Posts

ಸಿಲಿಂಡರ್ ಗ್ಯಾಸ್ ಸೋರಿಕೆಯಾದರೆ ನಾಳೆಯಿಂದ 1906 ಸಂಖ್ಯೆಗೆ ಕರೆ ಮಾಡಿ

Image
ನವದೆಹಲಿ, ಡಿ.31-ಇನ್ನು ಮುಂದೆ ನಿಮ್ಮ ಮನೆಯ ಅಡಿಗೆ ಅನಿಲ (ಸಿಲಿಂಡರ್ ಗ್ಯಾಸ್) ಸೋರಿಕೆಯಾಗುತ್ತಿದ್ದರೆ ಗಾಬರಿಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ 1906 ಸಂಖ್ಯೆಗೆ ಕರೆ ಮಾಡಿದರೆ ಸಾಕು ತಕ್ಷಣವೇ ನಿಮ್ಮ ರಕ್ಷಣೆಗೆ ಧಾವಿಸುತ್ತಾರೆ. ಆಂಬುಲೆನ್ಸ್ ಹಾಗೂ ಪೊಲೀಸರ ಸಹಾಯ ಪಡೆಯಲು 100 ಸಂಖ್ಯೆಗೆ ಕರೆ ಮಾಡಿದರೆ ಹೇಗೆ ಸಹಾಯಕ್ಕೆ ಬರುತ್ತಾರೋ ಅದೇ ರೀತಿ ಈ ಸಂಖ್ಯೆಗೆ ದೂರವಾಣಿ ಕರೆ ಮಾಡಿದರೆ ಸಾಕು. ಇದೀಗ ಕೇಂದ್ರ ಸರ್ಕಾರ ಆಂಬುಲೆನ್ಸ್ ಮತ್ತು ಪೊಲೀಸ್ ಸಹಾಯಕವಾಣಿ ಮಾದರಿಯಲ್ಲಿ ಎಲ್ಪಿಜಿ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಸಹಾಯವಾಣಿಯೊಂದನ್ನು ಆರಂಭಿಸಿದೆ. 1906 ಎಲ್ಪಿಜಿಯ ನೂತನ ಸಹಾಯವಾಣಿಯಾಗಿದೆ. ನಿಮ್ಮ ಮನೆಯಲ್ಲಿ ತಾಂತ್ರಿಕ ಇಲ್ಲವೇ ಬೇರ್ಯಾಜವುದೋ ಕಾರಣಗಳಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದರೆ ಈ ಸಹಾಯವಾಣಿಗೆ ಕರೆ ಮಾಡಬಹುದು. ಇತ್ತೀಚೆಗೆ ದೇಶದಲ್ಲಿ ಎಲ್ಪಿಜಿ ಸೋರಿಕೆಯಿಂದ ಅನೇಕರು ಪ್ರಾಣ ಕಳೆದುಕೊಂಡು ಶಾಶ್ವತ ದೃಷ್ಟಿಹೀನ ಹಾಗೂ ಅಂಗವೈಕಲ್ಯಕ್ಕೂ ತುತ್ತಾಗಿದ್ದಾರೆ. ಸೋರಿಕೆಯನ್ನು ತಡೆಗಟ್ಟುವುದನ್ನು ತಿಳಿಯದ ಕೆಲವರು ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಇದನ್ನು ಅರಿತ ಕೇಂದ್ರ ಸರ್ಕಾರ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಸಹಾಯವಾಣಿಯನ್ನು ಆರಂಭಿಸಲು ಮುಂದಾಗಿದ್ದಾರೆ. ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಇತ್ತೀ

ಭಾರತದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗ ಸೇವೆಗೆ ಸಿದ್ಧ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದ ಭಾರತೀಯ ಎಂಜಿನಿಯರ್ ಗಳ ಸಾಧನೆ,:*

Image
ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗ (ಸಂಗ್ರಹ ಚಿತ್ರ) ಶ್ರೀನಗರ: ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಕೊರೆಯಲಾಗಿರುವ ಸುಮಾರು 9 ಕಿ.ಮೀ ದೂರದ ರಸ್ತೆ ಸುರಂಗ ಮಾರ್ಗವೊಂದು ಭಾರತೀಯ ಎಂಜಿನಿಯರ್ ಗಳನ್ನು ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸುವಂತೆ ಮಾಡಿದೆ. ಶ್ರೀನಗರದಿಂದ ಸುಮಾರು 170 ಕಿ.ಮೀ ದೂರದಲ್ಲಿ ಈ ಸುರಂಗ ಮಾರ್ಗವನ್ನು ಕೊರೆಯಲಾಗಿದ್ದು, ಸುಮಾರು 9 ಕಿ.ಮೀ ದೂರದ ರಸ್ತೆಗೆ ಈ ವರೆಗೂ ಸುಮಾರು 2, 500 ಕೋಟಿ ರು. ವ್ಯಯಿಸಲಾಗಿದೆ. ದೇಶದ ಅತಿದೊಡ್ಡ ರಸ್ತೆ ಸುರಂಗ ಮಾರ್ಗವೆಂದೇ ಖ್ಯಾತಿಗಳಿಸಿರುವ ಈ ರಸ್ತೆ ಮುಂಬರುವ ಜುಲೈ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಆ ಮೂಲಕ ಜಮ್ಮು ಮತ್ತು ಶ್ರೀನಗರ ನಡುವಿನ ರಸ್ತೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. ಇದಕ್ಕೂ ಮೊದಲು ಜಮ್ಮು ಮತ್ತು ಶ್ರೀನಗರ ನಡುವೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಇದೆಯಾದರೂ ಇಲ್ಲಿ ಸುಮಾರು 30 ಕಿ.ಮೀ ಸುತ್ತಿಕೊಂಡು ಹೋಗುವ ದಾರಿಯಾಗಿತ್ತು. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿತ್ತು. ಇದೀಗ ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕ ಸುಮಾರು 30 ಕಿ.ಮೀ ದೂರದ ಪ್ರಯಾಣ ಕೇವಲ 9 ಕಿ.ಮೀ ಇಳಿಯಲಿದೆ. ಪ್ರವಾಸೋಧ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ

ಕೋರ್ಟ್ ಆವರಣದ ಬಳಿ ಟೀ ಮಾರುವವನ ಮಗಳು ನ್ಯಾಯಾಧೀಶೆಯಾದಳು!

Image
ಈಕೆಯ ಹೆಸರು ಶ್ರುತಿ. ಪಂಜಾಬ್ನ ನಾಕೋದರ್ ನಿವಾಸಿಯಾಗಿರುವ ಈಕೆ ಪಂಜಾಬ್ ಸಿವಿಲ್ ಸರ್ವೀಸ್ನ ನ್ಯಾಯಾಧೀಶ ಹುದ್ದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನ್ಯಾಯಾಧೀಶೆಯಾಗಿದ್ದಾಳೆ. ಈಕೆಯ ಅಪ್ಪ ಸುರೇಂದರ್ ಕುಮಾರ್ ಜಲಂಧರ್ ಕೋರ್ಟ್ ಆವರಣ ಬಳಿ ಟೀ ಮಾರುತ್ತಿದ್ದಾರೆ. ಟೀ ಮಾರುವವನ ಮಗಳು ಶ್ರುತಿ ಉನ್ನತ ವಿದ್ಯಾಭ್ಯಾಸ ಪಡೆದು ನ್ಯಾಯಾಧೀಶೆಯಾಗುವ ಮೂಲಕ ನಾಡಿನ ಹೆಮ್ಮೆಯ ಪುತ್ರಿ ಎನಿಸಿಕೊಂಡಿದ್ದಾಳೆ. ಸ್ಟೇಟ್ ಪಬ್ಲಿಕ್ ಸ್ಕೂಲ್ನಲ್ಲಿ ಕಲಿತ ಶ್ರುತಿ ಜಿಎನ್ಡಿಯು ಜಲಂಧರ್ ನಲ್ಲಿ ಕಾನೂನು ವ್ಯಾಸಂಗ ಮಾಡಿ ಪಂಜಾಬ್ ವಿವಿಯಿಂದ ಎಲ್ಎಲ್ಎಂ ಪದವಿ ಪಡೆದಿದ್ದಳು. ಮನೆಯಲ್ಲಿ ಬಡತನವಿದ್ದರೂ ಶ್ರುತಿಯ ಕಲಿಕೆಯನ್ನು ಇದ್ಯಾವುದೂ ಬಾಧಿಸಲೇ ಇಲ್ಲ. ಜ್ಯುಡಿಷ್ಯಲ್ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದ ನಂತರ ಮೊದಲ ಪ್ರಯತ್ನದಲ್ಲೇ ಪಂಜಾಬ್ ಸಿವಿಲ್ ಸರ್ವೀಸ್ (ಜ್ಯುಡಿಷ್ಯಲ್) ಪರೀಕ್ಷೆಯನ್ನು ಪಾಸು ಮಾಡಿದ್ದಾಳೆ. ನನಗೆ ಸಿಕ್ಕಿದ ಅತೀ ದೊಡ್ಡ ಉಡುಗೊರೆ ಇದು. ಆಕೆ ತನ್ನ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾಳೆ ಎಂದು ನನಗೆ ಗೊತ್ತಿತ್ತು. ಆದರೆ ಆಕೆ ನ್ಯಾಯಾಧೀಶೆಯಾಗುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ ಅಂತಾರೆ ಶ್ರುತಿಯ ಅಪ್ಪ ಸುರೇಂದರ್ ಕುಮಾರ್. ಶ್ರುತಿಯ ಸಾಧನೆಗೆ ಸಲಾಂ...

