Posts

ದೇವರ/ಜೇಡರ ದಾಸಿಮಯ್ಯ:-

ಜನನ ೧೧೬೫ ಸುರಪುರ ತಾಲ್ಲೋಕು ಮುದನೂರು ಅಂಕಿತನಾಮ ರಾಮನಾಥ ಸಂಗಾತಿ(ಗಳು) ದುಗ್ಗಳೆ ಈತನನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೇ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆ/ಸುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯನನ್ನೇ ಮೊದಲ ವಚನಕಾರನೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವನಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಡ ಸಾಧಕ. ರಾಮನಾಥ ಎಂಬ ಅಂಕಿತದಲ್ಲಿ ಬರೆಯಲಾದ ಈತನ ಸುಮಾರು ೧೫೦ ವಚನಗಳು ದೊರೆತಿವೆಯೆನ್ನಲಾಗಿದೆ. ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿಯುವಾತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ ಒಡಲುಗೊಂಡವ ಹಸಿವ:ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ ಎಂದು ಸಾರುವಲ್ಲಿ ತೋರಿದ ಜನಪರ ಕಾಳಜಿ ಇಂದಿಗೂ ಆನ್ವಯಿಕ. ಶಿವ ಜಗತ್ತನ್ನೇ ವ್ಯ

"ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (NET) ಏಪ್ರಿಲ್ 12 ರಿಂದ ಅರ್ಜಿ ಆಹ್ವಾನ"::-

ಪ್ರತಿ ವರ್ಷ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು (ನೆಟ್‌) ವರ್ಷಕ್ಕೆ ಎರಡು ಬಾರಿ ನಡೆಸಿಕೊಂಡು ಬರುತ್ತಿದೆ. ದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಹಾಗೂ ಜೂನಿಯರ್‌ ರಿಸರ್ಚ್ ಫೆಲೋಶಿಪ್‌ ನೇಮಕಾತಿಗಾಗಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಈ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಮಾದರಿಯಲ್ಲಿಯೇ ಈ ಪರೀಕ್ಷೆ ನಡೆಯಲಿದ್ದು, ಯುಜಿಸಿ ಪರವಾಗಿ ಸಿಬಿಎಸ್‌ಇ ಈ ಪರೀಕ್ಷೆಯನ್ನು ನಡೆಸಲಿದೆ. 2016ರ ಜುಲೈ 10ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. * ಹುದ್ದೆಗಳ ವಿವರ: ಆಸಕ್ತ ಅಭ್ಯರ್ಥಿಗಳು ಅಸಿಸ್ಟೆಂಟ್‌ ಪ್ರೊಫೆಸರ್‌ ಮತ್ತು ಜೂನಿಯರ್‌ ರಿಸರ್ಚ್ ಫೆಲೋಶಿಪ್‌ಗಾಗಿ ಅರ್ಜಿ ಸಲ್ಲಿಸಬಹುದು. ಫೆಲೋಶಿಪ್‌ಗೆ ಆಯ್ಕೆಯಾದವರು ಉನ್ನತ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಐಐಟಿಗಳು ಮತ್ತು ಇತರೆ ರಾಷ್ಟ್ರೀಯ ಸಂಸ್ಥೆಗಳು ಫೆಲೋಶಿಪ್‌ ನೀಡಲಿದ್ದು, ಇದನ್ನು ಪಡೆಯಲು ಎರಡು ವರ್ಷಗಳ ಕಾಲಾವಕಾಶವಿರುತ್ತದೆ. ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಾಗಿ ಮಾತ್ರ ನೆಟ್‌ ಪರೀಕ್ಷೆ ಬರೆದವರಿಗೆ ಫೆಲೋಶಿಪ್‌ ನೀಡಲಾಗುವುದಿಲ್ಲ. ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಯಾವುದಕ್ಕೆ ಅರ್ಜಿ ಸಲ್ಲಿಸ

ಯುಗಾದಿ:

ಯುಗಾದಿ ಹಬ್ಬವನ್ನು ಆಚರಿಸುವುದರ ಮಹತ್ವ ಮತ್ತು ಕಾರಣಗಳು ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ 'ಚೈತ್ರ ಶುಕ್ಲ ಪ್ರತಿಪದೆ. 'ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ನೈಸಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ - ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ 'ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ' ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲ

ಗೂಗಲ್ ಸರ್ಚ್ನಲ್ಲಿ ಪ್ರಾಣಿಗಳ ದನಿಯನ್ನೂ ಕೇಳಬಹುದು!:-

ನವದೆಹಲಿ: ಗೂಗಲ್ ಸರ್ಚ್ನಲ್ಲಿ ಪ್ರಾಣಿಗಳ ಚಿತ್ರಗಳನ್ನು ಹುಡುಕಿದರೆ ಕ್ಷಣ ಮಾತ್ರಕ್ಕೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ಇದೀಗ ಪ್ರಾಣಿಗಳ ದನಿಯನ್ನೂ ಕೇಳುವಂಥಾ ಸೌಲಭ್ಯವನ್ನು ಗೂಗಲ್ ಒದಗಿಸಿದೆ. ಪ್ರಾಣಿಗಳ ದನಿ ಹೇಗಿರುತ್ತದೆ ಎಂಬುದನ್ನು ಮಕ್ಕಳಿಗೆ ಹೇಳಿಕೊಡುವುದಕ್ಕಾಗಿ ಗೂಗಲ್ ಈ ಸೌಲಭ್ಯವನ್ನು ಒದಗಿಸಿದೆ. ಉದಾಹರಣೆಗೆ ಬಳಕೆದಾರರು ಗೂಗಲ್ ನಲ್ಲಿ ಈ ಪ್ರಾಣಿಯ ದನಿ ಯಾವುದು ಎಂಬ ಪ್ರಶ್ನೆ ಕೇಳಿದರೆ, ಸರ್ಚ್ ಇಂಜಿನ್ ಆ ಪ್ರಾಣಿಯ ಇಲ್ಯುಸ್ಟ್ರೇಷನ್, ಪ್ರಾಣಿಯ ಹೆಸರು ಜತೆ ಆ ಪ್ರಾಣಿಯ ದನಿಯ ಸ್ಯಾಂಪಲ್ ನ್ನೂ ತೋರಿಸುತ್ತದೆ. ವರದಿಗಳ ಪ್ರಕಾರ ಈಗಾಗಲೇ ಗೂಗಲ್ ಸರ್ಚ್ ಇಂಜಿನ್ನಲ್ಲಿ ಜೀಬ್ರಾ, ಕೋತಿ, ಬೆಕ್ಕು, ಸಿಂಹ, ಹಂದಿ, ಆನೆ, ಕುದುರೆ ಮೊದಲಾದ 19 ಪ್ರಾಣಿಗಳ ದನಿ ಲಭ್ಯವಾಗುತ್ತಿದೆ.

ಕಣಿವೆ ರಾಜ್ಯದ ಮೊದಲ ಮಹಿಳಾ ಸಿ .ಎಂ . ಮುಫ್ತಿ:-

ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು . ರಾಜ್ಯಪಾಲ ಎನ್ . ಎನ್ . ವೋಹ್ರಾ ಅವರು ಪ್ರಮಾಣ ವಚನ ಬೋಧಿಸಿದರು. ಮುಫ್ತಿ ಅವರು ರಾಜ್ಯದ 13 ನೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ . ಇದೇ ವೇಳೆ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರೂ ಪ್ರಮಾಣ ವಚನ ಸ್ವೀಕರಿಸಿದರು . ಕೇಂದ್ರ ಸಚಿವ ಎಂ . ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು

ಗುಜರಾತ್ನಲ್ಲಿ ದೇಶದ ಮೊದಲ ಸಾವಯವ ಕೃಷಿ ವಿವಿ.:

ವಡೋದರಾ: ಕೃಷಿಕರನ್ನು ಅಸಂಪ್ರದಾಯಿಕ ಕೃಷಿಯೆಡೆಗೆ ತೆರಳುವಂತೆ ಪ್ರೋತ್ಸಾಹಿಸಲು ಹಾಗೂ ರೈತರ ಸಮಸ್ಯೆ ನಿವಾರಣೆಗೆ ದೇಶದಲ್ಲಿಯೇ ಮೊದಲು ಎನ್ನಬಹುದಾದ ಸಾವಯವ ಕೃಷಿ ವಿಶ್ವವಿದ್ಯಾಲಯ ಗುಜರಾತಿನಲ್ಲಿ ಸ್ಥಾಪನೆಯಾಗುತ್ತಿದೆ. ಇಲ್ಲಿನ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ರೈತ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಆನಂದಿ ಬೇನ್ ಪಟೇಲ್, 'ರಾಸಾಯನಿಕಯುಕ್ತ ಗೊಬ್ಬರ, ಕ್ರಿಮಿನಾಶಕ ಬಳಸಿ ಕೃಷಿ ಮಾಡುತ್ತಿರುವ ಅನ್ನದಾತರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ತಡೆಯಲು ಸಾವಯವ ಕೃಷಿ ವಿವಿ ಸ್ಥಾಪಿಸಲಾಗುವುದು,' ಎಂದು ಹೇಳಿದ್ದಾರೆ. ಸಾವಯವ ಕೃಷಿ ವಿವಿ ಸ್ಥಾಪನೆಗಾಗಿ 2016-17ನೇ ಸಾಲಿನ ಬಜೆಟ್ನಲ್ಲಿ 10 ಕೋಟಿ ರೂ. ಅನುದಾನ ನೀಡಲಾಗಿದ್ದು, ವಿವಿ ಸ್ಥಾಪನೆಗೆ ಇನ್ನು ಜಾಗ ಗುರುತು ಮಾಡಿಲ್ಲ ಎಂದು ಗುಜರಾತ್ ಕೃಷಿ ಸಚಿವ ಬಾಬುಭಾಯಿ ಬೋಖಿರಾ ತಿಳಿಸಿದ್ದಾರೆ. ರಾಜ್ಯದ ರಾಜಧಾನಿ ಗಾಂಧಿನಗರದಲ್ಲಿ ಕಾಮಧೇನು ಕೃಷಿ ವಿವಿ ಹತ್ತಿರವೇ ಈ ವಿವಿಗೂ ಸ್ಥಳ ಗುರುತಿಸಬಹುದು ಎನ್ನಲಾಗುತ್ತಿದೆ.

