Posts

ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ದಿಂದ ಪ್ರೌಢ ಶಾಲೆ ಶಿಕ್ಷಕರ ವೃಂದಕ್ಕೆ ಬಡ್ತಿ ನೀಡುವ ಸಂಬಂದ

Image

CLICK HERE TO ENTER THE DEPT. PREFERENCES FOR THE POST OF SECOND DIVISION ASSISTANT/JR.ASSISTANT

http://www.kpscapps1.com/fda_sda_2015/

LIST OF CANDIDATES ELIGIBLE FOR DOCUMENT VERIFICATION FOR THE POST OF JR.ASSISTANT(FOOD AND CIVIL SUPPLIES)

http://kpsc.kar.nic.in/ELGLIST%20OF%20JR%20ASST.htm

Non Teaching Transfer Guidelines for the year 2016-17.

http://schooleducation.kar.nic.in/pdffiles/NTTransferGuidelines060616.PDF

ಸರ್ಕಾರಿ ಶಾಲೆ: 'ವಿದ್ಯಾಂಜಲಿ'ಗೆ 16 ರಂದು ಚಾಲನೆ

ನವದೆಹಲಿ: ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಶೀಘ್ರ 'ವಿದ್ಯಾಂಜಲಿ' ಎಂಬ ಹೊಸ ಕಾರ್ಯಕ್ರಮ ಆರಂಭಿಸಲಿದೆ. ಸರ್ಕಾರಿ ಶಾಲೆಗಳಲ್ಲಿನ ಬೋಧನಾ ವ್ಯವಸ್ಥೆ ಸುಧಾರಣೆಗೆ ಮತ್ತು ಶಿಕ್ಷಕರ ಕೊರತೆ ನೀಗಿಸುವಲ್ಲಿ 'ವಿದ್ಯಾಂಜಲಿ' ನೆರವಾಗಲಿದೆ. ಇದಕ್ಕಾಗಿ ನಾಗರಿಕ ಸೇವೆ ಸಲ್ಲಿಸಿ ನಿವೃತ್ತರಾದವರು ಸೇರಿದಂತೆ ಬೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾಭಿಮಾನಿಗಳನ್ನು ಬಳಸಿಕೊಳ್ಳಲಾಗುತ್ತದೆ. ವಿದ್ಯಾಂಜಲಿ ಕಾರ್ಯಕ್ರಮಕ್ಕೆ ಜೂನ್ 16 ರಂದು ಚಾಲನೆ ನೀಡಲಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾಲೆಗಳಲ್ಲಿ ಬೋಧನೆ ಮಾಡಲು ಮುಂದಾಗುವ 'ಸ್ವಯಂಸೇವಕ'ರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವೇದಿಕೆ ರೂಪಿಸಿದೆ. 'ವಿದ್ಯಾಂಜಲಿ' ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ದೇಶದ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ. ಈ ಕೊರತೆ ನೀಗಿಸಲು 'ಸ್ವಯಂಪ್ರೇರಿತರ' ಗುಂಪು ರಚನೆಯಾಗಲಿದೆ. ಇವರು ತಮ್ಮ ಅಮೂಲ್ಯ ಸಮಯವನ್ನು ವಿದ್ಯಾರ್ಥಿಗಳಿಗಾಗಿ ವಿನಿಯೋಗಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ತಿಂಗಳ ಬಾನುಲಿ ಭಾಷಣ 'ಮನದ ಮಾತು'ವಿನಲ್ಲಿ ವಿದ್ಯಾಂಜಲಿ

