Drop


Monday, May 11, 2015

First President of BRICS BANK- KAMAT K V

ಬ್ರಿಕ್ಸ್‌ ಬ್ಯಾಂಕ್‌ ಮೊದಲ ಅಧ್ಯಕ್ಷರಾಗಿ ಕೆ.ವಿ ಕಾಮತ್‌ ನೇಮಕ

1
ಬ್ರಿಕ್ಸ್‌ ಬ್ಯಾಂಕ್‌ ಮೊದಲ ಅಧ್ಯಕ್ಷರಾಗಿ ಕೆ.ವಿ ಕಾಮತ್‌ ನೇಮಕ
ಹೊಸದಿಲ್ಲಿ: ಐಸಿಐಸಿಐ ಬ್ಯಾಂಕ್‌ ಅಧ್ಯಕ್ಷ ಕೆ.ವಿ ಕಾಮತ್‌ ಅವರನ್ನು ಬ್ರಿಕ್ಸ್‌ ಬ್ಯಾಂಕ್‌ನ ಮೊದಲ ಅಧ್ಯಕ್ಷರಾಗಿ ನೇಮಿಸಲು ಸರಕಾರ ನಿರ್ಧರಿಸಿದೆ.

ಬ್ರಿಕ್ಸ್‌ ಬ್ಯಾಂಕ್‌ನ ಮೊದಲ ಅಧ್ಯಕ್ಷರಾಗಿ ರಾಜಕೀಯ ಮೂಲದವರು ನೇಮಕಗೊಳ್ಳುವ ನಿರೀಕ್ಷೆ ದಟ್ಟವಾಗಿದ್ದ ಸಂದರ್ಭದಲ್ಲಿ ಕಾಮತ್‌ ನೇಮಕ ಅಚ್ಚರಿ ತಂದಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.

ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ- ಬಹುಪಕ್ಷೀಯ ನಿಧಿ ಸಂಸ್ಥೆಯ ಸ್ಥಾಪಕ ಸದಸ್ಯ ರಾಷ್ಟ್ರಗಳು. ದೇಶ ಹಾಗೂ ಪ್ರಾಂತ್ಯದಲ್ಲಿ ಮೂಲಸೌಕರ್ಯ ಹಾಗೂ ದೀರ್ಘ ಕಾಲೀನ ಯೋಜನೆಗಳಿಗೆ ಹಣ ಒದಗಿಸುವ ನಿಟ್ಟಿನಲ್ಲಿ ಬ್ರಿಕ್ಸ್‌ ಬ್ಯಾಂಕ್‌ ಅತ್ಯಂತ ಮಹತ್ವ ಪಡೆದಿದೆ. ಒಪ್ಪಂದದಂತೆ, ಚೀನಾದಲ್ಲಿ ಬ್ಯಾಂಕ್‌ನ ಕೇಂದ್ರ ಕಚೇರಿ ಸ್ಥಾಪನೆ ಆದರೆ, ಬಹುಪಕ್ಷೀಯ ಬ್ಯಾಂಕ್‌ನ ಮೊದಲ ಮುಖ್ಯಸ್ಥರನ್ನು ನಾಮನಿರ್ದೇಶನಗೊಳಿಸುವ ಹಕ್ಕು ಭಾರತಕ್ಕಿದೆ.

ಬ್ಯಾಂಕ್‌ ಸ್ಥಾಪನೆಯ ಕಠಿಣ ಸವಾಲು ಕಾಮತ್‌ ಅವರಿಗಿದ್ದು, ಮುಂಬರುವ ವರ್ಷಗಳಲ್ಲಿ ಬ್ರಿಕ್ಸ್‌ ಬ್ಯಾಂಕ್‌ ಕಾರ್ಯನಿರ್ವಹಣೆ ಕುರಿತು ಮಾರ್ಗದರ್ಶನ ನೀಡುವ ಜವಾಬ್ದಾರಿಯೂ ಅವರ ಮೇಲಿದೆ.

ಐಐಎಂ ಅಹಮದಾಬಾದ್‌ನ ವಿದ್ಯಾರ್ಥಿ ಕಾಮತ್‌ಗೆ ಬಹುಪಕ್ಷೀಯ ಬ್ಯಾಂಕ್ ನಿರ್ವಹಣೆ ಹೊಸದಲ್ಲ. 1996ರಲ್ಲಿ ಐಸಿಐಸಿ ಬ್ಯಾಂಕ್‌ನ ಉನ್ನತ ಹುದ್ದೆಗೇರುವ ಮೊದಲು ಏಷ್ಯನ್‌ ಡೆವಲೆಪ್‌ಮೆಂಟ್‌ ಬ್ಯಾಂಕ್‌ನಲ್ಲಿ ಅವರು 8 ವರ್ಷ ಸೇವೆ ಸಲ್ಲಿಸಿದ್ದರು.