Posts

ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

ಅವಾಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಮನೆ ಪಡೆಯುತ್ತಿದ್ದರೆ 2.4 ಲಕ್ಷ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ನಿಮ್ಮ ಆದಾಯ ವಾರ್ಷಿಕವಾಗಿ ರೂ.18 ಲಕ್ಷ ಇದ್ದರೂ ಈ ಪ್ರಯೋಜನ ಪಡೆಯಬಹುದು. Written by: Siddu | Monday, February 13, 2017, 10:05 [IST] ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಆ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಮನೆ ಪಡೆಯುತ್ತಿದ್ದರೆ 2.4 ಲಕ್ಷ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ನಿಮ್ಮ ಆದಾಯ ವಾರ್ಷಿಕವಾಗಿ ರೂ.18 ಲಕ್ಷ ಇದ್ದರೂ ಈ ಪ್ರಯೋಜನ ನಿಮ್ಮದಾಗಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಹೊಸ ಗೃಹ ಯೋಜನಾ ನೀತಿಯನ್ನು ಘೋಷಿಸಿದ್ದಾರೆ ನೋಡಿ...  1. 2022ರಲ್ಲಿ ಎಲ್ಲರಿಗೂ ಮನೆ ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು.

ಮೆಗಾ ವಿಶ್ವದಾಖಲೆಗೆ ಇಸ್ರೋ ಸಜ್ಜು, ಫೆ.15ರಂದು ಒಂದೇ ಬಾರಿಗೆ 104 ಉಪಗ್ರಹ ಉಡಾವಣೆ

Image
 February 12, 2017  , 104 satellites ಬೆಂಗಳೂರು, ಫೆ.12-  ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಹಲವು ಮಹತ್ವದ ಸಾಧನೆಗಳ ಮೈಲಿಗಲ್ಲುಗಳನ್ನು ಸ್ಥಾಪಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇದೀಗ ಮೆಗಾ ವಿಶ್ವದಾಖಲೆಗೆ ಸಜ್ಜಾಗಿದೆ.   ಇಸ್ರೋ ಶೀಘ್ರವೇ ಸೌರಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರ ಗ್ರಹವನ್ನು ತಲುಪಲು ಹಾಗೂ ಕೆಂಪುಗ್ರಹವಾದ ಮಂಗಳನ ಅಂಗಳಕ್ಕೆ ಮರುಪ್ರವೇಶಿಸಲು ಸಿದ್ಧತೆ ನಡೆಸಿದೆ. ಈ ಎರಡೂ ಗ್ರಹಗಳ ಮೇಲೆ ನೂತನ ಅನ್ವೇಷಣೆ ಕೈಗೊಳ್ಳುವ ನಿಟ್ಟಿನಲ್ಲಿ ಇದೊಂದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.  ಭೂಮಿಗೆ ತೀರಾ ಹತ್ತಿರದಲ್ಲಿರುವ ಶುಕ್ರ ಮತ್ತು ಮಂಗಳನ ಅಂಗಳಕ್ಕೆ ಗಗನನೌಕೆಗಳನ್ನು ರವಾನಿಸಿ ಆ ಮೂಲಕ ಹೆಚ್ಚಿನ ಸಂಶೋಧನೆ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶವಾಗಿದೆ. ಹೊಸ ನಮೂನೆ ವಿದ್ಯುನ್ಮಾನ ಸಂಶೋಧನಾ ದಾಖಲೆ ಪತ್ರಗಳ ನೂರಾರು ಪುಟಗಳಲ್ಲಿ ಈ ಗ್ರಹಗಳ ಬಗ್ಗೆ ಅಡಕವಾಗಿರುವ ಮಹತ್ವದ ಮಾಹಿತಿಗಳನ್ನು ಪ್ರಾಯೋಗಿಕವಾಗಿ ಬಹಿರಂಗಗೊಳಿಸುವ ನಿಟ್ಟಿನಲ್ಲಿ ಇದು ಪ್ರಪ್ರಥಮ ಅನ್ವೇಷಣೆಯಾಗಿದೆ.   ಈ ಎರಡು ಗ್ರಹಗಳ ಅನ್ವೇಷಣೆಯನ್ನು ಏಕಕಾಲದಲ್ಲೇ ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಇದಕ್ಕಾಗಿ ಸೌರಮಂಡಲದಲ್ಲಿ ಸುಸಜ್ಜಿತ 104 ಉಪಗ್ರಹಗಳನ್ನು ಇಳಿಸಲು ತಯಾರಿ ನಡೆದಿದೆ. ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಇಷ್ಟು ಸಂಖ್ಯೆ ಉಪಗ್ರಹಗಳನ್ನು ವ್ಯೂಮ ವಲಯಕ್ಕೆ ರವಾನಿಸುತ್ತಿರುವುದು ಇದೇ ಮೊದಲು. ಅಮೆರಿಕ, ರಷ್ಯಾ ಸೇರ

