Posts

ಇನ್ನು ಮುಂದೆ 5ನೇ, 8ನೇ ಮತ್ತು 10ನೇ ತರಗತಿಗಳಿಗೆ 'ಪಬ್ಲಿಕ್ ಪರೀಕ್ಷೆ'.....!

Image
ಅಷ್ಟೇ ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್​​ ಎಕ್ಸಾಂ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ಜಾವಡೇಕರ್ತಿಳಿಸಿದ್ದಾರೆ. ನವದೆಹಲಿ(ನ.15): ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೆ 'ಪಬ್ಲಿಕ್ ಪರೀಕ್ಷೆ' ಆರಂಭಿಸಲು ಚಿಂತನೆ ನಡೆಸಿದೆ. ಅಷ್ಟೇ ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್​​ ಎಕ್ಸಾಂ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ಜಾವಡೇಕರ್ತಿಳಿಸಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸಿಬಿಎಸ್‌ಇ 2010ರಲ್ಲಿ ಈ ಪರೀಕ್ಷಾ ಪದ್ಧತಿ ರದ್ದುಪಡಿಸಿ, ಸಿಸಿಇ ವಿಧಾನ ಜಾರಿಗೊಳಿಸಿತ್ತು. ಆದರೆ ಸಿಸಿಇಯಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಶಿಕ್ಷಣದ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ಹಿಂದಿನ ಪರೀಕ್ಷಾ ವಿಧಾನಕ್ಕೆ ಮರು ಜೀವ ನೀಡುವುದರ ಜೊತೆಗೆ ಕೇಂದ್ರೀಯ ಶೈಕ್ಷಣಿಕ ಸಲಹಾ ಮಂಡಳಿ ನೀಡಿದ ಮಾಹಿತಿಯನ್ನ ಸದ್ಯದಲ್ಲಿಯೇ ಕ್ಯಾಬಿನೆಟ್​​ ಮಿಟಿಂಗ್​ನಲ್ಲಿ ಪ್ರಸ್ತಾಪಿಸುವುದಾಗು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ ಸ್ಪಷ್ಟಪಡಿಸಿದ್ರು. Dailyhunt

ಕರ್ನಾಟಕ ರಾಜ್ಯ ಸರ್ಕಾರದ ಸಾರ್ವತ್ರಿಕ ರಜಾದಿನಗಳ ಪಟ್ಟಿ ೨೦೧೭

Image

ಸದ್ದಿಲ್ಲದೆ ಮೈಸೂರಲ್ಲಿ ಹೊಸ ನೋಟುಗಳ ಮುದ್ರಣ

ಬೆಂಗಳೂರು, ನ. ೧೨- ಮೈಸೂರಿನಲ್ಲಿರುವ ನೋಟುಗಳ ಮುದ್ರಣಾಲಯದಿಂದ ಕಳೆದ ಆರು ತಿಂಗಳುಗಳಿಂದ ಹೊಸ ನಮೂನೆಯ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿ ನವದೆಹಲಿಯಲ್ಲಿರುವ ಆರ್‌‌ಬಿಐನ ಕೇಂದ್ರ ಕಚೇರಿಗೆ ರವಾನಿಸುವ ಕೆಲಸ ಸದ್ದಿಲ್ಲದೆ ಸಾಗಿದೆ. ಮೈಸೂರಿನ ಮಂಡ‌ಕಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಹೂಡಿರುವ ಬಂಡವಾಳ ನಿರರ್ಥಕವಾಗಿಲ್ಲ. ಈ ನಿಲ್ದಾಣದ ಮೂಲಕ ನೋಟುಗಳ ಸಾಗಾಣಿಕೆಯಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರು ಕಳೆದ ಮಂಗಳವಾರ ಕೈಗೊಂಡಂತಹ 500 ಮತ್ತು 1000 ನೋಟುಗಳ ಚಲಾವಣೆ ರದ್ದು ಮಾಡುವಂತಹ ಘೋಷಣೆಯಾಗುವ ಮುನ್ನವೇ 2000 ರೂ. ಮುಖಬೆಲೆಯ ನೋಟುಗಳ ಮುದ್ರಣ ಮೈಸೂರಿನಲ್ಲಿ ನಿರಂತರವಾಗಿ ಸಾಗಿದೆ. ನೋಟುಗಳ ಮುದ್ರಣ ಹಾಗೂ ಸಾಗಾಣಿಕೆ ವೆಚ್ಚವನ್ನು ಕಳೆದ ಆರು ತಿಂಗಳಿನಿಂದ ಅತ್ಯಂತ ಗೌಪ್ಯವಾಗಿಡಲಾಗಿತ್ತು. ಖಾಸಗಿ ವಿಮಾನದ ಮೂಲಕ ನೋಟುಗಳನ್ನು ಸಾಗಿಸಲಾಗಿದೆ. ನೋಟುಗಳ ಕಂತೆಯನ್ನು ಸಾಗಿಸಲು ಅಧಿಕಾರಿಗಳ ವಿಶೇಷ ತಂ‌ಡವೊಂದನ್ನು ನೇಮಕ ಮಾಡಲಾಗಿತ್ತು. ಮೈಸೂರಿನಿಂದ ಸಾಗಾಣೆ ಮಾಡಿದ ನೋಟುಗಳನ್ನು ದೇಶದ ಇತರೆ ನಗರಗಳಲ್ಲಿರುವ ವಿವಿಧ ಆರ್‌ಬಿಐ ಶಾಖೆಗಳಿಗೆ ತಲುಪಿಸಲಾಗಿತ್ತು. 500 ಮತ್ತು 1000 ರೂ. ನೋಟುಗಳ ರದ್ದು ಮಾಡುವ ಮುನ್ನ ಹೊಸ ನೋಟುಗಳ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಒಮ್ಮೆಲೆ ಹೊಸ ನೋಟುಗಳ ಲಭ್ಯತೆ ಇರುವಂತೆ ಮಾಡಿಕೊಳ್ಳುವ ಉದ್ದೇಶದಿಂದ ಆರ್‌ಬಿಐ ಶಾಖೆಗಳು ಪೂರ್ವ ಸಿದ್ಧತೆ ಮಾಡಿಕೊಂಡಿದ್ದವು. ಮೈಸ

*ಕೆಪಿಎಸ್ಸಿ: 2017ರ ವಾರ್ಷಿಕ (ತಾತ್ಕಾಲಿಕ) ವೇಳಾಪಟ್ಟಿ ಪ್ರಕಟ:

*ಕರ್ನಾಟಕ ಲೋಕ ಸೇವಾ ಆಯೋಗವು ಇದೇ ಮೊದಲ ಬಾರಿಗೆ ಸರಕಾರಿ ನೇಮಕಾತಿಗಾಗಿ ತಾನು ಮುಂದಿನ ವರ್ಷ ನೆಡೆಸಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ವೇಳಾಪಟ್ಟಿಯನ್ನು ಪ್ರಕಟಿಸಿದೆ.* ಇದರಿಂದ ರಾಜ್ಯ ಸರಕಾರಿ ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್ಸಿ) ಮುಂದಿನ ವರ್ಷ ನಡೆಸುವ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸುತ್ತಾ ಬಂದಿವೆ. ಆದರೆ ಕೆಪಿಎಸ್ಸಿ, ಯಾವ ನೇಮಕಾತಿಗಾಗಿ ಯಾವಾಗ ಅಧಿಸೂಚನೆ ಹೊರಡಿಸುತ್ತದೆ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಾವಾಗ ನಡೆಸುತ್ತದೆ ಎಂಬುದು ಅಭ್ಯರ್ಥಿಗಳಿಗೆ ಸ್ಪಷ್ಟವೇ ಆಗುತ್ತಿರಲಿಲ್ಲ. ಇದರಿಂದಾಗಿ ಅಭ್ಯರ್ಥಿಗಳು ಕೆಪಿಎಸ್ಸಿಯು ಹೊರಡಿಸುವ ಪ್ರಕಟಣೆಗಾಗಿ ಕಾಯುತ್ತಾ ಕೂರುವಂತಾಗಿತ್ತು. ಇದೀಗ ಈ ತೊಂದರೆ ತಪ್ಪಿದೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಸೂಕ್ತ ಪರೀಕ್ಷೆಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸಾಧ್ಯವಾಗಲಿದೆ. *2017ರ ವೇಳಾಪಟ್ಟಿಯಲ್ಲಿ ಗೆಜೆಟೆಟ್ ಪ್ರೊಬೆಷನರಿ ಹುದ್ದೆಗಳಿಗೆ ಏಪ್ರಿಲ್ನಲ್ಲಿ ಪೂರ್ವಭಾವಿ, ಆಗಸ್ಟ್ನಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗುವುದು.* *2018ರ ಫೆಬ್ರವರಿಯಲ್ಲಿ ಸಂದರ್ಶನ ನಡೆಸಲಾಗುವುದು ಎಂದು ಪ್ರಕಟಿಸಲಾಗಿದೆ. ಈ ರೀತಿ ವೇಳಾಪಟ್ಟಿ ಪ್ರಕಟಿಸುವಂತೆ ಆಡಳಿತ ಸುಧಾರಣೆ ಮತ್ತು

*:ರಾಷ್ಟ್ರೀಯ ಶಿಕ್ಷಣ ದಿನ:* ೧೧-೧೧-೨೦೧೬

ಅಬುಲ್ ಕಲಾಂ ಆಜಾದ್ ರ ಜನ್ಮದಿನವನ್ನು ರಾಷ್ಟ್ರಾದ್ಯಂತ  ಇಂದು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತಿದೆ. -: *ಮೌಲಾನಾ ಅಬುಲ್ ಕಲಾಂ ಆಝಾದ್ :*- ಯುವಕ ಆಝಾದ್‌ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್‌ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿನಿ ನಾಯ್ಡು ಹೇಳಿದ್ದರು. ಆಝಾದ್‌ರ ಕುಟುಂಬ ಭಾರತೀಯ ಮೂಲದ್ದೇ ಆದರೂ ತಂದೆ ಅರೇಬಿಯಾಕ್ಕೆ ಹೋಗಿ ಅಲ್ಲಿಂದಲೇ ಮದುವೆಯಾದ್ದರಿಂದ ಆಝಾದ್‌ರ ಹುಟ್ಟು ಅಲ್ಲೇ ಆಯಿತು. ಭಾರತೀಯ ಖೈರುದ್ದೀನ್ ಹಾಗೂ ಅರೇಬಿಯನ್ ಮಹಿಳೆ ಆಲಿಯಾರ ಪುತ್ರನಾಗಿ ೧೮೮೮ರ ನವೆಂಬರ್ ಮೋಹಿದ್ದೀನ್ ಅಹ್ಮದ್ ಮುಂದೆ ಧಾರ್ಮಿಕ ವಿದ್ವತ್ತಿನಿಂದಾಗಿ 'ಮೌಲಾನಾ' ಎಂಬುದಾಗಿ ಬಹುಭಾಷೆಗಳ ಪರಿಣಿತಿಯಿಂದಾಗಿ 'ಅಬುಲ್ ಕಲಾಂ' (ಭಾಷೆಗಳ ಪಿತ) ಎಂಬುದಾಗಿ ತೀವ್ರ ಸ್ವಾತಂತ್ರ್ಯ ವಾಂಛೆಯಿಂದ 'ಆಝಾದ್' ಎಂಬುದು ಸೇರಿಕೊಂಡು 'ಮೌಲಾನಾ ಅಬುಲ್ ಕಲಾಂ ಆಝಾದ್' ಎಂದು ಖ್ಯಾತಿವೆತ್ತರು.         ಆಝಾದ್‌ಗೆ ಹತ್ತು ವರ್ಷವಾದಾಗಲೇ ಕುಟುಂಬ ಕಲ್ಕತ್ತೆಗೆ ಬಂತು. ಚಿಕ್ಕಂದಿನಿಂದಲೇ ಧಾರ್ಮಿಕ ಜ್ಞಾನವನ್ನು ಪಡೆದರು. ಅರಬ್ಬೀ, ಉರ್ದು, ಪರ್ಷಿಯನ್, ಇಂಗ್ಲೀಷ್ ಭಾಷೆಗಳನ್ನು ಗಣಿತ, ಸಾಹಿತ್ಯ, ಯುನಾನಿ ವೈದ್ಯ ವಿಜ್ಞಾನಗಳನ್ನು ಕರಗತ ಮಾಡಿಕೊಂಡು ಬಹುಶ್ರುತರಾಗಿದ್ದರು. ಅದ್ಭುತ ಪ್ರತಿಭೆಯಾಗಿ ಬೆಳೆದ ಅವರು ಬರೀ ೧೬ನೇ ವಯಸ್ಸಿನಲ್ಲೇ ಪ್ರಚಂಡ ವಾಗ್ಮಿಯೂ, ಪ್ರಸಿದ್ಧ ಬರಹಗ

*ಕೆಪಿಎಸ್ ಸಿ 489 ವಾರ್ಡನ್, ಗ್ರಂಥಪಾಲಕ ಹುದ್ದೆಗಳಿಗೆ ಅಜಿ೯ ಆಹ್ವಾನ:

ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಹಾಯಕ ಗ್ರಂಥಪಾಲಕ, ವಾರ್ಡನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 21, ನವೆಂಬರ್ 2016. ಹುದ್ದೆ ಹೆಸರು: ಸಹಾಯಕ ಗ್ರಂಥಪಾಲಕ(Librarian), ವಾರ್ಡನ್ ವಿದ್ಯಾರ್ಹತೆ: ಪಿಯುಸಿ, ಡಿಪ್ಲೋಮಾ, ಪದವಿ, ಎಸ್ಸೆಸೆಲ್ಸಿ ಅರ್ಜಿ ಸಲ್ಲಿಸಲು ಕೊನೆದಿನಾಂಕ: 21, ನವೆಂಬರ್ 2016. ಒಟ್ಟು ಹುದ್ದೆಗಳು : 489 ಸಹಾಯಕ ಲೈಬ್ರೆರಿಯನ್ : 11 ಹುದ್ದೆಗಳು ವಯೋಮಿತಿ: 18 ರಿಂದ 45 ವರ್ಷ ಸಂಬಳ ನಿರೀಕ್ಷೆ: 16.000 ದಿಂದ 29,600/- ರು ಪ್ರತಿ ತಿಂಗಳಿಗೆ ವಿದ್ಯಾರ್ಹತೆ: ಪಿಯುಸಿ ಜತೆಗೆ ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್, ಮಾನ್ಯತೆ ಪಡೆದ ತಾಂತ್ರಿಕ ವಿದ್ಯಾಲಯದಿಂದ ಡಿಪ್ಲೋಮಾ ಪಡೆದಿರಬೇಕು. ವಾರ್ಡನ್: 443 ಹುದ್ದೆಗಳು ವಯೋಮಿತಿ: 18 ರಿಂದ 35 ವರ್ಷ ಸಂಬಳ ನಿರೀಕ್ಷೆ: 14,550 ರಿಂದ 26,700 ರು ಪ್ರತಿ ತಿಂಗಳಿಗೆ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ನಂತರ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕು. ಅರ್ಜಿ ಶುಲ್ಕ: 2ಎ, 2ಬಿ, 3ಎ, 3ಬಿ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 300 ರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂ

ಎಚ್ಚರಿಕೆ ವಹಿಸಿ 10, 20 ರೂ. ಸ್ಟಾಕ್ ಮಾಡಬೇಡಿ. ಏಕೆಂದರೆ ?