555 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Image

ಇ– ಮೇಲ್ ಸೃಷ್ಟಿಕರ್ತ ರೇ ಟಾಮ್ಲಿನ್ಸನ್ ಇನ್ನಿಲ್

Image
ವಾಷಿಂಗ್ಟನ್ ( ಎಎಫ್ಪಿ) : ಇ – ಮೇಲ್ ಆಧುನಿಕ ಸೃಷ್ಟಿಕರ್ತ ಎಂಬ ಕೀರ್ತಿಗೆ ಪಾತ್ರರಾಗಿದ್ದ ರೇ ಟಾಮ್ಲಿನ್ಸನ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು . ಯೂಸರ್ನೆಟ್ ಜತೆಗೆ @ ಸಂಕೇತವನ್ನು ಬಳಸಿದ ಮೊದಲಿಗ ಎಂಬ ಕೀರ್ತಿ ಕೂಡ ರೇ ಅವರದ್ದು. ಟಾಮ್ಲಿನ್ಸನ್ ಅವರು ಇ – ಮೇಲ್ಗೂ ಮೊದಲು 1971 ರಲ್ಲಿ ಸೀಮಿತ ನೆಟ್ವರ್ಕ್ ಅಡಿಯಲ್ಲಿ ಬೇರೆ – ಬೇರೆ ಯಂತ್ರಗಳ ಮೂಲಕ ಎಲೆಕ್ಟ್ರಾನಿಕ್ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಕಂಡು ಹಿಡಿದಿದ್ದರು . ಅದಕ್ಕೂ ಮೊದಲು ಒಂದೇ ಗಣಕಯಂತ್ರ ಬಳಸಿ ಸಂದೇಶ ಕಳುಹಿಸುವ ಸೌಲಭ್ಯ ಮಾತ್ರವೇ ಜಾರಿಯಲ್ಲಿತ್ತು . ' ನೆಟ್ವರ್ಕ್ ಕಂಪ್ಯೂಟರ್ಗಳ ಕಾಲದ ಆರಂಭಿಕ ದಿನಗಳಲ್ಲಿ ಮೇಲ್ ಪರಿಚಯಿಸಿದ ರೇ ಅವರು ತಂತ್ರಜ್ಞಾನದ ನಿಜವಾದ ಆದಿಶೋಧಕ. ಅವರ ಕೊಡುಗೆ ವಿಶ್ವದ ಸಂವಹನವನ್ನು ಬದಲಿಸಿದೆ ' ಎಂದು ರೇಥೆಯಾನ್ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ . ಟಾಮ್ಲಿನ್ಸನ್ ಅವರು ಶನಿವಾರ ವಿಧಿವಶರಾಗಿದ್ದಾರೆ ಎಂದು ರೇಥೆಯಾನ್ ಕಂಪೆನಿ ವಕ್ತಾರ ತಿಳಿಸಿದ್ದಾರೆ . ಆದರೆ, ಅವರ ಸಾವಿಗೆ ಕಾರಣ ಮಾತ್ರ ಇನ್ನಷ್ಟೇ ತಿಳಿಯಬೇಕಿದೆ . ರೇ ಅವರ ನಿಧನಕ್ಕೆ ಆನ್ಲೈನ್ ಜಗತ್ತು ಕಂಬನಿ ಮಿಡಿದಿದೆ . ' ಇಮೇಲ್ ಸಂಶೋಧನೆ ಮಾಡಿದ್ದಕ್ಕಾಗಿ ಹಾಗೂ @ ಸಂಕೇತವನ್ನು ಯೂಸರ್ನೇಮ್ ಬೆಸದಿದ್ದಕ್ಕೆ ಧನ್ಯವಾದಗಳು ರೇ ಟಾಮ್ಲಿನ್ಸನ್' ಎಂದು ಇಂ

India win two gold medals in World Table Tennis team championships:-

KUALA LUMPUR: Indian men's and women's team scripted history by clinching the gold medals at the World Table Tennis Team Championships with superb victories over Luxemburg and Brazil respectively on Saturday. . . Indian eves beat Luxemburg 3-1 in the event final of the Second Division, while their male counterparts overcame a stiff Brazil 3-2 here. . . India had sealed their entry in the Champions Division last night after reaching the finals.

SUCCESS STORY: From remote village (kalatippi) to KIMS HUBLI

Image
Learnt in a Govt LPS Kalatippi (1-5), and Govt HPS Kalatippi(6-7) and led to KIMS on HIS effort.. ಹಾಲು ಮಾರಿ ಮಗನ್ನ ಡಾಕ್ಟ್ರು ಮಾಡೇನ್ರಿ ' ಹುಬ್ಬಳ್ಳಿ: ' ಮುಂಜಾನಿ, ಸಂಜೆ ತಲಾ ನಾಲ್ಕು ಲೀಟರ್ ಹಾಲು ಮಾರಿ ಮಗನ್ನ ಡಾಕ್ಟರ್ ಓದಿಸೇನ್ರಿ . ಅವನ ಸಾಧನೆ ನೋಡಾಕ ಬಂದೇನ್ರಿ ' ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂ ಕಿನ ತೇರದಾಳ ಬಳಿಯ ಕಾಲತಿಪ್ಪಿಯ ಯಮನಪ್ಪ ಲಕ್ಷ್ಮಣ ಕಂಬಾಗಿ ' ಪ್ರಜಾವಾಣಿ' ಎದುರು ಸಂಭ್ರಮ ಹಂಚಿಕೊಂಡರು . ಯಮನಪ್ಪ ಅವರ ಪುತ್ರ ಡಾ . ಕಾಶಿನಾಥ ವೈದ್ಯಕೀಯ ಪದವಿ ಮುಗಿಸಿದ್ದು , ಮನೆಯವರಲ್ಲಿ ಹರ್ಷಕ್ಕೆ ಕಾರಣವಾಗಿತ್ತು . ಪತ್ನಿ ಅಕ್ಕವ್ವ ಅವರೊಂದಿಗೆ ಮುಂಜಾನೆಯೇ ಕಿಮ್ಸ್ ಆವರಣಕ್ಕೆ ಬಂದಿದ್ದರು . ಯಮನಪ್ಪ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇರುವ ಒಂದು ಎಕರೆ ಜಮೀನಿನಲ್ಲಿ ಹಿರಿಯ ಮಗನೊಂದಿಗೆ ಅವರು ಕೃಷಿಯಲ್ಲಿ ತೊಡಗಿಕೊಂಡಿ ದ್ದಾರೆ. ಕಿರಿಯ ಮಗ ಕಾಶೀನಾಥ ಅವರ ವೈದ್ಯಕೀಯ ಅಭ್ಯಾಸದ ಖರ್ಚು ನಿಭಾಯಿಸಲು ಹೈನುಗಾರಿಕೆಯಲ್ಲಿ ತೊಡಗಿದ್ದಾಗಿ ಯಮನಪ್ಪ ಹೇಳಿದರು. ಆರು ಚಿನ್ನದ ಪದಕಗಳೊಂದಿಗೆ ಇನ್ಫೊಸಿಸ್ನ ಡಾ. ಸುಧಾಮೂರ್ತಿ ಅವರು ತಮ್ಮ ತಾಯಿಯ ನೆನಪಿಗೆ ನೀಡುವ ₹ 10 ಸಾವಿರ ನಗದು ಪುರಸ್ಕಾರವನ್ನು ಪಡೆದ ಡಾ. ಚೇತನ್ ಘಂಟಪ್ಪನವರ್ ಅವರಿಗೆ ಪೋಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದರು . ಹುಬ್ಬಳ

KPSC JOB NOTIFICATION FOR – 2039 VARIOUS POSTS ವಾರ್ಡನ್/ಲೆಕ್ಕ ಸಹಾಯಕರು/ನಿರೀಕ್ಷರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ

        ಕರ್ನಾಟಕ ಲೋಕ ಸೇವಾ ಆಯೋಗದಿಂದ ಈ ಕೆಳಕಂಡ 2039 ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲಕರು : ಒಟ್ಟು ಹುದ್ದೆ – 02 ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರು: ಒಟ್ಟು ಹುದ್ದೆ – 307 ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಂಧ ಮಕ್ಕಳ ಶಾಲೆಯಲ್ಲಿ ಪದವೀಧರ ಸಹಾಯಕರು/ ಶಿಕ್ಷಕರು : ಒಟ್ಟು ಹುದ್ದೆ – 10 ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಿವುಡು ಮಕ್ಕಳ ಶಾಲೆಯಲ್ಲಿ ಪದವೀಧರ ಸಹಾಯಕರು/ ಶಿಕ್ಷಕರು: ಒಟ್ಟು ಹುದ್ದೆ – 13 ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಸಹಾಯಕ ಉದ್ಯೋಗಾಧಿಕಾರಿ: ಒಟ್ಟು ಹುದ್ದೆ – 20 ಪೌರಾಡಳಿತ ಇಲಾಖೆಯ ಮಹಾ ನಗರಪಾಲಿಕೆಗಳಲ್ಲಿ ಅಕೌಂಟೆಂಟ್: ಒಟ್ಟು ಹುದ್ದೆ – 54 ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಅಕೌಂಟೆಂಟ್: ಒಟ್ಟು ಹುದ್ದೆ – 39 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಗಣತಿದಾರರು : ಒಟ್ಟು ಹುದ್ದೆ – 01 ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ನಿರೀಕ್ಷಕರು: ಒಟ್ಟು ಹುದ್ದೆ – 59 ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಸಹಾಯಕರು: ಒಟ್ಟು ಹುದ್ದೆ – 445 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ಮೇಲ್ವಿಚ

ಹಿರಿಯ ನಟ ಮನೋಜಕುಮಾರ್ಗೆ 'ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

Image
ಬಾಲಿವುಡ್ ಹಿರಿಯ ನಟ ಮನೋಜಕುಮಾರ್ ಅವರಿಗೆ ಚಿತ್ರರಂಗದಲ್ಲಿ ನೀಡುವ ಪ್ರತಿಷ್ಟಿತ 'ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿದ. ಭಾರತೀಯ ಚಿತ್ರರಂಗದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದ ಮನೋಜ ಕುಮಾರ್ ಸಿನಿ ರಂಗದಲ್ಲಿ ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ. ಭಾರತೀಯ ಸಿನಿರಂಗದ ಶೈನಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ಮನೋಜಕುಮಾರ್ ಬಾಲಿವುಡ್ನಲ್ಲಿ ಹೆಚ್ಚಾಗಿ ಗುರಿತಿಸಿಕೊಂಡಿದ್ದಾರೆ.

ಸುಮಾರು 163 ವರ್ಷಗಳ ಸುದಿರ್ಘ ಇತಿಹಾಸವಿರುವ ಭಾರತೀಯ ರೈಲ್ವೆ ಅನೇಕ ಆಸಕ್ತಿದಾಯಕ ವಿಷಯಗಳು:

ಭಾರತೀಯ ರೈಲ್ವೆ ಇಂದು ಅನೇಕ ಹೊಸ ಆಯಾಮ ಒಳಗೊಂಡು ಕಾರ್ಯನಿರ್ವಹಿಸುತ್ತಿದೆ. 163 ವರ್ಷಗಳ ಸುದೀರ್ಘ ಇತಿಹಾಸ ತಿರುವಿ ಹಾಕಿದಾಗ ನಮಗೆ ಅನೇಕ ಸಂಗತಿಗಳು ಕಾಣಸಿಗುತ್ತವೆ. 1. 1844 ರಲ್ಲಿ ಭಾರತೀಯ ರೈಲ್ವೆಗಳ ಅಭಿವೃದ್ಧಿ ಕಡೆಗೆ ಮೊದಲ ಪ್ರಯತ್ನ ಗವರ್ನರ್ ಜನರಲ್ ಲಾರ್ಡ್ ಹಾರ್ಡಿಂಗ್ ಮಾಡಿದ್ದಾರೆ. 2. 1850 ರಲ್ಲಿ ಗ್ರೇಟ್ ಇಂಡಿಯನ್ ರೈಲ್ವೆ ಹಾಗೂ ಈಸ್ಟ್ ಇಂಡಿಯನ್ ರೈಲ್ವೆಯ ಎರಡು ರೈಲ್ವೆ ಕಂಪನಿಗಳು ಹೆಸರಿನಲ್ಲಿ ರಚನೆಯಾಯಿತು. ಒಂದು ಮುಂಬೈ ಹಾಗೂ ಕೋಲ್ಕತಾದಲ್ಲಿ ಸ್ಥಾಪನೆ 3. ಮುಂಬೈ ಮತ್ತು ಥಾಣೆ, ಏಪ್ರಿಲ್ 16, 1853 ರ ನಡುವೆ ಮೊದಲ ಭಾರತದಲ್ಲಿ ಉಗಿ ಎಂಜಿನ್ ರೈಲು ಸಂಚಾರ ಯಶಸ್ವಿ 4. ಬಾಂಬೆ ಸರ್ಕಾರದ ಮುಖ್ಯ ಇಂಜಿನಿಯರ್ ಜಾರ್ಜ್ ಕ್ಲಾರ್ಕ್ ಕಲ್ಪನೆ ಕೂಸಾಗಿದ್ದ ಮೊದಲ ರೈಲು 1853ರಲ್ಲಿ ಮುಂಬೈ-ಠಾಣೆ ನಡುವೆ ಮೊದಲ ರೈಲು ಸಂಚಾರ 5. ಮೊದಲ ರೈಲು ಸಂಚಾರದಲ್ಲಿ 400 ಪ್ರಯಾಣಿಕರ ಪ್ರಯಾಣ 6. ದಕ್ಷಿಣದಲ್ಲಿ, ರೈಲು ಜುಲೈ 1856 ಮದ್ರಾಸ್ ರೈಲ್ವೆ ಕಂಪನಿ ಆರಂಭಿಸಿದರು. 7. ಭಾರತದಲ್ಲಿ ಪ್ರಥಮ ರೈಲು 1853ರಲ್ಲಿ ಆರಂಭಗೊಂಡರೇ, ಚೀನಾದಲ್ಲಿ 23 ವರ್ಷಗಳ ನಂತರ, 1876 ರಲ್ಲಿ ಆರಂಭ 8. ರೈಲು ಸೇವೆ 1853 ರಲ್ಲಿ ಆರಂಭವಾದರೂ ರೈಲಿನಲ್ಲಿ ಶೌಚಾಲಯ 50 ವರ್ಷಗಳ ನಂತರ 1909 ರಲ್ಲಿ ಅಳವಡಿಸಲಾಯಿತು 9. ಇಂದು, 23 ದಶಲಕ್ಷಕ್ಕಿಂತಲೂ ಹೆಚ್ಚು