ನಾಸಾ ಬಾಹ್ಯಾಕಾಶ ಯಾತ್ರೆ ಮಾಡಲಿರುವ 3ನೇ ಭಾರತೀಯ ಮಹಿಳೆ ಶಾವ್ನಾ ಪಾಂಡ್ಯ

Image
 February 10, 2017 ಮುಂಬೈ. ಫೆ.10  : ಭಾರತೀಯ ಮೂಲದ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ನಂತರ ಈಗ ಮುಂಬೈ ಮೂಲದ ಡಾ. ಶಾವ್ನಾ ಪಾಂಡ್ಯ ಅಮೇರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ಯ ಬಾಹ್ಯಾಕಾಶ ಯಾತ್ರೆ ಭಾರತದ 3 ನೇ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ.  ಮುಂಬೈ ಮೂಲದ ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಡಾ. ಶಾವ್ನಾ ಪಾಂಡ್ಯ(32) 2018 ರಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿದ್ದಾರೆ. ಕೆನಡಾದ ಅಲ್ ಬೆರ್ಟಾ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಡಾ. ಶಾವ್ನಾ ಪಾಂಡ್ಯ ಬಹುಮುಖ ಪ್ರತಿಭೆ. ಗಾಯಕಿ, ಬಾಕ್ಸರ್ ಕೂಡ ಆಗಿರುವ ಅವರಿಗೆ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಇದೆ. ಬಾಹ್ಯಾಕಾಶ ಯಾತ್ರೆಗೆ ವಿಶ್ವಾದ್ಯಂತ ಸುಮಾರು 3200 ಮಂದಿ ಆಸಕ್ತರು ಅರ್ಜಿ ಸಲ್ಲಿಕೆ ಮಾಡಿದ್ದರಂತೆ. ಆದರೆ ಈ ಪೈಕಿ ಆಯ್ಕೆಯಾಗಿದ್ದು ಮಾತ್ರ ಇಬ್ಬರು. ಆ ಇಬ್ಬರಲ್ಲಿ ಭಾರತೀಯ ಮೂಲದ ಶಾವ್ನಾ ಪಾಂಡ್ಯಾ ಕೂಡ ಒಬ್ಬರು.

ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶ

ನವದೆಹಲಿ, ಫೆಬ್ರವರಿ 10: ಸರ್ಕಾರಿ ನೌಕಕರಿಗೆ ಬಡ್ತಿ ವಿಚಾರದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ನೌಕರರಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕ ಸರ್ಕಾರವು ಅನುಸರಿಸುತ್ತಿರುವ ಮೀಸಲಾತಿಯನ್ನು ಕೈಬಿಡಬೇಕೆಂದು ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಬಡ್ತಿ ವಿಚಾರವಾಗಿ ಎಸ್ಸಿ, ಎಸ್ಟಿ ನೌಕರರನ್ನು ವಿಶೇಷವಾಗಿ ಪರಿಗಣಿಸುವ (ಕಾನ್ಸೆಕ್ವೆನ್ಷಿಯಲ್ ಸೀನಿಯಾರಿಟಿ) ವಿಧಾನದಿಂದಾಗಿ, ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ನೌಕರಸ್ಥರು ಅನೇಕ ವರ್ಷಗಳಿಂದ ತಮಗೆ ಸಿಗಬೇಕಾದ ಬಡ್ತಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಾ ಕುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಬಡ್ತಿ ವಿಚಾರದಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಲಾಗುವ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಿ, ಇನ್ನು ಮೂರು ತಿಂಗಳಲ್ಲಿ ಜೇಷ್ಠತೆಯನ್ನು ಪರಿಗಣಿಸದೇ ಎಸ್ಸಿ, ಎಸ್ಟಿ ನೌಕರರಿಗೆ ನೀಡಲಾಗಿರುವ ಎಲ್ಲಾ ಬಡ್ತಿ ಆದೇಶಗಳನ್ನು ಹಿಂಪಡೆಯುವಂತೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಅದರ ಜತೆಯಲ್ಲೇ ಬಹುದಿನಗಳಿಂದ ಬಡ್ತಿಯ ನಿರೀಕ್ಷೆಯಲ್ಲಿರುವ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ನೌಕರರಿಗೆ ಸಿಗಬೇಕಿರುವ ಬಡ್ತಿಯನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಈಗಾಗಲೇ ಎಸ್ಸಿ, ಎಸ್ಟಿ ಕೋಟಾದಡಿಯಲ್ಲಿ ವೇಗವಾಗಿ ಬಡ್ತಿ ಹೊಂದಿ ನಿವೃತ್ತರಾದವರಿಗೆ ಹಾಗೂ ಪಿಂಚಣಿ ಮತ್ತಿತರ ಸೌಲಭ್ಯ ಪಡೆಯುತ್ತಿರುವವರಿಗೆ ಈ ಆದೇಶ ಅನ್ವಯವಾಗದು ಎಂದೂ ಸ

ದಿನಾಂಕ: 05.02.2017 ರಂದು ನಡೆದ, KPSC - ಪ್ರಥಮ ದರ್ಜೆ ಸಹಾಯಕರು (FDA) ಪರೀಕ್ಷೆಯ ಕೀ ಉತ್ತರಗಳು"

#ಸಾಮಾನ್ಯ_ಜ್ಞಾನ_ಕೀ_ಉತ್ತರಗಳು: (A) http://kpsc.kar.nic.in/GENERAL%20%20KNOWLEDGE%20-%20167A.pdf (B) http://kpsc.kar.nic.in/GENERAL%20%20KNOWLEDGE%20-%20167B.pdf (C) http://kpsc.kar.nic.in/GENERAL%20%20KNOWLEDGE%20-%20167C.pdf (D) http://kpsc.kar.nic.in/GENERAL%20%20KNOWLEDGE%20-%20167D.pdf ಜನರಲ್_ಕನ್ನಡ_ಕೀ_ಉತ್ತರಗಳು: (A) http://kpsc.kar.nic.in/GENERAL%20KANNADA%20-%20168A.pdf (B) http://kpsc.kar.nic.in/GENERAL%20KANNADA%20-%20168B.pdf (C) http://kpsc.kar.nic.in/GENERAL%20KANNADA%20-%20168C.pdf (D) http://kpsc.kar.nic.in/GENERAL%20KANNADA%20-%20168D.pdf ಜನರಲ್_ಇಂಗ್ಲೀಷ್_ಕೀ_ಉತ್ತರಗಳು: (A) http://kpsc.kar.nic.in/GENERAL%20%20ENGLISH%20-%20169A.pdf (B) http://kpsc.kar.nic.in/GENERAL%20%20ENGLISH%20-%20169B.pdf (C) http://kpsc.kar.nic.in/GENERAL%20%20ENGLISH%20-%20169C.pdf (D) http://kpsc.kar.nic.in/GENERAL%20%20ENGLISH%20-%20169D.pdf ಆಕ್ಷೇಪಣಾ_ಅರ್ಜಿ: http://kpsc.kar.nic.in/Key%20answer%20objection%20format%20of%20FDA%20-%2005-02-2017.pdf -

