ಮೇ 4 ಭಾರತದ ಇತಿಹಾಸ ಪಾಲಿಗೆ ಕರಾಳ ದಿನ (ಟಿಪ್ಪು ಹುತಾತ್ಮನಾದ ದಿನ)

ಹೌದು,
ಮೇ 4 ಭಾರತದ ಇತಿಹಾಸದ ಶೋಕದಿನಗಳಲ್ಲೊಂದು.ಬಹುಷಃ 1779 ರ ಮೇ 4 ರಂದು ಆ ಘಟನೆ ನಡೆಯದೇ ಇರುತ್ತಿದ್ದರೆ ದೇಶದ ಇತಿಹಾಸವಿಂದು ಬೇರೆಯೇ ಆಗಿರುತ್ತಿತ್ತು.
ಭವ್ಯ ಭಾರತದ ಮೇಲೆ ಬ್ರಿಟಿಷರು ಆಕ್ರಮಣ ಮಾಡುವಾಗ ಅಕ್ಕ ಪಕ್ಕದ ಅರಸರೆಲ್ಲಾ ಬ್ರಿಟಿಷ್ ಪ್ರಭುಗಳ ಮುಂದೆ ಮಂಡಿಯೂರಿದಾಗಲೂ ತಾನು ಅವರಲ್ಲೊಬ್ಬರಾಗದೆ ಎದೆಯೊಡ್ಡಿ ನಿಂತು ಕೊನೆಯುಸಿರಿನ ತನಕ ಹೋರಾಡಿ "ಮೈಸೂರು ಹುಲಿ "ಎಂಬ ಬಿರುದಿನಿಂದ ಅಲಂಕರಿಸಿದ ವ್ಯಕ್ತಿಯೇ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ..!!

