Wednesday, February 3, 2016

ವಿಶ್ವದ ಅತಿ ಎತ್ತರದ ಗಡಿಯಾರ ಗೋಪುರ: ಇನ್ಫಿ ಸಜ್ಜು


ವಿಕ ಸುದ್ದಿಲೋಕ | Feb 3, 2016, 04.00 AM IST
Patni was where NR Narayana Murthy and most of
the other founders of Infosys met.
A A A
ಮೈಸೂರಿನ ಇನ್ಫೋಸಿಸ್ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ನಲ್ಲಿ
135 ಅಡಿ ಎತ್ತರದ ಕ್ಲಾಕ್ ಟವರ್ ಅಂದಾಜು 60 ಕೋಟಿ ರೂ.
ವೆಚ್ಚ
ಬೆಂಗಳೂರು: ಸಾಂಸ್ಕೃತಿ ರಾಜಧಾನಿ ಮೈಸೂರಿನಲ್ಲಿ
ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ ಎಂಬ
ಐತಿಹಾಸಿಕ ಅವಳಿ ಗೋಪುರಗಳು ತನ್ನ ಅಂದ
ಚೆಂದಗಳಿಂದ ಪ್ರಸಿದ್ಧವಾಗಿದೆ. ಮೈಸೂರು ವಿಶ್ವ
ವಿದ್ಯಾಲಯದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ
ಮಾನಸಗಂಗೋತ್ರಿಯಲ್ಲೂ ಕಳೆದ ವರ್ಷ
ಮತ್ತೊಂದು ಗಡಿಯಾರ ಗೋಪುರ ನಿರ್ಮಾಣವಾಗಿತ್ತು.
ಈಗ ಐಸಿ ದಿಗ್ಗಜ ಇನ್ಫೋಸಿಸ್ ಮೈಸೂರಿನಲ್ಲಿರುವ ತನ್ನ
ಕ್ಯಾಂಪಸ್ನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಗಡಿಯಾರ
ಗೋಪುರವನ್ನು ನಿರ್ಮಿಸಲು ಸಜ್ಜಾಗಿದೆ.
ಸುಮಾರು 345 ಎಕರೆ ಪ್ರದೇಶಗಳಲ್ಲಿ ಹರಡಿರುವ ಇನ್ಫೋಸಿಸ್ನ ಗ್ಲೋಬಲ್
ಎಜ್ಯುಕೇಶನ್ ಸೆಂಟರ್ನಲ್ಲಿ 135 ಮೀಟರ್
ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಇನ್ಫೋಸಿಸ್
ಉದ್ದೇಶಿಸಿದೆ. ಇದು ಲಂಡನ್ನಲ್ಲಿರುವ ಬಿಗ್ ಬೆನ್ (96
ಮೀಟರ್), ಕ್ಯಾಲಿಫೋರ್ನಿಯಾದ ಹೋವರ್ ಟವರ್ಗಿಂತಲೂ
(87 ಮೀಟರ್) ಎತ್ತರಕ್ಕೇರಲಿದೆ. ಗೋಥಿಕ್ ಶೈಲಿಯಲ್ಲಿ
