Follow by Email

Wednesday, March 11, 2015

ಜಸ್‌ಪಾಲ್‌ಸಿಂಗ್‌, ವಸಂತ್‌ ನಿರ್ಗುಣ್‌ಗೆ ‘ಭಾಷಾ ಸಮ್ಮಾನ್‌’::

ನವದೆಹಲಿ (ಐಎಎನ್‌ಎಸ್‌): ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ 'ಭಾಷಾ ಸಮ್ಮಾನ್‌' ಪುರಸ್ಕಾರಕ್ಕೆ ಜಸ್‌ಪಾಲ್‌ಸಿಂಗ್‌ ಮತ್ತು ವಸಂತ್‌ ನಿರ್ಗುಣ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಉತ್ತರ ಭಾರತದ ಮಧ್ಯಕಾಲೀನ ಸಾಹಿತ್ಯದ ಸಂಶೋಧಕ, ಶಿಕ್ಷಣ ತಜ್ಞ ಜಸ್‌ಪಾಲ್‌ ಸಿಂಗ್‌ ಮತ್ತು ಭಿಲಿ ಭಾಷೆಯ ಸಾಹಿತ್ಯ ಕೊಡುಗೆಗಾಗಿ ವಸಂತ್‌ ನಿರ್ಗುಣ್‌ ಅವರನ್ನು 'ಭಾಷಾ ಸಮ್ಮಾನ್‌' ಪುರಸ್ಕಾರಕ್ಕೆ ಆರಿಸಲಾಗಿದೆ.

'ಭಾಷಾ ಸಮ್ಮಾನ್‌' ಪುರಸ್ಕಾರವು ₹ 1 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. 1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಈ ಪುರಸ್ಕಾರ ಸ್ಥಾಪಿಸಿದ್ದು, ಸಾಹಿತ್ಯ, ಸಂಶೋಧನೆ, ಸಂಪಾದನೆ, ಅನುವಾದ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಸಾಹಿತಿಗಳನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ.