Posts

60 ಕ್ಕಿಂತ ಹೆಚ್ಚಿನ ಮಕ್ಕಳಿರುವ ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದು ಮುಖ್ಯೋಪಾದ್ಯಯರ ಹುದ್ದೆ ಮಂಜೂರು ಮಾಡುವ ಕುರಿತು.4/1/16 ರ ಆದೇಶ( BAGALKOTE)

Image

ಕೆಸುವು ನೀಡುತ್ತದೆ ಶರೀರಕ್ಕೆ ಕಸುವು

Image
ವಾರ್ತಾ ಭಾರತಿ : 13 Jan, 2017 ಸಮೃದ್ಧ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುವ ಕೆಸುವು ಗೆಡ್ಡೆ ಪಶ್ಚಿಮ ಆಫ್ರಿಕಾ ಮೂಲದ್ದಾಗಿದೆ. ಇದು ಸಸ್ಯಶಾಸ್ತ್ರೀಯವಾಗಿ ಡಯಾಸ್ಕೊರೇಸಿ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಡಯಾಸ್ಕೋರಿಯಾ ಆಗಿದೆ. ಹಲವಾರು ವಿಧಗಳ ಕೆಸುವು ಲಭ್ಯವಿದ್ದರೂ, ಕೆಲವೇ ಮಾತ್ರ ವಾಣಿಜ್ಯಿಕ ಮಹತ್ವವನ್ನು ಹೊಂದಿವೆ. ಆಹಾರವಾಗಿ ಬಳಕೆಯ ಜೊತೆಗೆ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಸಂಸ್ಕೃತಿಯೊಂದಿಗೆ ಸಾಂಕೇತಿಕವಾಗಿ ತಳುಕು ಹಾಕಿಕೊಂಡಿದೆ. ಭೂಮಿಯ ಒಳಗೆ ಬೆಳೆಯುವ ಕೆಸುವು ಗಡ್ಡೆ ಉಷ್ಣವಲಯದ ಬೆಳೆಯಾಗಿದ್ದು, ತೇವಾಂಶ ಅಗತ್ಯವಿದೆ. 120 ಪೌಂಡ್ ತೂಕ ಮತ್ತು ಎರಡು ಮೀಟರ ಉದ್ದದವರೆಗೂ ಇದು ಬೆಳೆಯಬಲ್ಲುದು. ಕೆಸುವು ಮತ್ತು ಗೆಣಸು ಒಂದೇ ರೂಪ ಹೊಂದಿವೆಯಾದರೂ ಅವುಗಳ ನಡುವೆ ಸಸ್ಯಶಾಸ್ತ್ರೀಯವಾಗಿ ಯಾವುದೇ ಸಂಬಂಧವಿಲ್ಲ. ನೈಜೀರಿಯಾದಲ್ಲಿ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ (ಶೇ.70) ಕೆಸುವು ಬೆಳೆಯುತ್ತದೆ. ಕೆಸುವು ಆರೋಗ್ಯಕ್ಕೆ ಹೇಗೆ ಸಹಕಾರಿ? ಉತ್ತಮ ಶಕ್ತಿಮೂಲವಾಗಿರುವ ಕೆಸುವು ಗೆಡ್ಡೆಯ ಪ್ರತಿ 100 ಗ್ರಾಂ 118 ಕ್ಯಾಲೊರಿಗಳನ್ನು ಒದಗಿಸುತ್ತದೆ. ಸಂಯುಕ್ತ ಕಾರ್ಬೋಹೈಡ್ರೇಟ್ಗಳೊಂದಿಗೆ ಕರಗಬಲ್ಲ ನಾರಿನಂಶವನ್ನು ಹೊಂದಿದೆ. ಈ ನಾರಿನಂಶವು ಮಲಬದ್ಧತೆಯನ್ನು ತಗ್ಗಿಸುವ ಜೊತೆಗೆ ಕೆಟ್ಟ ಕೊಲೆಸ್ಟರಾಲ್ ಅನ್ನು ಕರುಳಿಗೆ ಸೀಮಿತಗೊಳಿಸುವ ಮೂಲಕ ಅದರ ಮಟ್ಟವನ್ನು ತಗ್ಗಿಸುತ್ತದ

ಗ್ರಾಮೀಣ ಕೃಪಾಂಕ ರಹಿತಕ್ಕೆ ಸಂಬಂಧಿಸಿದ ಸುತ್ತೋಲೆ :ದಿನಾಂಕ 02/07/2003

Image
DPAR 45 srr 2003 DPAR Department Circular 02/07/2003 ಗ್ರಾಮೀಣ ಕೃಪಾಂಕ ರಹಿತಕ್ಕೆ ಸಂಬಂಧಿಸಿದ ಸುತ್ತೋಲೆ :ದಿನಾಂಕ 02/07/2003: ಪುಟಗಳು :3

