ಹುಲಿ ಬದಲು ಹಸು ರಾಷ್ಟ್ರೀಯ ಪ್ರಾಣಿ.. ?


ನವದೆಹಲಿ, ಮೇ 4- ಎಲ್ಲವೂ ನಿರೀಕ್ಷೆಯಂತೆ
ನಡೆದರೆ ಶೀಘ್ರದಲ್ಲೇ ಭಾರತೀಯರ ಗೋ ಮಾತೆ
ಎಂದೇ ಕರೆಯುವ ಹಸುವನ್ನು ರಾಷ್ಟ್ರೀಯ ಪ್ರಾಣಿ
ಎಂದು ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸದ್ಯಕ್ಕೆ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು
ಘೋಷಣೆ ಮಾಡಲಾಗಿದೆ. ಹುಲಿಗೆ ಬದಲಾಗಿ ಹಸುವನ್ನು
ರಾಷ್ಟ್ರೀಯ ಪ್ರಾಣಿ ಎಂದು ಪರಿಗಣಿಸಲು
ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು
ತಿಳಿಸಿವೆ. ಸಾಧ್ವಿ ರಿತಂಬರ ನೇತೃತ್ವದ
ನಿಯೋಗವೊಂದು ಇತ್ತೀಚೆಗೆ
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್
ಅವರನ್ನು ಭೇಟಿ
ಮಾಡಿ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು
ಪರಿಗಣಿಸುವಂತೆ ಮನವಿ ಪತ್ರ ಸಲ್ಲಿಸಿದ್ದರು. ಸಾಧುಗಳ
ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ
ಜಾವೇಡ್ಕರ್ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದು ಇದರ ಸಾಧಕ-
ಬಾಧಕಗಳ ಬಗ್ಗೆ ಉತ್ತರ ನೀಡುವಂತೆ ಕೋರಿದ್ದಾರೆ.
ಗೃಹ ಇಲಾಖೆಯು ಹಸುವನ್ನು ರಾಷ್ಟ್ರೀಯ ಪ್ರಾಣಿ
ಎಂದು ಪರಿಗಣಿಸಲು ಚಿಂತನೆ ನಡೆಸಿದೆ. ಆರ್ಎಸ್ಎಸ್ ಕೂಡ
ಇದಕ್ಕೆ ಬೆಂಬಲ ಸೂಚಿಸಿದ್ದು , ಕೇಂದ್ರ ಸರ್ಕಾರ ಸ್ಪಷ್ಟ
ನಿಲುವು ಕೈಗೊಳ್ಳಬೇಕೆಂದು ಮನವಿ ಮಾಡಿದೆ.
ದೇಶದಲ್ಲಿ ಗೋವುಗಳ ಸಂತತಿ ದಿನದಿಂದ ದಿನಕ್ಕೆ
ಕ್ಷೀಣಿಸುತ್ತಿದೆ. ಕೆಲವು ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ
ಕಾಯ್ದೆ ಜಾರಿ ಮಾಡಿದ್ದರೂ ಇನ್ನು ಕೆಲವು ರಾಜ್ಯಗಳಲ್ಲಿ ಇದು
ಚಾಲ್ತಿಯಲ್ಲಿದೆ. ಗೋವುಗಳ ರಕ್ಷಣೆಗಾಗಿ ಸೂಕ್ತ ಕ್ರಮ
ಕೈಗೊಳ್ಳಬೇಕೆಂದು ಆರ್ಎಸ್ಎಸ್ ಸಲಹೆ
ಮಾಡಿರುವುದರಿಂದ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿಯೇ
ಪರಿಗಣಿಸಿದೆ. ಎಲ್ಲವೂ
ಅಂದುಕೊಂಡಂತೆ ನಡೆದರೆ
ಭಾರತೀಯರು ಪವಿತ್ರ ಪ್ರಾಣಿ ಎಂದೇ ಪರಿಗಣಿಸುವ
ಹಸುವಿಗೆ ರಾಷ್ಟ್ರೀಯ ಪ್ರಾಣಿ ಪಟ್ಟ ಸಿಗುವುದು ಬಹುತೇಕ
ಖಚಿತ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023