OFFICIAL PROVISIONAL KEY ANSWERS OF PDO EXAM(Held on 28/01/2017) PAPER -1, PAPER-2

Image

ಮುಂದಿನ ವರ್ಷದಿಂದ ಕನಿಷ್ಠ ಕಲಿಕಾ ಮಟ್ಟ ಕಡ್ಡಾಯ

6 Feb, 2017 *ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ (2017–18) ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳು ವರ್ಷದ ಕೊನೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ  ನಿಗದಿಪಡಿಸಿರುವ ಕನಿಷ್ಠ ಕಲಿಕಾ ಮಟ್ಟವನ್ನು ಹೊಂದುವುದು ಕಡ್ಡಾಯ.* *ಶಾಲೆಗಳು, ಪೋಷಕರು ಮತ್ತು ಸಂಬಂಧಿಸಿದವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು (1ರಿಂದ 8ನೇ ತರಗತಿವರೆಗೆ) ಹೊಂದಿರಬೇಕಾದ ಕನಿಷ್ಠ ಕಲಿಕಾ ಮಟ್ಟವನ್ನು ನಿಗದಿ ಪಡಿಸಿದ್ದೇವೆ. ಇದನ್ನು ಶಿಕ್ಷಣ ಹಕ್ಕು (ಆರ್‌ಟಿಇ) ನಿಯಮಗಳ ಭಾಗವನ್ನಾಗಿ ಮಾಡುತ್ತೇವೆ. 2017–18ರಿಂದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹೊಸ ನಿಯಮವನ್ನು ಪಾಲಿಸುವುದು ಕಡ್ಡಾಯ' ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ಭಾನುವಾರ ಹೇಳಿದರು.* *ಉತ್ತಮ ಜ್ಞಾನ ಸಂಪಾದನೆಗಾಗಿ  ಗುಣಮಟ್ಟದ ಶಿಕ್ಷಣ ಪಡೆಯಲು ಇದು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಮಕ್ಕಳಿಗೆ ಬೋಧಿಸುವ ಶಿಕ್ಷಕರಿಗೂ ಸಹಕಾರಿಯಾಗಲಿದೆ. ಇದು ಆರ್‌ಟಿಇ ನಿಯಮದ ಭಾಗವಾಗಿರಲಿರುವುದರಿಂದ ಶೈಕ್ಷಣಿಕ ವರ್ಷದ ಕೊನೆಗೆ ಪ್ರತಿ ವಿದ್ಯಾರ್ಥಿ/ನಿ ಕನಿಷ್ಠ ಕಲಿಕಾ ಮಟ್ಟವನ್ನು ಸಾಧಿಸುವಂತೆ ಶಾಲೆಗಳು ಮಾಡಬೇಕಾಗುತ್ತದೆ' ಎಂದು ಸಚಿವಾಲಯದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.* *ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ

ಆದಾಯ ತೆರಿಗೆ ಇಳಿಕೆ, ಯಾರಿಗೆ ಎಷ್ಟು? ಇಲ್ಲಿದೆ ವಿವರ

 Wednesday, 01.02.2017, 4:44 PM      ವಿಜಯವಾಣಿ ಸುದ್ದಿಜಾಲ      No Comments Facebook Twitter Google+ Share ನವದೆಹಲಿ:  ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಇಳಿಸುವ ಮೂಲಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಬುಧವಾರ ಮಂಡಿಸಿದ ತಮ್ಮ 2017-18ರ ಸಾಲಿನ ಮುಂಗಡಪತ್ರದಲ್ಲಿ ವೇತನದಾರರು ಮತ್ತು ಹಿರಿಯ ನಾಗರಿಕರು ಮತ್ತು ಮಧ್ಯಮ ವರ್ಗದ ಆದಾಯ ಹೊಂದಿರುವವರಿಗೆ ನಿರಾಳತೆಯನ್ನು ಉಂಟು ಮಾಡಿದರು. ಮುಂಗಡ ಪತ್ರದಲ್ಲಿ ತಿಳಿಸಿರುವ ಪ್ರಕಾರ ಆದಾಯ ತೆರಿಗೆ ಇಳಿಕೆಯ ವಿವರ ಇಲ್ಲಿದೆ: 1). ರೂ.2,50,000 ವರೆಗಿನ ಆದಾಯ ಉಳ್ಳವರಿಗೆ ಆದಾಯ ತೆರಿಗೆ ಇಲ್ಲ. ರೂ.2,50,001ರಿಂದ ರೂ.5,00,000ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.5 (ಉಳಿತಾಯ ರೂ.7,725) 2). ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ವರ್ಷದ ಒಳಗೆ) ರೂ.3,00,000 ವರೆಗಿನ ಆದಾಯ ಉಳ್ಳವರಿಗೆ ತೆರಿಗೆ ಇಲ್ಲ. ರೂ 3,00,001ರಿಂದ ರೂ.5,00.000ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.5. (ಉಳಿತಾಯ ರೂ.2,575) 3). ಹಿರಿಯ ನಾಗರಿಕರಿಗೆ (80ವರ್ಷ ಮತ್ತು ಮೇಲ್ಪಟ್ಟವರು): ರೂ.5,00.000 ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಇಲ್ಲ. ರೂ. 5,00,001 ರಿಂದ ರೂ. 10,00,000 ವರಿಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.20 (ಉಳಿತಾಯ 7,775) ಮೇಲ್ತೆರಿಗೆ (ಸರ್ಚಾರ್ಜ್): ರೂ. 50 ಲಕ್ಷಕ್ಕಿಂತ ಹೆಚ್ಚು ಮತ್ತು ರೂ. 1 ಕೋಟಿಗಿಂತ ಕಡಿಮೆ ಆ