ಅಮಿತಾಭ್ ಕಾಂತ:* ನೀತಿ ಆಯೋಗದ ನೂತನ ಸಿಇಒ

Image
ನೀತಿ ಆಯೋಗಕ್ಕೆ ಹೊಸ ಸಿಇಒ:* amitabh-kant ಹೊಸದಿಲ್ಲಿ: ಉದ್ಯಮ ನೀತಿ ಮತ್ತು ಉತ್ತೇಜನ ವಿಭಾಗದ ಕಾರ್ಯದರ್ಶಿ ಅಮಿತಾಭ್ ಕಾಂತ್ ಅವರಿಗೆ ನೀತಿ ಆಯೋಗದ ಸಿಇಒ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಪ್ರಧಾನಿ ನೇತೃತ್ವದ ಸಂಪುಟದ ನೇಮಕ ಸಮಿತಿಯು ಅಮಿತಾಭ್ ಕಾಂತ್ರನ್ನು ನೂತನ ಸಿಇಒ ಆಗಿ ನೇಮಕ ಮಾಡಿದೆ. ನೀತಿ ಆಯೋಗದ ಹಾಲಿ ಸಿಇಒ ಸಿಂಧುಶ್ರೀ ಖುಲ್ಲರ್ ಅವರ ಒಂದು ವರ್ಷದ ಅಧಿಕಾರಾವಧಿ ಮಂಗಳವಾರವಷ್ಟೇ ಅಂತ್ಯವಾಗಿದೆ. ಉದ್ಯಮ ನೀತಿ ನಿರ್ಧಾರ, ಅಭಿವೃದ್ಧಿ, ಉದ್ಯಮದ ಬೆಳವಣಿಗೆ ಮೇಲೆ ನಿಗಾ ಇಡುವುದು, ಎಫ್ಡಿಐ ನೀತಿಯ ಸಮರ್ಪಕ ಜಾರಿ ಸೇರಿದಂತೆ ನಾನಾ ಜವಾಬ್ದಾರಿಯನ್ನು ಕಾಂತ್ ನಿಭಾಯಿಸಿದ್ದು, ಹೊಸ ಹೊಣೆಗಾರಿಕೆ ಅವರ ಮೇಲಿದೆ.

Job info: Peon poats in Pubjab Bank, Stenographer and Clerk posts in Employees State Insurance Corporation

Image

👆🏼 ಮಾನ್ಯ ಸಾರ್ವಜನಿಕರು ಹಾಗೂ ಪೋಷಕರ ಗಮನಕ್ಕೆ :*ಶಾಲೆಗೆ ದಾಖಲಾಗದ/ದಾಖಲಾಗಿ ಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗೆಸೇರಿಸಲು ಸಹಾಯ ಮಾಡಿ( ಬೆಂಗಳೂರು ಉತ್ತರ ಜಿಲ್ಲಾ)

Image

PROVISIONAL SELECTION LIST OF PSI/RSI (H-K REGION) -2015 : PUBLISHED

Image
 ಹೈದ್ರಾಬಾದ್ - ಕರ್ನಾಟಕ ಪ್ರದೇಶಗಳಲ್ಲಿ ಖಾಲಿ ಇರುವ 46 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಹಾಗೂ 13 ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್ (RSI- CAR/DAR) ಹುದ್ದೆಗಳಿಗೆ ದಿನಾಂಕ 29-6-2015 ರಂದು ಅರ್ಜಿಯನ್ನು ಆಹ್ವಾನಿಸಿ, ದೈಹಿಕ ಪರೀಕ್ಷೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗಿತ್ತು. ದಿನಾಂಕ  14-11-2015 , 15-11-2015 ರಂದು ಲಿಖಿತ ಪರೀಕ್ಷೆ  ಮತ್ತು ಕೊನೆಯದಾಗಿ 21-12-2015 ರಿಂದ 23-12-2015 ರ ವರೆಗೆ ನಡೆಸಿದ್ದ 10  ಅಂಕಗಳ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದವರ ತಾತ್ಕಾಲಿಕ ಆಯ್ಕೆಪಟ್ಟಿಯನ್ನು 1:1 ರ ಅನುಪಾತದಲ್ಲಿ ಪೊಲೀಸ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರೆ ಪತ್ರವನ್ನು ಅವರವರ ವಿಳಾಸಕ್ಕೆ ಕಳುಹಿಸಿ, ಮೂಲ ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ& Ksp.gov.in

ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ : ಎಚ್.ಆಂಜನೇಯ

ಬೆಂಗಳೂರು, ಡಿ.29-ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ಮುಂದಿನ ಶೈಕ್ಷಣಿಕ ವರ್ಷದಿಂದ ವಸತಿ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಹೋಬಳಿಗೆ ತಲಾ ಒಂದು ವಸತಿ ಶಾಲೆ ಪ್ರಾರಂಭಿಸಲಾಗುವುದು. ಪ್ರತಿ ಶಾಲೆಗೆ 10 ಎಕರೆ ಪ್ರದೇಶ, 15 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿ, ಸಿಬ್ಬಂದಿ ವಸತಿ ಗೃಹ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ವಸತಿ ಶಾಲೆಗಳ ಶಿಕ್ಷಣವನ್ನು ದ್ವಿತೀಯ ಪಿಯುಸಿವರೆಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ 100 ವಸತಿ ಶಾಲೆಗಳ ಪ್ರಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ಆಂಜನೇಯ ತಿಳಿಸಿದರು. ವಾಸ್ತವ್ಯ: ಈ ಬಾರಿಯ ಹೊಸ ವರ್ಷವನ್ನು ಅರಣ್ಯ ವಾಸಿಗಳ ಹಾಡಿಯಲ್ಲಿ ವಾಸ್ತವ್ಯ ಹೂಡುವ ಮೂಲಕ ಆಚರಿಸಲು ಆಶಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿನ ವಾಡಾದ ಸಿದ್ದಿ ಸಮುದಾಯದ ಹಾಡಿಯಲ್ಲಿ ಆಚರಿಸಲಾಗುವುದು. ಡಿ.31ರಂದು ವಾಡಾದ ಹಾಡಿಯಲ್ಲಿ ವಾಸ್ತವ್ಯ ಹೂಡಿ ಜಿಲ್ಲೆಯಲ್ಲಿರುವ ಎಲ್ಲ ಬುಡಕಟ್ಟು ಜನಾಂಗ ಮತ್ತು ಸಿದ್ದಿ ಜನಾಂಗದವರ ಸಭೆ ನಡೆಸಿ ಸಮಸ್ಯೆ ಆಲಿಸಿ ಹಲವು ಸೌಲಭ್ಯ ವಿತರಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ ಪ್ರಶಸ್ತಿ ಪ್ರಕಟ

Image

10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸಿಲಿಂಡರ್ ಇಲ್ಲ:*

10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸಿಲಿಂಡರ್ ಇಲ್ಲ ನವದೆಹಲಿ.ಡಿ.29 : ಒಂಬತ್ತು ಸಿಲಿಂಡರ್ಗಳಿಗೆ ಸಬ್ಸಿಡಿ ನೀಡಲು ಮುಂದಾಗಿದ್ದ ಕೇಂದ್ರ ಸರಕಾರ ಜನರು ವಿರೋಧಿಸಿದ್ದರಿಂದ ಆ ಸಂಖ್ಯೆಯನ್ನು 12ಕ್ಕೆ ಏರಿಸಿತ್ತು. ಆದರೆ, ಇದೀಗ ಸಬ್ಸಿಡಿ ಬಗ್ಗೆ ಸರಕಾರ ಮತ್ತಷ್ಟು ಬಿಗಿ ಧೋರಣೆ ತಾಳುತ್ತಿದ್ದು, 10 ಲಕ್ಷ ರೂ.ಗಿಂತ ಹೆಚ್ಚಿಗೆ ಆದಾಯ ಇರುವವರಿಗೆ ಸಬ್ಸಿಡಿ ಸೌಲಭ್ಯವನ್ನು ಹಿಂಪಡೆಯಲು ಮುಂದಾಗಿದೆ. ಹೊಸ ವರ್ಷದಿಂದ ಈ ನೀತಿ ಅನ್ವಯವಾಗುತ್ತಿದ್ದು, ಈ ಮೊದಲು ಖುದ್ದು ಸಬ್ಸಿಡಿ ತ್ಯಜಿಸಲು ಸರಕಾರ ಆಗ್ರಹಿಸಿತ್ತು. ಆದರೆ, ಉತ್ತಮ ಆದಾಯ ಹೊಂದಿರುವ ಎಲ್ಪಿಜಿ ಗ್ರಾಹಕರು ಮಾರುಕಟ್ಟೆ ಬೆಲೆಯಲ್ಲಿಯೇ ಎಲ್ಪಿಜಿ ಕೊಳ್ಳಲಿ ಎಂಬ ಉದ್ದೇಶದಿಂದ ಸರಕಾರ ಈ ನೀತಿಯನ್ನು ಬಿಗುಗೊಳಿಸುತ್ತಿದೆ, ಎಂದು ತೈಲ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಹೇಳಿದೆ. ದೇಶದಲ್ಲಿ 16.35 ಕೋಟಿ ಎಲ್ಪಿಜಿ ಗ್ರಾಹಕರಿದ್ದು, 57.5 ಲಕ್ಷ ಮಂದಿ ಸ್ವಯಂ ಪೇರಿತರಾಗಿ ಸಬ್ಸಿಡಿ ಸೌಲಭ್ಯವನ್ನು ತ್ಯಜಿಸಿದ್ದಾರೆ.