ವಾರ್ತಾ ಭಾರತಿ : 10 Nov, 2016 ನವದೆಹಲಿ,ನ.10 : ಬ್ಯಾಂಕುಗಳು ಇಂದಿನಿಂದ ರದ್ದುಗೊಂಡಿರುವ 500 ಹಾಗೂ 1000 ರೂ. ಬದಲಿಗೆ ಬೇರೆ ನೋಟುಗಳನ್ನು ಒದಗಿಸುತ್ತಿದ್ದರೂ 10 ಹಾಗೂ 20 ರೂ ನೋಟುಗಳನ್ನು ಸದ್ಯದಲ್ಲಿಯೇ ಸರಕಾರ ಬದಲಾಯಿಸಲಿದೆಯೆಂದು ಹೇಳಲಾಗುತ್ತಿದೆ. ತರುವಾಯ ದೇಶದೆಲ್ಲೆಡೆ ಬ್ಯಾಂಕುಗಳ ಮುಂದೆ ದೊಡ್ಡ ಕ್ಯೂಕಾಣಿಸುತ್ತಿದೆ.ಸರಕಾರದ ಈ ಕ್ರಮ ಭವಿಷ್ಯದಲ್ಲಿ ದೇಶಕ್ಕೆಬಹಳಷ್ಟು ಉಪಯೋಗವಾಗಲಿದೆಯೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 500 ಹಾಗೂ 1000 ದ ಹೊಸ ನೋಟುಗಳ ಹೊರತಾಗಿಇನ್ನೂ ಹೊಸ ನೋಟುಗಳ ಹೊಸ ವಿನ್ಯಾಸ ಹಾಗೂ ಫೀಚರ್ ಗಳೊಂದಿಗೆ ಹೊರಬರಲಿದೆಯೆಂದುಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶಕ್ತಿಕಂಠ ದಾಸ್ ಹೇಳಿದ್ದಾರೆ. ಹೊಸ ವಿನ್ಯಾಸದ ನೋಟುಗಳನ್ನು ಯಾವಾಗ ಹೊರತರಲಾಗುವುದೆಂದು ಅವರು ಹೇಳದೇ ಇದ್ದರೂ1000 ರೂ ನೋಟುಗಳನ್ನೂ ಹೊಸ ವಿನ್ಯಾಸದಲ್ಲಿ ತರಲಾಗುವುದು ಎಂದು ಹೇಳಿದ್ದಾರೆ. ಇಂದು ಹೊಸದಿಲ್ಲಿಯಲ್ಲಿ ನಡೆದ ಆರ್ಥಿಕ ಸಂಪಾದಕರ ಸಮ್ಮೇಳನದಲ್ಲಿ ಹೆಚ್ಚಿನ ಪ್ರಶ್ನೆಗಳು 500 ಹಾಗೂ 1000 ನೋಟುಗಳ ರದ್ದತಿಯ ಬಗ್ಗೆಯೇ ಆಗಿದ್ದವು. ಮಂಗಳವಾರ ತೆಗೆದುಕೊಳ್ಳಲಾದ ಕ್ರಮಕ್ಕೆ ಬಹಳ ಹಿಂದಿನಿಂದಲೇ ತಯಾರಿ ನಡೆದಿತ್ತು ಎಂದೂ ದಾಸ್ ವಿವರಿಸಿದ್ದಾರೆ. ನೋಟುಗಳ ವಿನ್ಯಾಸದಲ್ಲಿ ಆರ್ ಬಿ ಐ ನ ಎರಡು ಮೂರು ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದರು ಎಂಊ ಅವರು ಮಾಹಿತ

*ಅಮೇರಿಕಾದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆ, ಸೋಲುಂಡ ಹಿಲರಿ:~*

*ಶತಕೋಟ್ಯಾಧಿಪತಿಗೆ ಒಲಿದ ಶ್ವೇತಭವನ* *ಹಿಲರಿ ಕ್ಲಿಂಟನ್ ಕನಸು ನುಚ್ಚುನೂರು* *8 ವರ್ಷಗಳ ಡೆಮಾಕ್ರೆಟಿಕ್ ಆಡಳಿತ ಅಂತ್ಯ* *ಮ್ಯಾಜಿಕ್ ನಂಬರ್ ಸೃಷ್ಟಿಸಿದ ಟ್ರಂಪ್ ಕಾರ್ಡ್ ವಾಷಿಂಗ್ಟನ್,ನ.9-ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಹಣಾಹಣಿ ನಡುವೆ ರಿಪಬ್ಲಿಕನ್ ಪಕ್ಷದ ವಿವಾದಾತ್ಮಕ ಅಭ್ಯರ್ಥಿ ಹಾಗೂ ಶತಕೋಟ್ಯಾಧಿಪತಿ ಉದ್ಯಮಿ ಡೋನಾಲ್ಡ್ ಟ್ರಂಪ್ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿದ್ದು, 45ನೇ ಅಮೆರಿಕ ಅಧ್ಯಕ್ಷರಾಗಿ ಹೊರಹೊಮ್ಮಿ ಶ್ವೇತಭವನದ ಗದ್ದುಗೆ ಏರಲಿದ್ದಾರೆ. ಗೆಲುವಿನ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿದ್ದ ಡೆಮೊಕ್ರಟಿಕ್ ಪಕ್ಷದ ಪ್ರತಿ ಸ್ಪರ್ಧಿ ಹಿಲರಿ ಕ್ಲಿಂಟನ್‍ಗೆ ಈ ಅಚ್ಚರಿ ಫಲಿತಾಂಶ ಭಾರೀ ಮುಖಭಂಗ ಉಂಟು ಮಾಡಿದೆ. 240 ವರ್ಷಗಳ ಅಮೆರಿಕ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ಇದೇ ಮೊದಲ ಬಾರಿ ಮಹಿಳೆಯರಿಗೆ ಒಲಿಯಲಿದೆ ಎಂಬ ರಾಜಕೀಯ ಪರಿಣಿತರ ಮತ್ತು ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಬುಡಮೇಲಾಗಿದೆ. ಇದರೊಂದಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದ ಡೆಮೊಕ್ರಟಿಕ್ ಪಕ್ಷದ ಎಂಟು ವರ್ಷಗಳ ಆಡಳಿತ ಅಂತ್ಯಗೊಂಡಿದೆ. ಇದೇ ವೇಳೆ ಭಾರತೀಯ ಮೂಲದ ಅಮೆರಿಕ್ಕನರಾದ ಕಮಲ ಹ್ಯಾರೀಸ್ ಮತ್ತು ರಾಜಕೃಷ್ಣಮೂರ್ತಿ ಸೆನೆಟ್‍ಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಮತ ಎಣಿಕೆ ಆರಂಭದಿ