ನಿರ್ಮಾಣವಾಗಲಿರುವ ಈ ಗೋಪುರ ಕಟ್ಟಲು ಸುಮಾರು 60 ಕೋಟಿ ರೂ.
ವೆಚ್ಚವಾಗಲಿದೆ. ಇದರಲ್ಲಿ 19 ಅಂತಸ್ತುಗಳು ಇರಲಿದ್ದು, 20
ತಿಂಗಳಿನಲ್ಲಿ ಕ್ಲಾಕ್ ಟವರ್ ತಲೆ ಎತ್ತಿಕೊಳ್ಳುವ
ನಿರೀಕ್ಷೆ ಇದೆ. ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ಆರ್
ನಾರಾಯಣಮೂರ್ತಿ ಈ ವಿಷಯವನ್ನು ದೃಢಪಡಿಸಿದ್ದಾರೆ.
''ಗಡಿಯಾರ ಗೋಪುರ ಇಲ್ಲದೆ ಮೈಸೂರಿನ ಇನ್ಫೋಸಿಸ್ ತರಬೇತಿ ಕೇಂದ್ರ
ಪರಿಪೂರ್ಣವಾಗುವುದಿಲ್ಲ. ಕ್ಲಾಕ್ ಟವರ್ ಇರುವುದರಿಂದ
ಕ್ಯಾಂಪಸ್ಗೆ ಅಕಾಡೆಮಿಕ್ ಭವ್ಯತೆಯ ಮೆರುಗು
ಸಿಕ್ಕಂತಾಗುತ್ತದೆ. ವಿಶಾಲ್ ಸಿಕ್ಕಾ ಕೂಡ
ಇದೊಂದು ಉತ್ತಮ ಐಡಿಯಾ''
ಎಂದಿರುವುದಾಗಿ ಮೂರ್ತಿ ಹೇಳಿದರು.
ಇನ್ಫೋಸಿಸ್ನ ಮೈಸೂರಿನ ಕ್ಯಾಂಪಸ್ ವಿನ್ಯಾಸವನ್ನು ರೂಪಿಸಿದ್ದ
ಮುಂಬಯಿ ಮೂಲದ ಹಫೀಜ್ ಕಾಂಟ್ರಾಕ್ಟರ್
ಅವರೇ ಈ ಗೋಪುರದ ವಿನ್ಯಾಸವನ್ನೂ ರಚಿಸಲಿದ್ದಾರೆ. ಬೆಂಗಳೂರು
ಮೂಲದ ಕೆಇಎಫ್ ಇನ್ಫ್ರಾ ನಿರ್ಮಿಸಲಿದೆ.
ಈ ಯೋಜನೆಗೆ ಸಂಬಂಧಿಸಿದ ಬಹುತೇಕ ಅನುಮೋದನೆಗಳನ್ನು
ಪಡೆಯಲಾಗಿದೆ ಎಂದು ಕಂಪನಿಯ ಕಾರ್ಯಕಾರಿ
ಉಪಾಧ್ಯಕ್ಷ ರಾಮದಾಸ್ ಕಾಮತ್ ತಿಳಿಸಿದ್ದಾರೆ. ''
ಸಾಂಪ್ರದಾಯಿಕತೆ ಮತ್ತು ಆಧುನಿಕ ತಂತ್ರಜ್ಞಾನವನ್ನು
ಗಡಿಯಾರ ಗೋಪುರದಲ್ಲಿ ಸಂಯೋಜಿಸಲಗುವುದು. ಗೋಪುರದ ನಾಲ್ಕು
ಬದಿಗಳಲ್ಲಿ ದೊಡದ್ಡ ಡಿಜಿಟಲ್
ಸ್ಕ್ರೀನ್ಗಳನ್ನು ಅಳವಡಿಸಲಾಗುವುದು. ಪ್ರಮುಖ
ವಿದ್ಯಮಾನಗಳ ಸಂದೇಶಗಳನ್ನು ಈ ಸ್ಕ್ರೀನ್ನಲ್ಲಿ
ಬಿತ್ತರಿಸಲಾಗುವುದು ಎಂದು ಕಂಪನಿಯ
ಸ್ಥಳೀಯ ಆರ್ಕಿಟೆಕ್ಟ್ ಕೆ.ಪಿ ನಾಗರಾಜ್ ತಿಳಿಸಿದ್ದಾರೆ.

Tuesday, February 2, 2016

KARNATAKA TEACHERS ELIGIBILITY TEST RESULTS- 2015 PUBLISHED

"TET ಪರೀಕ್ಷಾ ಫಲಿತಾಂಶ ಪ್ರಕಟ"
TET ಫಲಿತಾಂಶ ನೋಡಲು ಈ ಕೆಳಗಿನ 'ಲಿಂಕ್' CLICK ಮಾಡಿ.

http://keyans.kartet.caconline.in/DisplayResult.aspx

http://kartet.caconline.in/

ಮ್ಯಾನ್ಮಾರ್ನಲ್ಲಿ ಮೊದಲ ಪ್ರಜಾಸತ್ತೆ ಸರಕಾರ:*


-ಅರ್ಧ ಶತಮಾನದ ಸೇನಾಡಳಿತ ವಿರೋಧಿಸಿ ಸೂಚಿ ನಡೆಸಿದ ದಶಕಗಳ ಕಾಲದ
ಹೋರಾಟಕ್ಕೆ ಸಂದ ಫಲ-
ನೇಪಿತಾ(ಮ್ಯಾನ್ಮಾರ್): ಮ್ಯಾನ್ಮಾರ್ನಲ್ಲಿ ಅರ್ಧ ಶತಮಾನದ
ಸೇನಾಡಳಿತದ ನಂತರ ಇದೇ ಮೊದಲ ಬಾರಿಗೆ
ಔಂಗ್ ಸಾನ್ ಸೂಚಿ ನೇತೃತ್ವದ ರಾಷ್ಟ್ರೀಯ
ಪ್ರಜಾಸತ್ತಾತ್ಮಕ ಸಂಘಟನೆ 'ಎನ್ಎಲ್ಡಿ' ಪಕ್ಷದ
ಹೊಸ ಸರಕಾರ ತನ್ನ ಕಾರ್ಯ ಕಲಾಪಗಳನ್ನು
ಆರಂಭಿಸಿದೆ.
ನವೆಂಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ
ಪ್ರಚಂಡ ಬಹುಮತ ಗಳಿಸಿದ ಎನ್ಎಲ್ಡಿ ಮ್ಯಾನ್ಮಾರ್ನಲ್ಲಿ
ಇದೇ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ
ಆಯ್ಕೆಯಾದ ಸರಕಾರವಾಗಿ
ಹೊರಹೊಮ್ಮಿದ್ದು, ನೂತನ ಚುನಾಯಿತ
ಸದಸ್ಯರು ಸೋಮವಾರ ಸಂಸತ್ತಿನ ಕಲಾಪಗಳಲ್ಲಿ
ಪಾಲ್ಗೊಂಡರು.
ಅರ್ಧ ಶತಮಾನದ ಕಾಲ ನಿರಂತರ ಸೇನಾಡಳಿತದ ದಬ್ಬಾಳಿಕೆಗೆ
ಒಳಗಾಗಿದ್ದ ಮ್ಯಾನ್ಮಾರ್ ಸಂಸತ್ತಿನ ಪಾಲಿಗೆ ಸೋಮವಾರ
ಐತಿಹಾಸಿಕ ದಿನ. ಔಂಗ್ ಸಾನ್ ಸೂಚಿ ಅವರು ಮ್ಯಾನ್ಮಾರ್ನಲ್ಲಿ
ಪ್ರಜಾಸತ್ತೆ ಮರಳಿ ತರಲು ಮಾಡಿದ ತ್ಯಾಗ ಮತ್ತು ಕಠಿಣ ಹೋರಾಟಗಳ
ಫಲವಾಗಿ ಜನರಿಂದ ಆಯ್ಕೆಯಾದ ಪ್ರಜಾಸತ್ತಾತ್ಮಕ
ಸರಕಾರವೊಂದು ಇದೀಗ ಕಾರ್ಯಭಾರ
ಆರಂಭಿಸಿದೆ.
ಸೂಚಿ ಅವರು ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ
ಪ್ರಚಂಡ ಬಹುಮತ ಗಳಿಸಿದ್ದರೂ, ಅವರ ಎನ್ಎಲ್ಡಿ ಪಕ್ಷ ಸೇನೆ
ಜತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ.
ಏಕೆಂದರೆ, ಮ್ಯಾನ್ಮಾರ್ ಸಂವಿಧಾನವು ಸೇನೆಗೆ ಶೇ 25ರಷ್ಟು
ಸ್ಥಾನಗಳನ್ನು ಸಂಸತ್ತಿನಲ್ಲಿ ಮೀಸಲಿರಿಸಲು ಅವಕಾಶ
ಕಲ್ಪಿಸಿದೆ.
ಈ ನಿಟ್ಟಿನಲ್ಲಿ ಸೂಚಿ ಅವರು ಸೇನೆಯ ಉನ್ನಾಧಿಕಾರಿಗಳ ಜತೆ
ಉತ್ತಮ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದಾರೆ.
ಹೊಸ ಸರಕಾರಕ್ಕೆ ಸಂಪೂರ್ಣ ಸಹಕಾರ
ನೀಡುವಂತೆ ಕೋರಿದ್ದಾರೆ. ಹೊಸ ಸರಕಾರದ
ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮ್ಯಾನ್ಮಾರ್
ಸೇನೆ ಸೂಚಿ ಅವರಿಗೆ ಭರವಸೆ ನೀಡಿದೆ.