ಆಸ್ಕರ್ ವಿಜೇತ ಖ್ಯಾತ ಹಾಲಿವುಡ್ ಛಾಯಾಗ್ರಾಹಕ ಹಸ್ಕೆಲ್ ಇನ್ನಿಲ್ಲ

Image
BY ವಿಜಯವಾಣಿ ನ್ಯೂಸ್ · DEC 28, 2015 ಲಾಸ್ ಏಂಜೆಲಿಸ್ : ಎರಡು ಬಾರಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡ ಹಾಲಿವುಡ್​ನ ಖ್ಯಾತ ಛಾಯಾಗ್ರಾಹಕ ಹಸ್ಕೆಲ್ ವೆಕ್ಸ್ಲರ್ ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆರು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಯುದ್ದ, ರಾಜಕೀಯ ಹಾಗೂ ಸಮಾಜದ ಅವ್ಯವಸ್ಥೆ ಬಗ್ಗೆ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ಹಕ್ಸೆಲ್, ಚಿತ್ರ ನಿರ್ವಣದ ಜತೆಗೆ ಸಾಮಾಜಿಕ ಕಳಕಳಿ, ನ್ಯಾಯ, ಮತ್ತು ಶಾಂತಿ ಸಂದೇಶ ನೀಡುವುದಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. 'ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್', 'ಬೌಂಡ್ ಆಫ್ ಗ್ಲೋರಿ', 'ಮೀಡಿಯಮ್ ಕೂಲ್' ಅವರ ಕೆಲವು ಮಹತ್ವದ ಚಿತ್ರಗಳು. ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್ ಚಿತ್ರವು 1966 ರಲ್ಲಿ ಹಕ್ಸಲ್ ಅವರಿಗೆ ಮೊದಲ ಆಸ್ಕರ್ ಪ್ರಶಸ್ತಿ ತಂದುಕೊಟ್ಟರೆ, ಬೌಂಡ್ ಆಫ್ ಗ್ಲೋರಿ ಚಿತ್ರ 1976ರಲ್ಲಿ ಎರಡನೇ ಆಸ್ಕರ್ ಪ್ರಶಸ್ತಿಯನ್ನು ಅವರ ಬಗಲಿಗೇರಿಸಿತ್ತು. 1985 ರಲ್ಲಿ ಯುದ್ಧದ ತಿರುಳು ಹೊಂದಿದ್ದ 'ಲ್ಯಾಟಿನೊ' ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದರು.

ಮೈಸೂರಿನ ಮೇಟಗಳ್ಳಿಯ RBI ಆವರಣದಲ್ಲಿ . ಬ್ಯಾಂಕನೋಟ್ ಕಾಗದ ತಯಾರಿಕಾ ಘಟಕ ಉದ್ಘಾಟನೆಗೆ ಸಜ್ಜು

Image

ಕುವೆಂಪು ಜಯಂತಿ ಇನ್ನು "ವಿಶ್ವಮಾನವ ದಿನ"

Image

ಸರ್ಕಾರಿ ಹುದ್ದೆಗಳಿಗೆ ಇನ್ನು ಸಂದರ್ಶನ ಇಲ್ಲ, ಅಫಿಡವಿಟ್ಟೂ ಬೇಕಿಲ್ಲ BY ವಿಜಯವಾಣಿ ನ್ಯೂಸ್

· DEC 26, 2015 ಹೊಸ ವರ್ಷಕ್ಕೆ ಕೇಂದ್ರದ ಕ್ರಾಂತಿಕಾರಿ ಕೊಡುಗೆ ನವದೆಹಲಿ: 2016ರ ಜನವರಿ 1ರಿಂದ ಸರ್ಕಾರದ ವಿವಿಧ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ, ಹಾಗೆಯೇ ಅಭ್ಯರ್ಥಿಗಳು ಸರ್ಕಾರಿ ಸೇವೆಗಳನ್ನು ಸೇರಲು ಅಫಿಡವಿಟ್​ಗಳ (ಪ್ರಮಾಣಪತ್ರ) ಆವಶ್ಯಕತೆಯೂ ಇರುವುದಿಲ್ಲ. 2015ರಲ್ಲಿ ಹಲವಾರು ಮಹತ್ವದ ಉಪಕ್ರಮಗಳ ಮೂಲಕ ಸುದ್ದಿಯಲ್ಲಿದ್ದ ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆ ವರ್ಷಾಂತ್ಯದಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರ ಇದು. 'ಸರ್ಟಿಫಿಕೇಟ್​ಗಳನ್ನು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿಕೊಳ್ಳುವ ಕ್ರಮವನ್ನು ರದ್ದು ಪಡಿಸುವ ಅತ್ಯಂತ ಮಹತ್ವದ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರ ಬದಲಿಗೆ ಸ್ವಯಂ ದೃಢೀಕರಣ ಮಾಡುವ ವಿಧಾನವನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶನಿವಾರ ಇಲ್ಲಿ ಹೇಳಿದರು. 'ಪ್ರಜೆಗಳನ್ನು ನಂಬುವ ನಿರ್ಧಾರವನ್ನು ಸರ್ಕಾರ ಕೈಗೊಂಂಡಿದೆ. ಅದರಲ್ಲೂ ಯುವಕರು ಸ್ವಯಂ ದೃಢೀಕೃತ ದಾಖಲೆಗಳನ್ನು ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವುದಿಲ್ಲ ಎಂಬುದು ಸರ್ಕಾರದ ನಂಬಿಕೆ' ಎಂದು ಅವರು ನುಡಿದರು. ಸರ್ಕಾರದ ಈ ನಿರ್ಧಾರವು ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಮಂದಿಯನ್ನು ನಿರಾಳಗೊಳಿಸಿದೆ. ತಮ್ಮ ದಾಖಲೆಗಳನ್ನ

೩೦೦ ಕೆ ಎ ಎಸ್ ಹುದ್ದೆಗಳನ್ನು ನೇಮಕಕ್ಕೆ ಸಿದ್ಧತೆ..

Image

ಹನುಕ್ಕಾ ಹಬ್ಬದ ಕುರಿತು ಮಾಹಿತಿ

Image

ರಸಪ್ರಶ್ನೆ: ಪ್ರಪಂಚ ನಿಮಗೆಷ್ಟು ಪರಿಚಿತ??

Image

ಸರ್ಕಾರಿ ಹುದ್ದೆಗಳಿಗೆ ಇನ್ನು ಸಂದರ್ಶನ ಇಲ್ಲ, ಅಫಿಡವಿಟ್ಟೂ ಬೇಕಿಲ್ಲ BY ವಿಜಯವಾಣಿ ನ್ಯೂಸ್

· DEC 26, 2015 ಹೊಸ ವರ್ಷಕ್ಕೆ ಕೇಂದ್ರದ ಕ್ರಾಂತಿಕಾರಿ ಕೊಡುಗೆ ನವದೆಹಲಿ: 2016ರ ಜನವರಿ 1ರಿಂದ ಸರ್ಕಾರದ ವಿವಿಧ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ, ಹಾಗೆಯೇ ಅಭ್ಯರ್ಥಿಗಳು ಸರ್ಕಾರಿ ಸೇವೆಗಳನ್ನು ಸೇರಲು ಅಫಿಡವಿಟ್​ಗಳ (ಪ್ರಮಾಣಪತ್ರ) ಆವಶ್ಯಕತೆಯೂ ಇರುವುದಿಲ್ಲ. 2015ರಲ್ಲಿ ಹಲವಾರು ಮಹತ್ವದ ಉಪಕ್ರಮಗಳ ಮೂಲಕ ಸುದ್ದಿಯಲ್ಲಿದ್ದ ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆ ವರ್ಷಾಂತ್ಯದಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರ ಇದು. 'ಸರ್ಟಿಫಿಕೇಟ್​ಗಳನ್ನು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿಕೊಳ್ಳುವ ಕ್ರಮವನ್ನು ರದ್ದು ಪಡಿಸುವ ಅತ್ಯಂತ ಮಹತ್ವದ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರ ಬದಲಿಗೆ ಸ್ವಯಂ ದೃಢೀಕರಣ ಮಾಡುವ ವಿಧಾನವನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶನಿವಾರ ಇಲ್ಲಿ ಹೇಳಿದರು. 'ಪ್ರಜೆಗಳನ್ನು ನಂಬುವ ನಿರ್ಧಾರವನ್ನು ಸರ್ಕಾರ ಕೈಗೊಂಂಡಿದೆ. ಅದರಲ್ಲೂ ಯುವಕರು ಸ್ವಯಂ ದೃಢೀಕೃತ ದಾಖಲೆಗಳನ್ನು ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವುದಿಲ್ಲ ಎಂಬುದು ಸರ್ಕಾರದ ನಂಬಿಕೆ' ಎಂದು ಅವರು ನುಡಿದರು. ಸರ್ಕಾರದ ಈ ನಿರ್ಧಾರವು ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಮಂದಿಯನ್ನು ನಿರಾಳಗೊಳಿಸಿದೆ. ತಮ್ಮ ದಾಖಲೆಗಳನ್ನ

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಲ್ಲಿ ಇ ಕಲಿಕೆ*-

Image

ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ನೀಡುವ ಪ್ರಸ್ತಾವನೆ ಪರಿಶೀಲನೆ.

