ಜಾತಿ ಗಣತಿ ಬಳಿಕ ಮನೆಮನೆಗೂ ಮಾಹಿತಿ ಚೀಟಿ

ಜಾತಿ ಗಣತಿ ಬಳಿಕ ಮನೆಮನೆಗೂ ಮಾಹಿತಿ ಚೀಟಿ
May 5,(PSGadyal)
ಜಾತಿ ಗಣತಿ ಬಳಿಕ ಮನೆಮನೆಗೂ ಮಾಹಿತಿ ಚೀಟಿ
ಬೆಂಗಳೂರು: ಜಾತಿ ಗಣತಿ ಪೂರ್ಣಗೊಳಿಸಿದ ಬಳಿಕ ವೈಯಕ್ತಿಕ ವಿವರ ಒಳಗೊಂಡ ಮಾಹಿತಿ ಚೀಟಿಯನ್ನು ಮನೆಮನೆಗೆ ತಲುಪಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.

''ಸಾಮಾಜಿಕ ಮತ್ತು ಆರ್ಥಿಕ ಗಣತಿಯ ಗಡುವನ್ನು ಬಿಬಿಎಂಪಿ ವ್ಯಾಪ್ತಿ ಪ್ರದೇಶದಲ್ಲಿ ಮೇ 10ರವರೆಗೆ ವಿಸ್ತರಿಸಲಾಗಿದೆ. ರಾಜ್ಯದ ಇತರೆಡೆ ಮೇ 5ರಂದು ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟಾರೆ ಗಣತಿ ಪ್ರಕ್ರಿಯೆ ಮುಗಿದ ಬಳಿಕ ಡಾಟಾ ಎಂಟ್ರಿ ಮಾಡಲಾಗುವುದು. ಎಂಟ್ರಿ ಮಾಡಿದ ಪ್ರತಿಗಳನ್ನು ಎಲ್ಲ ಮನೆಗಳಿಗೆ ತಲುಪಿಸಲಾಗುವುದು. ತಾವು ಕೊಟ್ಟ ಮಾಹಿತಿ ಸರಿಯಾಗಿ ನಮೂದಾಗಿದೆಯೊ, ಇಲ್ಲವೊ ಎನ್ನುವುದನ್ನು ಜನರು ಈ ಹಂತದಲ್ಲಿ ಖಚಿತಪಡಿಸಿಕೊಳ್ಳಬಹುದು,'' ಎಂದು ಹೇಳಿದರು.

''ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 85.76 ಹಾಗೂ ರಾಜ್ಯದ ಉಳಿದೆಡೆ ಶೇ.99.58ರಷ್ಟು ಜಾತಿ ಗಣತಿಯಾಗಿದೆ,'' ಎಂದು ಅವರು ತಿಳಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023