ತನ್ನ ತಂದೆಯ ಮರಣಾನಂತರ ಅಧಿಕಾರದ ಗದ್ದುಗೆಯನ್ನೇರಿ ಸರಿಸುಮಾರು  ಒಂಭತ್ತು ಸಾವಿರದಷ್ಟಿದ್ದ ಸೇನೆಯ ಸೇನಾಧಿಪತಿಯಾಗಿ ಮೈಸೂರು -ಮಲಬಾರ್ ಗಳನ್ನೊಲಗೊಂಡ ದಕ್ಷಿಣ ಭಾರತದ ಪ್ರಬಲ ರಾಜ್ಯವೊಂದರ ಅರಸರಾಗಿ ಅಧಿಕಾರವನ್ನು ನಿರ್ವಹಿಸಿ ಬ್ರಿಟಿಷರ ವಿರುದ್ಧ ಸಮರ ಸಾರಿದರು.ಇದರಿಂದ ಹತಾಶರಾದ ಬ್ರಿಟಿಷರು ಟಿಪ್ಪು ಸುಲ್ತಾನ್ ರ.ಅ ರವರನ್ನು ಹತ್ಯೆಗೈದು ಮೈಸೂರನ್ನು ವಶಪಡಿಸಿಕೊಂಡರೆ ಮಾತ್ರ ನಮಗೆ ನೆಮ್ಮದಿಯೆಂದು ಭಾವಿಸಿ ಆ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದರು.
ಅದು ಮೇ 4 ರ ಮಧ್ಯಾಹ್ನ ಹೊತ್ತು ತನ್ನ ಐವರು ಸಹಚರರೊಂದಿಗೆ ಕೋಟೆಯೊಳಗೆ ಊಟ ಮಾಡುತ್ತಿದ್ದ ಸಮಯದಲ್ಲಿ ಶತ್ರುಗಳು ಕೋಟೆಯೊಳಗೆ ಪ್ರವೇಶಿಸಿದರು.
ಶತ್ರುಗಳ ಅನಿರೀಕ್ಷಿತವಾದ ಪ್ರವೇಶದ ಕುರಿತೂ ಒಂದೂ ಅರ್ಥವಾಗಲಿಲ್ಲ.ಅರ್ಥವಾದರೂ ಚಿಂತಿಸುವ ಸಮಯವಿರಲಿಲ್ಲ
ಶಶ್ತ್ರ ಸಜ್ಜಿತವಾದ ಬ್ರಿಟಿಷ್ ಸೈನ್ಯದ ಮುಂದೆ ತನ್ನೆಲ್ಲಾ ಶೌರ್ಯಗಳನ್ನು ಬಳಸಿಕೊಂಡು ಟಿಪ್ಪು ಸುಲ್ತಾನ್ ರ.ಅ ಹೋರಾಡಿದರು.ನೂರಾರು ಶತ್ರು ಸೈನಿಕರು ಅವರ ಖಡ್ಗಕ್ಕೆ ರಕ್ತ ಕೊಟ್ಟು ನೆಲಕ್ಕುರುಳಿದರು.ಟಿಪ್ಪು ಸುಲ್ತಾನರ ಚಾತುರ್ಯ ಕಂಡು ಬ್ರಿಟಿಷರು ದಂಗಾಗಬೇಕಾಯಿತು.
ಅಷ್ಟರಲ್ಲಿ ವಂಚನೆಯ ಕದ್ದು ನಿಂತು ಹೊಡೆದ ಗುಂಡೊಂದು ಟಿಪ್ಪು ಸುಲ್ತಾನ್ ರ.ಅ ರವರ ಎದೆಯ ಎಡೆ ಭಾಗಕ್ಕೆ ನಾಟಿತು.ರಕ್ತ ಚಿಮ್ಮಿತು ಆದರೂ ಟಿಪ್ಪು ಸುಲ್ತಾನ್ ರ.ಅ ರವರು ಹೋರಾಟ ಮುಂದುವರಿಸಿದರು.ಇನ್ನು ಅನೇಕರು ಟಿಪ್ಪು ಸುಲ್ತಾನ್ ರ.ಅ ರವರ ಖಡ್ಗಕ್ಕೆ ತನ್ನ ರಕ್ತವನ್ನು ಕುಡಿಸಿ ಸತ್ತು ಬಿದ್ದರು.ಟಿಪ್ಪು ಸುಲ್ತಾನ್ ರ.ಅ ರವರ ಎದೆಯಿಂದ ರಕ್ತ ಚಿಮ್ಮುತ್ತಲೇ ಇದ್ದರೂ ಪೆಟ್ಟಾದ ಹುಲಿಯಂತೆ ಮತ್ತಷ್ಟು ವ್ಯಾಘ್ರಗೊಂಡು ಕತ್ತಿಯೆತ್ತುತ್ತಲೇ ಇದ್ದರು.ದೇಹವು ರಕ್ತ ಸಿಂಕನವಾಗಿದ್ದರೂ ವೀರಾವೇಶವೇನು ಕುಂದಿರಲಿಲ್ಲ.ಅಷ್ಡರಲ್ಲಿ ವಂಚನೆಯ ಮತ್ತೊಂದು ಗುಂಡು ಅವರ ಎದೆಯ ಬಲಭಾಗಕ್ಕೆ ತಾಗಿತು.ಆ ವೀರಪರಾಕ್ರಮಿ ನೆಲಕ್ಕುರುಳಿದರು.
ಉಸಿರು ಇನ್ನು ಉಳಿದಿರುವ ಟಿಪ್ಪು ಸುಲ್ತಾನ್ ರ.ಅ ರವರನ್ನು ಸಮೀಪಿಸಲು ಯಾರಿಗೂ ಧೈರ್ಯ ಸಾಲುತ್ತಿರಲಿಲ್ಲ.ಮತ್ತೆ ಮತ್ತೆ ಗುಂಡು ಹಾರಿಸಿದರು , ಒಂದು ಗುಂಡು ಅವರ ಹಣೆಗೆ ನಾಟಿತು.ಅದರೊಂದಿಗೆ ಅವರ ಜೀವನದ ಕೊನೆಕ್ಷಣವು ಕೊನೆಗೊಂಡಿತು..!!