Image

ಕಲಿಕೆ ದುರ್ಬಲಗೊಳಿಸುತ್ತಿರುವ ಶಾಲೆಗಳು:- ವಿಶ್ಲೇಷಣೆ

Image

ರು.50ಕ್ಕೆ ಸಿಗಲಿದೆ ಕೃತಕ ಧ್ವನಿಪೆಟ್ಟಿಗೆ ಬೆಂಗಳೂರಿನ ಕ್ಯಾನ್ಸರ್ ತಜ್ಞರ ಸಾಧನೆ | 25ಗ್ರಾಂ ತೂಕದ ಉಪಕರಣ

Image
ಬೆಂಗಳೂರು: ಗಂಟಲು ಕ್ಯಾನ್ಸರ್ನಿಂದ ಧ್ವನಿಯನ್ನೇ ಕಳೆದುಕೊಂಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದೆ. ಕೃತಕ ಧ್ವನಿಪೆಟ್ಟಿಗೆಗಾಗಿ ಸಾವಿರಾರು ಖರ್ಚು ಮಾಡುವ ಅಗತ್ಯವೂ ಇನ್ನಿಲ್ಲ. ಬೆಂಗಳೂರು ಮೂಲದ ಕ್ಯಾನ್ಸರ್ ತಜ್ಞರೊಬ್ಬರು ಧ್ವನಿ ಉಪಕರಣವನ್ನು ತಯಾರಿಸಿದ್ದು, ಇದನ್ನು ಕೇವಲ ರು.50ಕ್ಕೆ ಲಭ್ಯವಾಗುವಂತೆ ಮಾಡಿದ್ದಾರೆ. ಬರೀ 25ಗ್ರಾಂ ತೂಕವಿರುವ ಈ ಉಪಕರಣ ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ``ಮಾತಾಡುವುದು ಮನುಷ್ಯನ ಹಕ್ಕು. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯ ಧ್ವನಿಪೆಟ್ಟಿಗೆ ತೆಗೆದುಹಾಕಿದಾಗ, ಅವರಲ್ಲಿ ಮಾತನಾಡುವ ಆಸೆ ಇನ್ನಷ್ಟು ಮೊಳೆಯುತ್ತದೆ. ಕ್ಯಾನ್ಸರ್ ಜೊತೆಗೆ ಧ್ವನಿ ಕಳೆ ದುಕೊಂಡಿರುವ ನೋವೂ ಅವರನ್ನು ಭಾವನಾತ್ಮಕವಾಗಿ ಕುಂದಿಸುತ್ತದೆ. ಹಾಗಾಗಬಾರದೆಂದು ಬಡವರನ್ನು ಗಮನದಲ್ಲಿಟ್ಟುಕೊಂಡೇ ಈ ಕಡಿಮೆಬೆಲೆಯ ಉಪಕರಣ ತಯಾರಿಸಲಾಗಿದೆ ಎಂದು ಇದರ ಸೃಷ್ಟಿಕರ್ತ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಧ್ವನಿ ಉಪಕರಣದ ಬೆಲೆ 20ಸಾವಿರ ಇದ್ದು, ಅದು ಬಡವರಿಗೆ ಸುಲಭಕ್ಕೆ ಎಟುಕುವಂಥದ್ದಲ್ಲ. ಅಲ್ಲದೆ ಅದನ್ನು ಆರು ತಿಂಗಳಿಗೊಮ್ಮೆ ಬದಲಿಸಬೇಕಾಗುತ್ತದೆ. ಆದ್ದರಿಂದ ಬಡವರಿಗಾಗಿ ಇದನ್ನು ತಯಾರು ಮಾಡಿದ್ದೇನೆ'' ಎಂದು ಅವರು ತಿಳಿಸಿದ್ದಾರೆ. ಸಾಮಾ

FaceBook ನ ಫ್ರೀ ಬೇಸಿಕ್ ಸ್ಥಗಿತಕ್ಕೆ ಟ್ರಾಯ್ ಸೂಚನೆ

Image

ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಟೀವನ್ ಸ್ಮಿತ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ ‘ವರ್ಷದ ಶ್ರೇಷ್ಠ ಆಟಗಾರ’ ಮತ್ತು ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.:*

ಸ್ಟೀವನ್ ಸ್ಮಿತ್ಗೆ ಐಸಿಸಿ ಗೌರವ 24 Dec, 2015 ದುಬೈ (ಪಿಟಿಐ): ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಟೀವನ್ ಸ್ಮಿತ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನೀಡುವ 'ವರ್ಷದ ಶ್ರೇಷ್ಠ ಆಟಗಾರ' ಮತ್ತು ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2014 ಸೆಪ್ಟೆಂಬರ್ 18ರಿಂದ 2015 ಸೆಪ್ಟೆಂಬರ್ 13ರ ಅವಧಿಯಲ್ಲಿ ನಡೆದ ಟೂರ್ನಿಗಳಲ್ಲಿ ಸ್ಮಿತ್ ಅವರಿಂದ ಮೂಡಿ ಬಂದಿರುವ ಸಾಮರ್ಥ್ಯದ ಆಧಾರದಲ್ಲಿ ಅವರಿಗೆ ಈ ಗೌರವಗಳು ಒಲಿದಿವೆ. ಅವರು ಗ್ಯಾರಿ ಫೀಲ್ಡ್ ಸೋಬರ್ಸ್ ಟ್ರೋಫಿ (ವರ್ಷದ ಕ್ರಿಕೆಟಿಗ) ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಹಾಗೂ ವಿಶ್ವದ 11ನೇ ಆಟಗಾರ ಎನಿಸಿದ್ದಾರೆ. * ವಿಶ್ವದ ಶ್ರೇಷ್ಠ ಆಟಗಾರರ ಪೈಪೋಟಿಯ ನಡುವೆಯೂ ಪ್ರಶಸ್ತಿ ಒಲಿದಿದ್ದು ಖುಷಿ ನೀಡಿದೆ. ಈ ಪ್ರಶಸ್ತಿಗಳು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿವೆ ಸ್ಟೀವನ್ ಸ್ಮಿತ್ ಆಸ್ಟ್ರೇಲಿಯಾದ ಆಟಗಾರ ಮುಖ್ಯಾಂಶಗಳು * ಡಿವಿಲಿಯರ್ಸ್ಗೆ ಸತತ ಎರಡನೇ ಬಾರಿ ವರ್ಷದ ಏಕದಿನ ಕ್ರಿಕೆಟಿಗ ಗೌರವ ಒಲಿದಿದೆ * ಪಂದ್ಯಗಳ ವೇಳೆ ಕ್ರೀಡಾ ಸ್ಫೂರ್ತಿಯಿಂದ ಆಡಿದ್ದಾಗಿ ಮೆಕ್ಲಮ್ಗೆ ಗೌರವ

ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರು ಪ್ರಸಕ್ತ ಸಾಲಿನ ‘ಸಿ.ಕೆ . ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.:-

Image
ಕಿರ್ಮಾನಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ 24 Dec, 2015 ನವದೆಹಲಿ(ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರು ಪ್ರಸಕ್ತ ಸಾಲಿನ 'ಸಿ.ಕೆ . ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಕಾರ್ಯದರ್ಶಿ ಅನುರಾಗ್ ಠಾಕೂರ್ ಹಾಗೂ ದ ಹಿಂದೂ ಪತ್ರಿಕೆಯ ಸಂಪಾದಕ ಎನ್. ರಾಮ್ ಅವರನ್ನು ಒಳಗೊಂಡಿದ್ದ ಪ್ರಶಸ್ತಿ ಆಯ್ಕೆ ಸಮಿತಿ, ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಗುರುವಾರ ಸಭೆ ಸೇರಿತ್ತು. ಸಭೆಯಲ್ಲಿ ನಾಯ್ಡು ವಾರ್ಷಿಕ ಪ್ರಶಸ್ತಿಗೆ ಕಿರ್ಮಾನಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ‌ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕ ಕರ್ನಲ್ ಕೊಠಾರಿ ಕನಕಯ್ಯ ನಾಯ್ಡು ಅವರ ಜನ್ಮದಿನದ ಸ್ಮರಣಾರ್ಥ, ಕ್ರಿಕೆಟ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಒಬ್ಬರಿಗೆ ವರ್ಷಂಪ್ರತಿ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯು ಒಂದು ಟ್ರೋಫಿ, ಪ್ರಮಾಣಪತ್ರ ಹಾಗೂ 25 ಲಕ್ಷ ರೂಪಾಯಿಯ ಚೆಕ್ ಒಳಗೊಂಡಿರುತ್ತದೆ.