*500, 1000 ರೂ. ನೋಟುಗಳ ಮುದ್ರಣ ಬಂದ್.!!*

Image
*ಕಪ್ಪು ಹಣ ಮತ್ತು ಭಯೋತ್ಪಾದನೆ ಕಡಿವಾಣ ಹಾಕುವ ದೃಷ್ಟಿಯಿಂದ ಇಂದು (8-11-2016) ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನ ಮಧ್ಯರಾತ್ರಿಯಿಂದಲೇ ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.* ನವದೆಹಲಿ(ನ.08): ಕಪ್ಪು ಹಣ ಮತ್ತು ಭಯೋತ್ಪಾದನೆ ಕಡಿವಾಣ ಹಾಕುವ ದೃಷ್ಟಿಯಿಂದ ಇಂದು ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನ ಮಧ್ಯರಾತ್ರಿಯಿಂದಲೇ ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. - 500, 1000 ರೂ. ನೋಟುಗಳ ಮುದ್ರಣ ಬಂದ್ - ಇಂದು ಮಧ್ಯರಾತ್ರಿಯಿಂದಲೇ ನೋಟು ಬಂದ್ - ನೋಟುಗಳನ್ನು ವಾಪಸ್ ನೀಡಲು 50 ದಿನ ಗಡುವು - 50 ದಿನಗಳ ಒಳಗಾಗಿ ನೋಟುಗಳನ್ನು ಬ್ಯಾಂಕ್​ಗೆ ನೀಡಿ - ಕಪ್ಪು ಹಣದ ವಹಿವಾಟು ತಡೆಯಲು ಕೇಂದ್ರದ ಹೆಜ್ಜೆ - ಕಪ್ಪು ಹಣದ ವಿರುದ್ಧ ಕೇಂದ್ರದ ಕೊನೆಯ ಅಸ್ತ್ರ - ಬ್ಯಾಂಕ್, ಪೋಸ್ಟ್ ಆಫೀಸ್​ನಲ್ಲಿ ನೋಟು ಬದಲಿಸಿಕೊಳ್ಳಿ - ಖೋಟಾ ನೋಟುಗಳ ವಹಿವಾಟು ಉಗ್ರರಿಗೆ ಲಾಭವಾಗುತ್ತಿದೆ - ಗುರುತಿನ ಪತ್ರ ನೀಡಿ, ನೋಟುಗಳನ್ನು ವಾಪಸ್ ಮಾಡಿ - ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ತೋರಿಸಿ ಬದಲಿಸಿಕೊಳ್ಳಿ - ಮತದಾರರ ಗುರುತಿನ ಪತ್ರ

ಕರ್ನಾಟಕ ಭೂಮಾಪಕ ಇಲಾಖೆಯಲ್ಲಿ 1067 ಭೂಮಾಪಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ:-

*ವಿದ್ಯಾರ್ಹತೆ : ಬಿ.ಇ/ಬಿ.ಟೆಕ್/ಡಿಪ್ಲೊಮಾ ಇನ್ (ಸಿವಿಲ್)* *ಪಿಯುಸಿ ವಿಜ್ಞಾನ (ಸಿ.ಬಿ.ಎಸ್.ಸಿ)* ಆಯ್ಕೆ ವಿಧಾನ: *ಸಿ.ಇಟಿ ಪರೀಕ್ಷೆ* ೧.ಸಾಮಾನ್ಯ ಜ್ಞಾನ ಪತ್ರಿಕೆ ೨೦೦ ಅಂಕ ೨.ನಿರ್ದಿಷ್ಟ ಪತ್ರಿಕೆ ೨೦೦ ಅಂಕ ಅರ್ಜಿ ಶುಲ್ಕ : ೩೦೦/೫೦೦ *ಕೊನೆಯ ದಿನಾಂಕ: ೯ ಡಿಸೆಂಬರ್ ೨೦೧೬* *ನೋಟಿಫೀಕೇಶನ ಗಾಗಿ ಇಲ್ಲಿ ಕ್ಲಿಕ್ ಮಾಡಿ*👇🏻👇🏻 http://landrecords.karnataka.gov.in/service101/

