Drop


Wednesday, March 25, 2015

ದಯಮಾಡಿ ಚೀಟಿದಾರರೇ ಗಮನಿಸಿ:

:
ಕಳೆದ 2 ವಷ೯ಗಳ ಹಿಂದೆ ಅಥವಾ ಇತ್ತೀಚೆಗೆ ಹೊಸ ಪಡಿತರ ಚೀಟಿಗೆ ಅಜಿ೯ಹಾಕಿ ಪಡಿತರ ಚೀಟಿಗಾಗಿ ಕಾಯುತ್ತಿರುವವರು ದಯಮಾಡಿ ಈ ತಿಂಗಳೊಳಗೆ ದಾಖಲಾತಿಗಳನ್ನು ತಾಲ್ಲೂಕು ಕಛೇರಿಯ ಆಹಾರ ಇಲಾಖೆಗೆ ಸಲ್ಲಿಸಿ ಪಡೆಯಬೇಕು, ಇಲ್ಲದಿದ್ದಲ್ಲಿ ಅಂತಹ ಕಾಡ್೯ನ್ನು ರದ್ದುಪಡಿಸಲಾಗುತ್ತದೆ.

*ಹೊಸ ಪಡಿತರ ಚೀಟಿ ಪಡೆಯಲು ಈ ಕೆಳಗಿನ ದಾಖಲಾತಿ ಅವಶ್ಯ:
          1.ಪಂಚಾಯ್ತಿಯಲ್ಲಿ ಹೊಸಪಡಿತರ ಚೀಟಿಗಾಗಿ ನೀಡಿದ ಗಣಕೀಕೃತ ಚೀಟಿ. ಬಿ ಪಿ ಎಲ್ ಪಡಿತರ ಚೀಟಿಗೆ ಅಜಿ೯ಹಾಕಿರುವವರು ಈ ಚೀಟಿ ಮೇಲೆ ಗ್ರಾಮಲೆಕ್ಕಿಗಾರ ವರದಿ ಬರೆಸಬೇಕು.
                      2.ಬಿ ಪಿ ಎಲ್ ಗೆ ಅಜಿ೯ಹಾಕಿರುವವರು ಆದಾಯ ದೃಢೀಕರಣ
                3.ಹಳೆ ಪಡಿತರ ಚೀಟಿಯಿಂದ ಹೆಸರು ಕೈಬಿಟ್ಟ ಡಿಲಿಷನ್ ಪತ್ರ ಅಥವಾ ಹಳೆ ಪಡಿತರ ಚೀಟಿ ಸರೆಂಡರ್ ಮಾಡಬೇಕು
             4.ಮನೆಕಂದಾಯ ರಶೀದಿ ಅಥವಾ ಬಾಡಿಗೆ ಕರಾರು ಪತ್ರ
               5.ವಿದ್ಯುತ್ ಸಂಖ್ಯೆ ತೊರಿಸಿದ್ದಲ್ಲಿ ವಿದ್ಯುತ್ ಬಿಲ್
               6.ಮತದಾರರ ಗುರುತಿನ ಚೀಟಿ ಹಾಗೂ ಆದಾರ್ ಸಂಖ್ಯೆ ಹೊಂದಾಣಿಕೆ ಪತ್ರ
                7.ಸದಸ್ಯರ ಮತಧಾರರ ಗುರುತಿನ ಚೀಟಿ ಹಾಗೂ ಆದಾರ್ ಜೆರಾಕ್ಸ ಪ್ರತಿ

ಈ ಮೇಲಿನ ದಾಖಲಾತಿ ಸಲ್ಲಿಸಿ ಪಡೆಯಬಹುದು ಮಾಚ್೯ 31 ಕಡೆಯ ದಿನ.

ಮೇ ತಿಂಗಳಲ್ಲಿ ಮತ್ತೆ ಹೊಸ ಪಡಿತರಚೀಟಿಗೆ ಅಜಿ೯ಯನ್ನು ಗ್ರಾಮ ಪಂಚಾಯಿತಿಗಳಲ್ಲಿ ಸಲ್ಲಿಸಬಹುದು.

2008 ಹಾಗೂ 2010ರ ಪಡಿತರ ನವೀಕರಣ ಈ ಹಿಂದಿನಂತೆ ಮುಂದುವರಿಯಲಿದ್ದು ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿ ಅಥವಾ ಆಹಾರ ನೀರಕ್ಷಕರನ್ನು ಭೇಟಿಯಾಗಿ.

-ಸಂತೋಷ ಕೆ ಆರ್ ಕೂವೆ ಗ್ರಾಮ ಪಂಚಾಯಿತಿ