ಕಾಲ ಜ್ಞಾನದ ಬಗ್ಗೆ ಕಿರುಮಾಹಿತಿ :-

 ಭೂಮಿ ಸೂರ್ಯನನ್ನು ಸುತ್ತುವರೆಯುವ ಸಮಯಕ್ಕೆ ನಾವು 1 ವರ್ಷ ಎನ್ನುತ್ತೇವೆ.   ನಮ್ಮ ವಿಜ್ಞಾನದ ಪ್ರಕಾರ.ಭೂಮಿ ಸೂರ್ಯನನ್ನು ಸುತ್ತಲೂ ತೆಗೆದುಕೊಳ್ಳುವ ಸಮಯ 365 ದಿನಗಳು 5 ಗಂಟೆ, 56 ನಿಮಿಷಗಳು, 45 ಸೆಕಂಡ ,51 ಮಿಲಿ ಸೆಕೆಂಡ .  ಆದರೆ ನಾವು ಬಳಸುವ English / ಗ್ರೆಗೋರಿಯನ್ / ಕ್ರೈಸ್ತ ಕ್ಯಾಲೆಂಡರ್ 365 ದಿನ 6 ಗಂಟೆ ಲೆಕ್ಕಕ್ಕೆ ತೆಗೆದು ಕೊಳ್ಳುತ್ತದೆ ( ನಾಲ್ಕು ವರ್ಷಕ್ಕೊಮ್ಮೆ 1 ದಿನ ಸೇರಿಸಿ) . ಅಂದರೆ ಪ್ರತಿ ವರ್ಷ 3 ನಿಮಿಷ 14 ಸೆಕೆಂಡ 49 ಮಿಲಿ ಸೆಕಂಡ ವ್ಯತ್ಯಾಸ ಉಂಟು ಮಾಡುತ್ತದೆ. (ಈ ವ್ಯತ್ಯಾಸ ಸರಿಪಡಿಸಲು ಪ್ರತಿ 400 ವರ್ಷಗಳಿಗೆ ಒಮ್ಮೆ ಇನ್ನೂ 1 ದಿನವನ್ನು ಹೆಚ್ಚುವರಿಯಾಗಿ ಸೇರಿಸುತ್ತದೆ ಆದರೂ ಈ ಇಂಗ್ಲಿಷ್ ಕ್ಯಾಲೆಂಡರ್ ಪೂರ್ತಿ ಪ್ರಮಾಣದ ಸಮಯವನ್ನು ಸರಿದುಗಿಸಲು ಸಾಧ್ಯವಾಗುವುದಿಲ್ಲ ).  ಭಾರತೀಯರ ಕಾಲ ಜ್ಞಾನ/ ಸನಾತನ ಜೋತ್ಯಿಷ ಶಾಸ್ತ್ರ:- 15ನಿಮೇಷ = 1 ಕಾಷ್ಠಾ  30 ಕಾಷ್ಠಾ = 1ಕಲ 30 ಕಲ = 1 ಕ್ಷಣ  12 ಕ್ಷಣ. = 1 ಮುಹೂರ್ತ (48 ನಿಮಿಷಗಳು). 30 ಮುಹೂರ್ತ = 1ದಿನ ( ಅಹೋರಾತ್ರಿ) = 1 ತಿಥಿ. 15 ದಿನ = 1 ಪಕ್ಷ. 2 ಪಕ್ಷ, = 1 ಮಾಸ ( ತಿಂಗಳು) 2ಮಾಸ = 1ಋತು. 6 ಋತು = 12 ಮಾಸ = 1ವರ್ಷ ( ಮನುಷ್ಯ ವರ್ಷ) = 1 ಸಂವತ್ಸರ. 1 ಮನುಷ್ಯ ವರ್ಷ = 1 ದೇವ ದಿನ ( ಉತ್ತರಾಯಣ= ಹಗಲು, ದಕ್ಷಿಣಾಯನ = ರಾತ್ರಿ) . 360 ಮನುಷ್ಯ ವರ್ಷ = 1 ದೇವ ವರ್ಷ. 1,200 ದೇವ ವರ್ಷ =

ಡಾ.ರಾಕೇಶ್ಗೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪದಕ

Image
24 Dec, 2015 ವಾಷಿಂಗ್ಟನ್: ಹಾರ್ವರ್ಡ್ ವೈದ್ಯಶಾಲೆಯ ಪ್ರೊಫೆಸರ್ ಮತ್ತು ಮಸಾಚುಸೆಟ್ಸ್ನ ಜನರಲ್ ಹಾಸ್ಪಿಟಲ್ನ ಜೀವಶಾಸ್ತ್ರ ಪ್ರಯೋಗಾಲಯದ ನಿರ್ದೇಶಕ ಭಾರತ ಮೂಲದ ಡಾ. ರಾಕೇಶ್ ಕೆ. ಜೈನ್ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ರಾಷ್ಟ್ರೀಯ ವಿಜ್ಞಾನ ಪದಕ ಪ್ರದಾನ ಮಾಡಲಿದ್ದಾರೆ. ರಾಕೇಶ್ ಜೈನ್ ಅವರು ಕಾನ್ಪುರದ ಭಾರತೀಯ ತಾಂತ್ರಿಕ ಸಂಸ್ಥೆಯಿಂದ ಕೆಮಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್ ಪೂರೈಸಿದ್ದರು. ಜನವರಿಯಲ್ಲಿ ಶ್ವೇತಭವನದಲ್ಲಿ ನಡೆಯುವ ರಾಷ್ಟ್ರೀಯ ವಿಜ್ಞಾನ ಪದಕ ಮತ್ತು ರಾಷ್ಟ್ರೀಯ ತಂತ್ರಜ್ಞಾನ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಅವರು, ಇತರೆ 16 ಸಾಧಕರೊಂದಿಗೆ ಒಬಾಮ ಅವರಿಂದ ಈ ಗೌರವ ಸ್ವೀಕರಿಸಲಿದ್ದಾರೆ. ಮಂಗಳವಾರ ಈ ಕುರಿತು ಪ್ರಕಟಣೆ ಹೊರಡಿಸಿದ ಶ್ವೇತಭವನ, 'ಈ ಪದಕಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ನಾಯಕರು ಮತ್ತು ಸಾಧಕರಿಗೆ ನೀಡುವ ನಮ್ಮ ದೇಶದ ಅತ್ಯಂತ ದೊಡ್ಡ ಗೌರವ' ಎಂದು ಹೇಳಿದೆ. ವಿವಿಧ ವಿಷಯಗಳ ಸುಮಾರು 200 ಸಂಶೋಧನಾ ವಿದ್ಯಾರ್ಥಿಗಳಿಗೆ ಜೈನ್ ಮಾರ್ಗದರ್ಶನ ಮಾಡಿದ್ದಾರೆ.

ವಿಜಯನಾಥ,ಆಚಾರ್ ಮತ್ತು ಕುಂದಗೋಳರಿಗೆ ಲಱಲಿತಾಕಲಾ ಆಕಾಡೆಮಿ ಪ್ರಶಸ್ತಿ

Image

ಕನ್ನಡಿಗ ಹರಿಶಂಕರಗೆ ರಷ್ಯಾದ "ಇಸೆನಿನ್" ಪ್ರಶಸ್ತಿ

Image

JOB NEWS: VARIOUS POSTS CALLFORMED IN INDIAN RAILWAYS ..apply online before 25/Jan/2016

Image

2015-16ನೇಸಾಲಿನಲ್ಲಿ ಕಲಾ&ವೃತ್ತಿ ಶಿಕ್ಷಕರ ತಾತ್ಕಾಲಿಕ. ನೇಮಕಾತಿ ಗೆ ಸಂಬಂಧಿಸಿದಂತೆ ಇಲಾಖಾ ಆದೇಶ(ಬಳ್ಳಾರಿ ಜಿಲ್ಲೆ)

Image

ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಭಾರತದ ಸಿಂಹ

Image

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 233 ಹುದ್ದೆಗಳಿಗೆ ಹೊರಡಿಸಲಾದ ಅಧಿಸೂಚನೆಯನ್ನು ಸರ್ಕಾರವು ರದ್ದುಪಡಿಸಿದ ಆದೇಶದ ಪ್ರತಿ ☝🏻☝🏻☝🏻

Image

ಇಂದು ಗಣಿತ ಪ್ರಪಂಚದ ಅನರ್ಘ್ಯ ರತ್ನ ರಾಮಾನುಜನ್ ಅವರ ಜನ್ಮದಿನಾಂಕ::*

Image
BY ವಿಜಯವಾಣಿ ನ್ಯೂಸ್ · DEC 22, 2015 ಬಡತನ, ಅನಾರೋಗ್ಯ ಇವು ಯಾವುವೂ ಮಹಾಸಾಧಕನ ಆಂತರಿಕ ಜ್ಯೋತಿಯನ್ನು ನಂದಿಸಲಾಗಲಿಲ್ಲ. 'ಸಾಮಾನ್ಯರ ದೃಷ್ಟಿಗೆ ನಿಲುಕದ ಬಲು ಎತ್ತರದ ಶಿಖರಗಳಲ್ಲಿ ವಿಹರಿಸುವ ಮಹಾಮನಸ್ಸುಗಳು ಯಾವ ಪ್ರತಿಕೂಲಗಳನ್ನೂ ಲೆಕ್ಕಿಸುವುದಿಲ್ಲ' ಅನ್ನುವುದಕ್ಕೆ ಶ್ರೀನಿವಾಸ ರಾಮಾನುಜನ್ರೇ ಸಾಕ್ಷಿ. "ಸ ರ್ಕಾರಿ ಕಚೇರಿಗಳಲ್ಲಿ ರೇಷ್ಮೆ ವಸಗಳನ್ನು ಜೋಡು ಒರೆಸುವುದಕ್ಕೆ ಉಪಯೋಗಿಸುವುದೂ ತೊಗಲಿನ ರಟ್ಟನ್ನು ಕರವಸವೆಂದು ಉಪಯೋಗಿಸುವುದೂ ಅಪರೂಪವಲ್ಲ"- ಆಗರ್ಭ ವಿದ್ವಾಂಸ, ಗ್ರಂಥಶೋಧಕ ಎ.ಆರ್. ಕೃಷ್ಣ ಶಾಸಿ ಅವರಿಗೆ ಓರಿಯಂಟಲ್ ಲೈಬ್ರರಿಯಲ್ಲಿ ಒದಗಿಬಂದ ಡಿಸ್ಪ್ಯಾಚಿಂಗ್ ಗುಮಾಸ್ತಗಿರಿ ನೌಕರಿಯ ಬಗ್ಗೆ ಪರಿತಾಪಪಟ್ಟು ಡಿವಿಜಿಯವರು ಹೇಳಿದ ಮಾತಿದು. ಯಾವ ವಿಧವಾದ ವಿದ್ವತ್ಸಂಪರ್ಕವೂ ಇಲ್ಲದ ಯಾವಾಗಲೂ ಕತ್ತರಿ, ಟ್ವೈನ್ ದಾರ, ಗೋಂದುಗಳಲ್ಲಿ ಕೈಯಾಡಿಸುವ ಆ ನೌಕರಿಯ ಬಗ್ಗೆ ಖೇದಪಟ್ಟು ಹೇಳಿದ ಆ ಮಾತನ್ನು ಗಣಿತ ಪ್ರಪಂಚದ ಅನರ್ಘ್ಯರತ್ನ, ಬೌದ್ಧಿಕ ವಿಸ್ಮಯ ಶ್ರೀನಿವಾಸ ರಾಮಾನುಜನ್ರಿಗೂ ಯಥಾವತ್ತಾಗಿ ಅನ್ವಯಿಸಿ ಹೇಳಬಹುದು. ಶ್ರೀನಿವಾಸ ರಾಮಾನುಜನ್ ಹುಟ್ಟಿದ್ದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿ, 1887 ಡಿಸೆಂಬರ್ 22ರಂದು. ತುಂಬಾ ಬಡತನದ ಕುಟುಂಬ. ಶ್ರೀವೈಷ್ಣವ ಬ್ರಾಹ್ಮಣ ಸಂಪ್ರದಾಯದ ಕುಟುಂಬದಲ್ಲಿ ಜನ್ಮವೆತ್ತ ರಾಮಾನುಜನ್ರಿಗೆ ಕಟ್