ರೊನಾಲ್ಡೋಗೆ ಫಿಫಾ ಪ್ರಶಸ್ತಿ :*

 Tuesday, 10.01.2017   ಝೌರಿಚ್ :ಫಿಫಾ ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೋ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಜಯಿಸಿದ್ದಾರೆ. ಲೀಸಿಸ್ಟರ್ ಸಿಟಿ ಫುಟ್ಬಾಲ್ ಕ್ಲಬ್‌ನ ಕ್ಲೌಡಿಯೋ ರೇನಿಯರಿ ಪುರುಷರ ಶ್ರೇಷ್ಠ ಕೋಚ್ ಪ್ರಶಸ್ತಿ ಪಡೆದಿದ್ದಾರೆ. ಮೂರನೇ ಚಾಂಪಿಯನ್‌ಸ್‌ ಲೀಗ್ ಪ್ರಶಸ್ತಿ ಜಯಿಸಿದ ರೊನಾಲ್ಡೋ ಇತ್ತೀಚೆಗಷ್ಟೇ ಬಾಲನ್ ಡಿ ಓರ್ ಪ್ರಶಸ್ತಿ ಪಡೆದಿದ್ದರು. ಅವರು ಲೀಗ್‌ನ 12 ಪಂದ್ಯಗಳಲ್ಲಿ 16 ಗೋಲು ದಾಖಲಿಸಿದ್ದರು. ಹಾಗೆಯೇ ಯುರೋ ಕಪ್ ಜಯಿಸುವ ಮೂಲಕ ದೇಶಕ್ಕೆ ಮೊದಲ ಪ್ರಮುಖ ಪ್ರಶಸ್ತಿಯೊಂದು ಕೊಡಿಸಿದ್ದಾರೆ. ಅವರು ಅರ್ಜೆಂಟಿನಾದ ಲಿಯೋನೆಲ್ ಮೆಸ್ಸಿ ಹಾಗೂ ಫ್ರಾನ್ಸ್ ನ ಆ್ಯಂಟೋನಿ ಗ್ರಿಜ್‌ಮೆನ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದರು.

CBSE class X and class XII exams from March 9 to April 29

Image
Manash Pratim Gohain   File photo used for representation NEW DELHI: The Central Board of Secondary Education (CBSE) announced on Monday that the class X and the class XII board examinations will be conducted from March 9 to April 29, 2017. Traditionally the exams start in the first week of March. However, due to elections in five states and two polling dates falling on March 4 and March 8, the exams will begin from March 9. In all 1667573 candidates from Central Board of Secondary Education have registered for the class X exams, up from 1491371 in 2016, while 1098420 candidates have registered for the class XII exams, up from 1065179 in 2016. RK Chaturvedi, chairman, CBSE said that there will be no delay in the declaration of the results as "the board has adopted several IT initiatives which will aid in faster result processing."

ಬಾಂಕ್ ಖಾತೆದಾರರು ಫೆಬ್ರವರಿ 28ರೊಳಗೆ ಪ್ಯಾನ್ ಕಾರ್ಡ್(ಅಥವಾ ಫಾರ್ಮ್ 60 ಪಡೆಯುವದು) ಹೊಂದುವದು ಕಡ್ಡಾ ಯ:*

 Monday, 09.01.2017      ವಿಶ್ವವಾಣಿ   ದೆಹಲಿ : ಶೂನ್ಯ ಮೊತ್ತದ ಖಾತೆ ಹಾಗೂ ಜನ ಧನ್ ಖಾತೆಗಳನ್ನು ಹೊರತು ಪಡಿಸಿ ಇನ್ನುಳಿದ ಬ್ಯಾಂಕ್ ಖಾತೆದಾರರಿಂದ ಪಾನ್ ಕಾರ್ಡ್ ಪಡೆಯುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ. ಫೆಬ್ರವರಿ 28ರೊಳಗೆ ಪಾನ್ ಸಂಖ್ಯೆ ಅಥವಾ ಫಾರ್ಮ್ 60 ಪಡೆಯಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆ ಆದಾಯ ತೆರಿಗೆ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಈವರೆಗೆ ಪಾನ್ ಅಥವಾ ಫಾರ್ಮ್ 60 ಸಲ್ಲಿಸದ ಗ್ರಾಹಕರು ಈಗ ಸಲ್ಲಿಸಬೇಕು ಎಂದು ಹೇಳಿದೆ. ಆದರೆ, ಈ ನಿಯಮ ಕನಿಷ್ಠ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (ಬಿಎಸ್'ಬಿಡಿಎ) ಗಳಿಗೆ ಅನ್ವಯಿಸುವುದಿಲ್ಲ. ಬಿಎಸ್'ಬಿಡಿಎ ಎಂಬುದು ಜನಧನ ಖಾತೆಯನ್ನೂ ಒಳಗೊಂಡ ಶೂನ್ಯ ಮೊತ್ತದ ಖಾತೆಗಳಾಗಿದ್ದು, ಜನ ಸಾಮಾನ್ಯರ ಸರಳ ಬ್ಯಾಂಕಿಂಗ್ ಸೇವೆ ಒದಗಿಸಲು ಈ ಖಾತೆಗಳನ್ನು ತೆರೆಯಲಾಗುತ್ತದೆ. ಇದರಡಿ ಎಟಿಎಂ ಕಾರ್ಡ, ಮಾಸಿಕ ಸ್ಟೇಟ್'ಮೆಂಟ್ ಹಾಗೂ ಚೆಕ್ ಬುಕ್ ಉಚಿತವಾಗಿ ದೊರೆಯುತ್ತದೆ. ಕಳೆದ ತಿಂಗಳಷ್ಟೇ ಆರ್‌ಬಿಐ ಹಣ ಹಿಂಪಡೆತಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ ಎಂದು ಹೇಳಿ ಭಾರಿ ಚರ್ಚೆಗೆ ವೇದಿಕೆ ಕಲ್ಪಿಸಿತ್ತು.

ಪ್ರೊ.ಸೇಶು ಪಸುಮಾರ್ಥಿ ಧಾರವಾಡ ಐ ಐ ಟಿ ನಿರ್ದೇಶಕರಾಗಿ ನೇಮಕ(5 ವರ್ಷಗಳ ಅವಧಿಗೆ)

Image

ಗು ವಿ ಸ ಕಂ ನಿ. ಮಾರ್ಗದಾಳು ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Image

ಡಿಎಲ್,ಎಲ್ಎಲ್ಆರ್, ವಾಹನ ನೋಂದಣಿ ಶುಲ್ಕ ಏರಿಕೆ

Image
 January 7, 2017   ನವದೆಹಲಿ. ಜ. 07 :  ವಾಹನ ಚಾಲನೆ ಕಲಿಕಾ ಪರವಾನಗಿ, ಚಾಲನಾ ಪರವಾನಗಿ, ವಾಹನಗಳ ಮಾಲೀಕತ್ವ ಬದಲಾವಣೆ ಮತ್ತು ಸಾಮರ್ಥ್ಯ ಪರೀಕ್ಷಾ ಶುಲ್ಕ ಸೇರಿದಂತೆ ಪ್ರಾದೇಶಿಕ ಸಾರಿಗೆ ಕಚೇರಿಗಳು ಒದಗಿಸುವ ಎಲ್ಲ ಸೇವೆಗಳ ಶುಲ್ಕವನ್ನು ಏರಿಕೆ ಮಾಡಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಶುಲ್ಕಗಳು 2016ರ ಡಿ.29ರಿಂದ ಅನ್ವಯವಾಗಲಿವೆ. ಕಲಿಕಾ ಪರವಾನಗಿ (ಎಲ್‌.ಎಲ್) ಶುಲ್ಕವನ್ನು ರೂ. 30ರಿಂದ ರೂ. 150ಕ್ಕೆ, ಚಾಲನಾ ಪರವಾನಗಿ (ಡಿ.ಎಲ್) ಶುಲ್ಕವನ್ನು ರೂ. 40ರಿಂದ ರೂ. 200ಕ್ಕೆ ಏರಿಕೆ ಮಾಡಿದೆ. ಇದರ ಮೇಲೆ ರಾಜ್ಯ ಸರ್ಕಾರಗಳು ಹೆಚ್ಚಿನ ಶುಲ್ಕ ವಿಧಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಶುಲ್ಕದ ವಿವರಗಳು : ಚಾಲನಾ ಪರವಾನಗಿ ಪತ್ರ (ಡಿಎಲ್) – 200 ರೂ.ಕಲಿಕಾ ಪರವಾನಗಿ ಪತ್ರ (ಎಲ್ ಎಲ್ ಆರ್) – 150 ರೂ.ಎಲ್ ಎಲ್ ಆರ್ ಪರೀಕ್ಷಾ ಶುಲ್ಕ – 50 ರೂ.ಡಿಎಲ್ ಪರೀಕ್ಷಾ ಶುಲ್ಕ – 300 ರೂ.ಸ್ಮಾರ್ಟ್ ಕಾರ್ಡ್ : 200 ರೂ.ಡಿಎಲ್ ನವೀಕರಣ : 200 ರೂ.ಅಂತರರಾಷ್ಟ್ರೀಯ ಡಿಎಲ್ – 1000 ರೂ.ಅಪಾಯಕಾರಿ ಸರಕು ಸಾಗಿಸುವ ವಾಹನಗಳ ದೃಢೀಕರಣ ನವೀಕರಣ :100 ರೂ.ನವೀಕರಣ ವಿಳಂಬವಾದರೆ ಪ್ರತಿವರ್ಷಕ್ಕೆ ದಂಡ – 1,000 ರೂ.ವಾಹನ ಚಾಲನಾ ತರಬೇತಿ ಶಾಲೆಗಳ ಪರವಾನಗಿ – 10, 000 ರೂ.ವಾಹನ ಚಾಲನಾ ತರಬೇತಿ ಶಾಲೆಗಳ ಪರವಾನಗಿ ತರಬೇತಿ ಶಾಲೆಗಳ ಪರವಾನಗಿ ನಕಲುಪ್ರತಿ – 5000 ರೂ.ಪರವಾನಗಿ ವಿತರಣಾ ಸಂಸ್ಥೆಗಳ ವಿರುದ್ಧ ಮೇಲ್ಮನವಿ ಸಲ

