರು. ಕಯ್ಯಾರ ಕಿಞ್ಞಣ್ಣ ರೈ ಅಖಿಲ ಮಹಾಕವಿ, ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕರಾಗಿ ಸದಾಕಾಲ ಸ್ಮರಣೀಯರು.

5869 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಸೂಚನೆ-ಉದಯವಾಣಿ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಈಗಾಗಲೇ 9511 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಇದೀಗ ಇನ್ನೂ 5869 ಹೆಚ್ಚುವರಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 26 ಸಾವಿರಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಪ್ರಸ್ತುತ 9511 ಪ್ರಾಥಮಿಕ ಮತ್ತು 1721 ಪ್ರೌಢಶಾಲಾ ಶಿಕ್ಷಕರ ಕಾಯಂ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ನಡುವೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ 9511 ಪ್ರಾಥಮಿಕ ಮತ್ತು 1721 ಪ್ರೌಢಶಾಲಾ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಂತೆ ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕಳೆದ ಜುಲೈ 17ರಂದು ಸೂಚನೆ ನೀಡಿದ್ದಾರೆ. ಇದೀಗ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ 9511 ಅತಿಥಿ ಶಿಕ್ಷಕರ ನೇಮಕಾತಿ ಜೊತೆಯಲ್ಲೇ ಇನ್ನೂ 5869 ಮಂದಿಯನ್ನು ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳುವಂತೆ ಇಲಾಖೆಯ ಆಯುಕ್ತ ಕೆ.ಎಸ್.ಸತ್ಯಮೂರ್ತಿ ಆಜ್ಞಾಪಿಸಿದ್ದಾರೆ. ಹೆಚ್ಚುವರಿ ಅತಿಥಿ ಶಿಕ್ಷಕರ ಸಂಖ್ಯೆಯನ್ನು ಜಿಲ್ಲಾವಾರು ಹಂಚಿಕೆ ಮಾಡಿರುವ ಇಲಾಖೆ, ವಿವಿಧ

ಸ್ವಚ್ಛ ಭಾರತ್: ದೇಶದ ರಾಜಧಾನಿಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ, ಮೈಸೂರು ಎಲ್ಲ ನಗರಗಳಲ್ಲಿ ಶ್ರೇಷ್ಠ

ಹೊಸದಿಲ್ಲಿ: ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಪಟ್ಟಿ ಮಾಡಿರುವ ಸ್ವಚ್ಛ ಭಾರತ ಶ್ರೇಯಾಂಕದ ಪ್ರಕಾರ ದೇಶದ ರಾಜಧಾನಿಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ ಸಿಕ್ಕಿದೆ. ಅದಕ್ಕಿಂತಲೂ ವಿಶೇಷವೆಂದರೆ ದೇಶದ 476 ನಗರಗಳಲ್ಲಿ ಮೈಸೂರು ಎಲ್ಲಕ್ಕಿಂತ ಶ್ರೇಷ್ಠ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಅಷ್ಟೇ ಅಲ್ಲ, ಟಾಪ್ 10ರಲ್ಲಿ ಕರ್ನಾಟಕದ ನಾಲ್ಕು ನಗರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಪಶ್ಚಿಮ ಬಂಗಾಳ ಕೂಡ ಉತ್ತಮ ಸಾಧನೆ ಮಾಡಿದ್ದು ಆ ರಾಜ್ಯದ 25 ನಗರಗಳು ಅಗ್ರ 100ರ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿವೆ. ಬಯಲು ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣೆ ಪದ್ಧತಿಗಳ ಆಧಾರದಲ್ಲಿ ಈ ಶ್ರೇಯಾಂಕದ ಪಟ್ಟಿಯನ್ನು ಮಾಡಲಾಗಿದೆ. ದೇಶದ ಎಲ್ಲ ನಗರಗಳ ಪೈಕಿ ಮೈಸೂರು ಕನಿಷ್ಠ ಪ್ರಮಾಣದ ಬಯಲು ಶೌಚಾಲಯ ಹಾಗೂ ಉತ್ತಮ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯಿಂದ ದೇಶದ ಗಮನ ಸೆಳೆದಿದೆ. ದಕ್ಷಿಣ ಭಾರತದ ನಗರಗಳು ಉತ್ತಮ ಸಾಧನೆ ಮಾಡಿದ್ದು ಅಗ್ರ 100ರಲ್ಲಿ 39 ನಗರಗಳು ದಕ್ಷಿಣ ರಾಜ್ಯಗಳಿಗೆ ಸೇರಿವೆ. ದೇಶದ 15 ರಾಜ್ಯಗಳ ರಾಜಧಾನಿಗಳು ಮಾತ್ರ ಅಗ್ರ 100ರಲ್ಲಿ ಅವಕಾಶ ಪಡೆದಿವೆ. ಪೂರ್ವ ರಾಜ್ಯಗಳ 27 ನಗರಗಳು, ಪಶ್ಚಿಮ ಭಾರತದ 15, ಉತ್ತರ ಭಾರತದ 12 ಹಾಗೂ ಈಶಾನ್ಯ ರಾಜ್ಯಗಳ 7 ನಗರಗಳು 100ರೊಳಗೆ ಅವಕಾಶ ಪಡೆದುಕೊಂಡಿವೆ. ಇನ್ನು ಐದು ರಾಜ್ಯಗಳ ರಾಜಧಾನಿಗಳ ಸ್ಥಿತಿ ಹೇಗಿದೆಯೆಂದರೆ, ಅವು

IBPS ಅರ್ಜಿ ಸಲ್ಲಿಸಲು ಟಿಪ್ಸ್

Image

ಗುಂಪಿಗೆ ಸೇರದ ಪದ, ಘನಾಕೃತಿಗಳ ಕುರಿತ ಪ್ರಶ್ನೆಗಳು (useful to TET EXAM)

Image

KARTET 2014 solved Qsn Paper ಶಿಶು ಮನೋವಿಜ್ಞಾನ /ವಿಕಸನ ಮತ್ತು ಪರಿಸರ ವಿಜ್ಞಾನ (Vijay Next Ppr)

Image

ಸ್ಪರ್ಧಾತ್ಮಕ ಪರೀಕ್ಷೆಗೆ ರೀಸನಿಂಗ ಪ್ರಶ್ನೋತ್ತರಗಳು(ವಿಜಯನೆಕ್ಷ್ಟ)

Image

Dark side of the moon captured by Nasa satellite a million miles from Earth.( ಚಂದ್ರನ ‘ಕಪ್ಪು ಭಾಗ'ದ ಅಪರೂಪ ಚಿತ್ರವನ್ನು ನಾಸಾಸ ಡಿಸ್ಕವರ್ ಸೆರೆಹಿಡಿದು ಸಾರ್ವಜನಿಕ ವೀಕ್ಷಣೆಗೆ ನೀಡಿದೆ.)

Image
ವಾಷಿಂಗ್‌ಟನ್ ಆಗಸ್ಟ್. 08: ಚಂದಾಮಾಮನನ್ನು ಮಕ್ಕಳಿಗೆ ತೋರಿಸಿ ಊಟ ಮಾಡಿಸುವ ಕಾಲವೊಂದಿತ್ತು. ಹೊಳೆಯುವ ಮೈ ಕಾಂತಿ ಇರುವವರನ್ನು ಹುಣ್ಣಿಮೆ ಚಂದ್ರ ಎಂದು ಕವಿಗಳು ಕರೆದಿದ್ದರು. ಆದರೆ ನಾಸಾ(ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ ಅಮೆರಿಕ) ಹೇಳುವುದೇ ಬೇರೆ. ಭೂಮಿಗಿಂತ ಚಂದ್ರ ಕಪ್ಪಗಿದ್ದಾನಂತೆ! ಭೂಮಿಯಿಂದ ನೋಡಲು ಸಾಧ್ಯವಾಗದ ಚಂದ್ರನ ಮತ್ತೊಂದು ಮುಖದ ದರ್ಶನವನ್ನು ನಾಸಾ ಮಾಡಿಸಿದೆ. ಚಂದ್ರನ 'ಕಪ್ಪು ಭಾಗ'ದ ಅಪರೂಪ ಚಿತ್ರವನ್ನು ನಾಸಾಸ ಡಿಸ್ಕವರ್ ಸೆರೆಹಿಡಿದು ಸಾರ್ವಜನಿಕ ವೀಕ್ಷಣೆಗೆ ನೀಡಿದೆ. ಭೂಮಿಯ ಒಂದು ಮೇಲ್ಮೈ ಮೇಲೆ ಸೂರ್ಯನ ಬೆಳಕು ಬೀಳುವಾಗ ಅದರ ಮುಂಭಾಗದಲ್ಲಿ ಚಂದ್ರ ಹಾದುಹೋಗುವ ಘಳಿಗೆಯನ್ನು ನಾಸಾ ಕಳೆದ ತಿಂಗಳೆ ಸೆರೆಹಿಡಿತ್ತು. ಇದೀದಗ ತನ್ನ ವೆಬ್ ತಾಣ ಮತ್ತು ಸಾಮಾಜಿಕ ತಾಣಗಳ ಖಾತೆಯಲ್ಲೂ ಫೋಟೋಗಳನ್ನು ಬಿಡುಗಡೆ ಮಾಡಿದೆ. ಭೂಮಿಯಿಂದ ಸುಮಾರು ನೂರು ಕೋಟಿ ಮೈಲಿಗೂ ಅಧಿಕ ದೂರದಲ್ಲಿ ನಿಂತು ಚಿತ್ರ ಕ್ಲಿಕ್ಕಿಸಿದೆ. ನಾಸಾದ ಡಿಸ್ಕವರ್ ಉಪಗ್ರಹವು ಭೂ ಬಹುವರ್ಣೀಯ ಛಾಯಾಚಿತ್ರ ಕ್ಯಾಮೆರಾ (ಎಪಿಕ್), ನಾಲ್ಕು ಮೆಗಾ ಪಿಕ್ಸೆಲ್ ಸಿಸಿಡಿ ಕ್ಯಾಮೆರಾ ಮತ್ತು ಟೆಲಿಸ್ಕೋಪ್ ನೆರವಿನಿಂದ ಈ ಚಿತ್ರಗಳನ್ನು ಸೆರೆಹಿಡಿದಿದೆ. ಒಮ್ಮೆ ನೀವು ಭೂಮಿಯ ಮೇಲೆ ಚಂದ್ರ ಹಾದು ಹೋಗುವುದನ್ನು ನೋಡಿಕೊಂಡು ಬನ್ನಿ....