NPS ನೋಂದಣಿಗೆ PAN ಕಡ್ಡಾಯ

Image

2014 ನೇ ಸಾಲಿನ ಜಾನಪದ ಆಕಾಡೆಮಿ ಪ್ರಶಸ್ತಿ ಪ್ರಕಟ

Image

ಜಾನಪದ ಆಕಾಡೆಮಿ ಪ್ರಶಸ್ತಿ ಪ್ರಕಟ

ಮರಾಠಿ ಲೇಖಕ ಪ್ರೊ.ಶ್ಯಾಮ್ ಮನೋಹರ್ಗೆ ಕುವೆಂಪು ಪ್ರಶಸ್ತಿ (೨೦೧೫)

Image
22 Dec, 2015 ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ: ಪುಣೆಯ ಹಿರಿಯ ಮರಾಠಿ ಸಾಹಿತಿ ಪ್ರೊ.ಶ್ಯಾಮ್ ಮನೋಹರ್ ಅವರನ್ನು 2015ನೇ ಸಾಲಿನ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕುಪ್ಪಳಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಿಳಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ 111ನೇ ಜನ್ಮ ದಿನೋತ್ಸವ ಹಾಗೂ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸಮಾರಂಭ ಡಿ.29 ರಂದು ಕುಪ್ಪಳಿಯ ಕುವೆಂಪು ಜನ್ಮ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ₹ 5 ಲಕ್ಷ ನಗದು ಪುರಸ್ಕಾರ ಹೊಂದಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ.ಕೆ.ಪುಟ್ಟಸ್ವಾಮಿ ಸಂಪಾದಕತ್ವದ 'ಕುವೆಂಪು–ಮಲೆನಾಡು' ಪುಸ್ತಕ ಬಿಡುಗಡೆ ಮಾಡಲಾಗುವುದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ಸಂಸತ್ ಸದಸ್ಯ ಎಂ.ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ 'ಸಮಕಾಲೀನತೆ ಮತ್ತು ಕುವೆಂಪು ಅವರ ತತ್ವ ಚಿಂತನೆಗಳು' ಕುರಿತು ವಿಚಾರಗೋಷ್ಠಿ ನಡೆಯಲಿದೆ. ಚಿಂತಕರಾದ ಎಸ್.ಸುರೇಶ್ಕುಮಾರ್, ಬಿ.ಎಲ್.ಶಂಕರ್ ಹಾಗೂ ವೈ.ಎಸ್.ವಿ. ದತ್ತ ಮಾತನಾಡಲಿದ್ದಾರೆ ಎಂದು ಕಡಿದಾಳ್ ಪ್ರಕಾಶ್ ತಿಳಿಸಿದ್ದಾ

ಫಿಲಿಪ್ಪೀನ್ಸ್ ಸುಂದರಿ ಪಿಯಾ ಮಿಸ್ ಯುನಿವರ್ಸ್ 2015r:*

Image
ಲಾಸ್ ವೇಗಾಸ್: ಆಕರ್ಷಕವಾಗಿ ನಡೆದ ಭುವನ ಸುಂದರಿ ಸ್ಫರ್ಧೆಯ ಫಿನಾಲೆಯಲ್ಲಿ ಫಿಲಿಪ್ಪೀನ್ಸ್ನ ಪಿಯಾ ಅಲೋಂಜೋ ವರ್ಝ್ಬಾಚ್ ಅವರು ಮಿಸ್ ಯುನಿವರ್ಸ್ 2015 ಆಗಿ ಆಯ್ಕೆಯಾದರು. ಕೊಲಂಬಿಯಾ ಸುಂದರಿ ಹಾಗೂ ಯುಎಸ್ಎ ಸುಂದರಿಯರು ಅನುಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಸೌಂದರ್ಯ ಪುರಸ್ಕಾರಕ್ಕೆ ಪಾತ್ರರಾದರು. ಫಿನಾಲೆಯಲ್ಲಿ ರಾಷ್ಟ್ರೀಯ ಉಡುಗೆ ವಿಭಾಗದಲ್ಲಿ ಥಾಯ್ಲೆಂಡ್ ಸುಂದರಿ ಆಯ್ಕೆಯಾದರು. ಯುಎಸ್ಎ, ಕೊಲಂಬಿಯಾ, ಜಪಾನ್, ಥಾಯ್ಲೆಂಡ್, ಆಸ್ಟ್ರೇಲಿಯಾ, ಡೊಮಿನಿಕನ್ ರಿಪಬ್ಲಿಕ್, ಫ್ರಾನ್ಸ್, ಕ್ಯುರಕಾವೊ, ಫಿಲಿಪ್ಪೀನ್ಸ್ ಮತ್ತು ವೆನೆಜುವೆಲಾ ಸುಂದರಿಯರು ಟಾಪ್ 10 ಪಟ್ಟಿಗೆ ಏರಿದ್ದರು. ಭಾರತದ ಊರ್ವಶಿ ರಾಟೆಲಾ ಅವರೂ ಸ್ಫರ್ಧೆಯಲ್ಲಿದ್ದರಾದರೂ, ಕಿರೀಟ ವಂಚಿತರಾದರು.

Police Constable recruitment G.O. 2015-16

Image

ಸಂಪಾದಕೀಯ: ಸರಕಾರಿ ಶಾಲೆಗಳಿಗೆ ಹೊಸ ‘ಫೇಸ್’'(facebook):-

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳು ಸರಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ ಹಂತದ ಕಲಿಕೆಯಲ್ಲಿ ಇನ್ನೂ ವ್ಯಾಪಕವಾಗಿ ಪ್ರವೇಶ ಪಡೆದುಕೊಂಡಿಲ್ಲ. ಶಿಕ್ಷಕರು ತಮಗಿರುವ ಹತ್ತಾರು ಕೆಲಸಗಳ ನಡುವೆ 'ಡಿಜಿಟಲ್ ಸಾಕ್ಷರ'ರಾಗುವ ಕಡೆ ಹೆಚ್ಚು ಗಮನ ಹರಿಸಿಲ್ಲ. ಇದರಿಂದ ಮಕ್ಕಳಿಗೆ ಹೊಸ ತಿಳಿವಿನ ಬಾಗಿಲುಗಳು ತೆರೆದುಕೊಂಡಿಲ್ಲ. ಇದಕ್ಕೆ ವಿರುದ್ಧವಾಗಿ ಖಾಸಗಿ ಶಾಲೆಗಳು ಇಡೀ ತರಗತಿಯನ್ನು 'ಸ್ಮಾರ್ಟ್' ಆಗಿಸಿ, ಮಕ್ಕಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದರಿಂದ ಮಕ್ಕಳ ಕಲಿಕೆ ಮತ್ತು ಪಾಲ್ಗೊಳ್ಳುವಿಕೆಯಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆಯಾಗಿದೆ ಎಂಬುದರ ಬಗ್ಗೆ ಯಾವುದೇ ಸಂಶೋಧನೆಗಳು ನಡೆದಿಲ್ಲ. ಆದರೆ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ಒಂದು ಗುಣಾತ್ಮಕ ಬದಲಾವಣೆ ಎಂದು ಧಾರಾಳವಾಗಿ ಪರಿಗಣಿಸಬಹುದು. ಇದೀಗ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ರಾಜ್ಯದ 74 ಸಾವಿರ ಶಾಲೆಗಳಿಗೆ ಫೇಸ್ಬುಕ್ ಖಾತೆ ತೆರೆಯಲು ಸಜ್ಜಾಗಿದೆ. ಒಮ್ಮೆ ಈ ಫೇಸ್ಬುಕ್ ಪುಟ ತೆರೆದ ಕೂಡಲೇ ಅದಕ್ಕೆ ಮಾಧ್ಯಮಿಕ, ಪ್ರೌಢಶಾಲೆಯ ಮುಖ್ಯಶಿಕ್ಷಕರು ತಮ್ಮ ಶಾಲೆಯ ಎಲ್ಲ ಬಗೆಯ ಚಟುವಟಿಕೆಗಳನ್ನು 'ಭರ್ತಿ' ಮಾಡಬೇಕಾಗುತ್ತದೆ. ಸಾಧನೆಗಳ ಜತೆ ಕುಂದುಕೊರತೆಗಳನ್ನು ಉಲ್ಲೇಖಿಸಿದರೆ ಶಿಕ್ಷಣ ಇಲಾಖೆ ಅದನ್ನು ನಿಯತವಾಗಿ ಗಮನಿಸುತ್ತದೆ

