Drop


Sunday, February 2, 2014

RANJI FINAL WINNING STORY OF K.TAK ..read it kannada here

ಹೈದರಾಬಾದ್(ಫೆ.02): ನಿರೀಕ್ಷೆಯಂತೆ
ಕರ್ನಾಟಕ ತಂಡ ಈ ಬಾರಿಯ ರಣಜಿ
ಟ್ರೋಫಿ ಎತ್ತಿಹಿಡಿದಿದೆ. ರಣಜಿ
ಫೈನಲ್'ನಲ್ಲಿ ಮಹಾರಾಷ್ಟ್ರದ
ಪ್ರತಿರೋಧವನ್ನ ಕರ್ನಾಟಕ
ಸಮರ್ಥವಾಗಿ ಹೊಸಕಿಹಾಕಿತು.
ಗೆಲ್ಲಲು 157 ರನ್ ಸವಾಲನ್ನ ಇನ್ನೂ 7
ವಿಕೆಟ್ ಇರುವಂತೆಯೇ ಕರ್ನಾಟಕ ಮೆಟ್ಟಿ
ನಿಂತಿತು.... ಈ ಮೂಲಕ ಏಳನೇ ಬಾರಿಗೆ
ರಣಜಿ ಚಾಂಪಿಯನ್ ಪಟ್ಟ ಗಿಟ್ಟಿಸಿತು...
ಕರ್ನಾಟಕದ ಗೆಲುವಿಗೆ ಮುನ್ನ
ಮಹಾರಾಷ್ಟ್ರ ಸಾಕಷ್ಟು ಪ್ರತಿರೋಧ
ಒಡ್ಡಿದಂತೂ ನಿಜ... ಮಾಡು ಇಲ್ಲ ಮಡಿ
ಸ್ಥಿತಿಯಲ್ಲಿದ್ದ ಮಹಾರಾಷ್ಟ್ರ
ಅಷ್ಟು ಸುಲಭವಾಗಿ ಸೋಲಪ್ಪಲಿಲ್ಲ. 6
ವಿಕೆಟ್ ನಷ್ಟಕ್ಕೆ 272 ರನ್'ಗಳೊಂದಿಗೆ
ಹಾಗೂ 62 ರನ್ ಮುನ್ನಡೆಯೊಂದಿಗೆ
ಕೊನೆಯ ದಿನದಾಟ ಪ್ರಾರಂಭಿಸಿದ
ಮಹಾರಾಷ್ಟ್ರ ನಿರೀಕ್ಷೆ ಮೀರಿ
ಇನಿಂಗ್ಸ್ ಬೆಳೆಸಿತು. ಬಾಕಿ ಉಳಿದ
ನಾಲ್ಕು ವಿಕೆಟ್'ಗಳಿಗೆ 94
ರನ್'ಗಳು ಹರಿದುಬಂದವು. ತಂಡದ
ಎರಡನೇ ಇನಿಂಗ್ಸ್ 366 ರನ್ನಿಗೆ
ಉಬ್ಬಿತು... ಈ ಮೂಲಕ ಕರ್ನಾಟಕಕ್ಕೆ
ಗೆಲ್ಲಲು ಮಹಾರಾಷ್ಟ್ರ 157 ರನ್
ಸವಾಲೊಡ್ಡಿತು...
ಕ್ವಾರ್ಟರ್'ಫೈನಲ್'ನಲ್ಲಿ
ಮುಂಬೈ ವಿರುದ್ಧ ಮೊದಲ ಇನಿಂಗ್ಸ್
ಹಿನ್ನಡೆ ಇದ್ದೂ ಪಂದ್ಯ ಗೆದ್ದಿದ್ದ
ಮಹಾರಾಷ್ಟ್ರ
ಫೈನಲ್'ನಲ್ಲೂ ಅಂಥದ್ದೇ ಪವಾಡದ
ನಿರೀಕ್ಷೆಯಲ್ಲಿತ್ತು... ಆದರೆ,
ಕರ್ನಾಟಕದ ಬ್ಯಾಟುಗಾರರು ಅದಕ್ಕೆ
ಅವಕಾಶ ನೀಡಲಿಲ್ಲ.
ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ
ಸೋಲದ ಕರ್ನಾಟಕ
ಫೈನಲ್'ನಲ್ಲೂ ಎಡವಲಿಲ್ಲ...