ವಿಶ್ವ ಪರಿಸರ ದಿನದ ಹುಟ್ಟು*... 05 Jun 2016

* ನಮ್ಮ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಹಾಗೂ ಆ ಬಗ್ಗೆ ವಿಶ್ವಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1974ರ ಜೂನ್ 5ರಂದು 'ವಿಶ್ವ ಪರಿಸರ ದಿನ'ವನ್ನು ಆರಂಭಿಸಿತು. ಅಲ್ಲಿಂದ ಮುಂದೆ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರತಿವರ್ಷವೂ ಈ ದಿನವನ್ನು ಆಚರಿಸಲಾಗುತ್ತಿದೆ. ಪರಿಸರದ ಕುರಿತು ಜನಜಾಗೃತಿ ಮೂಡಿಸಲು ಈ ದಿನವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಈ ದಿನವನ್ನು ಒಂದು ಧ್ಯೇಯದೊಂದಿಗೆ ಆಚರಿಸಲಾಗುತ್ತದೆ. *ಈ ವಷ೯ದ ಧ್ಯೇಯ ವಾಕ್ಯ "ವನ್ಯ ಜೀವಿಗಳ ಕಾನೂನುಬಾಹಿರ ಮ‌ಾರಾಟದ ವಿರುಧ್ದ ಹೋರಾಟ*" ಈ ಧ್ಯೇಯವು ಪರಿಸರಕ್ಕೆ ಸಂಬಂಧಿಸಿ ಕಾಳಜಿ ವಹಿಸಬೇಕಾದ ಯಾವುದೋ ಒಂದು ವಿಚಾರವನ್ನು ಒಳಗೊಂಡಿರುತ್ತದೆ. ಈ ಧ್ಯೇಯಕ್ಕೆ ಅನುಗುಣವಾಗಿ ಆ ವರ್ಷದ ಪರಿಸರ ದಿನದ ಲಾಂಛನವನ್ನೂ ರೂಪಿಸಲಾಗುತ್ತದೆ. ಪ್ರತಿವರ್ಷವೂ ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ದಿನದ ಅಧಿಕೃತ ಆಚರಣೆ ನಡೆಯುತ್ತದೆ. ಆ ವರ್ಷದ ಧ್ಯೇಯಕ್ಕೆ ಅನುಗುಣವಾಗಿ ಹೆಚ್ಚಿನ ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರವನ್ನು ಆರಿಸಿಕೊಂಡು ಅಲ್ಲಿನ ತೊಂದರೆ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಈ ವರ್ಷ ಅಂಗೋಲಾದಲ್ಲಿ ವಿಶ್ವ ಪರಿಸರ ದಿನ ಆಯೋಜನೆಗೊಂಡಿದೆ.

ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ನಿಧನ

Image
ಫೂನಿಕ್ಸ್, ಶನಿವಾರ, 4 ಜೂನ್ 2016 (11:47 IST) ಬಹಳ ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಅಮೆರಿಕಾದ ಫೂನಿಕ್ಸ್ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲಿ ಕುಟುಂಬದ ವಕ್ತಾರರು ಕೂಡ ಅವರ ನಿಧನ ವಾರ್ತೆಯನ್ನು ದೃಢಪಡಿಸಿದ್ದಾರೆ. 32 ವರ್ಷಗಳ ದೀರ್ಘ ಕಾಲದಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ವಕ್ತಾರ ಬೊಂಬ್ ಗುನ್ನೆಲ್ ಪ್ರಕಟಣೆ ಹೊರಹಾಕಿದ್ದಾರೆ. ಹೆವಿವೇಟ್ ಬಾಕ್ಸಿಂಗ್ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಅವರು ತಾವಾಡಿದ್ದ 61 ಪಂದ್ಯಗಳಲ್ಲಿ 56 ರಲ್ಲಿ ಜಯ ಪಡೆದು ಬಾಕ್ಸಿಂಗ್ ದಂತಕಥೆ ಎನಿಸಿಕೊಂಡಿದ್ದಾರೆ. ಟ್ರೆವರ್ ಬೆರ್ಬಿಕ್ ಎಂಬುವರ ವಿರುದ್ದ 1981 ರಲ್ಲಿ ಸೋಲುಂಡ ಬಳಿಕ ಬಾಕ್ಸಿಂಗ್​ಗೆ ವಿದಾಯ ಹೇಳಿದ್ದ ಅವರು ಮೂರು ವರ್ಷದ ಬಳಿಕ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು. ನ್ಯೂಯಾರ್ಕ್ನಲ್ಲಿ (1971ರ ಮಾರ್ಚ್) ಜೋ ಫ್ರೇಜರ್ ಮತ್ತು ಅಲಿ ನಡುವೆ ನಡೆದ ಕದನ 'ಫೈಟ್ ಆಫ್ ದಿ ಸೆಂಚುರಿ' ಎಂದೇ ಪ್ರಸಿದ್ಧಿ ಪಡೆದಿದೆ.