ಪ್ರೊ ಬಾಕ್ಸಿಂಗ್: ವಿಜೇಂದರ್ಗೆ ಹ್ಯಾಟ್ರಿಕ್ ಗೆಲುವು:-

Image
20 Dec, 2015 ಮ್ಯಾಂಚೆಸ್ಟರ್ (ಪಿಟಿಐ): ಗೆಲುವಿನ ಓಟ ಮುಂದುವರೆಸಿರುವ ಭಾರತದ ವಿಜೇಂದರ್ ಸಿಂಗ್, ವೃತ್ತಿಪರ ಬಾಕ್ಸಿಂಗ್ನಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಮೂರನೇ ಪಂದ್ಯದಲ್ಲಿ ವಿಜೇಂದರ್ ಬಲ್ಗೇರಿಯಾದ ಅನುಭವಿ ಬಾಕ್ಸರ್ ಸಮೆಟ್ ಹ್ಯುಸೆಯಿನೊವ್ ಅವರನ್ನು ಮಣಿಸಿದ್ದಾರೆ. ಎರಡನೇ ಸುತ್ತು ಪೂರ್ಣಗೊಳ್ಳುವ ಮುನ್ನವೇ ವಿಜೇಂದರ್ಗೆ ಜಯ ಒಲಿಯಿತು. 2ನೇ ಸುತ್ತು ಆರಂಭಗೊಂಡ ಸುಮಾರು 35 ಸೆಕೆಂಡುಗಳಲ್ಲಿ ಬಲವಾದ ಪಂಚಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ವಿಜೇಂದರ್ ಅವರನ್ನು ಟೆಕ್ನಿಕಲ್ ನಾಕೌಟ್ ಮೂಲಕ ವಿಜೇತ ಎಂದು ಪಂದ್ಯದ ರೆಫರಿ ಘೋಷಿಸಿದರು. ಮಾಜಿ ಒಲಿಂಪಿಕ್ ಹಾಗೂ ವಿಶ್ವಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ವಿಜೇಂದರ್ ಕಳೆದ ಅಕ್ಟೋಬರ್ನಲ್ಲಷ್ಟೇ ವೃತ್ತಿಪರ ಬಾಕ್ಸಿಂಗ್ ಕಣಕ್ಕೆ ಧುಮುಕಿದ್ದರು. ಈವರೆಗಿನ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿದ್ದು ವಿಶೇಷ. ವಿಜೇಂದರ್ ಅವರು ಮೊದಲ ಪಂದ್ಯದಲ್ಲಿ ಸನ್ನಿ ವೈಟಿಂಗ್ ಹಾಗೂ ಎರಡನೇ ಪಂದ್ಯದಲ್ಲಿ ಡೀನ್ ಗಿಲ್ಲೆನ್ ಅವರನ್ನು ಮಣಿಸಿದ್ದರು. 30 ವರ್ಷದ ವಿಜೇಂದರ್ ಹ್ಯಾಟ್ರಿಕ್ ಜಯದ ಮೂಲಕ ಭವಿಷ್ಯದ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

65ನೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪೇನ್ನ ಮಿರಿಯಾ ಲಾಲ್ಗುನಾ ರೊಯೊ ಅವರು ವಿಶ್ವ ಸುಂದರಿ ಕಿರೀಟಕ್ಕೆ ಭಾಜನ

Image
ಚೀನಾ, ಡಿ.20- ಸ್ಯಾನ್ಯಾದ ಕ್ರೌನ್ ಬ್ಯೂಟಿ ಥಿಯೇಟರ್ನಲ್ಲಿ ನಡೆದ 65ನೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪೇನ್ನ ಮಿರಿಯಾ ಲಾಲ್ಗುನಾ ರೊಯೊ ಅವರು ವಿಶ್ವ ಸುಂದರಿ ಕಿರೀಟ ಧರಿಸಿದ್ದಾರೆ. ವಿಶ್ವಸುಂದರಿ ಪಟ್ಟವನ್ನು ಅಲಂಕರಿಸಿದ ಮಿರಿಯಾಗೆ ಕಳೆದ ಬಾರಿಯ ವಿಶ್ವ ಸುಂದರಿ ದಕ್ಷಿಣಆಫ್ರಿಕಾದ ರೊಲೆನೆ ಸ್ಟ್ರಾಸ್ ಅವರು ಮುಕುಟವಿಟ್ಟ್ನು ಅಲಂಕರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮರಿಯಾ, ನಾನಿನ್ನೂ ಫಾರ್ಮಸಿ ವಿದ್ಯಾರ್ಥಿಯಾಗಿದ್ದು ಮುಂದೊಂದು ದಿನ ನ್ಯೂಟ್ರಿಸಿನ್ ಉದ್ಯಮದಲ್ಲಿ ಉತ್ತಮ ಹೆಸರು ಮಾಡಬೇಕೆಂಬುದಾಗಿ ಹೇಳಿದರು. 65ನೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮೊದಲ ರನ್ನರ್ಅಪ್ ಆಗಿ ರಷ್ಯಾದ ಮಿಸ್ ಸೊಫಿಯಾ ಸಿಕಿತ್ಚುಕ್ ಹಾಗೂ ಎರಡನೇ ರನ್ನರ್ಅಪ್ ಆಗಿ ಇಂಡೋನೇಷಿಯಾದ ಮರಿಯಾ ಹರ್ಫಾಂತಿ ಹೊರಹೊಮ್ಮಿದರು.

All CBSE books and learning material will be made available online for free- HRD MINISTER

CBSE books to be made available online for free UdayavaniEnglish.com, Dec 19, 2015, 5:30 PM IST New Delhi : All CBSE books and learning material will be made available online for free as part of the Centre's good governance efforts, HRD Minister Smriti Irani said here today. At a function organised at a Kendriya Vidyalaya in east Delhi, she also said that initiatives would be undertaken to ensure holistic nurturing and improve learning outcomes at these schools. "We made NCERT books available online for free through e-books and mobile applications a month- and-a-half ago. We are similarly going to make CBSE books available online along with additional learning material and videos as part of our good governance efforts," Irani said at the inauguration of a new building of the school in Khichripur. Responding to the call by Delhi Deputy Chief Minister Manish Sisodia at the function that endeavours be made to ensure that children not only excel profession

68ನೇ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಷಿಪ್ನಲ್ಲಿ ಬಾಗಲಕೋಟೆಗೆ ಮತ್ತೊಂದು ಬಂಗಾರ, 2 ಬೆಳ್ಳಿ:*

Image
ಬಾಗಲಕೋಟ: ಪಂಜಾಬ್ನ ಲೂಧಿಯಾನದಲ್ಲಿ ನಡೆಯುತ್ತಿರುವ 68ನೇ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಷಿಪ್ನಲ್ಲಿ ಶುಕ್ರವಾರವೂ ಬಾಗಲಕೋಟ ಜಿಲ್ಲೆಯ ಕ್ರೀಡಾಪಟುಗಳು ಮತ್ತೊಂದು ಬಂಗಾರದ ಪದ ಹಾಗೂ ಎರಡು ಬೆಳ್ಳಿ ಪದಕ ಜಯಿಸಿದ್ದಾರೆ. 14 ವರ್ಷದೊಳಗಿನ ಮಹಿಳೆಯರು 2 ಕಿಮೀ ಪರಶೂಟ್ನಲ್ಲಿ ದಾನಮ್ಮ ಚಿಚಖಂಡಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 14 ವರ್ಷದೊಳಗಿನ ಪುರುಷರ 2 ಕಿಮೀ ಪರಶೂಟ್ನಲ್ಲಿ ವೆಂಕಪ್ಪ ಕೆಂಗಲಗುತ್ತಿ, 16 ವರ್ಷದೊಳಗಿನ ಪುರುಷರ 2 ಕಿಮೀ ಪರಶೂಟ್ನಲ್ಲಿ ರಾಜು ಬಾಟಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಾನಮ್ಮ ಚಿಚಖಂಡಿ ಬುಧವಾರ ನಡೆದಿದ್ದ ಟೈಮ್ ಟ್ರಯಲ್ನ 500 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಿದ್ದರು. ಇದರಿಂದಾಗಿ ಬಾಗಲಕೋಟ ಜಿಲ್ಲೆಯ ಕ್ರೀಡಾಪಟುಗಳು ಒಟ್ಟು ಎರಡು ಬಂಗಾರದ ಪದಕ ಹಾಗೂ ನಾಲ್ಕು ಬೆಳ್ಳಿ ಪದಕ ಪಡೆದಂತಾಗಿದೆ.