ಜನೇವರಿ.9ರಿಂದ ಆನ್‍ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ January 5, 2017

Image
ಬೆಂಗಳೂರು, ಜ.5-  ಬಿಪಿಎಲ್ ಪಡಿತರ ಚೀಟಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 26ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.9ರಂದು ಆನ್‍ಲೈನ್ ಮೂಲಕ ಎಪಿಎಲ್‍ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ ಎಂದರು. ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಪಡಿತರ ಚೀಟಿ ಅರ್ಜಿದಾರರ ಕೈ ಸೇರಲಿದೆ. ಅದೇ ರೀತಿ ಬಿಪಿಎಲ್ ಪಡಿತರ ಚೀಟಿಯನ್ನು 15 ದಿನಗಳೊಳಗೆ ಅಂಚೆ ಮೂಲಕ ತಲುಪಿಸಲಾಗುವುದು. ಈಗಾಗಲೇ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ 10 ಲಕ್ಷ ಮಂದಿ ಕೂಡ ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿ ಮಾಡುವವರು, ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತ ದೊಡ್ಡದಾದ ಮನೆ ಹೊಂದಿರುವವರು, 7ಎಕರೆ ಜಮೀನುಳ್ಳವರು, 4 ಚಕ್ರದ ವಾಹನ ಹೊಂದಿರುವವರು ಹಾಗೂ ಮಾಸಿಕ 150 ಯುನಿಟ್‍ಗಿಂತ ಹೆಚ್ಚು ವಿದ್ಯುತ್ ಬಳಸುವವರು ಬಿಪಿಎಲ್ ಪಡೆಯಲು ಅರ್ಹರಾಗಿರುವುದಿಲ್ಲ ಎಂದ ಅವರು, ಎಪಿಎಲ್ ಪಡಿತರ ಚೀಟಿ ಪಡೆಯಲು ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದರು.

ಜನವರಿ 15ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KARTET)

