ಬ್ರಿಟನ್‌ ಸಂಸತ್‌ಗೆ ಹತ್ತು ಭಾರತೀಯರ ಆಯ್ಕ


Sat, 05/09/2015 - 01:00
 

ಲಂಡನ್‌: ಕೀತ್‌ ವಾಜ್‌, ಪ್ರೀತಿ ಪಟೇಲ್‌, ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್‌ ಸೇರಿದಂತೆ ಹತ್ತು ಭಾರತೀಯರು ಬ್ರಿಟನ್‌ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ಮರುಆಯ್ಕೆ: ಲೇಬರ್‌ಪಾರ್ಟಿಯ ಪ್ರಮುಖ ಅಭ್ಯರ್ಥಿಗಳಾದ, ಸುದೀರ್ಘ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ ಕೀತ್‌ ವಾಜ್‌ (ಲೈಸೆಸ್ಟರ್‌ ಈಸ್ಟ್‌), ವಿರೇಂದ್ರ ಶರ್ಮ (ಈಲಿಂಗ್‌ ಸೌತದಲ್‌) ಅವರು ಮರುಆಯ್ಕೆಯಾಗಿದ್ದಾರೆ.

ಕನ್ಸರ್ವೇಟಿವ್‌ ಪಾರ್ಟಿಯ ಪ್ರೀತಿ ಪಟೇಲ್‌ ಅವರು ವಿಥಾಮ್‌ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಲೇಬರ್‌ ಪಾರ್ಟಿ  ವಲೇರಿ ವಾಜ್‌ (ವಾಲ್‌ಶಲ್‌ ಸೌತ್‌) ಹಾಗೂ ಸೀಮಾ ಮಲ್ಹೋತ್ರಾ  (ಸೌತ್ ವೆಸ್ಟ್‌ ಲಂಡನ್‌) ಕೂಡ ಮರು ಆಯ್ಕೆಯಾಗಿದ್ದಾರೆ.

ಲಿಸಾ ನಂದಿ (ವಿಗಾನ್‌), ಸಾಜಿದ್‌ ಜಾವಿದ್‌ (ಬ್ರಾಮ್ಸ್‌ಗ್ರೋವ್‌),  ಅಲೋಕ್‌ ಶರ್ಮ ( ರೀಡಿಂಗ್‌್ ವೆಸ್ಟ್‌), ಶೈಲೇಶ್‌  ವರಾ (ಕೇಂಬ್ರಿಜ್‌ಷೈರ್‌ ನಾರ್ತ್‌ವೆಸ್ಟ್‌) ಸಹ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023