First Indian Open Surfing in Panamboor Beach

ಪ್ರಥಮ ಇಂಡಿಯನ್ ಓಪನ್ ಸರ್ಫಿಂಗ್

ಪ್ರಥಮ ಇಂಡಿಯನ್ ಓಪನ್ ಸರ್ಫಿಂಗ್
-ಮೇ 29-31 ಸ್ಪರ್ಧೆ: 200ಸ್ಪರ್ಧಿಗಳು ಪಾಲ್ಗೊಳ್ಳುವಿಕೆ, ನಟ ಸುನೀಲ್ ಶೆಟ್ಟಿ ರಾಯಭಾರಿ-

* ಬಿ. ರವೀಂದ್ರ ಶೆಟ್ಟಿ ಮಂಗಳೂರು
ಮಂಗಳೂರಿನಲ್ಲಿ 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆತೆರೆ ಬೀಳುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಪ್ರಥಮ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಶಿಪ್'ಗೆ ಸಿದ್ಧತೆ ನಡೆಯುತ್ತಿದೆ. ಮೇ 29ರಿಂದ 31ರ ವರೆಗೆ ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ನಡೆಯಲಿದ್ದು, ಬಾಲಿವುಡ್ ನಟ ಸುನೀಲ್ ಶೆಟ್ಟಿ ಈ ಕ್ರೀಡಾಸ್ಪರ್ಧೆಗೆ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತವು ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಸ್ಪರ್ಧೆಯನ್ನು ಆಯೋಜಿಸಲಿದೆ.

ಜಾಂಟಿ ರೋಡ್ಸ್ ಆಗಮನ:
ಪ್ರಥಮ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ನ್ನು ಎಲ್ಲಿ ಆಯೋಜಿಸುವುದು ಎಂಬ ಬಗ್ಗೆ ಇಡೀ ಭಾರತಾದ್ಯಂತ ಕಡಲ ತೀರಗಳಲ್ಲಿ ಪರಿಶೀಲಿಸಿದಾಗ, ಮಂಗಳೂರಿನ ಪಣಂಬೂರು ಇದಕ್ಕೆ ಸೂಕ್ತ ಸ್ಥಳ ಎಂಬುವುದು ಕಂಡುಬಂತು. ಈ ಹಿನ್ನೆಲೆಯಿಂದ ಖ್ಯಾತ ಸರ್ಫಿಂಗ್ ಆಟಗಾರ ಹಾಗೂ ಕ್ರಿಕೆಟ್ ತಾರೆ ಜಾಂಟಿ ರೋಡ್ಸ್ ಮೂರು ಬಾರಿ ಮಂಗಳೂಗೆ ಆಗಮಿಸಿದ್ದಾರೆ. ಪಣಂಬೂರು ಬೀಚ್‌ನಲ್ಲಿ ಸರ್ಫಿಂಗ್ ನಡೆಸಿ ಸ್ಪರ್ಧೆ ನಡೆಸಲು ಇದು ಸೂಕ್ತವಾದ ಪ್ರದೇಶ ಎಂದು ಅಭಿಪ್ರಾಯ ನೀಡಿದ್ದಾರೆ. ಈ ಹಿನ್ನೆಲೆಯಿಂದ ಪಣಂಬೂರು ಬೀಚ್‌ನ್ನು ಆಯ್ಕೆ ಮಾಡಲಾಗಿದೆ.

ಸ್ಪರ್ಧೆ ಹೇಗೆ:
ಸರ್ಫಿಂಗ್ ಆಟ ಎಂಬುವುದು ಅತ್ಯಂತ ರೋಮಾಂಚನಕಾರಿ ಆಟ. ಸಮುದ್ರದ ತೆರೆಗಳ ನಡುವೆ ಬ್ಯಾಲೆನ್ಸ್ ಇಟ್ಟುಕೊಂಡು ಆಡುವ ಆಟ. ಸರ್ಫ್ ಬೋರ್ಡ್‌ಗಳಲ್ಲಿ ನಿಂತು ಸಾಗರದ ಅಲೆಗಳ ಲಯಗಳಿಗೆ ಪೂರಕವಾಗಿ ಬೋರ್ಡ್‌ಗಳ ನಿಯಂತ್ರಣ ಕಾಪಾಡಿಕೊಂಡು ಮುಂದೆ ಸಾಗುವ ಅತ್ಯಂತ ಕುತೂಹಲಕಾರಿ ಗೇಮ್. ಸ್ಪರ್ಧೆಯಲ್ಲಿ ಆಟಗಾರ ಎಷ್ಟು ಸಮಯ ಅಲೆಗಳಲ್ಲಿ ಆಟವಾಡುತ್ತಾರೆ, ಎಷ್ಟು ದೂರ ಕ್ರಮಿಸಿದ್ದಾರೆ, ಎಷ್ಟರ ಮಟ್ಟಿಗೆ ಬ್ಯಾಲೆನ್ಸ್ ಮಾಡುತ್ತಾರೆ ಮುಂತಾದ ಅಂಶಗಳನ್ನು ಗಮನಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಈಜು ಕಡ್ಡಾಯವಾಗಿ ಬರಬೇಕು. ಈ ಸ್ಪರ್ಧೆಗೆ ತೀರ್ಪುಗಾರರಾಗಿ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದವರು ಆಗಮಿಸುತ್ತಾರೆ.

200 ಮಂದಿ ಸ್ಪರ್ಧಿಗಳು:
ಭಾರತ ಮತ್ತು ಹೊರ ದೇಶಗಳಿಂದ ಒಟ್ಟು 200 ಮಂದಿ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪಕ್ಕದ ಶ್ರೀಲಂಕಾ, ಮಾರಿಷಸ್, ಮಾಲ್ದೀವ್ಸ್‌ನಿಂದ ಸ್ಪರ್ಧಿಗಳು ಭಾಗವಹಿಸುವುದನ್ನು ಈಗಾಗಲೇ ಖಚಿತಗೊಳಿಸಿದ್ದಾರೆ. ದೇಶದ ನಾನಾ ರಾಜ್ಯಗಳಿಂದ ಕ್ರೀಡಾಳುಗಳು ಆಗಮಿಸಲಿದ್ದಾರೆ. 200 ಮಂದಿಗೆ ಕ್ರೀಡಾಪಟುಗಳಲ್ಲದೆ ಅಧಿಕಾರಿಗಳು, ತೀರ್ಪುಗಾರರು ಆಗಮಿಸಲಿದ್ದಾರೆ. ಇವರಿಗೆ ಮಂಗಳೂರಿನಲ್ಲಿ ವಸತಿ, ಊಟೋಪಚಾರ ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಸುಮಾರು 25 ಲಕ್ಷ ರೂ.ಗಳ ಖರ್ಚು ವೆಚ್ಚವನ್ನು ಅಂದಾಜಿಸಲಾಗಿದೆ. ಇದನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಭರಿಸಲಿದೆ. ಹೆಚ್ಚುವರಿ ಖರ್ಚು ಬಂದರೆ ಇತರ ಮೂಲಗಳಿಂದ ಸಂಘಟಕರು ಸಂಗ್ರಹಿಸಬೇಕಾಗುತ್ತದೆ. ಈ ಸ್ಪರ್ಧೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಚಾಂಪಿಯನ್‌ಷಿಪ್‌ನ ಲಾಂಛನ ಬಿಡುಗಡೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಬುಧವಾರ ನೆರವೇರಿಸಲಿದ್ದಾರೆ
.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023