Monday, February 1, 2016

ಜೊಕೊವಿಕ್ ನೊವಾಕ್ಗೆ ಆರನೇ ಆಸ್ಟ್ರೇಲಿಯಾ ಕಿರೀಟ:-


ನೊವಾಕ್ಗೆ ಆರನೇ ಆಸ್ಟ್ರೇಲಿಯಾ ಕಿರೀಟ
ಏಜೆನ್ಸೀಸ್ | Feb 1, 2016, 04.30 AM IST
3101-2-2-NOVAK
A A A
-ರಾಯ್ ಎಮರ್ಸನ್ ದಾಖಲೆ ಸರಿಗಟ್ಟಿದ
ಜೊಕೊವಿಕ್ ಐದನೇ ಬಾರಿ ಫೈನಲ್ನಲ್ಲಿ
ಮುಗ್ಗರಿಸಿದ ಬ್ರಿಟನ್ನ ಆಂಡಿ ಮರ್ರೆ-
ಮೆಲ್ಬೋರ್ನ್: ಅಕ್ಷರಶಃ ಅಬ್ಬರದ ಆಟವಾಡಿದ ವಿಶ್ವದ ನಂ.1
ಆಟಗಾರ ಸರ್ಬಿಯಾದ ನೊವಾಕ್
ಜೊಕೊವಿಕ್, ಇಲ್ಲಿ
ಮುಕ್ತಾಯಗೊಂಡ ಆಸ್ಟ್ರೇಲಿಯಾ ಓಪನ್
ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಪುರುಷರ ಸಿಂಗಲ್ಸ್
ಫೈನಲ್ನಲ್ಲಿ ಬ್ರಿಟನ್ನ ಆ್ಯಂಡಿ ಮರ್ರೆ ಅವರನ್ನು ಬಗ್ಗು
ಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದರು.
ಇಲ್ಲಿನ ರಾಡ್ ಲೆವರ್ ಅರೆನಾದಲ್ಲಿ ಭಾನುವಾರ ನಡೆದ
ಹೊನಲು ಬೆಳಕಿನ ಫೈನಲ್ ಪಂದ್ಯದಲ್ಲಿ
ಮಿಂಚಿದ ಹಾಲಿ ಚಾಂಪಿಯನ್ ನೊವಾಕ್,
6-1, 7-5, 7-6(7/3)ರ ನೇರ ಸೆಟ್ಗಳಿಂದ ಐದನೇ ಬಾರಿ
ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯವನ್ನಾಡುತ್ತಿದ್ದ
ಆ್ಯಂಡಿ ಮರ್ರೆಗೆ ಸೋಲುಣಿಸಿದರು.
ಎರಡು ಗಂಟೆ 53 ನಿಮಿಷಗಳ ಕಾಲ ನಡೆದ ಫೈನಲ್ ಕದನದಲ್ಲಿ
ಸಿಕ್ಕಂತಹ ಅಮೋಘ ಗೆಲುವಿನೊಂದಿಗೆ ವೃತ್ತಿ
ಬದುಕಿನ ಆರನೇ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲ್ಯಾಮ್ ಗೆದ್ದ
ನೊವಾಕ್ ಜೊಕೊವಿಕ್,
ಅತಿ ಹೆಚ್ಚು ಬಾರಿ ಆಸೀಸ್ ಚಾಂಪಿಯನ್ ಪಟ್ಟ
ಅಲಂಕರಿಸಿದ ರಾಯ್ ಎಮರ್ಸನ್ (6 ಪ್ರಶಸ್ತಿ) ಅವರ
ದಾಖಲೆಯನ್ನು ಸರಿಗಟ್ಟಿದರು.
11ನೇ ಗ್ರ್ಯಾನ್ ಸ್ಲ್ಯಾಮ್ ಗೆಲುವು
ಬ್ರಿಟನ್ನ ತಾರೆ ಆ್ಯಂಡಿ ಮರ್ರೆ ಈ ವರೆಗೆ ಐದು ಬಾರಿ
ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ್ದು ಒಮ್ಮೆಯೂ ಯಶಸ್ಸು
ಕಾಣಲು ಸಾಧ್ಯವಾಗಿಲ್ಲ. ಇದರಲ್ಲಿ ನಾಲ್ಕು ಬಾರಿ
ಜೊಕೊವಿಕ್ ಎದುರು ಮುಗ್ಗರಿಸಿರುವುದು
ವಿಶೇಷ. ಇದೇ ವೇಳೆ ವೃತ್ತಿ ಜೀವನದ 11ನೇ ಗ್ರ್ಯಾನ್
ಸ್ಲ್ಯಾಮ್ ಗೆದ್ದ ಸರ್ಬಿಯಾದ ಚಾಂಪಿಯನ್ ಆಟಗಾರ
ನೊವಾಕ್, ಆಸ್ಟ್ರೇಲಿಯಾದ ರಾಡ್ ಲೆವರ್ ಮತ್ತು
ಸ್ವೀಡನ್ನ ಜೊರ್ನ್ ಬೊರ್ಗ್
ಅವರ 11 ಪ್ರಶಸ್ತಿಗಳ ದಾಖಲೆಯನ್ನೂ ಸರಿಗಟ್ಟಿದರು.
ಆರಂಭದಿಂದಲೇ ಅಬ್ಬರದ ಆಟ
ಸೆಮಿಫೈನಲ್ ಹಣಾಹಣಿಯಲ್ಲಿ ಶರವೇಗದಲ್ಲಿ ಎರಡು ಸೆಟ್ ಗೆದ್ದು
ಎದುರಾಳಿಯ ಮೇಲೆ ಸಂಪೂರ್ಣ ಒತ್ತಡ ಹೇರಿ ಜಯ ದಾಖಲಿಸಿದ್ದ
ನೊವಾಕ್ ಜೊಕೊವಿಕ್,
ಫೈನಲ್ ಪಂದ್ಯದಲ್ಲಿಯೂ ಇದೇ ತಂತ್ರ ಬಳಸಿ
ಮತ್ತೊಮ್ಮೆ ಯಶಸ್ಸು ಕಂಡರು.
ಮೊದಲ ಗೇಮ್ನಿಂದಲೇ ಆಕ್ರಮಣಕಾರಿ ಆಟಕ್ಕೆ
ಮುಂದಾದ ನೊವಾಕ್, ಎರಡು ಬಾರಿ ಎದುರಾಳಿಯ
ಸರ್ವ್ ಮುರಿದು ಕೇವಲ 30 ನಿಮಿಷಗಳ ಅಂತರದಲ್ಲಿ 6-1
ಗೇಮ್ಗಳಿಂದ ಮೊದಲ ಸೆಟ್
ವಶಪಡಿಸಿಕೊಂಡರು.
2ನೇ ಸೆಟ್ನಲ್ಲಿ ಮ್ಯಾರಥಾನ್ ಹೋರಾಟ
ಮೊದಲ ಸೆಟ್ನಲ್ಲಿ ಮಿಂಚಿನ
ಗೆಲುವಿನೊಂದಿಗೆ ನೊವಾಕ್ 1-0
ಅಂತರದಲ್ಲಿ ಮುನ್ನಡೆ ಪಡೆದರು. ಆದರೆ, 2ನೇ ಸೆಟ್ನಲ್ಲಿ
ಜಿದ್ದಾಜಿದ್ದಿನ ಹೋರಾಟ ನಡೆಸಿದ ಮರ್ರೆ 5-5ರಲ್ಲಿ ಸಮಬಲ
ತಂದುಕೊಂಡರು. ಆದರೆ, ಈ
ಹಂತದಲ್ಲಿ ಮರ್ರೆ ಸರ್ವ್ ಮುರಿಯುವಲ್ಲಿ ಸಫಲರಾದ
ಜೊಕೊವಿಕ್ 7-5ರಲ್ಲಿ 2ನೇ ಸೆಟ್ ಗೆದ್ದು
2-0 ಅಂತರದಲ್ಲಿ ಮೇಲುಗೈ ಕಂಡರು. ಬರೋಬ್ಬರಿ 80
ನಿಮಿಷಗಳ ಕಾಲ ನಡೆದ ಈ ಸೆಟ್ನಲ್ಲಿ ಅಂತ್ಯದಲ್ಲಿ ಮಾಡಿದ
ಸಣ್ಣ ತಪ್ಪಿನಿಂದಾಗಿ ಮರ್ರೆ ಹಿನ್ನಡೆ
ಅನುಭವಿಸುವಂತಾಯಿತು.
ನಿರ್ಣಾಯಕ ಸೆಟ್ನಲ್ಲಿ ಮಿಂಚಿನ ಸರ್ವ್
ಪಂದ್ಯದಲ್ಲಿ ಮರ್ರೆ ಒಟ್ಟಾರೆ 12 ಏಸ್ಗಳನ್ನು ಸಿಡಿಸಿದರೂ