2016ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET 2016) ಯನ್ನು ದಿನಾಂಕ 15-01-2017 ಭಾನುವಾರದಂದು ಸಮಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.00ರವರೆಗೆ ಹಾಗೂ ಮಧ್ಯಾಹ್ನ 2.00 ರಿಂದ 4.30ರವರೆಗೆ ಕ್ರಮವಾಗಿ ಪತ್ರಿಕೆ -1 ಹಾಗೂ ಪತ್ರಿಕೆ-2ರ ಪರೀಕ್ಷೆಗಳು ರಾಜ್ಯಾದ್ಯಂತ ಜಿಲ್ಲಾ ಕೇಂದ್ರದ ಒಟ್ಟು 871 ಪರೀಕ್ಷಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಅವಶ್ಯವಿರುವ ಪ್ರವೇಶ ಪತ್ರವನ್ನು (ಇಲಾಖಾ ವೆಬ್‍ಸೈಟ್  www.schooleducation.kar.nic.in )) ಇಲಾಖಾ ಅಂತರ್ಜಾಲದ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ಪಡೆದುಕೊಂಡಿರುವ ಪ್ರವೇಶ ಪತ್ರಗಳಲ್ಲಿ ಮುದ್ರಿತಗೊಂಡಿರುವ ಹೆಸರು, ನೋಂದಣಿ ಸಂಖ್ಯೆ ಹಾಗೂ ಪರೀಕ್ಷಾ ಕೇಂದ್ರದ ಸಂಖ್ಯೆ, ಹೆಸರು/ವಿಳಾಸ ಇತ್ಯಾದಿಗಳನ್ನು ಖಾತ್ರಿಪಡಿಸಿಕೊಳ್ಳುವುದು. ಒಂದು ವೇಳೆ ಮಾಹಿತಿಗಳು ತಪ್ಪಾಗಿದ್ದಲ್ಲಿ ದೂರವಾಣಿ ಮೂಲಕ ಕೇಂದ್ರೀಕೃತ ದಾಖಲಾತಿ ಘಟಕ ಕಚೇರಿಯನ್ನು ಸಂಪರ್ಕಿಸಿ ಅಥವಾ  cackarnataka@gmail.com  ಗೆ ನೋಂದಣಿ ಸಂಖ್ಯೆ ಹಾಗೂ ಸಮಸ್ಯೆಯನ್ನು ಇ-ಮೇಲ್ ಮೂಲಕ ಕಳುಹಿಸಿ ಸರಿಪಡಿಸಿಕೊಳ್ಳುವುದು ಎಂದು ಪ್ರಕಟಣೆ ತಿಳಿಸಿದೆ.

🌳 *ಮೊರಾರ್ಜಿ.ದೇಸಾಯಿ/ಕಿತ್ತೂರು.ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ ಅಟಲ್.ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಏರ್ಪಡಿಸಿವ 6 ನೇ ತರಗತಿ ಪ್ರವೇಶ ಪರೀಕ್ಷೆ-2017 ರ ದಿನಾಂಕವನ್ನು 05/02/17 ಕ್ಕೆ ಮುಂದೂಡಿರುವ ಬಗ್ಗೆ ಪತ್ರಿಕಾ ಪ್ರಕಟಣೆ* 🌳

Image

INDIRA GANDHI NATIONAL OPEN UNIVERSITY:-Results:- B.Ed. Entrance Test October, 2016

Use your Enrolment Number: https://studentservices.ignou.ac.in/Openmat/BED2016/BEd_Entrance_Res2016.asp

*KPSC : FDA / SDA ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 06-01-2017ಕ್ಕೆ ವಿಸ್ತರಿಸಿದ ಬಗ್ಗೆ*

Image

ದೇಶದ ಮೊದಲ ಶಿಕ್ಷಕಿ: ಸಾವಿತ್ರಿಬಾಯಿ ಪುಲೆ

Image
*ಅಕ್ಷರಮಾತೆಯ ಯಶೋಗಾಥೆ* ಭಾರತೀಯ ಸಮಾಜವು ವರ್ಣ, ಜಾತಿ, ವರ್ಗವ್ಯವಸ್ಥೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಪೋಷಿಸಿದೆ. ಇಂತಹ ಭಾರತದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಪಟ್ಟ ಸಮುದಾಯಗಳಿಗಾಗಿಯೇ ಮೊಟ್ಟಮೊದಲ ಬಾರಿಗೆ ಶಾಲೆಗಳನ್ನು ತೆರೆದು ಅಕ್ಷರ ಜ್ಞಾನವನ್ನು ನೀಡಿದವರು ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿ. ಮಹಾರಾಷ್ಟ್ರದ ಪುಣೆಯಲ್ಲಿ ಅಸ್ಪೃಶ್ಯರು, ತಳವರ್ಗಗಳು ಹಾಗೂ ಮಹಿಳೆಯರಿಗಾಗಿ ಶಾಲೆಯನ್ನು ಆರಂಭಿಸಿ ಅಕ್ಷರದ ಜ್ಞಾನ ನೀಡಲು ಈ ದಂಪತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಜಡ್ಡುಗಟ್ಟಿದ ಸಮಾಜದಿಂದ ಕಿರುಕುಳ ಅನುಭವಿಸಿದ ಫುಲೆ ಅವರು ತಮ್ಮ ಜೀವಿತದ ಅವಧಿಯಲ್ಲಿ ತಳ ಸಮುದಾಯ, ಅಸ್ಪೃಶ್ಯರು ಹಾಗೂ ಮಹಿಳೆಯರ ಶಿಕ್ಷಣ ಹಾಗೂ ಅವರ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡರು. ಪೇಶ್ವೆಗಳ ಆಡಳಿತದ ಅವಧಿಯಲ್ಲಿ ಹೂವನ್ನು ಮಾರುತ್ತಿದ್ದರಿಂದ ಇವರ ಕುಟುಂಬಕ್ಕೆ ಫುಲೆ ಎಂಬ ಅಡ್ಡ ಹೆಸರು ಬಂತು. ಹಿಂದುಳಿದ ಹೂಗಾರ ಜಾತಿಗೆ ಸೇರಿದ ಸಾವಿತ್ರಿಬಾಯಿ ಫುಲೆ ಅವರು 1831ರ ಜನವರಿ 3ರಂದು ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಖಂಡೋಜಿ ನೇವಸೆ ಪಾಟೀಲ ಹಾಗೂ ತಾಯಿ ಲಕ್ಷ್ಮಿಬಾಯಿ. ಸಾವಿತ್ರಿಬಾಯಿ ಫುಲೆ ಅವರಿಗೆ 1840ರಲ್ಲಿ ತಮ್ಮ ಸಂಬಂಧಿಕರೇ ಆದ ಜ್ಯೋತಿಬಾ ಫುಲೆ ಅವರೊಂದಿಗೆ ಬಾಲ್ಯವಿವಾಹವಾಯಿತು. ಪ್ರೇರಣೆಯಾದ ಅವಮಾನ: ಬ್ರಾಹ್ಮಣಸ್ನೇಹಿತನ ಮದುವೆಯಲ್ಲಿ ಅವಮಾನಿತರಾಗಿ ಹೊರದೂಡಲ್ಪಟ್ಟ ಜ್ಯೋತಿಬ

*kpsc ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ*

*ಬೆಂಗಳೂರು, ಜನವರಿ 2* *ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ 2017ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಅರ್ಹ ಸರ್ಕಾರಿ ನೌಕರರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.* *ಅರ್ಹ ಅಭ್ಯರ್ಥಿಗಳು 30-01-2017 ರವರೆಗೆ ಆನ್‍ಲೈನ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ತತ್ಸಂಬಂಧ ಶುಲ್ಕವನ್ನು ಸ್ಕ್ಯಾನರ್ ಸೌಲಭ್ಯವಿರುವ ರಾಜ್ಯದ ಯಾವುದೇ ಗಣಕೀಕೃತ ಅಂಚೆ ಕಚೇರಿ ಶಾಖೆಯಲ್ಲಿ ದಿನಾಂಕ 31-01-2017 ರವರೆಗೆ ಪಾವತಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿವರಗಳಿಗಾಗಿ ಆಯೋಗದ ವೆಬ್‍ಸೈಟ್ " http://kpsc.kar.nic.in " ಪ್ರಕಟಿಸಿರುವ ಅಧಿಸೂಚನೆಯನ್ನು ನೋಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-30574944/30574945/30574957 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.* Departmental Examination info file http://kpsc.kar.nic.in/pdf/DEPTL%20EXAM%20%20_FUNCTIONS_.pdf

ಹಾಟ್ ಏರ್ ಬೆಲೂನ್‍ನಲ್ಲಿ ಭೂ ಪ್ರದಕ್ಷಿಣೆ ವಿಶ್ವದಾಖಲೆ

Image
  January 2, 2017 ಈ ಜಗತ್ತಿನಲ್ಲಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಗುರಿ ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಅಪಾರ ಪರಿಶ್ರಮದಿಂದ ಇದು ಸಾಧ್ಯ. ರಷ್ಯಾದ ಸಾಹಸಿ ಫೆಡೊರ್ ಕೊನ್‍ಯುಖೋ ಇತ್ತೀಚೆಗೆ ಹಾಟ್ ಏರ್ ಬೆಲೂನ್‍ನಲ್ಲಿ ಭೂ ಪ್ರದಕ್ಷಿಣೆ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ರಷ್ಯಾದ ಸಾಹಸಿ ಫೆಡೊರ್ ಕೊನ್‍ಯುಖೋವ್ ಹಾಟ್ ಏರ್ ಬೆಲೂನ್‍ನಲ್ಲಿ ಕೇವಲ 11 ದಿನಗಳಲ್ಲಿ ಭೂ ಪ್ರದಕ್ಷಿಣೆ ಮೂಲಕ ವಿಶ್ವವಿಕ್ರಮದ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.  ರಷ್ಯಾದ 64 ವರ್ಷಗಳ ಪಾದ್ರಿ ಮತ್ತು ಹಾಟ್ ಏರ್ ಬೆಲೂನ್ ಸಾಹಸಿ ಫೆಡೊರ್ ಕೊನಿಯುಖೊವ್ ಹಿಂದಿನ ವಿಶ್ವ ದಾಖಲೆಯನ್ನು ಮುರಿಯಲು ಒಬ್ಬಂಟಿಯಾಗಿ ಹಾಟ್ ಏರ್ ಬೆಲೂನ್‍ನಲ್ಲಿ ಭುವನ ಪ್ರದಕ್ಷಿಣೆ ಆರಂಭಿಸಿದ್ದರು. 2002ರಲ್ಲಿ ಒಬ್ಬಂಟಿಯಾಗಿ ವಿಮಾನದಲ್ಲಿ ಅಮೆರಿಕದ ವೈಮಾನಿಕ ಸ್ಟೀವ್ ಪೋಸ್ಟೆಟ್ ಯಶಸ್ವಿ ವಿಶ್ವ ಪ್ರದಕ್ಷಿಣೆ ಆರಂಭಿಸಿದ್ದ ಆಸ್ಟ್ರೇಲಿಯಾದ ನೋರ್ಥಾಮ್ ಅದೇ ಸ್ಥಳದಿಂದ ಫೆಡೊರ್ ಹಾಟ್ ಏರ್ ಬೆಲೂನ್ ಮೂಲಕ ಈ ಸಾಹಸ ಕೈಗೊಂಡರು. ಪೋಸ್ಟೆಟ್ಗೆ ಪ್ರಪಂಚ ಪರ್ಯಟನೆ ಮಾಡಲು ಹದಿಮೂರುವರೆ ದಿನಗಳು ಬೇಕಾದವು. ಈ ದಾಖಲೆಯನ್ನು ಅಳಿಸಿ ಹಾಕುವ ದೃಢ ಆತ್ಮವಿಶ್ವಾಸ ಹೊಂದಿದ್ದ ಫೆಡೊರ್ ಕೇವಲ 11 ದಿನಗಳಲ್ಲಿ ಈ ಪ್ರದಕ್ಷಿಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. 1983ರಲ್ಲಿ ಹೆಲಿಕಾಪ್ಟರ್ ಮೂಲಕ ಮೊಟ್ಟಮೊದಲ ಬಾರಿಗೆ ಒಬ್ಬಂಟಿಯಾಗಿ ಪ್ರಪಂಚ ಪರ್ಯಟನೆ ಮಾಡಿದ್ದ ಡಿಕ್ ಸ್ಮಿತ್, ಫೆಡೊರ್ ಸಾಹ

ಅಗ್ನಿ-4 ಕ್ಷಿಪಣಿ ಪರೀಕ್ಷೆ ಯಶಸ್ವಿ ಸೇನೆಗೆ ಮತ್ತೊಂದು ಪ್ರಬಲ ಅಸ್ತ್ರ

ಬಾಲಸೋರ್, ಜ. ೨- ಇಂದು ನಡೆದ ಅಗ್ನಿ-4 ಕ್ಷಿಪಣಿಯ ಉಡಾವಣೆ ಯಶಸ್ವಿಯಾಗಿದೆ. ಇದು ಇದರ ನಾಲ್ಕನೇ ಹಾಗೂ ಅಂತಿಮ ಉಡಾವಣೆ ಪರೀಕ್ಷೆಯಾಗಿದ್ದು, ಇಂದು ಇದರ ಯಶಸ್ವಿನಿಂದ ಭಾರತೀಯ ಸೇನಾ ಬತ್ತಳಿಕೆಗೆ ಇನ್ನೊಂದು ಪ್ರಬಲ ಅಗ್ನಿ ಅಸ್ತ್ರ ಸೇರಲಿದೆ. ಒಡಿಶಾದ ಬಾಲಸೋರ್ ನಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿರುವ ಉಡಾವಣಾ ಕೇಂದ್ರದಲ್ಲಿ ಕ್ಷಿಪಣಿಯನ್ನು ಇಂದು ಬೆಳಗ್ಗೆ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಭಾರತೀಯ ಸೇನೆ ನಡೆಸಿದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಅಗ್ನಿ-4 ಕ್ಷಿಪಣಿ ಉಡಾವಣೆಗೊಂಡ ಕೇವಲ 20 ನಿಮಿಷದಲ್ಲಿ 800 ಕಿ.ಮೀ ದೂರ ಕ್ರಮಿಸಿ ನಿಖರ ಗುರಿ ತಲುಪುವ ಮೂಲಕ ಯಶಸ್ವಿಯಾಯಿತು. ಅಗ್ನಿ-4 ಕ್ಷಿಪಣಿ ಘನ ಇಂಧನ ಬಳಕೆ ಮಾಡುವ ಇಂಜಿನ್ ಹೊಂದಿದ್ದು, ಕ್ಷಿಪಣಿ ಉಡಾವಣೆಗೆ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಮೊಬೈಲ್ ಲಾಂಚರ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಈ ಖಂಡಾಂತರ ಕ್ಷಿಪಣಿಯನ್ನು ನಾಲ್ಕನೇ ಬಾರಿಗೆ ಭಾರತೀಯ ಸೇನೆ ಪ್ರಯೋಗಕ್ಕೆ ಒಳಪಡಿಸಿದ್ದು, ಇದು ಈ ಕ್ಷಿಪಣಿಯ ಅಂತಿಯ ಪ್ರಯೋಗವಾಗಿದೆ. ಅಗ್ನಿ-4 ಕ್ಷಿಪಣಿಯು ಸುಮಾರು 17 ಟನ್ ತೂಕವಿದ್ದು, 20 ಮೀಟರ್ ಉದ್ದವಿದೆ. ಸುಮಾರು 4 ಸಾವಿರ ಕಿಮೀ ವ್ಯಾಪ್ತಿಯಲ್ಲಿನ ಯಾವುದೇ ಕಠಿಣ ಗುರಿಯನ್ನು ಕ್ಷಣಮಾತ್ರದಲ್ಲಿ ಛಿದ್ರ ಮಾಡಬಲ್ಲ ತಾಕತ್ತು ಈ ಕ್ಷಿಪಣಿಗಿದೆ. ಕೇವಲ ಒಂದು ವಾರದ ಹಿಂದೆಯಷ್ಟೇ ಭಾರತ ತನ್ನ ಪ್ರಬಲ ಅಗ್ನಿ 5 ಕ್ಷಿಪಣಿಯ

*8,300 ನಾನ್ ಟೆಕ್ನಿಕಲ್ ಹುದ್ದೆಗಳ ನೇಮಕಾತಿ:~*

     ‌‌‌‌ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್.ಎಸ್.ಸಿ)ಯಿಂದ ದೇಶದಾದ್ಯಂತ ಖಾಲಿ ಇರುವ 8,300 ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್) ಹುದ್ದೆಗಳ ಭರ್ತಿಗಾಗಿ ದಿನಾಂಕ 16.04.2017, 30.04.2017, 07.05.2017 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-01-2017 ಹೆಚ್ಚಿನ ವಿವರಕ್ಕಾಗಿ ಇಲ್ಲಿ click ಮಾಡಿರಿ:   http://ssc.nic.in/SSC_WEBSITE_LATEST/notice/notice_pdf/mtsfinalnotice301216.pdf ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ http://ssconline.nic.in/

ನೂತನ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌

Image
ಟೈಮ್ಸ್ ಆಫ್ ಇಂಡಿಯಾ | Updated Dec 31, 2016, 03.26 PM IST Whatsapp Facebook Google Plus Twitter Email SMS ನೂತನ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ A A A ಹೊಸದಿಲ್ಲಿ: ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಬಿಪಿನ್‌ ರಾವತ್‌ ಶನಿವಾರ ಅಧಿಕಾರ ಸ್ವೀಕರಿಸಿದರು. ಜನರಲ್ ದಲ್ಬೀರ್ ಸಿಂಗ್‌ ಸುಹಾಗ್‌ ಅವರ ಉತ್ತರಾಧಿಕಾರಿಯಾಗಿ 1.3 ದಶಲಕ್ಷ ಯೋಧರ ಪಡೆಯನ್ನು ಅವರು ಮುನ್ನಡೆಸಲಿದ್ದಾರೆ. ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರೋಧ ಲೆಕ್ಕಿಸದೆ ಎನ್‌ಡಿಎ ಸರಕಾರ ರಾವತ್ ಅವರನ್ನು ನೂತನ ಸೇನಾ ಮುಖ್ಯಸ್ಥರಾಗಿ ನಿಯೋಜಿಸಿದ ಕ್ರಮ ತೀವ್ರ ವಿವಾದಕ್ಕೆ ಗುರಿಯಾಗಿತ್ತು.