ಶತಮಾನದ ಹೊಸ್ತಿಲಲ್ಲಿ ಪುಲಿಟ್ಜರ್‌ ಪ್ರಶಸ್ತಿ

Image
Nov 6, 2016, 04.00 AM IST ಶತಮಾನದ ಹೊಸ್ತಿಲಲ್ಲಿ ಪುಲಿಟ್ಜರ್‌ ಪ್ರಶಸ್ತಿ AAA ಮೊನ್ನೆಯಷ್ಟೇ 2016ನೇ ಸಾಲಿನ ಪುಲಿಟ್ಜರ್‌ ಪ್ರಶಸ್ತಿಗಳು ಪ್ರಕಟವಾಗಿವೆ. ಅಮೆರಿಕದ ಪತ್ರಿಕೋದ್ಯಮ ಕ್ಷೇತ್ರದ ಅತ್ಯುನ್ನತ ಗೌರವವವಿದು. ಪುಲಿಟ್ಜರ್‌ ಈ ಪ್ರಶಸ್ತಿ ಪಡೆಯುವುದು ಪತ್ರಕರ್ತರ ಕನಸಾಗಿರುತ್ತದೆ. ಅಪಾರ ಮನ್ನಣೆಗಳಿಸಿರುವ ಈ ಪ್ರಶಸ್ತಿ ಇದೀಗ ಶತಮಾನದ ಹೊಸ್ತಿಲಲ್ಲಿ ಇದೆ. ಪುಲಿಟ್ಜರ್‌ ಪ್ರಶಸ್ತಿ ಹುಟ್ಟು ಮತ್ತು ಬೆಳವಣಿಗೆ ಕುರಿತು ಇಲ್ಲಿ ಚರ್ಚಿಸಲಾಗಿದೆ. ----- ಸಿನಿಮಾ ಕ್ಷೇತ್ರದಲ್ಲಿ 'ಆಸ್ಕರ್‌', ಸಾಹಿತ್ಯ ಕ್ಷೇತ್ರದಲ್ಲಿ 'ಬೂಕರ್‌' ಪ್ರಶಸ್ತಿಗಿರುವಷ್ಟು ಗೌರವ, ಮನ್ನಣೆ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ನೀಡುವ 'ಪುಲಿಟ್ಜರ್‌' ಪ್ರಶಸ್ತಿಗೂ ಇದೆ. ಹಾಗೆಯೇ ಇದು ಅಮೆರಿಕದ ವ್ಯಾಪ್ತಿಗೊಳಪಟ್ಟಿರುವ ಮಿತಿಯನ್ನೂ ಹೊಂದಿದೆ. ಪುಲಿಟ್ಜರ್‌ ಪ್ರಶಸ್ತಿ ಪಡೆಯುವುದು ಹಲವು ಪತ್ರಕರ್ತರ ಎಷ್ಟೋ ದಿನಗಳ ಕನಸಾಗಿರುತ್ತದೆ. ಒಮ್ಮೆ ಪುಲಿಟ್ಜರ್‌ ಪ್ರಶಸ್ತಿ ಬಂದು ಬಿಟ್ಟರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಾನೊಂದು ಶಿಖರ ತಲುಪಿದೆ ಎಂಬ ಭಾವ ಹಲವು ಪತ್ರಕರ್ತರಿಗಿರುತ್ತದೆ. ಅಂದರೆ, ಅಷ್ಟೊಂದು ಪ್ರಭಾವಶಾಲಿ ಮತ್ತು ಉನ್ನತ ಮಟ್ಟದ ಪ್ರಶಸ್ತಿ ಇದು. ಎಲ್ಲ ಪ್ರಶಸ್ತಿಗಳಂತೆ ಈ ಪ್ರಶಸ್ತಿ ಕೂಡ ವಿವಾದದಿಂದ ಮುಕ್ತವಾಗಿಲ್ಲ. ಆದರೆ, ಆ ಪ್ರಮಾಣ ತುಂಬ ಚಿಕ್ಕದು. ಇಂಥ ಪ್ರಶಸ್ತಿ ಇದೀಗ ನೂರರ ಹೊಸ್ತಿಲಿನಲ್ಲಿದ

*PDO ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಕೆ.ಇ.ಎ* *ಪರೀಕ್ಷಾ ದಿನಾಂಕ- 29/01/2017 ರ ಭಾನುವಾರ*

Image

"ಅಥಣಿ" ಸ್ಥಳನಾಮ ಮೂಲ:

"ಅಥಣಿ" ಎಂಬ ಹೆಸರು ಹೇಗೆ ಬಂತು ಗೊತ್ತೇ ? ಆಧ್ಯಾತ್ಮಿಕ ಕ್ಷೇತ್ರವಾದ ಅಥಣಿಯ ಸ್ಥಳನಾಮದ ಪರಿಶೀಲನೆಯಲ್ಲಿ ತೊಡಗಿದಾಗ ಕ್ರಿ.ಶ.೧೬೩೯ರಲ್ಲಿ ಜರ್ಮನ್ ಪ್ರವಾಸಿಗ ಮಂಡೆಲ್ ಸ್ಲೂ ಎಂಬುವವನು 'ಅಟ್ಟನಿ' ಎಂದು, ಕ್ರಿ.ಶ.೧೬೭೫ರಲ್ಲಿ ಆಂಗ್ಲ ಪ್ರವಾಸಿಗ ಪ್ಲೇಯರ್ ಹಟ್ಟೇನಿ ಎಂದು ಕರೆದಿದ್ದಾರೆ. ಅಟನಿ > ಅಟ್ಟನಿ > ಹಟ್ಟೇನಿ > ಹಸ್ತಿನಿ (ಹೆಣ್ಣಾನೆ) > ಅಸ್ತಿನಿ > ಅಥನಿ > ಅಥಣಿ ಎಂದು ಪದನಿಷ್ಪತ್ತಿ. 'ಅಟ್ಟ' ಎಂದರೆ ಸ್ಥಳ 'ಣಿ' ಎಂದರೆ ನಿರಂಜನ. ಅಥಣಿ ಎಂದರೆ ನಿರಂಜನ ಸ್ಥಳವೆಂದು ನಿರ್ಧರಿಸಬಹುದು. ಇದಕ್ಕೆ ಪೂರಕವಾಗಿ ಪಂಚ ಮಠಗಳು ಇಲ್ಲಿವೆ. ಈ ಪಟ್ಟಣದ ಪೂರ್ವ ದಿಕ್ಕಿನಲ್ಲಿರುವ ಕರಿ ಮಸೂತಿ ಶಾಹಿ ಹಾಗೂ ಮರಾಠ ಗಡಿ ಸೀಮೆಯಾಗಿತ್ತು. ಈ 'ಹಾಥಿ' ಎಂಬ ಶಬ್ದವು ಅಪಭ್ರಂಶವಾಗಿ ಹತ್ತಿ >ಹತಿಣಿ> ಅಥಣಿ ಎಂದಾಗಿರಬಹುದೆಂದು ಅಭಿಪ್ರಾಯವಿದೆ. ಅಥಣಿ ಎಂದರೆ ಸಂಸ್ಕೃತದಲ್ಲಿ 'ಅಥ' ಎಂದರೆ ಪ್ರಾರಂಭ 'ಣಿ' ಎಂದರೆ ನಿರಂಜನ ಎಂದಾಗುತ್ತದೆ. ನಿರಂಜನರು ಯಾವಾಗಲೂ ಈ ನೆಲದಲ್ಲಿ ನೆಲೆಸುತ್ತಾರೆಂಬುದು ಈ ಶಬ್ದದ ಇನ್ನೊಂದು ನಿಷ್ಪತ್ತಿ. ಇದಕ್ಕೆ ಪೂರಕವಾಗಿ ಇಂದಿಗೂ ಶಿವಯೋಗಿ ಮುರುಘೇಂದ್ರಸ್ವಾಮಿಗಳ ದಿವ್ಯ ಕ್ಷೇತ್ರವಾಗಿ ಆಧ್ಯಾತ್ಮಿಕ ಭೂಮಿಯಾಗಿದೆ. ಕ್ರಿ.ಶ.೧೯೩೪ರಲ್ಲಿ ಅಥಣಿಯಲ್ಲಿ ಜರುಗಿದ ಪ್ರಥಮ ಬೆ

*PDO ಪರೀಕ್ಷೆ ಜನವರಿಯಲ್ಲಿ:~*

*ಯಾವ ಯಾವ ಪರೀಕ್ಷೆ ಕೇಂದ್ರಗಳಲ್ಲಿ ಎಷ್ಟೆಷ್ಟು ಅಭ್ಯರ್ಥಿಗಳು ಪರೀಕ್ಷಾ ಬರೆಲಿದ್ದಾರೆ?:* PDO ಪರೀಕ್ಷೆ ಜನವರಿಯ 1624 ಪಿಡಿಓ & ಪಂ. ಕಾರ್ಯದರ್ಶಿ ಹುದ್ದೆಗೆ ಬಂದಿದ್ದು ಬರೋಬ್ಬರಿ 3.62 ಲಕ್ಷ ಅರ್ಜಿ.!!* ಜನವರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಾಲೂಕು ಕೇಂದ್ರಗಳಲ್ಲೂ ಆಯೋಜಿಸಲು ನಿರ್ಧಾರ ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಕಾರವು 815 ಪಂಚಾಯಿತಿ ಅಭಿವೃದ್ ಅಕಾರಿ (ಪಿಡಿಓ) ಹಾಗೂ 809 ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳ ನೇರ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ *ಒಟ್ಟು 3,62,899 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.* ಡಿಸೆಂಬರ್‌ 4 ರಂದು ಪರೀಕ್ಷೆ ನಡೆಸಲು ಪ್ರಾಕಾರ ಉದ್ದೇಶಿಸಿತ್ತು. ಆದರೆ, ನಿರೀಕ್ಷೆಗಿಂತ ಹೆಚ್ಚು  ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವುದರಿಂದ ಪರೀಕ್ಷೆ ನಡೆಸಲು ಜಿಲ್ಲಾ ಕೇಂದ್ರಗಳಲ್ಲಿ ಅಷ್ಟು ಸಂಖ್ಯೆಯ ಕಾಲೇಜುಗಳು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಲ್ಲಿಯೂ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ನಡುವೆ, ಈದ್‌ಮಿಲಾದ್‌, ಕ್ರಿಸ್ಮಸ್‌ ಹಬ್ಬಗಳ ಜತೆಗೆ, ಡಿ. 18 ರಂದು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯೊಂದು ನಡೆಯುತ್ತಿದೆ. ಆದ್ದರಿಂದ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲು ಅಡ್ಡಿಯಾಗುತ್ತಿದೆ. ಈ ಕಾರಣಕ್ಕಾಗಿ ಜನವರಿ 2 ಅಥವಾ 3 ನೇ ಭಾನುವಾರ ಪರೀಕ್ಷೆ ನಡೆಸಲು ಪ್ರಾಕಾರ ತೀರ್ಮಾನಿಸಿದೆ. 