ಜೊಕೊವಿಕ್ ಅಬ್ಬರಕ್ಕೆಬ್ರೇಕ್ ಹಾಕಲು
ಸಾಧ್ಯವಾಗಲಿಲ್ಲ. ಮೂರನೇ ಸೆಟ್ನಲ್ಲಿ ಮರ್ರೆ ಸರ್ವ್ ಹಿಡಿತ ಸಾಧಿಸಿ
6-6ರ ಸಮಬಲದೊಂದಿಗೆ ಟೈಬ್ರೇಕರ್ಗೆ
ಕರೆದೊಯ್ಯುವಲ್ಲಿ ಯಶಸ್ವಿಯಾದರು. ಆದರೆ, ಈ
ಹಂತದಲ್ಲಿ ಭರ್ಜರಿಯ ಏಸ್ ಸಿಡಿಸಿದ
ಜೊಕೊವಿಕ್ 7/3
ಅಂಕಗಳಿಂದ ಚಾಂಪಿಯನ್ ಪಟ್ಟ
ಗೆದ್ದುಕೊಂಡರು.
---
ಆಂಡಿ, ನೀವು ಚಾಂಪಿಯನ್ ಆಟಗಾರ, ಅಮೋಘ
ವ್ಯಕ್ತ ಮತ್ತು ಅಮೋಘ ಸ್ನೇಹಿತ. ಈ ಪ್ರಶಸ್ತಿ ಗೆಲುವಿಗಾಗಿ
ಮತ್ತೊಮ್ಮೆ ಪೈಪೋಟಿ ನಡೆಸುವ ಅವಕಾಶ ನಿಮಗೆ
ಖಂಡಿತಾ ಸಿಗಲಿದೆ. ಇನ್ನೂ ಲಾಡ್ ಲೆವರ್ ಹಾಗೂ ರಾಯ್ ಎಮರ್ಸನ್
ಅವರಂತಹ ಅದ್ಭುತ ಆಟಗಾರರ ದಾಖಲೆ ಸರಿಗಟ್ಟಿರುವುದು ನನಗೆ
ಸಿಕ್ಕ ಗೌರವವಾಗಿದೆ.
- ನೊವಾಕ್ ಜೊಕೊವಿಕ್
ಸರ್ಬಿಯಾದ ಟೆನಿಸ್ ತಾರೆ
ನೊವಾಕ್, ಧನ್ಯವಾದಗಳು. ಆರುಬಾರಿ ಆಸ್ಟ್ರೇಲಿಯಾ
ಓಪನ್ ಪ್ರಶಸ್ತಿ ಗೆದ್ದಿರುವುದು ಅಮೋಘ ಸಾಧನೆ. ಕಳೆದ ವರ್ಷದ ಸಾಧನೆ
ಹಾಗೂ ಈ ಬಾರಿ ಪ್ರಶಸ್ತಿ ಗೆದ್ದರುವುದು ನಿಮ್ಮಲ್ಲಿನ ಅದ್ಭುತ
ಸ್ಥಿರತೆಯನ್ನು ಸಾರಿ ಹೇಳುತ್ತದೆ
- ಆಂಡಿ ಮರ್ರೆ ಬ್ರಿಟನ್ನ ಟೆನಿಸ್ ತಾರೆ
ಫೈನಲ್ ಪಂದ್ಯದ ಸೆಟ್ಗಳ ವಿವರ 6-1, 7-5, 7-6(7/3)
ನೊವಾಕ್ ಗ್ರ್ಯಾನ್ ಸ್ಲ್ಯಾಮ್ ಸಾಧನೆ
ಟೂರ್ನಿಪ್ರಶಸ್ತಿ ಗೆದ್ದ ವರ್ಷ
ಆಸ್ಟ್ರೇಲಿಯಾ ಓಪನ್2008, 2011, 2012, 2013, 2015,
2016
ವಿಂಬಲ್ಡನ್2011, 2014, 2015
ಅಮೆರಿಕ ಓಪನ್2011, 2015 ----
ಆಸ್ಟ್ರೇಲಿಯಾ ಓಪನ್ ಬಳಿಕ ಎಟಿಪಿ ರ್ಯಾಂಕಿಂಗ್(ಟಾಪ್ 5)
ರಾಂಕಿಂಗ್ಆಟಗಾರರಾಷ್ಟ್ರ ಅಂಕಗಳು
1.ನೊವಾಕ್
ಜೊಕೊವಿಕ್ಸರ್ಬಿಯಾ16,790
2.ಆಂಡಿ ಮರ್ರೆಬ್ರಿಟನ್8,945
3.ರೋಜರ್ ಫೆಡರರ್ಸ್ವಿಜರ್ಲೆಂಡ್8,165
4.ಸ್ಟ್ಯಾನ್ ವಾವ್ರಿಂಕಾಸ್ವಿಜರ್ಲೆಂಡ್6,865
5.ರಾಫೆಲ್ ನಡಾಲ್ಸ್ಪೇನ್5,230