"ಖಾಸಗಿ ಶಾಲೆಗಳು ನೀಡುವ 'ವರ್ಗಾವಣೆ ಪ್ರಮಾಣಪತ್ರ' ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ಸಹಿ ಅಗತ್ಯವಿಲ್ಲ"

Image

SDC SELECTION List of 1:2 candidates eligible for document verification for the post of Second Division Assistant/Jr.Assistant (Residual Parent Cadre)

http://kpsc.kar.nic.in/ELGLIST%20SDA.HTM

ಬಡತನ ಮತ್ತು ಅಂಗವಿಕಲತೆ ನಡುವೆ ಶ್ರೀಮಂತ ಸಾಧನೆ(SSLC\PUC)

Image

ಕಣಜ » » ಕನ್ನಡ ಶಾಲಾ ಪಠ್ಯ ಪುಸ್ತಕಗಳು

* 1ರಿಂದ 10ನೇ ತರಗತಿ ವರೆಗಿನ ಪಠ್ಯ ಲಭ್ಯ * ಪಠ್ಯ ಪುಸ್ತಕ ವಿತರಣೆ ವಿಳಂಬ ಆದರೂ ಪಾಠಕ್ಕಿಲ್ಲ ತೊಂದರೆ * ವೆಬ್ಸೈಟ್ನಿಂದ ಪಠ್ಯ ಡೌನ್ಲೋಡ್ ಮಾಡಿಕೊಳ್ಳಬಹುದು * ಪ್ರೊಜೆಕ್ಟರ್ ಬಳಸಿ ಶಿಕ್ಷಕರು ಪಾಠ ಮಾಡಲು ಅವಕಾಶ ಬಿ.ಎಸ್.ಜಯಪ್ರಕಾಶ್ ನಾರಾಯಣ ಬೆಂಗಳೂರು ಶಾಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ ಪುಸ್ತಕ ಬಂದಿಲ್ಲ ಎಂಬ ಗೊಣಗಾಟ ಇನ್ನು ಮಕ್ಕಳಿಗಿಲ್ಲ. ಯಾಕೆಂದರೆ ಶಾಲೆಗಳ ಅರಂಭದಿಂದಲೇ 1 ರಿಂದ 10 ನೇ ತರಗತಿವರೆಗಿನ ಪಠ್ಯ ಪುಸ್ತಕಗಳ 'ಕಣಜ' ಕಂಪ್ಯೂಟರ್ ಪರದೆ ಮೇಲೆಯೇ ಮೂಡಲಿದೆ. ಹೌದು!. ಟೆಂಡರ್, ಮುದ್ರಣ ವಿಳಂಬ ಮುಂತಾದ ಸಬೂಬುಗಳಿಂದ ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಸರಕಾರ ಪೂರೈಸುವ ಪಠ್ಯ ಪುಸ್ತಕಗಳನ್ನು ಇಲಾಖೆ ನಡೆಸುತ್ತಿರುವ ಮಾಹಿತಿ ಕೋಶ 'ಕಣಜ'ದಲ್ಲಿ (ಘ್ಕಿಡಿಡಿಡಿ.ka್ಞa್ಜa.್ಚಟಞ) ಸೇರಿಸಲಿದೆ. ಕಳೆದ ಕೆಲವು ದಿನಗಳಿಂದ ಪ್ರಾಯೋಗಿಕ ಹಂತದಲ್ಲಿದ್ದ ಈ ಯೋಜನೆ ಮೇ 26ರಿಂದ (ಗುರುವಾರ) ವಿಧ್ಯುಕ್ತವಾಗಿ 'ಕಣಜ'ವನ್ನು ಸೇರಲಿದ್ದು, ಶಾಲೆ ಪುನಾರಂಭವಾಗುತ್ತಿದ್ದಂತೆ, ಸರಕಾರಿ ಶಾಲೆ ಶಿಕ್ಷಕರು ಕುಂಟು ನೆಪ ಹೇಳದೆ ಕಣಜದಿಂದ ಪಠ್ಯ ಡೌನ್ ಲೋಡ್ ಮಾಡಿಕೊಂಡು ಪಾಠ ಆರಂಭಿಸಬಹುದು.ಸರಕಾರವು ಬಹಳ ಹಿಂದಿನಿಂದಲೂ ತನ್ನ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾ

ಬಾಳೆ ಹಣ್ಣು ಮಾರುವಾತನ ಮಗಳು ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್

Image
Navigat  Suvarna News: ಕಡುಬಡತನದಲ್ಲಿ ಹುಟ್ಟಿ ಬೆಳೆದ ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ 585 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಟ್ಯೂಷನ್'ಗೆ ಹೋಗಿ ಅತಿ ಹೆಚ್ಚು ಅಂಕ ಪಡೆಯುವುದು ದೊಡ್ಡ ಸಾಧನೆಯೇನಲ್ಲ. ಆದರೆ ತನ್ನ ಸ್ವಂತ ಪರಿಶ್ರಮದಿಂದಲೇ ಓದಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಅನಿತಾ ಬಸಪ್ಪ ಸಾಧನೆ ಎಂಥವರಲ್ಲೂ ಸ್ಪೂರ್ತಿ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದು ತನ್ನ ತಾಯಿಯ ದಿನನಿತ್ಯದ ಕೆಲಸಗಳಿಗೆ ನೆರವಾಗುತ್ತಿದ್ದ ಅನಿತಾ ಇಂದು ಎಲ್ಲರು ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾಳೆ. ಈ ಕುರಿತಂತೆ ಸುವರ್ಣ ನ್ಯೂಸ್-ಕನ್ನಡ ಪ್ರಭದೊಂದಿಗೆ ತನ್ನ ಸಂತೊಷವನ್ನು ಹಂಚಿಕೊಂಡಿದ್ದಾಳೆ. ನಾನು   ಇಡೀ   ರಾಜ್ಯಕ್ಕೆ   ಕಲಾ   ವಿಭಾಗದಲ್ಲಿ   ಟಾಪರ್ ಆಗಿರುವ   ವಿಷಯ   ತಿಳಿದು   ಖುಷಿ   ಆಗ್ತಾ   ಇದೆ .  ಹೆಚ್ಚು ಅಂಕ   ಬರುತ್ತೆ   ಎಂದು   ಅಂದುಕೊಂಡಿದ್ದೆ   ಆದರೆ ರಾಜ್ಯಕ್ಕೆ   ಮೊದಲು   ಬರುತ್ತೇನೆಂದು   ನಿರೀಕ್ಷಿಸಿರಲಿಲ್ಲ . ನನ್ನ   ಅಣ್ಣ   ನನಗೆ   ತುಂಬಾ   ಓದೋಕೆ   ತುಂಬಾ   ಹೆಲ್ಪ್ ಮಾಡ್ತಾ   ಇದ್ದ .  ಕೆಎಎಸ್   ಪರೀಕ್ಷೆ   ಪಾಸ್   ಮಾಡಿ ತಹಶೀಲ್ದಾರ್   ಆಗಬೇಕೆಂದಿದ್ದೇನೆ   ಎಂದು   ಅನಿತಾ ಬಸಪ್ಪ   ತನ್ನ   ಮುಂದಿನ   ಗುರಿಯನ್ನು   ನಮ್ಮೊಂದಿಗೆ ಹಂಚಿಕೊಂಡಿದ್ದಾಳೆ . ದಿನನಿತ್ಯ   ಗುರುಗಳು   ಮಾಡಿದ   ಪಾಠವನ್ನು ಮನೆಯಲ

ಪಿಯು ಫಲಿತಾಂಶ ಪ್ರಕಟ; ಬಾಳೆಹಣ್ಣು ವ್ಯಾಪಾರಿ ಮಗಳು ರಾಜ್ಯಕ್ಕೆ ಟಾಪರ್

Image
ಉದಯವಾಣಿ, May 25, 2016, 10:40 AM IST ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಉಡುಪಿ ದ್ವಿತೀಯ, ಕೊಡಗು ತೃತೀಯ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. 91 ಕಾಲೇಜುಗಳು ಶೂನ್ಯ ಫಲಿತಾಂಶ ಬಂದಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 11 ಗಂಟೆ ವೇಳೆಗೆ ಸರ್ಕಾರದ ಎರಡು ವೆಬ್ಸೈಟ್ಗಳಲ್ಲಿ ಫಲಿತಾಂಶ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಗುರುವಾರ ಆಯಾ ಪಿಯು ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ.90.48ರಷ್ಟು ವಿದ್ಯಾರ್ಥಿಗಳು ತೇರ್ಗಡೆ, ಉಡುಪಿ ಜಿಲ್ಲೆಯಲ್ಲಿ ಶೇ.90.35ರಷ್ಟು ವಿದ್ಯಾರ್ಥಿಗಳು ಪಾಸ್. ಕೊಡಗು ಜಿಲ್ಲೆಯಲ್ಲಿ ಶೇ.79.35ರಷ್ಟು ವಿದ್ಯಾರ್ಥಿಗಳು ಪಾಸ್. ಯಾದಗಿರಿ ಜಿಲ್ಲೆಯಲ್ಲಿ ಶೇ.44.16ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.60.54ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಪ್ರಸಕ್ತ ವರ್ಷ 57.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶಕ್ಕೆ ಈ ವೆಬ್ ಸೈಟ್ ನೋಡಿ: ಸರ್ಕಾರದ www.karresults.nic.in ಮತ್ತು www.puc.kar.nic.in ವೆಬ್ಸೈಟ್ಗಳಲ್ಲಿ ಫಲಿತಾಂಶ ಬಾಳೆಹಣ್ಣ

ಪಿಯುಸಿ ಫಲಿತಾಂಶ ೨೦೧೬ ಮೇ 25ಕ್ಕೆ ಜಾಲತಾಣಗಳಲ್ಲಿ, ಮೇ 26ಕ್ಕೆ ಕಾಲೇಜುಗಳಲ್ಲಿ

ಬೆಂಗಳೂರು: ಕಳೆದ ಮಾರ್ಚ್ ತಿಂಗಳಲ್ಲಿ ನಡೆಸಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇದೇ ಬುಧವಾರ ಪ್ರಕಟಗೊಳ್ಳಲಿದೆ. ಆಯಾ ಪದವಿ ಪೂರ್ವ ಕಾಲೇಜುಗಳಲ್ಲಿ ಮೇ 26ರಂದು ಫಲಿತಾಂಶ ಲಭ್ಯವಾಗಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಫಲಿತಾಂಶ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿದ ಇಲಾಖೆ ನಿರ್ದೇಶಕ ಡಾ.ರಾಮೇಗೌಡ, ಮೇ 25ರಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 12 ಗಂಟೆ ನಂತರ ಜಾಲತಾಣಗಳಲ್ಲಿ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು www.karresults.nic.in ಮತ್ತು www.puc.kar.nic.in ನಲ್ಲಿ ನೋಡಬಹುದು. ಈ ವರ್ಷ ಮೊದಲ ಬಾರಿಗೆ, ಇಲಾಖೆ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುವ ಬದಲು ಆನ್ ಲೈನ್ ನಲ್ಲಿ ಜೆರಾಕ್ಸ್ ಪ್ರತಿಯನ್ನು ಪ್ರಕಟಿಸಲಿದೆ. ಇದೇ ಸಂದರ್ಭದಲ್ಲಿ ಖಾಸಗಿ ವೆಬ್ ಸೈಟ್ ಗಳು ಫಲಿತಾಂಶ ಪ್ರಕಟಿಸುವುದನ್ನು ಕೂಡ ಇಲಾಖೆ ನಿಷೇಧಿಸಿದೆ.

ಸ್ನೂಕರ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಪಂಕಜ್

Image
ಮುಂಬೈ, ಮೇ ೨೩- ಭಾರತದ ಖ್ಯಾತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಪಟು ಪಂಕಜ್ ಆಡ್ವಾಣಿ ಅಬುಧಾಬಿಯಲ್ಲಿ ನಡೆದ ಏಷ್ಯನ್ 6- ರೆಡ್ ಸ್ನೂಕರ್ ಪ್ರಶಸ್ತಿಯನ್ನು ಗೆದ್ದುಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಒಂದೇ ಋತುವಿನಲ್ಲಿ ವಿಶ್ವ ಮತ್ತು ಏಷ್ಯಾ ಖಂಡ ಪ್ರಶಸ್ತಿಗೆ ಭಾಜನರಾದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ರಾತ್ರಿ ನಡೆದ ಕಾದಾಟದಲ್ಲಿ ಅಗ್ರ ಸೀಡ್ ಆಟಗಾರ ಮಲೇಷ್ಯಾದ ಕೀನ್ ಹಾಹ್ಹ್ ಅವರನ್ನು 7-5 ಅಂತರದಲ್ಲಿ ಮಣಿಸಿ ಈ ಸಾಧನೆ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಕಜ್ ಆಡ್ವಾಣಿ, 'ಇದು ನನ್ನ ಮೊದಲ ಏಷ್ಯನ್ ಸ್ನೂಕರ್ ಚಾಂಪಿಯನ್ ಶಿಪ್. ಹೀಗಾಗಿ ಸಹಜವಾಗಿಯೇ ಖುಷಿ ಕೊಟ್ಟಿದೆ. ಕಳೆದ ತಿಂಗಳಲ್ಲಿ 15-ರೆಡ್ ಏಷ್ಯನ್ ಸ್ನೂಕರ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಒಂದೇ ವರ್ಷದಲ್ಲಿ 6-ರೆಡ್ ವಿಶ್ವ ಮತ್ತು ಏಷ್ಯನ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರುವುದು ಸಂತಸ ತಂದಿದೆ ಎಂದಿದ್ದಾರೆ. ಪಂಕಜ್ ಆಡ್ವಾಣಿ ಟೀಮ್ ಈವೆಂಟ್ನಲ್ಲಿ ಆದಿತ್ಯಾ ಮೆಹ್ತಾ, ಮನನ್ ಚಂದ್ರ ಮತ್ತು ಕಮಲ್ ಚಾವ್ಲ ಜತೆಗೂಡಿ ಆಡಲಿದ್ದಾರೆ.

ಹೆಂಡ ಇಳಿಸುವವನ ಮಗ ಈಗ ಕೇರಳ ಸಿಎಂ

Image
ಉದಯವಾಣಿ, May 21, 2016, 3:30 AM IST ತಿರುವನಂತಪುರ: ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಪಿಣರಾಯಿ ವಿಜಯನ್ ಹೆಂಡ ಇಳಿಸುವ ವೃತ್ತಿಯಲ್ಲಿ ತೊಡಗಿದ್ದ ಬಡ ಕುಟುಂಬಕ್ಕೆ ಸೇರಿದವರು. ಕರ್ನಾಟಕಕ್ಕೆ ಸಮೀಪದ ಕಣ್ಣೂರು ಜಿಲ್ಲೆಯವರು. ಪ್ರಭಾವಿಯಾಗಿರುವ ಈಳವ ಸಮುದಾಯದವರು. ಅತ್ಯುತ್ತಮ ಸಂಘಟಕ ಎಂಬ ಕೀರ್ತಿಯನ್ನು ಕೇರಳದಲ್ಲಿ ಗಳಿಸಿದ್ದಾರೆ. ಸದ್ಯ ಸಿಪಿಎಂ ಪಾಲಿಟ್ಬ್ಯೂರೋ ಸದಸ್ಯರಾಗಿರುವ ಪಿಣರಾಯಿ, 16 ವರ್ಷ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿಯಾಗಿದ್ದರು. ಹೆಚ್ಚು ಮಾತನಾಡುವುದಿಲ್ಲ. ಪಿಣರಾಯಿ ನಗುವುದೂ ಇಲ್ಲ ಎಂದು ಅವರ ವಿರೋಧಿಗಳು ಗೇಲಿ ಮಾಡುತ್ತಾರೆ. 1996-98ರವರೆಗೆ ಇಂಧನ ಸಚಿವರಾಗಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದರೂ, ಕೆನಡಾ ಕಂಪನಿ ಎಸ್ಎನ್ಸಿ- ಲಾವಲಿನ್ಗೆ ಜಲವಿದ್ಯುತ್ ಘಟಕಗಳ ಆಧುನೀಕರಣ ಗುತ್ತಿಗೆ ನೀಡುವಾಗ ಭ್ರಷ್ಟಾಚಾರ ನಡೆಸಿದ ಆರೋಪ ಅವರನ್ನು ಕಾಡುತ್ತಿದೆ. ಅಚ್ಚುತಾನಂದನ್ ಗರಡಿಯಲ್ಲೇ ಪಳಗಿದ್ದರೂ, ಅವರ ಬದ್ಧ ವೈರಿಯಾಗಿ ಪರಿವರ್ತನೆಗೊಂಡಿದ್ದಾರೆ. ಸಾರ್ವಜನಿಕ ನಿಂದನೆ ಹಿನ್ನೆಲೆಯಲ್ಲಿ 2007ರಲ್ಲಿ ಪಿಣರಾಯಿ ಹಾಗೂ ಅಚ್ಚುತಾನಂದನ್ ಅವರನ್ನು ಪಾಲಿಟ್ ಬ್ಯೂರೋದಿಂದಲೇ ಅಮಾನತುಗೊಳಿಸಲಾಗಿತ್ತು. ಬಳಿಕ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. 1970ರಲ್ಲಿ 26ನೇ ವಯಸ್ಸಿಗೇ ಶಾಸಕರಾಗಿ ಆಯ್ಕೆಯಾಗಿದ್ದ ಪಿಣರಾಯಿ 1977, 1991, 1996ರಲ್ಲೂ ಗೆ

೧೦ನೇ ತರಗತಿ ಯಲ್ಲಿ ೯೦% ಅಂಕ ಪಡೆದ ವಿದ್ಯಾರ್ಥಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Image

- ಮೇ 25ರಂದು ಪಿಯುಸಿ ಫಲಿತಾಂಶ.

Image
Public TV - ಮೇ 25ರಂದು ಪಿಯುಸಿ ಫಲಿತಾಂಶ. - ಈ ಬಾರಿ ಉತ್ತರ ಪತ್ರಿಕೆ ಸ್ಕ್ಯಾನ್ ಕಾಪಿ ಕೊಡುವ ಉದ್ದೇಶವಿದೆ - ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ - ಇದು ಅಂತಿಮವಾದ ತಕ್ಷಣ ಫಲಿತಾಂಶ ಪ್ರಕಟಿಸುತ್ತೇವೆ - 25ರಂದು ಫಲಿತಾಂಶ ಪ್ರಕಟಿಸಲು ಇಲಾಖೆ ಸಜ್ಜಾಗಿದೆ - ಭದ್ರಾವತಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ http://www.karresults.nic.in

