ವಿಶ್ವ ಪ್ರವಾಸೋದ್ಯಮ ಪಟ್ಟಿಯಲ್ಲಿ ಭಾರತಕ್ಕೆ 52ನೇ ಸ್ಥಾನ-


Fri, 05/08/2015 - 01:00
ಜಿನೀವಾ (ಪಿಟಿಐ): ವಿಶ್ವ ಪ್ರವಾಸೋದ್ಯಮ ಪಟ್ಟಿಯಲ್ಲಿ ಭಾರತ 52ನೇ ಸ್ಥಾನದಲ್ಲಿದ್ದು, ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಪಟ್ಟಿಯಲ್ಲಿ ಸ್ವಲ್ಪಮಟ್ಟಿಗೆ ಮುಂದೆ ಬಂದಿದೆ. 2013ರ ಸಮೀಕ್ಷೆ ಪ್ರಕಾರ ಭಾರತ 65ನೇ ಸ್ಥಾನದಲ್ಲಿತ್ತು.   ವಿಶ್ವ ಆರ್ಥಿಕ ವೇದಿಕೆ ಈಗ ಬಿಡುಗಡೆ ಮಾಡಿರುವ ವರದಿ ಪ್ರಕಾರ ಭಾರತ 13 ರಾಷ್ಟ್ರಗಳನ್ನು ಹಿಂದಿಕ್ಕಿ 52ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಮೂಲಸೌಕರ್ಯ, ಆರೋಗ್ಯ, ಸುರಕ್ಷತೆ, ಭದ್ರತೆ ಇತ್ಯಾದಿ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಚೀನಾ, ಬ್ರೆಜಿಲ್‌, ರಷ್ಯಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಭಾರತಕ್ಕಿಂತ ಮುಂಚೂಣಿಯಲ್ಲಿವೆ. ಪಟ್ಟಿ ಪ್ರಕಾರ ಸ್ಪೇನ್‌, ಫ್ರಾನ್ಸ್‌, ಜರ್ಮನಿ, ಅಮೆರಿಕ, ಬ್ರಿಟನ್‌, ಸ್ವಿಟ್ಜರ್‌ಲೆಂಡ್‌, ಆಸ್ಟ್ರೇಲಿಯಾ, ಇಟಲಿ, ಜಪಾನ್‌ ಮತ್ತು ಕೆನಡಾ ಮೊದಲ ಹತ್ತು ಸ್ಥಾನದಲ್ಲಿವೆ.

ಆರ್ಥಿಕ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿರುವ ಚೀನಾ 17ನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್‌ 28ನೇ ಸ್ಥಾನದಲ್ಲಿದೆ.  ರಷ್ಯಾ 45 ಹಾಗೂ ದಕ್ಷಿಣ ಆಫ್ರಿಕಾ 48ನೇ ಸ್ಥಾನದಲ್ಲಿವೆ. ಭಾರತವು ಆರ್ಥಿಕ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಮಟ್ಟದ ವ್ಯಾಪಾರ– ವಹಿವಾಟಿನಲ್ಲಿ ಸ್ಪರ್ಧೆ ನೀಡುತ್ತಿರುವ ರಾಷ್ಟ್ರಗಳ ಗುಂಪಿನಲ್ಲಿ ಗುರುತಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

141 ರಾಷ್ಟ್ರಗಳಲ್ಲಿನ 14 ಪ್ರಮುಖ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ. ಪ್ರವಾಸಿಗರಿಗೆ ದೊರೆಯುವ ಆರ್ಥಿಕ ಮತ್ತು ಸಾಮಾಜಿಕ ಸೌಲಭ್ಯಗಳು, ಮೂಲಸೌಕರ್ಯ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023