2015-16ನೇ ಸಾಲಿಗೆ ಕೆಎಸ್ಆರ್ಪಿ ಪೇದೆ: ಫೆ.28ರಂದು ಲಿಖಿತ ಪರೀಕ್ಷೆ

ರಾಜ್ಯ ಪೊಲೀಸ್ ಇಲಾಖೆಯು ಈ ಹಿಂದೆ 2015-16ನೇ ಸಾಲಿಗೆ ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ (ಕೆಎಸ್ಆರ್ಪಿ) ಇಲಾಖೆಯಲ್ಲಿ ಖಾಲಿ ಇರುವ 822 ಪುರುಷ ಮತ್ತು ಮಹಿಳಾ ಪೇದೆಗಳ ನೇಮಕಕ್ಕೆ ಅರ್ಜಿ (ಅರ್ಜಿ ಸಲ್ಲಿಸಲು 2015ರ ಅಕ್ಟೋಬರ್ 06 ಕೊನೆಯ ದಿನಾಂಕ ಆಗಿತ್ತು) ಆಹ್ವಾನಿಸಿತ್ತು. ಇದೀಗ ಈ ಹುದ್ದೆಗಳಿಗೆ ಫೆ.28ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಪರೀಕ್ಷಾ ಕೇಂದ್ರಗಳು: ಹುದ್ದೆಗಳಿಗೆ ಸಂಬಂಧಪಟ್ಟಂತೆ ಇಲಾಖೆಯು ಈ ಹಿಂದೆ ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಮಾತ್ರ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿತ್ತು. ಆದರೆ, ಅಭ್ಯರ್ಥಿಗಳಿಗೆ ದೂರ ಪ್ರಯಾಣದ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದ ಐದು ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಆ ಕೇಂದ್ರಗಳೆಂದರೆ; ಬೆಂಗಳೂರು, ಮೈಸೂರು, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ. ಪರೀಕ್ಷಾ ಮಾಹಿತಿ: ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಬಗ್ಗೆ ಸೂಚನೆ ಕಳುಹಿಸಲಾಗಿದೆ. ಅಭ್ಯಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ಗುರುತಿಸುವುದು ಹಾಗೂ ಕರೆ ಪತ್ರವನ್ನು ವೆಬ್ಸೈಟ್ದಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದೆ. ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ 080-2294 3346ಗೆ ಕರೆ ಮಾಡಿ ಪರಿಹರಿ

👆This is belgum B.E.O order about 6-8 who re- recuitment get 252 KCSR benifts💥

Image

ಭವಿಷ್ಯ ನಿಧಿ ಬಡ್ಡಿ ಶೇ 8.80ಕ್ಕೆ ಏರಿಕೆ

Feb 16, 2016, 5: 35 PM IST ಹೊಸದಿಲ್ಲಿ, ಫೆ . 16: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ ) ಯು ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ 8 . 75ರಿಂದ ಶೇ . 8. 80 ಕ್ಕೆ ಏರಿಸಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಭವಿಷ್ಯ ನಿಧಿ ಬಡ್ಡಿ ಏರಿಕೆಗೆ ಅನುಮತಿ ನೀಡಿದ್ದರು. ಪ್ರಸ್ತುತ ಬಡ್ಡಿ ದರ ಶೇ . 8. 75 . ಇದೀಗ 2015- 16ನೆ ಸಾಲಿಗೆ ಶೇ 0. 05 ರಷ್ಟು ಏರಿಕೆಯಾಗಿದೆ.