ಅಕ್ಕಿ ರಫ್ತು: ಭಾರತ ನಂ.1

ಅಕ್ಕಿ ರಫ್ತು: ಭಾರತ ನಂ.1
1 Feb, 2016
ಬ್ಯಾಂಕಾಕ್ (ಐಎಎನ್ಎಸ್): ಕಳೆದ ವರ್ಷ ಅತಿ ಹೆಚ್ಚು ಅಕ್ಕಿ
ರಫ್ತು ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರ
ಸ್ಥಾನದಲ್ಲಿದೆ.
2015ರಲ್ಲಿ ಭಾರತವು ಜಾಗತಿಕ ಮಾರುಕಟ್ಟೆಗೆ 1.2 ಕೋಟಿ ಟನ್ ಅಕ್ಕಿ
ರಫ್ತು ಮಾಡಿದ್ದು, ಇಲ್ಲಿಯವರೆಗೆ ಮೊದಲ
ಸ್ಥಾನದಲ್ಲಿದ್ದ ಥಾಯ್ಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದೆ.
2014ರಲ್ಲಿ 1.09 ಕೋಟಿ ಟನ್ ಅಕ್ಕಿ ರಫ್ತು ಮಾಡಿದ್ದ
ಥಾಯ್ಲೆಂಡ್ನ ಸಾಮರ್ಥ್ಯ 2015ರಲ್ಲಿ 98 ಲಕ್ಷ ಟನ್ಗೆ
ಕುಸಿದಿದೆ ಎಂದು ಥಾಯ್ ಅಕ್ಕಿ ರಫ್ತು ಸಂಘದ ಮುಖ್ಯಸ್ಥ
ಚಾರೋನ್ ಲೌಥಮ್ಥಾಟ್ ತಿಳಿಸಿದ್ದಾರೆ.

Saturday, January 30, 2016

ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಹುದ್ದೆ ಖಾಲಿ:*


ಬೆಂಗಳೂರು: ರಾಜ್ಯ ಪೊಲೀಸ್
ಇಲಾಖೆಯಲ್ಲಿ ವಿವಿಧ ಶ್ರೇಣಿಯ ಒಟ್ಟು 25 ಸಾವಿರದ 749
ಪೊಲೀಸ್ ಹುದ್ದೆಗಳು ಖಾಲಿಯಿವೆ ಎಂದು
ಹೈಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ
ಖಾಲಿಯಿರುವ ಹುದ್ದೆಗಳ ಅಂಕಿಅಂಶ ಕುರಿತು ಮಾಹಿತಿ
ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನೀಡಿದ್ದ
ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ
ಪೊಲೀಸ್ ಮಹಾ ನಿರ್ದೇಶಕ (ನೇಮಕಾತಿ ಮತ್ತು
ತರಬೇತಿ ವಿಭಾಗ) ರಾಘವೇಂದ್ರ ಔರಾದ್ಕರ್ ಹೈಕೋರ್ಟ್ ಶುಕ್ರವಾರ
ಪ್ರಮಾಣ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಎಯಿಂದ ಡಿ ವೃಂದದವರೆಗೆ ಒಟ್ಟು 99
ಸಾವಿರದ 189 ಪೊಲೀಸ್ ಕಾರ್ಯ ನಿರ್ವಾಹಕ
ಹುದ್ದೆಗಳು ಭರ್ತಿಯಾಗಿದ್ದು, 25 ಸಾವಿರದ 749 ಹುದ್ದೆಗಳು
ಖಾಲಿಯಿವೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು
ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿಯಿವೆ
ಎಂದು ಮಾಹಿತಿ ನೀಡಿದ್ದಾರೆ.
ಸಚಿವಾಲಯ ಸೇರಿದಂತೆ ತಾಂತ್ರಿಕ ವಿಭಾಗದಲ್ಲಿ 1, 03,
457 ಹುದ್ದೆಗಳು ಮಂಜೂರಾಗಿದ್ದು, 74 ಸಾವಿರದ 389
ಭರ್ತಿಯಾಗಿವೆ. 27 ಸಾವಿರದ 068 ಹುದ್ದೆಗಳು ಖಾಲಿಯಿವೆ. ಒಟ್ಟಾರೆ
ಎಯಿಂದ ಡಿ ವೃಂದದವರೆಗೆ ಶೇಕಡಾ 25ರಷ್ಟು
ಕಾರ್ಯನಿರ್ವಾಹಕ ಹುದ್ದೆಗಳು ಪೊಲೀಸ್
ಇಲಾಖೆಯಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವುದಾಗಿ ತಿಳಿಸಲಾಗಿದೆ.