ಈ ಗೆಲುವಿನ ಮೂಲಕ ಕರ್ನಾಟಕ
ಏಳನೇ ಬಾರಿ ರಣಜಿ ಟ್ರೋಫಿ
ಎತ್ತಿಹಿಡಿಯಿತು. ಅಲ್ಲದೇ, 15 ವರ್ಷಗಳ
ಬಳಿಕ ಕರ್ನಾಟಕಕ್ಕೆ ಸಿಕ್ಕ ಚೊಚ್ಚಲ
ರಣಜಿ ಟ್ರೋಫಿ ಇದು... ಇನ್ನೊಂದೆಡೆ,
ಏಳು ದಶಕಗಳ ನಂತರ ರಣಜಿ ಗೆಲ್ಲುವ
ಮಹಾರಾಷ್ಟ್ರ ಕನಸು ಭಗ್ನಗೊಂಡಿತು.
ಆದರೂ, ಮಹಾರಾಷ್ಟ್ರ ಈ ಸಾಲಿ
ರಣಜಿಯಲ್ಲಿ ನಿಜಕ್ಕೂ ಗಮನಾರ್ಹ
ಪ್ರದರ್ಶನ ನೀಡಿತು. ಸಿ ಗ್ರೇಡ್ ಟೀಮ್
ಎಂದೇ ಮೊದಲಿಂದಲೂ ಕರೆಸಿಕೊಂಡು
ಬರುತ್ತಿದ್ದ ಮಹಾರಾಷ್ಟ್ರದ ಮೇಲೆ
ಇಡೀ ದೇಶದ ಕಣ್ಣು ಬೀಳುವಂತಾಗಿದೆ.
ವಿಜಯ್ ಜೋಲ್, ಕೇದಾರ್ ಜಾಧವ್,
ಎಸ್.ಅತೀತ್ಕರ್, ಅಂಕಿತ್ ಬಾವ್ನೆಯಂಥ
ಪ್ರತಿಭೆಗಳಿಂದಾಗಿ ಮಹಾರಾಷ್ಟ್ರದ
ಭವಿಷ್ಯ ಉಜ್ವಲವಾಗಿರುವಂತೆ
ತೋರಿದೆ.
ಕರ್ನಾಟಕ ಯಾವ್ಯಾವಾಗ
ಗೆದ್ದಿತ್ತು...?
1) 1973-74
2) 1977-78
3) 1982-83
4) 1995-96
5) 1997-98
6) 1998-99
7) 2013-14
ಕರ್ನಾಟಕ
ಫೈನಲ್'ಗೇರಿದ್ದು ಯಾವಾಗ?
1) 1973-74
2) 1978-79
3) 1981-82
4) 2009-10
ಸ್ಕೋರು ವಿವರ:
ಮಹಾರಾಷ್ಟ್ರ ಮೊದಲ ಇನಿಂಗ್ಸ್
305/10 ರನ್
ಕರ್ನಾಟಕ ಮೊದಲ ಇನಿಂಗ್ಸ್ 515/10
ರನ್
ಮಹಾರಾಷ್ಟ್ರ ಎರಡನೇ ಇನಿಂಗ್ಸ್
366/10
(ಕೇದಾರ್ ಜಾಧವ್ 112, ಅಂಕಿತ್ ಬಾವ್ನೆ
61, ಶ್ರೀಕಾಂತ್ ಮುಂಧೆ 42, ಚಿರಾಗ್
ಖುರಾನ 37, ವಿಜಯ್ ಜೋಲ್ 31 ರನ್ -
ಶ್ರೇಯಸ್ ಗೋಪಾಲ್ 47/4, ಆರ್.ವಿನಯ್
ಕುಮಾರ್ 116/4, ಅಭಿಮನ್ಯು ಮಿಥುನ್
77/2)
ಕರ್ನಾಟಕ ಎರಡನೇ ಇನಿಂಗ್ಸ್ 40.5
ಓವರ್ 157/3
(ರಾಬಿನ್ ಉತ್ತಪ್ಪ 36, ಕೆಎಲ್ ರಾಹುಲ್
29, ಅಮಿತ್ ವರ್ಮಾ 38, ಮನೀಶ್ ಪಾಂಡೆ
ಅಜೇಯ 28, ಕರುಣ್ ನಾಯರ್ ಅಜೇಯ
20)