2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ.

2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ. ಸಂಚಾರಿ ವಿಜಯ್, ವಿಜಯಲಕ್ಷ್ಮಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ. @educationgknews ಬೆಂಗಳೂರು: 2014-15 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ನಾನು ಅವನಲ್ಲ ಅವಳು ಚಿತ್ರದ ನಟನೆಗೆ ಸಂಚಾರಿ ವಿಜಯ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ವಿದಾಯ ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮೀ ಗೋಪಾಲಸ್ವಾಮಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಸಂತ್ ಕುಮಾರ್ ಪಾಟೀಲ್ ಅವರಿಗೆ ಡಾ.ರಾಜ್‍ಕುಮಾರ್ ಪ್ರಶಸ್ತಿ ಮತ್ತು ಸುರೇಶ್ ಕೃಷ್ಣ ಅರಸ್ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಚಿತ್ರ: ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಹರಿವು ಚಿತ್ರಕ್ಕೆ ಮೊದಲನೇ ಸ್ಥಾನ, ಅಭಿಮನ್ಯು ಚಿತ್ರಕ್ಕೆ ದ್ವೀತೀಯ ಸ್ಥಾನ ಮತ್ತು ಹಗ್ಗದ ಕೊನೆ ಚಿತ್ರಕ್ಕೆ ತೃತೀಯ ಸ್ಥಾನ ಸಿಕ್ಕಿದೆ. ಯಾವ ಚಿತ್ರಕ್ಕೆ ಯಾರಿಗೆ ಯಾವ ಪ್ರಶಸ್ತಿ? ಅತ್ಯುತ್ತಮ ಪೋಷಕ ನಟ – ಅರುಣ್ ದೇವಸ್ಯ ಅತ್ಯುತ್ತಮ ಪೋಷಕ ನಟಿ – ಬಿ ಜಯಶ್ರೀ, (ಕೌದಿ) ಅತ್ಯುತ್ತಮ ಕಥೆ – ವಿದ್ಯಾ (`ನಾನು ಅವನಲ್ಲ ಅವಳು') ಅತ್ಯುತ್ತಮ ಚಿತ್ರಕಥೆ – ಪಿ.ಶೇಷಾದ್ರಿ (ವಿದಾಯ) ಅತ್ಯುತ್ತಮ ಸಂಭಾಷಣೆ – ವೇಣು (ತಿಪ್ಪಜ್ಜಿ ಸರ್ಕಲ್) ಅತ್ಯುತ್ತಮ ಛಾಯಾಗ್ರಹಣ -ಸತ್ಯ ಹೆಗಡೆ (ರಾಟ

ವಿಶ್ವದ ಅತಿ ಎತ್ತರದ ಗಡಿಯಾರ ಗೋಪುರ: ಇನ್ಫಿ ಸಜ್ಜು

Image
ವಿಕ ಸುದ್ದಿಲೋಕ | Feb 3, 2016, 04.00 AM IST Patni was where NR Narayana Murthy and most of the other founders of Infosys met. A A A ಮೈಸೂರಿನ ಇನ್ಫೋಸಿಸ್ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ನಲ್ಲಿ 135 ಅಡಿ ಎತ್ತರದ ಕ್ಲಾಕ್ ಟವರ್ ಅಂದಾಜು 60 ಕೋಟಿ ರೂ. ವೆಚ್ಚ ಬೆಂಗಳೂರು: ಸಾಂಸ್ಕೃತಿ ರಾಜಧಾನಿ ಮೈಸೂರಿನಲ್ಲಿ ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ ಎಂಬ ಐತಿಹಾಸಿಕ ಅವಳಿ ಗೋಪುರಗಳು ತನ್ನ ಅಂದ ಚೆಂದಗಳಿಂದ ಪ್ರಸಿದ್ಧವಾಗಿದೆ. ಮೈಸೂರು ವಿಶ್ವ ವಿದ್ಯಾಲಯದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಮಾನಸಗಂಗೋತ್ರಿಯಲ್ಲೂ ಕಳೆದ ವರ್ಷ ಮತ್ತೊಂದು ಗಡಿಯಾರ ಗೋಪುರ ನಿರ್ಮಾಣವಾಗಿತ್ತು. ಈಗ ಐಸಿ ದಿಗ್ಗಜ ಇನ್ಫೋಸಿಸ್ ಮೈಸೂರಿನಲ್ಲಿರುವ ತನ್ನ ಕ್ಯಾಂಪಸ್ನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಸಜ್ಜಾಗಿದೆ. ಸುಮಾರು 345 ಎಕರೆ ಪ್ರದೇಶಗಳಲ್ಲಿ ಹರಡಿರುವ ಇನ್ಫೋಸಿಸ್ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ನಲ್ಲಿ 135 ಮೀಟರ್ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಇನ್ಫೋಸಿಸ್ ಉದ್ದೇಶಿಸಿದೆ. ಇದು ಲಂಡನ್ನಲ್ಲಿರುವ ಬಿಗ್ ಬೆನ್ (96 ಮೀಟರ್), ಕ್ಯಾಲಿಫೋರ್ನಿಯಾದ ಹೋವರ್ ಟವರ್ಗಿಂತಲೂ (87 ಮೀಟರ್) ಎತ್ತರಕ್ಕೇರಲಿದೆ. ಗೋಥಿಕ್ ಶೈಲಿಯಲ್ಲಿ ನಿರ್ಮಾಣವಾಗಲಿರುವ ಈ ಗೋಪುರ ಕಟ್ಟಲು ಸುಮಾರು 60 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ 19 ಅಂತಸ್ತುಗಳು ಇರ

