Barack Obama nominates IIT alumni Sanjita Pradhan to key post:-

ವಾಷಿಂಗ್ಟನ್: ತಮ್ಮ ಸಲಹಾ ಮಂಡಳಿಯ ಪ್ರಮುಖ ಹುದ್ದೆಗೆ ಐಐಟಿ ಪದವೀಧರೆ ಸಂಜಿತಾ ಪ್ರಧಾನ್‌ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನಾಮನಿರ್ದೇಶನ ಮಾಡಿದ್ದಾರೆ.

ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ದ್ವೀಪದವರಿಗೆ ಸಂಬಂಧಿಸಂತೆ ಸಲಹೆ ನೀಡುವ ಮಂಡಳಿಗೆ ಸಂಜಿತಾ ಪ್ರಧಾನ್‌ ಅವರನ್ನು ಸೇರಿಸಿಕೊಳ್ಳುವುದಾಗಿ ಒಬಾಮ ಶುಕ್ರವಾರ ಘೋಷಿಸಿದ್ದಾರೆ.

ಪ್ರಧಾನ್‌ ಮೂಲತಃ ಭಾರತೀಯ ತಂತ್ರಜ್ಞಾನ ಸಂಸ್ಥೆ(ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ)ಯ ಎಂಬಿಎ ಪದವೀಧರೆಯಾಗಿದ್ದಾರೆ. ಇವರು ನಾನಾ ಆಡಳಿತ ಹುದ್ದೆಗಳಿಗೆ ಆಯ್ಕೆಯಾದ ಅತಿ ಪ್ರಮುಖರಲ್ಲಿ ಒಬ್ಬರು.

ಈ ಪುರುಷ ಮತ್ತು ಮಹಿಳಾ ಸಹೋದ್ಯೋಗಿಗಳು ತಮ್ಮ ಅಸಾಮಾನ್ಯ ಸಮರ್ಪಣೆ ಮನೋಭಾವದಿಂದ ತಮ್ಮ ಹುದ್ದೆಗಳನ್ನು ನಿರ್ವಹಿಸಲಿದ್ದಾರೆ ಹಾಗು ಅಮೆರಿಕದ ಜನರ ಸೇವೆ ಮಾಡಲಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ' ಎಂದು ಒಬಾಮಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಪಾಳಿ ಅಮೆರಿಕನ್ ಆಗಿರುವ ಸಂಜಿತಾ ಪ್ರಧಾನ್‌, ಸದ್ಯ ಏಷ್ಯನ್ ಕಚೇರಿ ಮತ್ತು ಪೆಸಿಫಿಕ್ ದ್ವೀಪದವರ ವ್ಯವಹಾರಗಳ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯೋವಾದ ಮಾನವ ಹಕ್ಕುಗಳ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2013ರಿಂದಲೂ ಅವರು ಈ ಹುದ್ದೆಯಲ್ಲಿದ್ದಾರೆ.

ಇದಕ್ಕೂ ಮುನ್ನ ಅಂದರೆ 2010ರಿಂದ 2013ರವರೆಗೆ ಅವರು ಆಯೋವಾದ ಕ್ಯಾಥೋಲಿಕ್ ಚಾರಿಟೀಸ್ ಆಪ್‌ ಡೆಮೊಯಿನೆಸ್‌ನಲ್ಲಿ ಪುನರ್ವಸತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2009ರಿಂದ 2010ರವರೆಗೆ ಅಯೋವಾದ ನಿರಾಶ್ರಿತರ ಸಹಕಾರಿ ಸೇವೆಯ ಲುಥೇರನ್ ಸರ್ವಿಸಸ್‌ನಲ್ಲಿ ಉದ್ಯೋಗ ಸಂಯೋಜಕರಾಗಿ ದುಡಿದಿದ್ದರು.

2007ರಿಂದ 2008 ರವರೆಗೆ ಸಂಜಿತಾ ಪ್ರಿನ್ಸಿಪಲ್‌ ಫೈನಾನ್ಷಿಯಲ್ ಗ್ರೂಪ್ನ ಮಾರುಕಟ್ಟೆ ವಿಭಾಗದ ಸಂಯೋಜಕರಾಗಿದ್ದರು. ಇದಲ್ಲದೆ ಆಕೆ ಬರ್ಮಾದ ಜನಾಂಗೀಯ ಅಲ್ಪಸಂಖ್ಯಾತರಿಗಾಗಿರುವ ಸಲಹಾ ಮಂಡಳಿಯಲ್ಲೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023