PDO EXAM(Held on 28/01/2017) KEY ANSWERS of PAPER -1, PAPER-2

Image
Released by leading GK magazine

Final KEY ANSWERS OF KSET EXAMINATION HELD ON 11thDECEMBER 2016

ಕ್ಲಿಕ್ https://kset.uni-mysore.ac.in/node/497270

ಭಾರತದ ಪ್ರಥಮ ಕೀಟ ಸಂಗ್ರಹಾಲಯ ಶೀಘ್ರ ಸಾರ್ವಜನಿಕ ವೀಕ್ಷಣೆಗೆ

Image
 January 28, 2017   ಚೆನ್ನೈ.ಜ  28 :   ಕೀಟಗಳದ್ದೇ ಒಂದು ಪ್ರಪಂಚ. ಅವುಗಳದ್ದು ಒಂದು ವಿಸ್ಮಯ ಲೋಕ. ಈ ಕೀಟ ಜಗತ್ತನ್ನು ಸಾರ್ವಜನಿಕರಿಗೆ ತೆರೆದಿಡುವ ಪ್ರಥಮ ಪ್ರಯತ್ನವೊಂದು ಭಾರತದಲ್ಲಿ ನಡೆದಿದೆ. ಹೌದು ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ ದೇಶದ ಮೊಟ್ಟಮೊದಲ ಕೀಟ ಸಂಗ್ರಹಾಲಯ ಶೀಘ್ರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ.  ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಿಂದ ನಿರ್ಮಾಣಗೊಳ್ಳುತ್ತಿರುವ ಈ ಮ್ಯೂಸಿಯಂ ವಿದ್ಯಾರ್ಥಿಗಳು, ಕೀಟ ಶಾಸ್ತ್ರಜ್ಞರು, ಕೀಟಗಳ ಅಧ್ಯಯನವನ್ನು ಹವಾಸ್ಯವನ್ನಾಗಿಕೊಂಡ ಮಂದಿ ಹಾಗೂ ಕೃಷಿಕರಿಗೆ ತುಂಬಾ ಪ್ರಯೋಜನವಾಗಲಿದೆ. ಪರಿಸರ ಮತ್ತು ಜೀವ ವೈವಿಧ್ಯತೆಯ ವ್ಯವಸ್ಥೆಯಿಂದ ಸಂಗ್ರಹಿಸಲಾದ 1,00,000ಕ್ಕೂ ಅಕ ಕೀಟಗಳ ಮಾದರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಈ ಮ್ಯೂಸಿಯಂನಲ್ಲಿ ಜೀರುಂಡೆಗಳು ಮತ್ತು ದೊಡ್ಡ ಗಾತ್ರದ ಗುಂಪಿಗೆ ಸೇರಿದ 29 ಕೀಟಗಳ ನಮೂನೆಗಳು ಇವೆ. ಕೀಟಗಳ ಮಾದರಿಗಳನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪ್ರಾದೇಶಿಕ ಕೀಟಗಳು, ನೀರಿನಲ್ಲಿ ವಾಸಿಸುವ ಕೀಟಗಳು ಹಾಗೂ ಗಿಡಗಳನ್ನು ಆಶ್ರಯಸುವ ಕೀಟಗಳು. ಈ ಮೂರು ವಿಭಾಗಗಳ ಕ್ರಿಮಿ-ಕೀಟಗಳ ಜಗತ್ತನ್ನು ಇಲ್ಲಿ ನೋಡಬಹುದು.  ಮ್ಯೂಸಿಯಂ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಕೀಟ ಸಂರಕ್ಷಣೆ ಮತ್ತು ಅಧ್ಯಯನಗಳ ಕೇಂದ್ರದ ಉಸ್ತುವಾರಿ ನಿರ್ದೇಶಕ ಡಾ.ಕೆ.ರಾಮರಾಜು ತಿಳಿಸಿದ್ದಾರೆ.