KARNATAKA TEACHERS ELIGIBILITY TEST RESULTS- 2015 PUBLISHED

"TET ಪರೀಕ್ಷಾ ಫಲಿತಾಂಶ ಪ್ರಕಟ" TET ಫಲಿತಾಂಶ ನೋಡಲು ಈ ಕೆಳಗಿನ 'ಲಿಂಕ್' CLICK ಮಾಡಿ. http://keyans.kartet.caconline.in/DisplayResult.aspx http://kartet.caconline.in/

ಮ್ಯಾನ್ಮಾರ್ನಲ್ಲಿ ಮೊದಲ ಪ್ರಜಾಸತ್ತೆ ಸರಕಾರ:*

-ಅರ್ಧ ಶತಮಾನದ ಸೇನಾಡಳಿತ ವಿರೋಧಿಸಿ ಸೂಚಿ ನಡೆಸಿದ ದಶಕಗಳ ಕಾಲದ ಹೋರಾಟಕ್ಕೆ ಸಂದ ಫಲ- ನೇಪಿತಾ(ಮ್ಯಾನ್ಮಾರ್): ಮ್ಯಾನ್ಮಾರ್ನಲ್ಲಿ ಅರ್ಧ ಶತಮಾನದ ಸೇನಾಡಳಿತದ ನಂತರ ಇದೇ ಮೊದಲ ಬಾರಿಗೆ ಔಂಗ್ ಸಾನ್ ಸೂಚಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಂಘಟನೆ 'ಎನ್ಎಲ್ಡಿ' ಪಕ್ಷದ ಹೊಸ ಸರಕಾರ ತನ್ನ ಕಾರ್ಯ ಕಲಾಪಗಳನ್ನು ಆರಂಭಿಸಿದೆ. ನವೆಂಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ ಎನ್ಎಲ್ಡಿ ಮ್ಯಾನ್ಮಾರ್ನಲ್ಲಿ ಇದೇ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವಾಗಿ ಹೊರಹೊಮ್ಮಿದ್ದು, ನೂತನ ಚುನಾಯಿತ ಸದಸ್ಯರು ಸೋಮವಾರ ಸಂಸತ್ತಿನ ಕಲಾಪಗಳಲ್ಲಿ ಪಾಲ್ಗೊಂಡರು. ಅರ್ಧ ಶತಮಾನದ ಕಾಲ ನಿರಂತರ ಸೇನಾಡಳಿತದ ದಬ್ಬಾಳಿಕೆಗೆ ಒಳಗಾಗಿದ್ದ ಮ್ಯಾನ್ಮಾರ್ ಸಂಸತ್ತಿನ ಪಾಲಿಗೆ ಸೋಮವಾರ ಐತಿಹಾಸಿಕ ದಿನ. ಔಂಗ್ ಸಾನ್ ಸೂಚಿ ಅವರು ಮ್ಯಾನ್ಮಾರ್ನಲ್ಲಿ ಪ್ರಜಾಸತ್ತೆ ಮರಳಿ ತರಲು ಮಾಡಿದ ತ್ಯಾಗ ಮತ್ತು ಕಠಿಣ ಹೋರಾಟಗಳ ಫಲವಾಗಿ ಜನರಿಂದ ಆಯ್ಕೆಯಾದ ಪ್ರಜಾಸತ್ತಾತ್ಮಕ ಸರಕಾರವೊಂದು ಇದೀಗ ಕಾರ್ಯಭಾರ ಆರಂಭಿಸಿದೆ. ಸೂಚಿ ಅವರು ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ್ದರೂ, ಅವರ ಎನ್ಎಲ್ಡಿ ಪಕ್ಷ ಸೇನೆ ಜತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ಮ್ಯಾನ್ಮಾರ್ ಸಂವಿಧಾನವು ಸೇನೆಗೆ ಶೇ 25ರಷ್ಟು ಸ್ಥಾನಗಳನ್ನು ಸ