ಹುಲಿಯೆಂದು ಹೆಸರು ಪಡೆದ ಟಿಪ್ಪು ಸುಲ್ತಾನರು ಹುಲಿಯಂತೆಯೇ ಜೀವಿಸಿ ಹುಲಿಯಾಗಿಯೇ ಮಡಿದರು.ಆ ಪುಣ್ಯ ದೇಹದಿಂದ ದೇಶಪ್ರೇಮವನ್ನು ಕರಗಿಸಿಕೊಂಡಿದ್ದ ಕೆನ್ನೆತ್ತರು ದೇಶದ ದೇಹಕ್ಕೆ ಹರಿಯತೊಡಗಿತು.ಮೈಸೂರಿನ ಮೈಮನಗಳು ಸ್ಥಬ್ದಗೊಂಡವು.ಭಾರತಮಾತೆ ತನಗಾಗಿ ಮಡಿದ ಧೀರ ಪುತ್ರನಿಗಾಗಿ ಕಣ್ಣೀರು ನೆತ್ತರಾಗಿ ಸುರಿದ ಶೋಕದಿನ.ಆದರೆ ಬ್ರಿಟಿಷರಿಗಂದು ಅದು ಸಂತೋಷದ ದಿನವಾಗಿತ್ತು.
ಅವರ ಮಯ್ಯತ್ತಿನ ಮುಖದಲ್ಲಿ ಶೋಭಿಸುತ್ತಿದ್ದ ಧೀರ ತೇಜಸ್ಸು ಒಂದು ಕ್ಷಣ ಅವರ ಮನಸ್ಸಿನಲ್ಲಿ ಭಯ ಮೂಡಿಸಿದರೂ ಜೀವ ಹೋಗಿದೆಯಲ್ಲ ಎಂಬ ಸಮಾಧಾನ ಅವರಿಗೆ ಧೈರ್ಯ ನೀಡುತ್ತಿತ್ತು.ಆ ಪುಣ್ಯ ದೇಹದ ಮೇಲೇರಿ ಅವರು ಹರ್ಷವನ್ನಾಚರಿಸಿ "Now india in our "  "ಇನ್ನು ಭಾರತ ನಮ್ಮದು "ಎಂದು ನಿಟ್ಟುಸಿರು ಬಿಟ್ಟರು..!!

ಭವ್ಯ ಭಾರತ ದೇಶದ ವಿಮೋಚನೆಗಾಗಿ ಹೋರಾಡಿದ ಮಹಾನ್ ದೇಶಪ್ರೇಮಿ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರನ್ನು ಇಂದು ಕೆಲ ಹಳದಿ ರೋಗ ಪೀಡಿತರು ಮತೀಯವಾದಿ ಅನ್ನುವಂತೆ ಬಿಂಬಿಸಿ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿರುವುದು ವಿಪರ್ಯಾಸ.
ಅಂದು ಧೀರ ಹುಲಿಯಂತೆ ಬಾಳಿದ ಟಿಪ್ಪು ಸುಲ್ತಾನ್ ರ.ಅ ರವರಿಗೆ ಬ್ರಿಟಿಷ್ ಸೈನ್ಯ ಭಯಪಟ್ಟರೆ ಇಂದು ಆ ಧೀರ ಪರಾಕ್ರಮಿಯ ಹೆಸರು ಕೇಳುವಾಗ ಕೆಲವು ಕೋಮುವಾದಿಗಳ ಮನಸಲ್ಲಿ ಭಯ ಆವರಿಸುತ್ತಿದೆ.

ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಮೂರು ನಿಮಿಷ ಹುಲಿಯಾಗಿ ಬಾಳು ಅನ್ನುವಂತಹ ಉದಾತ್ತವಾದ ಸಂದೇಶವನ್ನು ಪಸರಿಸಿದ ಟಿಪ್ಪು ಸುಲ್ತಾನ್ ರ.ಅ ರವರ ಧೀರತೆ,ದಕ್ಷತೆ ಯುವ ಸಮುದಾಯಕ್ಕೆ ಮಾದರಿಯಾಗಲಿ ಎಂದು ಆಶಿಸುತ್ತಾ ಅವರ ಜತೆ ನಮ್ಮನ್ನು ಜನ್ನಾತುಲ್ ಫಿರ್ದೌಸ್ ನಲ್ಲಿ ಒಂದುಗೂಡಿಸಲಿ ಎಂದು ಪ್ರಾರ್ಥಿಸೋಣ.

ಸ್ನೇಹಜೀವಿ ಅಡ್ಕ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023