ಈ ಬಾರಿಯ ಪದ್ಮಶ್ರೀ ಪುರಸ್ಕೃತರಲ್ಲಿ (2017) ನೀವು ತಿಳಿದಿರಲೇ ಬೇಕಾದ 8 ವಿಶಿಷ್ಟ ಸಾಧಕರು:

ವಾರ್ತಾ ಭಾರತಿ : 27 Jan, 2017 ಅತ್ಯುತ್ತಮ ಬೆಳವಣಿಗೆಯೊಂದರಲ್ಲಿ ಈ ವರ್ಷದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ದೇಶದ ಹೆಚ್ಚು ಜನಪ್ರಿಯರಲ್ಲದ ಹೀರೋಗಳಿಗೆ ನೀಡಲಾಗಿದೆ. ಹಲವು ರೀತಿಯಲ್ಲಿ ಈ ಪ್ರಶಸ್ತಿವಿಜೇತರು ತಮ್ಮ ಸುತ್ತಮುತ್ತಲಿನ ಜನರ ಬದುಕಿಗೆ ಆಧಾರವಾದವರು. ಅಗ್ನಿಯ ವಿರುದ್ಧ ಹೊರಾಡುವ ಜೊತೆಗೆ, ಬರಪೀಡಿತ ಪ್ರದೇಶದಲ್ಲಿ ಬೆಳೆ ತೆಗೆದಿರುವುದು ಮತ್ತು ಕಲೆಯ ಉಳಿವಿಗೆ ನೆರವಾದವರೂ ಈ ಪಟ್ಟಿಯಲ್ಲಿದ್ದಾರೆ. ಹೆಚ್ಚು ಪ್ರಚಲಿತವಲ್ಲದ ಹೀರೋಗಳ ಪೈಕಿ ಇಂದೋರ್ ನ 91 ವರ್ಷದ ಭಕ್ತಿ ಯಾದವ್ ಅವರೂ ಪದ್ಮಶ್ರೀ ಪಡೆದಿದ್ದಾರೆ. ಡಾಕ್ಟರ್ ದಾದಿ ಎಂದೇ ಪ್ರಸಿದ್ಧಿಯಾಗಿರುವವರು ಭಕ್ತಿ ಯಾದವ್. ಭಾರತಕ್ಕೆ ಅಂಧರ ಕ್ರಿಕೆಟ್ ನಲ್ಲಿ ವಿಶ್ವಕಪ್ ತಂದುಕೊಟ್ಟ ನಾಯಕ ಶೇಖರ್ ನಾಯ್ಕ್ ರಿಗೂ ಪದ್ಮಶ್ರೀ ಒಲಿದಿದೆ. ಇನ್ನೂ ಕೆಲವು ಹೆಚ್ಚು ಪ್ರಚಾರ ಪಡೆಯದ ಹೀರೋಗಳೂ ಈ ಪಟ್ಟಿಯಲ್ಲಿದ್ದಾರೆ. ಅವರ ವಿವರ ಹೀಗಿದೆ. ಮೀನಾಕ್ಷಿ ಅಮ್ಮ (76), ಕೇರಳ ಕತ್ತಿ ಹಿಡಿದ ಅಜ್ಜಿ ಎಂದೇ ಮೀನಾಕ್ಷಿ ಅವರು ಪರಿಚಿತ. ಅವರು ಏಳನೇ ವಯಸ್ಸಿನಲ್ಲಿ ಮಾರ್ಷಲ್ ಆರ್ಟ್ಸ್ ಕಲೆಯನ್ನು ಕಲಿತವರು. ಕಲಾರಿಪಯಟ್ಟು ಎನ್ನುವ ಮಾರ್ಷಲ್ ಆರ್ಟ್ಸ್ ಕಲೆ ಕಲಿತಿರುವ ದೇಶದ ಅತೀ ಹಿರಿಯ ಮಹಿಳೆ ಇವರು. 68 ವರ್ಷಗಳಿಂದ ಅವರು ಕಲಾರಿಪಯಟ್ಟು ಅಭ್ಯಾಸ ಮತ್ತು ಕಲಿಸುವುದರಲ್ಲಿ ತೊಡಗಿದ್ದಾರೆ. ಕೇರಳ ಈ ಸಾಹಸ ಕಲೆ ಚೀನಾದ ಮಾರ್ಷಲ್ ಆರ್ಟ್ಸ್ ಹುಟ್ಟಿನ ಮೂಲ ಎಂದು ಹೇಳಲಾಗುತ

2016 NTSE provisional cut off marks:*

Image
http://dsert.kar.nic.in/applications/16-17/Ntse_2016_cutoff.pdf

ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮ 20 ರ ಆನ್ವಯ 1ನೇ ತರಗತಿಗೆ ಮಗು ದಾಖಲಾತಿ ಹೊಂದಲು ಇರುವ 6 ವರ್ಷಗಳ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ನೀಡಲಾಗಿದೆ. ಆದ್ದರಿಂದ LKG ಗೆ ದಾಖಲಾಗಲು 3 ವರ್ಷ 10 ತಿಂಗಳು, & 1 ನೇ ತರಗತಿಗೆ ದಾಖಲಾಗಲು 5 ವರ್ಷ 10 ತಿಂಗಳು ತುಂಬಿರಬೇಕು(ಸರ್ಕಾರಿ,ಅನುದಾನಿತ,ಖಾಸಗಿ ಶಾಲೆಗಳಿಗೆ ಅನ್ವಯ)

ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮ 20 ರ ಆನ್ವಯ 1ನೇ ತರಗತಿಗೆ ಮಗು ದಾಖಲಾತಿ ಹೊಂದಲು  ಇರುವ 6 ವರ್ಷಗಳ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ನೀಡಲಾಗಿದೆ. ಆದ್ದರಿಂದ LKG ಗೆ 3 ವರ್ಷ 10 ತಿಂಗಳು, 1 ನೇ ತರಗತಿಗೆ ದಾಖಲಾಗಲು 5 ವರ್ಷ 10 ತಿಂಗಳು ತುಂಬಿರಬೇಕು. http://schooleducation.kar.nic.in/Prypdfs/GenCirculars/FirstStdAdmission230116.pdf

KARTET-2016 PROVISIONAL KEY ANSWER will ANNOUNCE soon. PLEASE VISIT WEBSITE

http://kartet16.caconline.in/

ಕ.ವಿ.ನಿ.ನಿ. ಸಹಾಯಕ(ಆಡಳಿತ/ಲೆಕ್ಕ)ಹುದ್ದೆಗಳ ನೇಮಕಾತಿ:-ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ 16/1/17

Image

ಕಲಿಕೆಗೇನು ಬೇಕು:ಹೈಟೆಕ್ ಶಾಲೆಗಳೋ,ಏಕಾಗ್ರತೆಯೋ?--

Image
ಡಾ ll ಎ ಪಿ ಅವಲಮೂರ್ತಿ

ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗಣಿತ ಸಪ್ತಾಹವನ್ನು ಆಚರಿಸುವ ಬಗ್ಗೆ

http://schooleducation.kar.nic.in/Secpdfs/circulars/MathsWeek171216.pdf

ಯಕೃತ್ ಆರೋಗ್ಯ ಸುಧಾರಣೆಗೆ ಒಣ ದ್ರಾಕ್ಷಿ ನೆನೆಸಿದ ನೀರು ಸೇವಿಸಿ.

