ದಿಲ್ಲಿ ವಿಮಾನ ನಿಲ್ದಾಣಕ್ಕೆ ವಿಶ್ವದ ಬೆಸ್ಟ್ ಏರ್‌ಪೋರ್ಟ್ ಗರಿ

ದಿಲ್ಲಿ ವಿಮಾನ ನಿಲ್ದಾಣಕ್ಕೆ ವಿಶ್ವದ ಬೆಸ್ಟ್ ಏರ್‌ಪೋರ್ಟ್ ಗರಿ
ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2014ನೇ ಸಾಲಿನ ವಿಶ್ವದ ಅತ್ಯುತ್ತಮ ಏರ್‌ಪೋರ್ಟ್ ಎಂಬ ಕೀರ್ತಿಗೆ ಪಾತ್ರವಾಗಿದೆ.

ಸೇವಾ ಗುಣಮಟ್ಟ ವಿಭಾಗದಲ್ಲಿ ದಿಲ್ಲಿ ವಿಮಾನ ನಿಲ್ದಾಣವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು. ಈ ವಿಮಾನ ನಿಲ್ದಾಣದ ಮೂಲಕ ವರ್ಷಕ್ಕೆ 2.5ರಿಂದ 4 ಕೋಟಿ ಪ್ರಯಾಣಿಕರು ತಮ್ಮೂರಿಗೆ ತಲುಪುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೋರ್ಡನ್‌ನಲ್ಲಿ ಏಪ್ರಿಲ್ 28ರಂದು ನಡೆದ ಏಷ್ಯಾ-ಫೆಸಿಫಿಕ್ ವಾರ್ಷಿಕ ಮಹಾಧಿವೇಶನದಲ್ಲಿ ಅಂತಾರಾಷ್ಟ್ರೀಯ ವಿಮಾನ ಸಮಿತಿಯು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ತಿಳಿದುಬಂದಿದೆ.

''ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದಿಲ್ಲಿ ವಿಮಾನ ನಿಲ್ದಾಣವನ್ನು ಪ್ರತಿನಿಧಿಸಲು ನಾವು ಹೆಮ್ಮೆ ಪಟ್ಟಿದ್ದೇವೆ. ಏರ್‌ಪೋರ್ಟ್‌ಗೆ ಬರುವ ಪ್ರಯಾಣಿಕರಿಗೆ ನೆನಪಿನಲ್ಲುಳಿಯುವ ಸೇವೆಯನ್ನು ನೀಡುವಲ್ಲಿ ನಮ್ಮ ಸಿಬ್ಬಂದಿ ವರ್ಗ ಯಶಸ್ವಿಯಾಗಿದೆ,'' ಎಂದು ದಿಲ್ಲಿ ವಿಮಾನ ನಿಲ್ದಾಣದ ಸಿಇಓ ಪ್ರಭಾಕರ್ ರಾವ್ ತಿಳಿಸಿದ್ದಾರೆ.

ಸಮಿತಿಯ ಒಟ್ಟು 300 ಸದಸ್ಯರು, ವಿಮಾನ ನಿಲ್ದಾಣಗಳ ಗುಣಮಟ್ಟ ಮತ್ತು ಸೇವೆಯನ್ನು ಪರೀಕ್ಷಿಸಿದ್ದಾರೆ. ಗರಿಷ್ಠ 5 ಅಂಕಗಳಿಗೆ ದಿಲ್ಲಿ ಏರ್‌ಪೋರ್ಟ್ 4.90 ಮಾರ್ಕ್ಸ್ ಪಡೆಯುವಲ್ಲಿ ಯಶಸ್ವಿಯಾಗಿದೆ. 2011,12,13ರಲ್ಲಿ ವಿಮಾನ ನಿಲ್ದಾಣವು ಎರಡನೇ ಸ್ಥಾನ ಪಡೆದುಕೊಂಡಿತ್ತು ಎಂದು ರಾವ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಮತ್ತು ಅದು ಗಳಿಸುತ್ತಿರುವ ಲಾಭದ ಪ್ರಮಾಣವೇ ಪ್ರಶಸ್ತಿಗೆ ಅರ್ಹತೆಗಳು.

2014-15ನೇ ಸಾಲಿನಲ್ಲಿ ವಿಮಾನ ನಿಲ್ದಾಣದಿಂದ ದಿನಂಪ್ರತಿ 885 ವಿಮಾನಗಳು ಹಾರಾಟ ನಡೆಸಿವೆ. 6,96,000 ಮೆಟ್ರಿಕ್ ಟನ್ ಸರಕನ್ನು ಸಾಗಾಟ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ದಿಲ್ಲಿ ವಿಮಾನ ನಿಲ್ದಾಣವು ಖಾಸಗಿ ಮತ್ತು ಸಾರ್ವಜನಿಕ ಪಾಲುದಾರಿಕೆಯಲ್ಲಿ ನಡೆಯುತ್ತಿದೆ. ಇಂಡಿಗೊ, ಏರ್ ಇಂಡಿಯಾ, ಸ್ಪೈಸ್ ಜೆಟ್ ಸೇರಿದಂತೆ ಹತ್ತಾರು ಕಂಪನಿಯ ವಿಮಾನಗಳು ಈ ಏರ್‌ಪೋರ್ಟ್‌ನಿಂದ ಪ್ರಯಾಣ ಆರಂಭಿಸುತ್ತವೆ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023