ಟ್ವೆಂಟಿ–20 ಮಾದರಿಯಲ್ಲಿ ವೃತ್ತಿಜೀವನದಲ್ಲಿ 600 ಸಿಕ್ಸರ್ಗಳನ್ನು ಬಾರಿಸಿದ ಮೊದಲಿಗ ಕ್ರಿಸ್ ಗೇಲ್*-

Image
ಬ್ರಿಸ್ಬೇನ್: ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದಲ್ಲಿ ಹಲವು ಪ್ರಥಮಗಳನ್ನು ಸ್ಥಾಪಿಸಿರುವ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಶನಿವಾರ ಮತ್ತೆ ಎರಡು ವಿಶಿಷ್ಠ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಕೆರಿಬಿಯನ್ ನಾಡಿನ ಆಟಗಾರ ಚಿನ್ನದ ಲೇಪನ ಹೊಂದಿರುವ ಬ್ಯಾಟ್ ಬಳಸಿ ಆಡಿದ ವಿಶ್ವದ ಮೊದಲ ಆಟ ಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಜತೆಗೆ ಟ್ವೆಂಟಿ–20 ಮಾದರಿಯಲ್ಲಿ ವೃತ್ತಿಜೀವನದಲ್ಲಿ 600 ಸಿಕ್ಸರ್ಗಳನ್ನು ಬಾರಿಸಿದ ಮೊದಲಿಗ ಎಂಬ ಹೆಗ್ಗಳಿಕೆ ಯನ್ನೂ ತಮ್ಮದಾಗಿಸಿ ಕೊಂಡರು. ಈ ಎರಡೂ ದಾಖಲೆಗಳಿಗೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದ ಗಾಬಾ ಮೈದಾನ. ಬಿಗ್ ಬಾಷ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಮೆಲ್ಬರ್ನ್ ರೆನೆಗೆಡ್ಸ್ ತಂಡದ ಪರ ಆಡುತ್ತಿರುವ ಗೇಲ್ ಅವರು ಚಿನ್ನ ಲೇಪಿತ ಬ್ಯಾಟ್ ಬಳಸಿ ಕ್ರಿಕೆಟ್ ಲೋಕದ ಗಮನ ಸೆಳೆದರು. ಭಾರತದ ಪ್ರಸಿದ್ಧ ಕ್ರೀಡಾ ಉತ್ಪನ್ನ ತಯಾರಿಕಾ ಕಂಪೆನಿ ಸ್ಪಾರ್ಟನ್ , ಗೇಲ್ ಅವರಿಗಾಗಿಯೇ ಈ ವಿಶಿಷ್ಠ ಬ್ಯಾಟ್ ಸಿದ್ಧಪಡಿಸಿತ್ತು. ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ 333 ಸಂಖ್ಯೆಯ ಜರ್ಸಿ ತೊಟ್ಟಿದ್ದ ಗೇಲ್ ಬ್ಯಾಟಿಂಗ್ ಮಾಡಲು ಬಂದಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್ ಅಲೆ ಎದ್ದಿತು. ಮೊದಲ ನಾಲ್ಕು ಓವರ್ಗಳ ಕಾಲ ಕ್ರೀಸ್ನಲ್ಲಿದ್ದ ಅವರು ತಲಾ ಎರಡು ಭರ್ಜರಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿ ಅಭಿಮಾನಿಗಳ ಪ್ರೀತಿಗೆ

ಸರ್ವ ರೋಗಗಳಿಗೂ ಶುಂಠಿ ದಿವ್ಯೌಷಧ::**

ಸರ್ವ ರೋಗಗಳಿಗೂ ಶುಂಠಿ ದಿವ್ಯೌಷಧ ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಠಿ ಕೂಡ ಒಂದು. ಒಣಗಿದ ಹಾಗೂ ಹಸಿಶುಂಠಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಶುಂಠಿಯನ್ನು ನಾಗರ, ವಿಶ್ವೌಷಧ ವಿಶ್ವಭೇಷಜ, ಮಹೌಷಧ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕøತದ ಈ ಹೆಸರುಗಳೇ ಸೂಚಿಸುವಂತೆ ಇದು ಒಂದು ಅಪೂರ್ವ ಔಷಧ ದ್ರವ್ಯ. ಕಟು(ಖಾರ) ರಸವನ್ನು ಹೊಂದಿರುವ ಇದು ಜೀರ್ಣರಸದೊಂದಿಗೆ ಸೇರಿ ಪಚನವಾದಾಗ ಮಧುರ (ಸಿಹಿ)ಭಾವವನ್ನು ಪಡೆಯುವುದರಿಂದ ಇದು ಒಂದು ಶಕ್ತಿವರ್ಧಕವಾಗಿದೆ. ಗುಣದಲ್ಲಿ ಸ್ನಿಗ್ಧ ಮತ್ತು ಉಷ್ಣ ವೀರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ. ಶ್ವಾಸಕೋಶ, ಅರುಚಿ, ಪಾಂಡು (ರಕ್ತಹೀನತೆ), ಅತಿಸಾರ, ಜ್ವರ, ಕೆಮ್ಮು ಮುಂತಾದ ರೋಗಿಗಳಿಗೆ ಉಪಯೋಗಿಸಲ್ಪಡುವ ಇದು ಒಂದು ಶ್ರೇಷ್ಠ ದೀಪನ ಮತ್ತು ಪಚನ ಔಷಧವಾಗಿದೆ. ಇದಲ್ಲದೆ ಅಮವಾತ (ಕೀಲುನೋವು)ಗ್ರಹಣಿ, ಗುಲ್ಮ, ಹೃದ್ರೋಗ, ಅತಿಸಾರ ಮುಂತಾದ ಅನೇಕ ರೋಗಗಳಿಗೆ ಶುಂಠಿ ಒಂದು ಉತ್ತಮ ಔಷಧಿ. ಹಸಿ ಶುಂಠಿಯನ್ನು ಅದ್ರಕ ಎಂದು ಕರೆಯುತ್ತಾರೆ. ಅಡುಗೆ ಮತ್ತು ಔಷಧಿಗಳಲ್ಲಿ ಒಣಶುಂಠಿ ಹಾಗೂ ಹಸಿ ಶುಂಠಿಗಳೆರಡೂ ಉಪಯೋಗಕ್ಕೆ ಬರುತ್ತವೆ. ನ

RIE teacher case dismissed in Supreme Court also

Image

ಕನ್ನಡಕ್ಕೆ ಕಿರೀಟ ತೊಡಿಸಿರುವ “ಜ್ಞಾನಪೀಠ ಪ್ರಶಸ್ತಿ”ಯ ಪಕ್ಷಿನೋಟ

Image
ಕನ್ನಡಕ್ಕೆ ಕಿರೀಟ ತೊಡಿಸಿರುವ "ಜ್ಞಾನಪೀಠ ಪ್ರಶಸ್ತಿ"ಯ ಪ ಕ್ಷಿನೋಟ ವಿಶೇಷ ಲೇಖನ: ಬಿ. ಕೆ. ಗಣೇಶ್ ರೈ, ದುಬೈ. ಆತ್ಮೀಯರೇ, ನವೆಂಬರ್ ತಿಂಗಳು ಮುಗಿಯಿತು ನೂತನ ವರ್ಷದ ಬರುವಿಕೆಯ ನಿರೀಕ್ಷೆಯಲ್ಲಿರುವ ಕನ್ನಡಿಗರು  ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ತಿಂಗಳು ಪೂರ್ತಿ ಕನ್ನಡದ ಬಾವುಟ ಹಾರಿಸಿಯಾಯಿತು. ರಸಮಂಜರಿ, ಹಾಸ್ಯ, ನಾಟಕ, ಕನ್ನಡ ಜನಪದ ಗೀತೆಗಳು ಧ್ವನಿವರ್ಧಕಕದ ಮೂಲಕ ಆಲಿಸಿ ಮೈಮನ ಮುದಗೊಳಿಸಿ ಕೊಂಡಾಯಿತು. ವೇದಿಕೆಯ ಮೇಲೆ ಭಾಷಣಕಾರರ ಕನ್ನಡ ಅಭಿಮಾನವನ್ನು ಜಾಗೃತಿಗೊಳಿಸುವ ವೀರಾವೇಶದ ಮಾತುಗಳು. ಕನ್ನಡಕ್ಕೆ ದೊರೆತಿರುವ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಎದೆಯುಬ್ಬಿಸಿ ಮಾತಾನಾಡದಿದ್ದರೆ ಕನ್ನಡ ಭಾಷಣ ಅಪೂರ್ಣವಾಗುತ್ತದೆ. ಇಂತಹ ಜ್ಞಾನ ಪೀಠ ಪ್ರಶಸ್ತಿ ಇನ್ನಿತರ ಪ್ರಶಸ್ತಿಗಳಿಗಿಂತ ಎತ್ತರದ ಸ್ಥಾನದಲ್ಲಿದ್ದು ಹೆಚ್ಚು ಗೌರವವನ್ನು ಪಡೆದಿದೆ. ಈ ಶುಭ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿಯ ಬಗ್ಗೆ ಬೆಳಕು ಚೆಲ್ಲುವ ಅಪೂರ್ವ ಲೇಖನ…..   "ಜ್ಞಾನ ಪೀಠ ಪ್ರಶಸ್ತಿ" ವಿಶ್ವದಲ್ಲಿ ಅತ್ಯುನ್ನತ ಪುರಸ್ಕಾರ ನೋಬೆಲ್ ಪ್ರಶಸ್ತಿಯಾದರೆ, ಭಾರತದಲ್ಲಿ ನೋಬೆಲ್ ಪುರಸ್ಕಾರದಷ್ಟೆ ಉನ್ನತ ಸ್ಥಾನದಲ್ಲಿರುವುದು 'ಜ್ಞಾನಪೀಠ ಪ್ರಶಸ್ತಿ'. ಭಾರತ ಸರ್ಕಾರವು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅತ್ಯುತ್ಕೃಷ್ಟ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಭಾರತ ರಾಷ್ಟ್ರ ಭಾಷೆ ಹಿಂದಿ ಮತ್ತು ಉಳಿದ ಭಾಷೆಗಳಾದ