KPSC_FDA_DOCUMENT_ VERIFICATION_date_announced . 25/05/2016 ರಿಂದ 04/06/2016 ರವರೆಗೆ ...

http://kpsc.kar.nic.in/document%20verification%20for%20fda.htm

ಕೊರಿಯಾದ ಹಾನ್ ಕಾಂಗ್ ಗ ೨೦೧೬ರೆ ‘ಬುಕರ್’ ಪ್ರಶಸ್ತಿ"

Image
18 May, 2016 ಲಂಡನ್ (ಪಿಟಿಐ): ದಕ್ಷಿಣ ಕೊರಿಯಾದ ಬರಹಗಾರ್ತಿ ಹಾನ್ ಕಾಂಗ್ (45) ಅವರು ಈ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾನವನ ಕ್ರೌರ್ಯದೆಡೆಗಿನ ಮಹಿಳೆಯ ತಿರಸ್ಕಾರ ಮತ್ತು ಮಾಂಸಾಹಾರವನ್ನು ತ್ಯಜಿಸುವುದರ ಕುರಿತಾದ ಅವರ 'ದಿ ವೆಜಿಟೇರಿಯನ್' ಕೃತಿಗೆ ಈ ಗೌರವ ಲಭಿಸಿದೆ. ನೊಬೆಲ್ ಪುರಸ್ಕೃತ ಒರ್ಹಾನ್ ಪಾಮುಕ್ ಮತ್ತು ಅಂತರರಾಷ್ಟ್ರೀಯ ಖ್ಯಾತಿ ಗಳಿಸಿರುವ ಎಲೆನಾ ಫೆರಂಟೆ ಅವರನ್ನು ಹಿಂದಿಕ್ಕಿ ಕಾಂಗ್ ಈ ಪ್ರಶಸ್ತಿ ಪಡೆದಿದ್ದಾರೆ. ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ 50 ಸಾವಿರ ಪೌಂಡ್ (₹48.38 ಲಕ್ಷ) ಮೊತ್ತದ ಬಹುಮಾನದ ಹಣವನ್ನು ಅವರು ಅನುವಾದಕಿ ಡೆಬೊರಾ ಸ್ಮಿತ್ ಅವರೊಂದಿಗೆ ಹಂಚಿಕೊಂಡರು. ವಿಮರ್ಶಕ, ಸಂಪಾದಕ ಬಾಯ್ಡ್ ಟಾಂಕಿನ್ ಅವರು ಅಧ್ಯಕ್ಷರಾಗಿರುವ, ಐವರು ತೀರ್ಪುಗಾರರ ಸಮಿತಿಯು ಅಂತಿಮ ಸುತ್ತಿನಲ್ಲಿದ್ದ 155 ಕೃತಿಗಳ ಪೈಕಿ 'ದಿ ವೆಜಿಟೇರಿಯನ್' ಕೃತಿಯನ್ನು ಅವಿರೋಧವಾಗಿ ಆಯ್ಕೆ ಮಾಡಿತು. ಸೋಲ್ನ ಕಲಾ ಸಂಸ್ಥೆಯಲ್ಲಿ ಸೃಜನಶೀಲ ಬರವಣಿಗೆ ಪ್ರಕಾರವನ್ನು ಬೋಧಿಸುತ್ತಿರುವ ಕಾಂಗ್ ಅವರು, ದಕ್ಷಿಣ ಕೊರಿಯಾದ ಪ್ರತಿಷ್ಠಿತ ಯಿ ಸಾಂಗ್ ಸಾಹಿತ್ಯಿಕ ಪ್ರಶಸ್ತಿ, ಯಂಗ್ ಆರ್ಟಿಸ್ಟ್ ಪ್ರಶಸ್ತಿ ಮತ್ತು ಕೊರಿಯನ್ ಸಾಹಿತ್ಯ ಕಾದಂಬರಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಸಂಪ್ರದಾಯ ಧಿಕ್ಕರಿಸು