ಯಾದಗಿರಿ ಜಿಲ್ಲೆಯಲ್ಲಿ (ಸ.ಕ.ಇಲಾಖೆ)ಖಾಲಿಯಿರುವ ಅಡುಗೆ ಸಹಾಯಕ/ಕಾವಲುಗಾರ ಹುದ್ದೆ ಗಳಿಗೆ ಅರ್ಜಿ ಆಹ್ವಾನ

Image

ನವ್ಹಂಬರ್ 20ರಂದು ಕ.ರಾ.ರ. ಸಾ.ನಿ.ದ ಮೇಲ್ವಿಚಾರಕ ಹುದ್ದೆ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ

Image

ಏಂಜೆಲ್ಸ್ ಫ್ಲೈಟ್’ ವಿಶ್ವದ ಅತಿ ಚಿಕ್ಕ ರೈಲು

Image
 October 29, 2016 ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‍ನಲ್ಲಿರುವ ಈ ಪುಟ್ಟ ರೈಲಿನ ಹೆಸರು ಏಂಜೆಲ್ಸ್ ಫ್ಲೈಟ್. ಈ ರೈಲಿನಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ ಎಂದರೆ ನಿಮಗೆ ಆಚ್ಚರಿಯಾಗಬಹುದು. ವಿಶ್ವದ ಅತ್ಯಂತ ಪುಟ್ಟ ರೈಲು ಎಂಬ ಹೆಗ್ಗಳಿಕೆ ಪಡೆದಿರುವ ಇದು ಕಳೆದ 50 ವರ್ಷಗಳಿಂದಲೂ ಚಾಲನೆಯಲ್ಲಿದೆ. ಈ ಸ್ವಯಂಚಾಲಿತ ರೈಲು ವೇಗ ಮತ್ತು ಅಗಾಧ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ. ಸಿನಾಯ್‍ನಿಂದ ಅತ್ಯಂತ ಇಳಿಜರಾಗಿ ರುವ ಅಲಿವೆಟ್ ಎಂಬ ಸ್ಥಳಕ್ಕೆ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 10ರವರೆಗೆ ನಿರಂತವಾಗಿ ಸಂಚರಿಸುತ್ತದೆ. ಐದು ದಶಕದ ಅವಧಿಯಲ್ಲಿ ಇಷ್ಟು ಸಂಖ್ಯೆಯ ಜನರು ಬೇರಾವುದೇ ರೈಲಿನಲ್ಲಿ ಪ್ರಯಾಣಿಸಿಲ್ಲ ಎಂಬುದು ಏಂಜೆಲ್ಸ್ ಫ್ಲೈಟ್‍ನ ಮತ್ತೊಂದು ಹೆಗ್ಗಳಿಕೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ಈ ರೈಲಿಗೂ ಅನ್ವಯಿಸುತ್ತದೆ.

ಹಿಂದುಳಿದ ವರ್ಗಗಳ ಇಲಾಖೆ ನೇಮಕಾತಿ ಅಧಿಸೂಚನೆ

Image

Primary school teachers' special allowance raised from Rs.300 to Rs.450 w.ef. 01/11/2016

Image

ಕೇಂದ್ರ ನೌಕರ,ಪಿಂಚಣಿದಾರರ ಭತ್ಯೆಯಲ್ಲಿ 2% ಹೆಚ್ಚಳ

Image
ದೆಹಲಿ:  ದೀಪಾವಳಿ ಹಬ್ಬದ ನಿಮಿತ್ತ ಕೇಂದ್ರ ಕ್ಯಾಬಿನೆಟ್ 50 ಲಕ್ಷ ಸರಕಾರಿ ನೌಕರರು ಮತ್ತು 58 ಲಕ್ಷ ಪಿಂಚಣಿದಾರರಿಗೆ ಜುಲೈ 1, 2016 ರಿಂದ ಜಾರಿಗೆ ಬರುವಂತೆ ದಿನ ಭತ್ಯೆ ಶೇ.2 ರಷ್ಟು ಹೆಚ್ಚಳ ಮಾಡಿದೆ. ಈ ಮೊದಲು ಸರಕಾರವು ದಿನಭತ್ಯೆಯನ್ನು ಮೂಲ ಭತ್ಯೆಯ ಶೇ. 6 ರಿಂದ ಶೇ. 125 ಹೆಚ್ಚಿಸಿತ್ತು. ಅನಂತರ ಏಳನೇ ಪಾವತಿ ಆಯೋಗದ ವರದಿ ಅನುಷ್ಠಾನ ಮಾಡುವ ಸಂದರ್ಭ ದಿನಭತ್ಯೆಯನ್ನು ಮೂಲಭತ್ಯೆಯಲ್ಲಿ ಸೇರಿಸಲಾಗಿತ್ತು. ಕೇಂದ್ರ ಸರಕಾರಿ ನೌಕರರು ದಿನಭತ್ಯೆಯನ್ನು ಶೇ. 3 ಕ್ಕೆ ಏರಿಸ ಬೇಕೆಂದು ಬೇಡಿಕೆ ಇಟ್ಟಿದ್ದಾರೆಂಬ ವರದಿ ಮೂಲಗಳಿಂದ ತಿಳಿದು ಬಂದಿದೆ.