Image
ಪ್ರಕೃತಿ ದತ್ತವಾಗಿ ದೊರೆಯುವ ಯಾವುದೇ ಹಣ್ಣು- ಹಂಪಲುಗಳನ್ನು ತಿಂದರೂ ನಮ್ಮ ಆರೋಗ್ಯವನ್ನು ಸುಧಾರಿಸುತ್ತವೆ ಎಂಬ ಮಾತನ್ನು ವೈದ್ಯಲೋಕದಲ್ಲಿ ಕೇಳಿ ಬರುತ್ತದೆ. ಇದನ್ನು ನಾವು ಕೇಳಿದ್ದೇವೆ, ನೀವೂ ಕೇಳಿರುತ್ತೀರಿ. ಪ್ರಕೃತಿ ನಮಗೆ ದಯಪಾಲಿಸುವ ಹಣ್ಣು- ಹಂಪಲುಗಳನ್ನು ಯಥವತ್ತಾಗಿ ಸೇವಿಸಲೂ ಬಹುದು ಅಥವಾ ಪೇಯಗಳನ್ನು ತಯಾರಿಸಿಕೊಂಡೂ ಸೇವಿಸಬಹುದಾಗಿದೆ. ಎಚ್ಚರ ವಹಿಸಬೇಕಾದ್ದೇನೆಂದರೆ, ಯಾವುದೇ ಹಣ್ಣು- ಹಂಪಲುಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿದೆಯೇ ಇಲ್ಲವೇ ಎಂಬುದನ್ನು ಗಮನಿಸುವುದು ಒಳ್ಳೆಯದು. ಹಣ್ಣಾಗುವ ಅವಧಿಗೆ ಮೊದಲೇ ಗಿಡಮರಗಳಿಂದ ಕಿತ್ತು ಅವುಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿ, ಬಲಾತ್ಕಾರದಿಂದ ಹಣ್ಣಾಗುವಂತೆ ಮಾಡಿದ್ದರೆ, ಅಂತಹ ಹಣ್ಣುಗಳು ಆರೋಗ್ಯಕ್ಕೆ ಹಾನಿಕರ. ಅವು ಹಸಿಯಾಗಿದ್ದರೂ ಸರಿಯೇ, ಒಣಗಿದ್ದರೂ ಸರಿಯೇ, ರಸಾಯನಿಕಗಳ ಲೇಪನ ಅಥವಾ ಸಿಂಪಡಿಕೆ ಇರಬಾರದು. ಉದಾಹರಣೆಗೆ ಒಣದ್ರಾಕ್ಷಿಯನ್ನೇ ತೆಗೆದುಕೊಳ್ಳಿ. ಒಮ್ಮೊಮ್ಮೆ ತುಂಬಾ ಹೊಳಪು ಇರುವ ದ್ರಾಕ್ಷಿ ಸಿಗಲಿದೆ. ಆದರೆ ಹೊಳಪು ಬರಲಿಕ್ಕೆ ಕೃತಕ ರಸಾಯನಿಕಗಳನ್ನು ಬಳಸಿರುವ ಸಾಧ್ಯತೆಗಳಿರುತ್ತವೆ. ಇದೀಗ ಒಣದ್ರಾಕ್ಷಿಯಿಂದಾಗುವ ಪ್ರಯೋಜನ ಕುರಿತು ಹೇಳಬೇಕೆನಿಸಿದೆ. ಒಣದ್ರಾಕ್ಷಿಯನ್ನು ಸಿಹಿ ತಿಂಡಿಯ ರುಚಿ ಹಾಗೂ ಸೊಗಡನ್ನು ಹೆಚ್ಚಿಸುವ ಪದಾರ್ಥವೆಂದೇ ಬಹುತೇಕ ಮಂದಿ ಪರಿಗಣಿಸಿದ್ದಾರೆ. ಆದರೆ, ಅದು ನಮ್ಮ ಆರೋಗ್ಯ ಸುಧಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆಂಬ

ಮಾಣಿಕ್ ಸರ್ಕಾರ್​ಗೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ-2017

Image
ಕೂಡಲಸಂಗಮ: ವಚನ ಚಳವಳಿಯ ರೂವಾರಿ, ಕಾಯಕಯೋಗಿ ಅಣ್ಣ ಬಸವಣ್ಣನ ಲಿಂಗೈಕ್ಯ ಸ್ಥಳ ಕೂಡಲ ಸಂಗಮದಲ್ಲಿ ದೇಶದ ಬಡ ಮುಖ್ಯಮಂತ್ರಿಯೆಂದೇ ಹೆಸರಾಗಿರುವ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರಿಗೆ ಭಾನುವಾರ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಂದು ಲಕ್ಷ ರೂ. ನಗದು, ಸ್ಮರಣ ಫಲಕ, ಬಸವ ಭಾವಚಿತ್ರ ಒಳಗೊಂಡ ಪ್ರಶಸ್ತಿಯನ್ನು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವೆ ಉಮಾಶ್ರೀ ವಿತರಿಸಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಮಾಣಿಕ್ ಸರ್ಕಾರ್ ಬಸವಣ್ಣನ ಐಕ್ಯ ಮಂಟಪಕ್ಕೆ ಹೂವು ಸಮರ್ಪಿಸಿದರು. ರೈತ ಗೀತೆಗೆ ಹಸಿರು ಟವೆಲ್ ಬೀಸುವ ಮೂಲಕ ರೈತರಲ್ಲಿ ಮಿಂಚು ಹರಿಸಿದರು. ಸಾಹಿತಿ ರಂಜಾನ್ ದರ್ಗಾ ಬರೆದಿರುವ ಶರಣರ ಸಮಗ್ರ ಕ್ರಾಂತಿ ಪುಸ್ತಕ ಲೋಕಾರ್ಪಣೆಗೊಳಿಸಿದರು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾಣಿಕ್ ಸರ್ಕಾರ್ ಮಾತನಾಡಿ, ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರೆ ದೇವರು ಸಿಗುವುದಿಲ್ಲ. ದೀನ, ದರಿದ್ರರ, ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸಿ ಕಿಂಚಿತ್ ಪರಿಹಾರಕ್ಕೆ ಪ್ರಯತ್ನ ಮಾಡುವುದರಲ್ಲಿ ದೇವರನ್ನು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.