ಸಾನಿಯಾಮಿರ್ಜಾ- ಮಾರ್ಟೀನಾ ಜೋಡಿಗೆ ಆಸ್ಟ್ರೇಲಿಯನ್ ಡಬಲ್ಸ್ ಪ್ರಶಸ್ತಿ:-


ಮೆಲ್ಬೋರ್ನ್, ಜ.29- ಇಲ್ಲಿ ನಡೆದ ಆಸ್ಟ್ರೇಲಿಯನ್
ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಭಾರತದ
ಸಾನಿಯಾ ಮಿರ್ಜಾ ಮತ್ತು ಸ್ವಿಡ್ಜರ್ಲ್ಯಾಂಡ್ನ
ಮಾರ್ಟೀನಾ ಹಿಂಗೀಸ್ ಜೋಡಿ
ಮುಡಿಗೇರಿಸಿಕೊಂಡಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಚೆಕ್
ರಿಪಬ್ಲಿಕ್ನ ಆಂಡ್ರಿಯಾ ಮತ್ತು ಲ್ಯೂಸಿ
ಜೋಡಿಯನ್ನು 7-6, 6-3 ಸೆಟ್ಗಳಿಂದ ಮಣಿಸಿ
ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದೆ. ಆರಂಭದಲ್ಲಿ
ಮುನ್ನಡೆ ಸಾಧಿಸಿದ್ದ ಸಾನಿಯಾ-ಹಿಂಗೀಸ್
ಜೋಡಿಯನ್ನು ಪ್ರಬಲವಾಗಿ ಎದುರೇಟು
ನೀಡುವಲ್ಲಿ ಚೆಕ್ನ ಜೋಡಿ ಯಶಸ್ವಿಯಾಗಿತ್ತು.
ಆದರೆ, ಟೈಬ್ರೇಕರ್ನಲ್ಲಿ ಚುರುಕಾದ ಆಟದಿಂದ
ಪ್ರಥಮ ಸೆಟ್ಅನ್ನು ಕೈ ವಶಪಡಿಸಿಕೊಂಡಿತು.
ಆದರೆ, ಎರಡನೆ ಸೆಟ್ನಲ್ಲಿ ಪ್ರಾಬಲ್ಯ ಮೆರೆದು
ಸುಲಭವಾಗಿಯೇ ಪಂದ್ಯವನ್ನು ತನ್ನತ್ತ
ತೆಗೆದುಕೊಂಡು ಪ್ರಶಸ್ತಿ ಕೂಡ
ತನ್ನದಾಗಿಸಿಕೊಂಡರು. ಸತತ ಮೂರು
ಗ್ರ್ಯಾಂಡ್ಸ್ಲ್ಯಾಮ್ಗಳನ್ನು ಗೆದ್ದ ಕೀರ್ತಿ
(ವಿಂಬಲ್ಡನ್, ಯು.ಎಸ್.ಓಪನ್ ಈಗ ಆಸ್ಟ್ರೇಲಿಯನ್
ಓಪನ್) ಮಹಿಳಾ ಡಬಲ್ಸ್ ಪ್ರಶಸ್ತಿ ಸಾನಿಯಾ-
ಮಾರ್ಟಿನಾ ಹಿಂಗೀಸ್ಗೆ ಸಲ್ಲುತ್ತದೆ. ಸತತ
ಗೆಲುವಿನ ನಾಗಾಲೋಟದಲ್ಲಿರುವ ಈ ಜೋಡಿ
ಈಗ ಹೊಸ ದಾಖಲೆಗೂ ಪಾತ್ರವಾಗಿದೆ..